ಎಲ್ಲಿ ಸ್ವಾಮಿ, ಕದಿರೇನಹಳ್ಳಿ ಅಂಡರ್ ಪಾಸ್ ಹಾಗೆ ಇದೆ?

ಅಂಡರ್ ಪಾಸ್ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿರುವ ಗುತ್ತಿಗೆದಾರರಿಗೆ 80 ಲಕ್ಷ ರು. ದಂಡ ವಿಧಿಸಿದ್ದೀರಾ. ಇದರಿಂದ ನಮಗೆ ಬಂದ ಭಾಗ್ಯ ಏನು? ಗುತ್ತಿಗೆದಾರ ಇನ್ನಷ್ಟು ಕಾಲ ಕಾಮಗಾರಿ ಮುಂದೂಡುತ್ತಾ ದಂಡ ಕಟ್ಟುತ್ತಾ ಇರುತ್ತಾನೆ. ಸಾರ್ವಜನಿಕರ ನಿತ್ಯದ ಪರದಾಟ ಮುಂದುವರೆದಿದೆ.
ವಾಹನ ದಟ್ಟಣೆ ಹಾಗೂ ಇನ್ನಿತರ ಅಡಚಣೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿರುವುದು ಎಷ್ಟು ಸರಿ? ಕಾಮಗಾರಿ ಯೋಜನೆ ಹಾಕುವ ಮೊದಲೇ ಇಲ್ಲಿನ ವಾಹನ ದಟ್ಟಣೆ, ಸರ್ಕಾರಿ ಜಾಗ ಕಬಳಿಕೆ ಬಗ್ಗೆ ಬಿಬಿಎಂಪಿಗೆ ಗೊತ್ತಿರಲಿಲ್ಲವೆ? ಕಾಮಗಾರಿ ವಿಳಂಬಕ್ಕೆ ಮಾತ್ರ ವಾಹನ ದಟ್ಟನೆ ಅಡಚಣೆ ಉಂಟು ಮಾಡುತ್ತಿದೆಯೇ?
ಅಂಡರ್ ಪಾಸ್ ಕಾಮಗಾರಿ ಈಗಾಗಲೇ ಶೇ. 80 ರಷ್ಟು ಪೂರ್ಣಗೊಂಡಿದ್ದರೆ, ಉಳಿದ ಕಾಮಗಾರಿ ಪೂರೈಸಲು ಇನ್ನೂ ಎರಡು ವರ್ಷ ಬೇಕೇ?
ಕನಕಪುರ ರಸ್ತೆಯ ಭಾಗದಿಂದ ತಡೆಗೋಡೆ ನಿರ್ಮಾಣ ಕಾರ್ಯ ಸುಮಾರು ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿದೆ. ಆದರೆ, ಅಂಡರ್ ಪಾಸ್ ಕಾರ್ಯ ಮಾತ್ರ ವರ್ಷಗಟ್ಟಲೇ ಕುಂಟುತ್ತಾ ಸಾಗಿದೆ. ಯಾವಾಗ ಮುಗಿಯುವುದೋ ಸರ್ಕಾರಕ್ಕೂ ಗೊತ್ತಿಲ್ಲ ಎನಿಸುತ್ತದೆ.












Click it and Unblock the Notifications