ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬರ್ತ್‌ಡೇ’ಯಂದು ಕನ್ನಡ ಶುಭಾಶಯ ಗೀತೆ ಹಾಡಿ

By Staff
|
Google Oneindia Kannada News


ಕಲ್ಯಾಣ ರಾಮನ್‌ ಅವರೇ,

ನೀವು ತಿಳಿಸಿದ ಹಾಗೆ ಕನ್ನಡದಲ್ಲಿ ಶಿಶು ಸಾಹಿತ್ಯ ಸಮೃದ್ಧವಾಗಿದ್ದರೂ ಜನ್ಮದಿನದ ಶುಭಾಶಯ ಗೀತೆಗಳು ವಿರಳ. ವಿಜಯನಗರದ ಪತನಾ ನಂತರ ಕನ್ನಡ ನಾಡು ನಿಜಾಮರು ಆಂಗ್ಲರೂ ಸೇರಿದಂತೆ ಅನೇಕ ಪರಭಾಷಿಕರ ಆಳ್ವಿಕೆಯಲ್ಲಿ ಹಂಚಿ ಹೋಗಿತ್ತು. ಈ ದುರದೃಷ್ಟಕರ ಐತಿಹಾಸಿಕ ಕಾರಣದಿಂದಾಗಿ ಕನ್ನಡ ನಾಡಿನಲ್ಲೇ ಕನ್ನಡ ಸೊರಗಿದ್ದು ಸತ್ಯ. ಭಾಷಾ ಬಳಕೆಯ ಸಾಧ್ಯತೆಗಳನ್ನು ಆಯಾ ಆಳ್ವಿಕೆಗಾರರು ವಿರಳಗೊಳಿಸಿದ್ದು, ಅದಕ್ಕೆ ಕನ್ನಡಿಗರು ಮರುಳಾದದ್ದು ನಮ್ಮ ದುರಂತ.

ಜ್ಞಾನ - ವಿಜ್ಞಾನಗಳ ಕಲಿಕೆ, ತಂತ್ರಜ್ಞಾನಗಳು ಕನ್ನಡದಲ್ಲಿ ಅಸಾಧ್ಯವೆಂಬ ಪೊಳ್ಳು ನಂಬಿಕೆಯವರೆಗೆ ಇದು ಬೆಳೆದಿದೆ. ಈ ಮಣ್ಣಿನ ಮಕ್ಕಳು ಸಾವಿರಾರು ವರ್ಷದ ಅಸ್ತಿತ್ವ ಮತ್ತು ಸಮೃದ್ಧತೆಯಿರುವ, ನಿಸ್ಸಂದಿಗ್ಧ ಲಿಪಿಯಿಂದ ಭೂಷಿತವಾಗಿರುವ ಕನ್ನಡವನ್ನು ಯೋಗ್ಯತೆಯಿಲ್ಲದ ಭಾಷೆ ಎಂಬ ಹಣೆಪಟ್ಟಿ ಕಟ್ಟಿ ಕೂರಿಸಿರುವುದು ಅಕ್ಷಮ್ಯವೂ ಹೌದು. ತಮ್ಮ ಅಸಮರ್ಥತೆಯನ್ನು ಭಾಷಾ ಅಸಮರ್ಥತೆಯೆಂದು ಬಿಂಬಿಸುತ್ತಿರುವ ಜನಾಂಗವೊಂದಕ್ಕೆ ಜನ್ಮ ನೀಡಿದ್ದಕ್ಕೆ ಖಂಡಿತಾ ತಾಯಿ ಭುವನೇಶ್ವರಿ ಮರುಗುತ್ತಿದ್ದಾಳೆ.

ಕನ್ನಡ ಬರಿಯ ಮನೆಯ, ಸಾಹಿತ್ಯದ, ದಿನಬಳಕೆಗೆ ಮೀಸಲಾದ ಭಾಷೆ ಎಂಬಂತೆ ನಾಡಿನ ಅನೇಕ ಗಣ್ಯರೂ ಬಿಂಬಿಸುತ್ತಿರುವ ಈ ಸಂದರ್ಭದಲ್ಲಿ, ಜನ್ಮದಿನದ ಶುಭಾಶಯ ಗೀತೆಯ ಅಲಭ್ಯತೆಯ ವಿಷಯ, ನಾಡಿಗೆ ಒದಗಿರುವ ದುಃಸ್ಥಿತಿ ಮತ್ತು ಬರಲಿರುವ ದಿನಗಳಲ್ಲಿ ಕನ್ನಡಕ್ಕೆ ಬರಲಿರುವ ದುರ್ಗತಿಯ ಬಗ್ಗೆ ನಮ್ಮನ್ನು ಜಾಗೃತಗೊಳಿಸುತ್ತಿದೆ. ಕನ್ನಡ ಭಾಷೆಯು ಸಾಹಿತ್ಯ, ಸಂಭಾಷಣೆಗೆ ಸೀಮಿತವಾದ ಜುಟ್ಟಿನ ಮಲ್ಲಿಗೆಯಾಗದೆ, ತಂತ್ರಜ್ಞಾನ - ವಿಜ್ಞಾನಗಳ ಹೊಟ್ಟೆ ಹಿಟ್ಟಿನ ಭಾಷೆಯಾಗಬೇಕಾದ ಅಗತ್ಯವಿದೆ. ಹಿಂದೆ ಮೈಸೂರು ವಿಶ್ವವಿದ್ಯಾಲಯ ಈ ದಿಸೆಯಲ್ಲಿ ಪ್ರಯತ್ನ ಮಾಡಿತ್ತು. ಅದೇಕೋ ಅದು ನಿಂತೇ ಹೋಯಿತು.

ಘನ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಟ್ಟಿಯಾದ ನೀತಿಯಾಂದನ್ನು ರೂಪಿಸಿ, ಎಲ್ಲ ಶಿಕ್ಷಣವೂ ಕನ್ನಡದಲ್ಲೇ ದೊರಕಿಸಿಕೊಡಲು ಮನಸ್ಸು ಮಾಡಬೇಕು. ಸುವರ್ಣ ಕರ್ನಾಟಕದ ಸಂಭ್ರಮದ ಈ ವರ್ಷದಲ್ಲಿ ‘ಇಂಗ್ಲಿಷ್‌ ಬರದೇ ಇರುವುದು ನನಗೆ ಅಪಮಾನಕರ’ ಎಂದ ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರದಿಂದ ಇದನ್ನು ನಿರೀಕ್ಷಿಸುವುದು ಕಷ್ಟವೇ. ಕನ್ನಡದಿಂದಲೇ ಕನ್ನಡಿಗನ ಸರ್ವಾಂಗೀಣ ಪ್ರಗತಿ ಎಂಬುದನ್ನು ನಮ್ಮ ನಾಯಕ ಮಣಿಗಳು ಬೇಗ ಅರಿತು ಸೂಕ್ತ ನೀತಿ ರೂಪಿಸಿ ಜಾರಿಗೆ ತರುವಂತಾಗಲಿ.

‘ಹ್ಯಾಪಿ ಬರ್ತ್‌ ಡೇ ಟೂ ಯೂ . . ’ ಎನ್ನುವ ರಾಗದಲ್ಲೇಹಾಡಬಹುದಾದ ಒಂದು ಶುಭಾಶಯ ಗೀತೆ ಹೀಗಿದೆ. ಇದರ ಅಜ್ಞಾತ ಕವಿಗೆ ಒಂದು ನಮನ. ಗೀತೆಯನ್ನು ಕೆಳಗೆ ನೀಡಿದ್ದೇನೆ..

ಶುಭ ಜನುಮದಿನ ನಿನಗೆ,
ಶುಭ ಹಾರೈಕೆಯ ಕೊಡುಗೆ,
ಸಂತಸ ತರಲಿ ನಿನಗೆ,
ಸುಮಧುರ ಬಾಳಿನ ಘಳಿಗೆ

ತೆರೆಯಲಿ ಅರಿವಿನ ತೆರೆತೆರೆ
ಸರಿಯಲಿ ಮಬ್ಬಿನ ಪೊರೆಪೊರೆ
ಬೆಳೆಯಲಿ ಸ್ನೇಹದ ಎಳೆಎಳೆ
ಮೊಳಗಲಿ ಗೆಳೆತನ ಕರೆಕರೆ

ಮಾಗಲಿ ಮಾವಿನ ಹುಳಿಹುಳಿ
ನೀಗಲಿ ಕೊರೆಯುವ ಚಳಿಚಳಿ
ಸಾಗಲಿ ಉಡುಗೊರೆ ಬಳುವಳಿ
ಮೂಡಲಿ ಪ್ರೀತಿಯ ಕಳಕಳಿ

ಅರಳಲಿ ಪ್ರೀತಿಯ ಸುಮಸುಮ
ಸುರಿಯಲಿ ಗಂಧದ ಘಮಘಮ
ಚಿಗುರಲಿ ನಲಿವಿನ ಎಲೆಎಲೆ
ಚಿಮ್ಮಲಿ ನಗುವಿನ ಅೖೆಅಲೆ

- ಆನಂದ್‌. ಜಿ., ಬೆಂಗಳೂರು

*

ಚಂದ್ರಶೇಖರ್‌ ಅವರಿಗೆ ನಮಸ್ಕಾರಗಳು.

ನಿಮ್ಮ ಲೇಖನ ಓದಿದೆ. ಮಕ್ಕಳ ಹುಟ್ಟುಹಬ್ಬಕ್ಕಾಗಿ ಕನ್ನಡದಲ್ಲಿ ಶುಭಾಶಯ ಹಾಡುಗಳಿಲ್ಲ, ಎಂದಿದ್ದೀರಿ : ಇದೆ.

ಡಾ. ಲಕ್ಷ್ಮೀನಾರಾಯಣ ಭಟ್ಟರು ಮಕ್ಕಳಿಗಾಗಿಯೇ ಬರೆದ ಶಿಶುಗೀತೆಗಳ ಸಂಗ್ರಹ : ‘ಕಿಶೋರಿ’ಯಲ್ಲಿ ಒಂದು ಹಾಡಿದೆ; ಅದನ್ನು ರತ್ನಮಾಲಾ ಪ್ರಕಾಶ್‌ ಹಾಡಿದ್ದಾರೆ. ‘ಹುಟ್ಟಿದ ಹಬ್ಬ ಇವತ್ತು, ಕುಣಿವೆವು ಪುಟ್ಟನ ಸುತ್ತು...’ ಎನ್ನುವ ಈ ಹಾಡು ಸೊಗಸಾಗಿದೆ. ವಿವರಗಳಿಗೆ ಭಟ್ಟರನ್ನು ಸಂಪರ್ಕಿಸಿ ಅಥವಾ ಸಪ್ನ ಪುಸ್ತಕ ಭಂಡಾರದಲ್ಲಿ ವಿಚಾರಿಸಿ.

- ಜ್ಯೋತಿ ಮಹದೇವ್‌

*

Hai Kalyana Raman,

Your friend Dr.B.A.Sanadi shares a story with you. Click on the link to read /category/response/301006ckraman.html

Shubhavaagali ninagee janmadina
Nee beLeyuta Teerisu Nelada RuNa

-B A SANADI (now in US)

*

Maanyare,

Long time ago our Kannadithi, Kannada Premi, Late Smt. Vimala Chennabasappa of Washington wrote a nice Happy Birthday Song in Kannada. In many Birthdays we do sing that song. We are very proud to say that a Kannada person from America wrote it before any Kannadiga could think of it in Karnataka!!!

- Shaila

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X