ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಉತ್ತಮ ಬೆಳವಣಿಗೆ

CM Sidddaramaiah instruction Kannada in Banking Activities welcome move
ಇತ್ತೀಚೆಗೆ ಬ್ಯಾಂಕರ್ ಗಳ ಮಂಡಳಿ ಸಭೆಯಲ್ಲಿ ಮಾತನಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದಲ್ಲಿನ ಎಲ್ಲ ಬ್ಯಾಂಕುಗಳು ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ಕೊಡುವಂತಾಗಬೇಕು ಎಂದು ಹೇಳಿರುವುದು ಸ್ವಾಗತಾರ್ಹ.

ಇಂದು ನಾವು ಕರ್ನಾಟಕದಲ್ಲಿನ ಯಾವುದೇ ಬ್ಯಾಂಕಿಗೆ ಹೋದರೂ ಕನ್ನಡ ಭಾಷೆ ಕೇವಲ ಫಲಕಗಳಿಗೆ ಮಾತ್ರ ಸೀಮಿತವಾಗಿದೆ. ಬ್ಯಾಂಕ್ ನಮೂನೆ, ಅರ್ಜಿ, ಚೆಕ್ಕು, ಗ್ರಾಹಕ ಸೂಚಿಗಳು, ತನ್ನ ಉತ್ಪನ್ನದ ಪರಿಚಯ, ಗ್ರಾಹಕರೊಡನೆ ಮಾತುಕತೆ ಹೀಗೆ ಬ್ಯಾಂಕಿನ ಎಲ್ಲ ರೀತಿಯ ವಹಿವಾಟಿನಲ್ಲಿ ಅಲ್ಲಿನ ಸ್ಥಳೀಯ ಭಾಷೆಯ ಬಳಕೆಯ ಬಗ್ಗೆ 'ಬ್ಯಾಂಕಿನ ಲೋಕಪಾಲ' ದಲ್ಲಿ ಉಲ್ಲೇಖವಿದೆ. ಆದರೆ, ಎಲ್ಲಾ ಬ್ಯಾಂಕುಗಳು ಇದನ್ನು ಸರಾಸಗಟಾಗಿ ತಿರಸ್ಕರಿಸಿವೆ.

ಇನ್ನು ಹೊಸ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆಗಳಾದ ಎಟಿಎಂ, ಮೊಬೈಲ್, ಐವಿಆರ್, ಅಂತರ್ಜಾಲ ತಾಣಗಳಲ್ಲಿ ಸ್ಥಳೀಯ ಭಾಷೆಯ ಅಳವಡಿಕೆ ಅವಮಾನಕರವೆಂಬಂತೆ ಈ ಬ್ಯಾಂಕುಗಳು ಮಡಿವಂತಿಕೆ ತೋರಿರುವುದನ್ನು ಕಾಣಬಹುದು.

ಬ್ಯಾಂಕಿನಲ್ಲಿ ಪ್ರಸ್ತುತವಿರುವ ಕೆಲ ಸೇವೆ ಪಡೆಯಲು ಭರ್ತಿ ಮಾಡಬೇಕಾದ ಅರ್ಜಿಯಲ್ಲಿ ನಾವು ಕನ್ನಡದಲ್ಲಿ ಭರ್ತಿ ಮಾಡಿ, ಕನ್ನಡದಲ್ಲಿ ಸಹಿ ಮಾಡಿದರೆ 'ನನ್ನ ಹೆಸರು' ಇಂಥದ್ದು, ನನಗೆ ಕನ್ನಡ ಭಾಷೆ ಮಾತ್ರ ಬರೋದು, ಕನ್ನಡೇತರ ಭಾಷೆಯಲ್ಲಿರುವ ಈ ಅರ್ಜಿಯಲ್ಲಿರುವ ವಿವರಗಳನ್ನು ಬ್ಯಾಂಕ್ ಸಿಬ್ಬಂದಿಯಿಂದ ಓದಿಸಿ ಕೇಳಿ ಅರ್ಥ ಮಾಡಿಕೊಂಡಿದ್ದೇನೆ' ಎಂದು ಬರೆದು ಕೊಡಬೇಕಾದಂಥ ಸ್ಥಿತಿ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹರಿಸಬಯಸುವ ಗ್ರಾಹಕನಿಗೆ ಎದುರಾಗಿದೆ.

ಭಾರತದ ಇತರ ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಭಾಷೆಗಳಲ್ಲಿ ವ್ಯವಹರಿಸಬಯಸುವ ಗ್ರಾಹಕರಿಗೂ ಇದೇ ಪರಿಸ್ಥಿತಿ ಇದೆ ಎಂದು ಹೇಳಬಹುದು.

ನಮ್ಮಲ್ಲಿ ನಾಮ ಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡುವ ಕಾನೂನು ಇದೆ. ಆದರೆ,ಭಾರತದಲ್ಲಿ ಗ್ರಾಹಕನ ಹಕ್ಕುಗಳಿಗಾಗಿರೋ ಮಾರ್ಗದರ್ಶಿ/ ನಿಯಮಗಳ ದೊಡ್ಡ ಪಟ್ಟಿಯಲ್ಲಿ 'ಭಾಷಾ ಆಯಾಮ'ವೇ ಇಲ್ಲದಿರುವುದು ಮಾತ್ರ ವಿಪರ್ಯಾಸ. ಕನ್ನಡ ನಾಡಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನಿರಾಕರಿಸುವುದು, ಅಂತೆಯೇ ದೇಶದ ಇತರ ರಾಜ್ಯಗಳಲ್ಲಿ ಗ್ರಾಹಕ ಸೇವೆಯಲ್ಲಿ ಅಲ್ಲಿನ ರಾಜ್ಯ ಭಾಷೆಯನ್ನು ನಿರಾಕರಿಸುವುದು 'ಶಿಕ್ಷಾರ್ಹ ಅಪರಾಧ' ಎಂಬ ಕಾನೂನು ಜಾರಿಯೇ ಇದಕ್ಕೆ ಕಂಡು ಬರುವ ಸೂಕ್ತ ಪರಿಹಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+