ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಂಧದ ಚಕ್ರವ್ಯೂಹದಲ್ಲಿ ಸಿಲುಕಿದ ಇವರಿಗೆ ಯಾರು ಹೇಳುವರು ತಿಳಿ?

By Staff
|
Google Oneindia Kannada News

;?
ಅವಳು ನನ್ನ ಪ್ರೀತಿಸಿದಳು; ‘ಪ್ರೀತ್ಸೋದ್‌ ತಪ್ಪು’ ಎಂದು ಅಳಲುತ್ತಿರುವ ಶ್ರೀನಿವಾಸ್‌, ತಮ್ಮ ಪ್ರೀತಿಯ ಪೇಚಾಟ ಹೇಳಿದ್ದು ಹೀಗೆ...

  • ಶ್ರೀ
ಮಾನ್ಯ ಸಂಪಾದಕರೇ,

ದಟ್ಸ್‌ ಕನ್ನಡದಲ್ಲಿ ಪ್ರಕಟವಾದ ‘ಪ್ರೀತ್ಸೋದ್‌ ತಪ್ಪಾ?’ ಲೇಖನ ತುಂಬ ಚೆನ್ನಾಗಿತ್ತು. ಲೇಖನದಲ್ಲಿ ‘ಹಳೆಯ ಸಂಪ್ರದಾಯಕ್ಕೆ ಕಟ್ಟು ಬಿದ್ದು ತಮ್ಮ ಮಾತು/ಗೌರವ ಉಳಿಸಿಕೊಳ್ಳುವುದಕ್ಕೆ ತಮ್ಮ ಮಗನ ಜೀವನ ಹಾಳು ಮಾಡುತ್ತಿರುವ ತಂದೆ ತಾಯಿಗಳಿಗೆ ತಿಳಿ ಹೇಳಬೇಕಿತ್ತು’.

ನನ್ನ ಹುಟ್ಟೂರು (ಹೆಸರಿಗೆ ತಕ್ಕಂತೆ ಬರೀ ಹುಟ್ಟಿದ ಊರು) ನಿಡಗಟ್ಟೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನನ್ನೂರಿದೆ. ಆದರೆ ಜೀವನದ ಬೆಳವಣಿಗೆ ಮಾತ್ರ ಹಾರುವ ಹಕ್ಕಿಯ ಹಾಗೆ ನಿಲ್ಲದೆ ನಿರಂತರ. ಕಂಡ ಕಂಡ ಕಡೆಯಲ್ಲ ಸಾಗುತ್ತಿದೆ.

ಸರಿ ವಿಷಯಕ್ಕೆ ಬರೋಣ, ನನ್ನ ಮಾವನ ಮಗಳು ಹುಟ್ಟಿದ ದಿನವೇ ‘ನನಗೂ ಅವಳಿಗೂ ಮದುವೆ’ ಎಂದು ನಮ್ಮ ತಂದೆ ತಾಯಿ ಹಾಗೂ ಹಿರಿಯರು ನಿರ್ಧರಿಸಿದ್ದರಂತೆ. ಈ ವಿಷಯ ನನಗೆ ತಿಳಿದಿದ್ದರೂ ಅದರ ಯೋಚನೆ ಇರಲಿಲ್ಲ. ಕಾರಣ ನನ್ನ ವಯಸ್ಸು/ ನನ್ನ ತಿಳಿವಳಿಕೆ. ನನ್ನ ಅರಿವಿಗೆ ಬರುವ ಮೊದಲೆ ನನ್ನ ಪ್ರೀತಿಸುತ್ತಿದ್ದಳು ನನ್ನ ಮಾವನ ಮಗಳು . ಈಗ ಅವಳಿಗೆ ತಿಳಿಹೇಳಿದರು ಕೇಳುವ ಸ್ಥಿತಿಯಲ್ಲಿ ಅವಳಿಲ್ಲ.

ಹೌದು ನಾನೇಕೆ ಮದುವೆ ಬೇಡವೆನ್ನುತ್ತಿದ್ದೇನೆ ? ನನ್ನ ಪ್ರಕಾರ ಕಾರಣ ಹಲವಾರು, ಆದರೆ ನಮ್ಮ ಹಿರಿಯರ ಪ್ರಕಾರ ಕಾರಣವಿಲ್ಲ.

ಸರಿ ಕಾರಣವೇನು ? ನನಗೆ ಚಿಕ್ಕವಯಸ್ಸಿನಿಂದ ಹೃದಯದ ಸಮಸ್ಯೆ. ನನಗಷ್ಟೇ ಅಲ್ಲ ನನ್ನ ತಮ್ಮ , ನನ್ನ ಮಾವನ ಕೊನೆಯ ಮಗಳಿಗೂ ಇದೇ ಕಾಯಿಲೆ. ಇದು ರಕ್ತ ಸಂಬಂಧದಿಂದ / ವಂಶಾವಳಿಯಿಂದ ಹರಡಿದ ಕಾಯಿಲೆ. ಇದನ್ನು ನಾನು ಏಷ್ಟು ತಿಳಿ ಹೇಳಿದರು ದೊಡ್ದವರಿಗೆ ಅವರ ಮಾತು ಮುಖ್ಯ, ಇವಳಿಗೆ ದೇವರೇ ಬಲ್ಲ?.

ಇದರ ನಡುವೆ ಪ್ರೀತಿ ವಂಚಿತನಾಗಿ ಬೆಳೆದ ನನಗೆ ಪ್ರೀತಿ ತುಂಬಿದ ಗೆಳತಿಯ ಜೊತೆ ಪ್ರೇಮಾಂಕುರ. ಇದು ಸ್ನೇಹದಿಂದ ಪ್ರೇಮಕ್ಕೆ ತಿರುಗಿದ ಮತ್ತೊಂದು ಅಂತರ್ಜಾತಿಯ ಪ್ರೀತಿ. ನನ್ನ ಎಲ್ಲಾ ಒಳ ಅರಿವನ್ನು ತಿಳಿದಿದ್ದ ಸ್ನೇಹಿತೆಯ ಜೊತೆ ಪ್ರೇಮ, ಪ್ರೀತಿ ಜೊತೆಯಲ್ಲೆ ತಮ್ಮನ ಓದು, ನನ್ನ ಕೆಲಸ, ಸಾಲ..................

ಸಮಸ್ಯೆಗಳು ತಿಳಿದಿದ್ದು ಪ್ರೀತಿ ಮಾಡುವುದಕ್ಕೆ ಕಾರಣ ಅಥವಾ ಪ್ರೇರಣೆ :

ಮತ್ತದೇ ‘ಪ್ರೀತಿಗೆ ಕಣ್ಣಿಲ್ಲ, ...ಯೋಚಿಸುದಕ್ಕೆ ಸಮಯವಿಲ್ಲ’. ಪ್ರೀತಿಯ ವಾತಾವರಣದಿಂದ ದೂರವಿದ್ದ ಕಾರಣಕ್ಕೊ .. ಸ್ನೇಹಿತೆಯ ಮನಸ್ಸಿನ ಮಾಯೆಯೋ ನಾ ಕಾಣೆ...... ಸಮಸ್ಯೆಗಳು ಬರುವುದು ಖಚಿತವಾಗಿದ್ದರೂ, ಮನಸ್ಸಿಗೆ ಮೋಸ ಮಾಡದೇ ಧೈರ್ಯದಿಂದ ಪ್ರೀತಿಸಿದೆ. ಈಗ ನನ್ನ ಪರಿಸ್ಥಿತಿ ಚಕ್ರವ್ಯೂಹದೊಳಗೆ ಸಿಕ್ಕಂತಾಗಿದೆ.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X