ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡವೇಕಿಲ್ಲ?

ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಮಣಿದಿರುವ ಸರ್ಕಾರ ಕೊನೆಗೂ ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಮರು ನಾಮಕರಣ ಮಾಡಲು ಸಜ್ಜಾಗಿದೆ. ಡಿ.14ರಂದು ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ವಾಗಲಿವೆ. ಇದರೊಂದಿಗೆ ಕನ್ನಡಿಗರ ಮುಖ್ಯವಾಗಿ ಬೆಂಗಳೂರಿಗರ ಬಹುದಿನದ ಬೇಡಿಕೆ ಈಡೇರಿದಂತಾಗುತ್ತದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿನೊಂದಿಗೆ ಅಲ್ಲಿನ ವಾತಾವರಣ ಕೂಡ ಬದಲಾವಣೆಯಾಬೇಕಾಗಿದೆ. ಏಕೆಂದರೆ ಸದ್ಯದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋದರೆ, ನಿಜವಾಗಿಯೂ ಅದು ಕರ್ನಾಟಕದಲ್ಲಿದೆಯಾ ಎಂದು ಸಂಶಯ ಉಂಟಾಗುತ್ತದೆ, ಏಕೆಂದರೆ ಅಲ್ಲಿ ಕನ್ನಡ ಸ್ಥಿತಿ ಹಾಗಿದೆ.

Bengaluru International Airport

ವಿಮಾನ ನಿಲ್ದಾಣದ ಸುರಕ್ಷತೆ ಹೊಣೆ ಹೊತ್ತ ಭದ್ರತಾ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ನಿಲ್ದಾಣದಲ್ಲಿರುವ ಎಲ್ಲಾ ಸೂಚನಾ ಫಲಕಗಳು ಇಂಗ್ಲೀಷ್ ಅಥವಾ ಹಿಂದಿಯಲ್ಲಿವೆ. ಕೆಲವು ಸೂಚನಾ ಪಲಕಗಳಲ್ಲಿ ಕನ್ನಡವನ್ನು ಬಳಸಲಾಗಿದೆ. ಆದರೆ, ಅದಕ್ಕೆ ಕೊನೆಯ ಸ್ಥಾನ ನೀಡಿರುವುದು ಕಾಟಾಚಾರಕ್ಕೆ ಎಂಬುದು ಸ್ಪಷ್ಟವಾಗುತ್ತದೆ. (ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು)

ಇನ್ನು ಬೆಂಗಳೂರಿನಿಂದ ಇತರ ರಾಜ್ಯದ ನಗರಗಳಿಗೆ-ಹೊರದೇಶಕ್ಕೆ ಹೋಗುವ ವಿಮಾನಗಳು ಹಾಗಿರಲಿ, ಬೆಂಗಳೂರು-ಮಂಗಳೂರು, ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ವಿಮಾನದಲ್ಲಿಯೂ ಕನ್ನಡ ಪತ್ರಿಕೆಗಳು, ಕನ್ನಡದಲ್ಲಿ ಗ್ರಾಹಕ ಸೇವೆ (ವಿಮಾನದಲ್ಲಿನ ಘೋಷಣೆ, ಸುರಕ್ಷತೆ ಮಾಹಿತಿ, ಇತ್ಯಾದಿ) ದೊರಕುತ್ತಿಲ್ಲ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಹಣೆಪಟ್ಟಿ ಕಟ್ಟಿಕೊಂಡ ಮಾತ್ರಕ್ಕೆ ಇಂಗ್ಲೀಷ್ ಮಾತ್ರ ಇರಬೇಕು ಎಂದು ನಿಲ್ದಾಣದ ಅಧಿಕಾರಿಗಳು ತಪ್ಪು ತಿಳಿದುಕೊಂಡಂತಿದೆ. ಫ್ರಾನ್ಸ್, ಹಾಂಕಾಂಗ್ ಮತ್ತು ಜಪಾನ್ ನಿಲ್ದಾಣಗಳಲ್ಲಿ ಗ್ರಾಹಕ ಸೇವೆಯಿಂದ ಎಲ್ಲ ರೀತಿಯ ಮಾಹಿತಿಗಳು ಅವರವರ ಭಾಷೆಗಳಲ್ಲಿ ಮೊದಲು ದೊರೆಯುತ್ತದೆ. ನಾವೇಕೆ ಅವರಿಂದ ಇಂತಹ ಅಂಶಗಳನ್ನು ಕಲಿಯುವುದಿಲ್ಲ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಕನ್ನಡಕ್ಕೆ ಅಗತ್ಯ ಸ್ಥಾನಮಾನ ದೊರೆಯಬೇಕಾಗಿದೆ. ವಿಮಾನ ನಿಲ್ದಾಣದ ಹೆಸರು ಬದಲಾವಣೆ ಮಾಡುವ ಸರ್ಕಾರ ಅದರ ಅಲ್ಲಿ ಕನ್ನಡಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕುರಿತು ಸರ್ಕಾರಕ್ಕೆ ಒತ್ತಾಯಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+