ಶ್ರೀ, ಶ್ರೀಮತಿ ಬಳಸುವ ಮುನ್ನ ಒಮ್ಮೆ ಯೋಚಿಸಿ

ಅಂದರೆ, ಶ್ರೀ ಮತ್ತು ಶ್ರೀಮತಿ ಅನ್ನುವ ಎರಡೂ ಸ್ತ್ರೀಯರಿಗೆ ಬಳಸಲ್ಪಡುವ ಗೌರವ ಪದ. ಅಂದರೆ ಸ್ತ್ರೀಯರ ಹೆಸರಿನ ಹಿಂದೆ ಶ್ರೀ ಅಥವಾ ಶ್ರೀಮತಿ ಯಾವುದನ್ನು ಬೇಕಾದರೂ ಬಳಸಬಹುದು. ಆದರೆ ಪುರುಷರ ಹೆಸರಿನ ಹಿಂದೆ ಶ್ರೀ ಬಳಸುವುದು ಗೌರವ ಪದವಾಗುವ ಬದಲು ಅಗೌರವ ಪದ ಬಳಸಿದಂತಾಗುತ್ತದೆ.
ಹಾಗಿದ್ದರೆ, ಹೇಗೆ ಬಳಸುವುದು ಸರಿ? ಶ್ರೀಗೌರಿ, ಶ್ರೀಪಾರ್ವತಿ, ಶ್ರೀಲಕ್ಷ್ಮಿ ಅಥವಾ ಶ್ರೀಮತಿ ಗೌರಿ, ಶ್ರೀಮತಿ ಪಾರ್ವತಿ, ಶ್ರೀಮತಿ ಲಕ್ಷ್ಮಿ ಹೀಗೆ ಬಳಸಬೇಕು. ಪುರುಷರಿಗೆ ಶ್ರೀಯುತ ಗೌರೀಶ, ಶ್ರೀಯುತ ರಾಮಚಂದ್ರ, ಶ್ರೀಯುತ ಗಣೇಶ ಅಥವಾ ಶ್ರೀಮಾನ್‌ಗೌರೀಶ, ಶ್ರೀಮಾನ್ ರಾಮಚಂದ್ರ, ಶ್ರೀಮಾನ್ ಗಣೇಶ ಎಂದು ಬಳಸಬೇಕು.
ಆದ್ದರಿಂದ ಆಮಂತ್ರಣಾದಿಗಳಲ್ಲಿ ಶ್ರೀ/ ಶ್ರೀಯುತ ಇಲ್ಲವೆ ಶ್ರೀಯುತ/ಶ್ರೀ ಅಥವಾ ಶ್ರೀ/ ಶ್ರೀಮಾನ್-ಶ್ರೀಮಾನ್/ಶ್ರೀ ಹೀಗೆ ಬಳಸುವುದು ಸರಿಯಾದದ್ದು. ಅದೇ ರೀತಿ 'ಸರ್ವರಿಗೂ ಸುಸ್ವಾಗತ' ಅನ್ನುವುದು ತಪ್ಪು. 'ಸರ್ವರಿಗೂ ಸ್ವಾಗತ' ಸರಿಯಾದದ್ದು. 'ಸುಸ್ವಾಗತ'
ಅನ್ನುವುದು ಅತಿಥೇಯರು ಬಳಸುವ ಪದವೇ ಅಲ್ಲ; ಅದು ಅತಿಥಿಗಳಾಗಿ ಬರುವವರು ಹೇಳಬೇಕಾದ 'ಸ್ವಾಗತಕ್ಕೆ' ಉತ್ತರ 'ಸುಸ್ವಾಗತ"!
ನಾವು ಅತಿಥಿಗಳನ್ನು ಕಳಿಸುವಾಗ 'ಬೀಳ್ಕೊಡು" ಶಬ್ದ ಬಳಸುತ್ತೇವೆ. ಅದು ಬೀಳ್ಕೊಂಡು ಅಲ್ಲ. ಬೀಳ್ಕೊಡು ಎಂದರೆ ಬೀಳಲಿಕ್ಕೆ ಬಿಡು ಎಂದಾಗುತ್ತದೆ! ಆ ಪದ - 'ಬಿಡು+ಕೊಡು' ಎಂಬುದರಿಂದಾದ 'ಬೀಳ್ಕೊಡು" ಎಂದಾಗಿದೆಯೆಂದು ಹೇಳುತ್ತಾರೆ ಅದು ಸರಿಯಲ್ಲ. ವೀಳ್ಯ ಕೊಡುವುದು ಆಹ್ವಾನದ ಸಂದರ್ಭದಲ್ಲೇ ಹೊರತು ಕಳಿಸಿಕೊಡುವಾಗ ಅಲ್ಲ! ದಯವಿಟ್ಟು ಭಾಷೆಯ ಶುದ್ಧ ಬಳಕೆಯ ಕಡೆಗೆ ಗಮನಿಸಿ.












Click it and Unblock the Notifications