ತಮಿಳರ ದಬ್ಬಾಳಿಕೆಗೆ ಕೊನೆ ಇಲ್ಲವೇ?

Tamilians harass kannadiga, Magadi
ಮಾಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರ ಸೋಲೂರು ಗ್ಯಾಸ್‌ಪ್ಲಾಂಟ್‌ನ ಹೊರವಲಯದಲ್ಲಿ ತಮಿಳರಿಂದ ಬಡ ಕನ್ನಡಿಗನ ಮೇಲೆ ದಬ್ಬಾಳಿಕೆ -ದೌರ್ಜನ್ಯ ನಡೆಯುತ್ತಿದೆ ಎಂದು ಬಡಕನ್ನಡಿಗ ಶಿಕ್ಷಕರೊಬ್ಬರು ಆರೋಪಿಸಿದ್ದಾರೆ.

ಭಾರತ್ ಪೆಟ್ರೋಲಿಯಂ ಗ್ಯಾಸ್‌ಪ್ಲಾಂಟ್‌ನಲ್ಲಿ ತಮಿಳರದೇ ಕಾರು-ಬಾರು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದು ಅನಿಲ ಸ್ಥಾವರ ಕೇಂದ್ರದ ಒಳಗಿನ ಘಟನೆ ಎಂದು ಕನ್ನಡ ಪರ ಸಂಘಟನೆಗಳು ಸುಮ್ಮನಾದವು. ಆದರೆ ಹೊರವಲಯದಲ್ಲಿಯೂ ತಮಿಳರ ದೌರ್ಜನ್ಯವನ್ನು ಸಂಘಟನೆಗಳು ಕಂಡೂ ಕಾಣದಂತೆ ಮೌನವಹಿಸಿವೆ. ಗದ್ದುಗೆ ಮಠದ ರಸ್ತೆಯ ನಡುವೆ ಗ್ಯಾಸ್‌ತುಂಬಿದ ಕಂಟೈನರ್‌ಗಳನ್ನು ನಿಲ್ಲಿಸುವ ಲಾರಿಸ್ಟಾಂಡ್‌ನಲ್ಲಿ ನಿವೃತ್ತ ಸರಕಾರಿ ಶಾಲಾ ಶಿಕ್ಷಕ ತನ್ನ ಕುಟುಂಬ ಪರಿವಾರದೊಂದಿಗೆ ಬಾಡಿಗೆ ಕೊಠಡಿಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ.

ಒಂದು ವರ್ಷದಿಂದ ಯಾವುದೇ ತಕರಾರು ಇರಲಿಲ್ಲ. ಗ್ಯಾಸ್‌ಕಂಟೈನರ್‌ಗಳು ಎರಡು ಮೂರು ಮತ್ತು ವಾರದವರೆವಿಗೆ ಇಲ್ಲಿ ತಂಗಬೇಕಾಗುತ್ತದೆ. ಅವರಿಗೆ ಚಹಾ, ಕಾಫಿ, ತಿಂಡಿ, ಊಟ, ಸ್ನಾನಕ್ಕೆ ಹೋಟೆಲ್ ನಡೆಸುವ ಕನ್ನಡಿಗರ ಕುಟುಂಬ ಶ್ರಮಿಸುತ್ತಿದೆ. ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡುವ ಮೋಹನ್ ಎಂಬ ತಮಿಳು ವ್ಯಕ್ತಿ ಮಡದಿ, ಮಕ್ಕಳಿಗೆ ಉಚಿತ ಊಟ, ತಿಂಡಿ ನೀಡಬೇಕು ಇಲ್ಲವಾದರೇ ಖಾಲಿ ಮಾಡಿಸುವುದಾಗಿ ಬೆದರಿಕೆ ಹಾಕುತ್ತಾ ಬಂದಿದ್ದಾನೆ ಎಂದು ಹೋಟೆಲ್ ನಡೆಸುತ್ತಿರುವ ಕುಟುಂಬ ದೂರಿದೆ.

ಪೊಲೀಸರೇ ಎಲ್ಲಿದ್ದೀರಿ?: ತಮಿಳು ಮೂಲದ ವ್ಯಕ್ತಿ ವ್ಯಾಪಾರ ಮಾಡದಂತೆ ತಡೆ ಒಡ್ಡಿರುವುದಾಗಿ ಹೆದರಿಸುತ್ತಿದ್ದಾನೆ. ವಾಹನ ನಿಲುಗಡೆ ಹಣ ಹೆಚ್ಚಾಗಿ ಬರುತ್ತಿರುವುದರಿಂದ ತಮಿಳು ಸಂಘಟನೆಗೆ ತೊಡಗಿ ಇಲ್ಲಿನ ಕನ್ನಡಿಗರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ನಿವೃತ್ತ ಶಿಕ್ಷಕ ಸಾವಂದಯ್ಯ ಪೋಲೀಸರಿಗೆ ದೂರು ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಹೋಟೆಲ್ ನಲ್ಲಿನ ಪರಿಕರಗಳನ್ನು ಎರಡು ಮೂರು ಬಾರಿ ಹೊರಗಡೆ ಎಸೆದು ದೌರ್ಜನ್ಯ ಎಸಗಿದ್ದಾರೆ ಎಂದು ಕಂಡಕಂಡವರ ಬಳಿ ನಮ್ಮನ್ನು ಬದುಕಲು ಬಿಡಿ ಎಂದು ಕನ್ನಡಿಗರ ಕುಟುಂಬಗಳ ಅಂಗಲಾಚಲಾರಂಭಿಸಿದೆ. ಕನ್ನಡ ಪರ ಸಂಘಟನೆಗಳು ಕಂಡೂ ಕಾಣದಂತೆ ಇರುವುದು ಇಲ್ಲಿನವರ ಅಚ್ಚರಿಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+