ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಕಾರ್ಪೋರೇಟ್, ಎನ್ ಜಿಒಗಳು ವಿರುದ್ಧ ಯಾವ ಅಸ್ತ್ರ ?

By * ಎಲ್. ಜಗನ್ನಾಥ್, ಕೇಂದ್ರ ಸರ್ಕಾರಿ ನೌಕರ, ಹಾಸನ
|
Google Oneindia Kannada News

Anna's Bill must cover NGOs,
ಭ್ರಷ್ಟಾಚಾರದ ವಿರುದ್ದದ ಹೋರಾಟ ಸರಿ. ಹಜಾರೆ ಅವರ ಹೋರಾಟ ರಾಜಕೀಯ ಮತ್ತು ಅಧಿಕಾರಶಾಹಿ ಭ್ರಷ್ಟಾಚಾರ ಮಾತ್ರ ಸೀಮಿತವಾಗದಂತೆ ಕಾಣುತ್ತಿದೆ. ಆದರೆ ಇವರಿಬ್ಬರನ್ನೂ ಭ್ರಷ್ಟರನ್ನಾಗಿಸಿದ ಕಾರ್ಪೊರೇಟ್, ಖಾಸಗಿ ರಂಗ, ಸ್ವಯಂ ಸೇವಾ ಸಂಸ್ಥೆಗಳು, ಮಠಾಧೀಶರನ್ನೂ ಕಾನೂನಿನ ವ್ಯಾಪ್ತಿಗೆ ತರಬೇಕು.

ಇವರನ್ನು ಸೇರಿಸಿದರೆ ಭ್ರಷ್ಟಾಚಾರದ ಶೇ.50 ಭಾಗ ನಿಯಂತ್ರಣಕ್ಕೆ ಬರುತ್ತದೆ. ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ ಎಂಬ ಭ್ರಮೆ ಬೇಡ. ಹಾಗೆಂದು ಕಾನೂನೇ ಬೇಡ ಎನ್ನಲಾಗದು.

ಆದರೆ ಸರ್ಕಾರಿ ಲೋಕಪಾಲ ಹಾಗೂ ಜನಲೋಕಪಾಲ ಎರಡೂ ಕರಡಿನಲ್ಲಿ ದೋಷಗಳಿರುವುದರಿಂದ ಅವರೆಡನ್ನೂ ಸೇರಿಸಿ ಒಂದು ಪ್ರಬಲ ಲೋಕಪಾಲ ಮಸೂದೆ ರಚನೆ
ಯಾಗಲಿ. ಮಾಹಿತಿ ಹಕ್ಕು ಕಾಯಿದೆಯಂತೆ ಲೋಕಪಾಲ ಕೂಡಾ ಜನತೆಯ ಕೈಗೆ ಅಣ್ಣಾ ನೀಡುತ್ತಿರುವ ಪ್ರಬಲ ಅಸ್ತ್ರ ಎಂಬುದನ್ನು ಅರಿತುಕೊಳ್ಳಬೇಕು.

ಸಂಸತ್ತಿನಲ್ಲಿ ಜನ ಲೋಕಪಾಲ್ ಸೇರಿದಂತೆ ಎಲ್ಲಾ ಪ್ರಸ್ತಾವಿತ ಲೋಕಪಾಲ ಮಸೂದೆಗಳ ಸಮಗ್ರ ಚರ್ಚೆಯಾಗಬೇಕು.

ಕೇಂದ್ರದ 2ಜಿ ಸ್ಪೆಕ್ಟಂ ಹಗರಣವನ್ನು ಪ್ರಪ್ರಥಮವಾಗಿ ಬೆಳಕಗೆ ತಂದವರು ಎಡಪಕ್ಷದ ರಾಷ್ಟ್ರೀಯ ನಾಯಕರಾದ ಸೀತಾರಾಮ್ ಯೆಚೂರಿಯವರು. ಕಾರ್ಪೊರೇಟ್ಸ್, ಎಂಎನ್ ಸಿ, ಎನ್ ಜಿಒಗಳಲ್ಲಿನ ಭ್ರಷ್ಟತೆಯನ್ನು ಬಯಲಿಗೆಳೆಯುತ್ತಿದ್ದ ಎಡಪಕ್ಷಗಳು ಈ ಸಮಯದಲ್ಲಿ ಸುಮ್ಮನಿದ್ದರೆ ಪ್ರಬಲ ಮಸೂದೆ ಹೊರ ಬರಲು ಸಾಧ್ಯವಿಲ್ಲ ಎನ್ನಿಸುತ್ತದೆ.

English summary
A group of citizen forum demand Corporates and NGOs should also be included in Anna Hazare version of Jan Lokpal bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X