ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಗೃಹವೇದನ ನಿವಾರಕ ಸಮಾರಂಭ!

By Staff
|
Google Oneindia Kannada News


ಮಾನ್ಯ ಸಂಪಾದಕರೆ,

ಪ್ರಶಾಂತ ಬೀಚಿಯವರು ಬರೆದ ‘ಕನ್ನಡಕ್ಕಾಗಿ ಕೈಎತ್ತು...’ ಎಂಬ ಲೇಖನ ಇತ್ತೀಚೆಗೆ ಅಮೆರಿಕಾದಲ್ಲಿ ಅದ್ಧೂರಿಯಾಗಿ ನಡೆದ ವಿಶ್ವಕನ್ನಡಿಗರ ಸಮ್ಮೇಳನದಲ್ಲಿ ಕಾಣಬಂದ ಒಂದು ಮುಖ್ಯವಾದ ಅಂಶವನ್ನು ಎತ್ತಿ ತೋರಿಸುತ್ತದೆ. ಅದೇನೆಂದರೆ ಹೊರದೇಶದಲ್ಲಿದ್ದು ಕಷ್ಟಗಳನ್ನು ಅನುಭವಿಸಿ ಸಂಸಾರಗಳನ್ನು ಹೂಡಿ, ಅಪಾರ ತೊಡಕುಗಳನ್ನು ಎದುರಿಸಿ ಮುಂದೆಬಂದಿರುವ ಕನ್ನಡಿಗರು ‘ ತಮ್ಮ ತಾಯಿನಾಡಿನಲ್ಲಿ ಕನ್ನಡವನ್ನು ಕಾಪಾಡಿ, ಅದನ್ನು ಉದ್ಧರಿಸುವ ಯಾವುದಾದರು ಕಾರ್ಯಕ್ರಮವನ್ನು ತಂದಿದ್ದಾರೆಯೆ?’ ಎಂಬ ಅಂಶ.

ಈಗಾಗಲೇ ಅಮೆರಿಕಾದ ಕನ್ನಡಿಗರು ಅಮೆರಿಕಾದಲ್ಲೇ ಜನಿಸಿದ ಮುಂದಿನ ಕನ್ನಡ ಪೀಳಿಗೆಗಳಿಗೆ ಕನ್ನಡವನ್ನು ಕಲಿಸುವ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಆವುಗಳಲ್ಲಿ ‘ಕನ್ನಡ ಕಲಿ’ ಎಂಬ ಭಾನುವಾರದ ತರಗತಿಗಳನ್ನು ಅಮೆರಿಕದ ಅನೇಕ ಕನ್ನಡಕೂಟಗಳು ಯಶಸ್ವಿಯಾಗಿ ನಡೆಸುತ್ತಿದ್ದಾರೆಂಬುದು ಪ್ರಶಂಸನೀಯ.

ಬ್ರಿಟನ್ನಿನ 1988ರಲ್ಲಿ ಮ್ಯಾಂಚೆಸ್ಟರಿನಲ್ಲಿ ನಡೆದ ಮೊದಲನೆಯ ವಿಶ್ವಕನ್ನಡಿಗರ ಸಮ್ಮೇಳನದಲ್ಲಿ ಕೇಳಿಬಂದ ಮುಖ್ಯವಾದ ಪ್ರಶ್ನೆ ಏನೆಂದರೆ, ‘ನಿಮ್ಮತಾಯಿನಾಡಿಗೆ ನೀವೇನು ಮಾಡುತ್ತಿದ್ದೀರಿ?’ ಆ ಸಮ್ಮೇಳನಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಕೇಳಿದ ಪ್ರಶ್ನೆ ಇದು. ಆ ಸಮಯ, ಕಂಪ್ಯೂಟರುಗಳ, ಸಾಫ್ಟ್ವೇರುಗಳ, ಐಟಿಗಳ ಪೂರ್ವಸಮಯ.

ತಾಯಿನಾಡಿನ ಉದ್ಧಾರಕ್ಕೆ ನೀವೇನು ಮಾಡುವಿರಿ? ಎಂಬ ಆ ಪ್ರಶ್ನೆಗೆ ಉತ್ತರವಾಗಿ ಅನೇಕ ವಿದೇಶಿ ಕನ್ನಡಿಗರು ಈಗಾಗಲೇ ಅನೇಕ ಕೈಗಾರಿಕಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಭಾರತದೆಲ್ಲಾ ಪ್ರಾಂತ್ಯಗಳಿಗಿಂತಲೂ ಕರ್ನಾಟಕವು ಮುಂದುವರೆದಿರುವುದು ವಿದೇಶಿ ಕನ್ನಡಿಗರ ಭಾಗವಹಿಸುವಿಕೆಯು ಅತಿ ಮುಖ್ಯ. ಆದರೆ ಪ್ರಶಾಂತ ಬೀಚಿಯವರು ಕೇಳುವಹಾಗೆ ವಿದೇಶಿ ಕನ್ನಡಿಗರು ಕನ್ನಡಕ್ಕಾಗಿ ಏನುಮಾಡಿದ್ದಾರೆ ಅಥವಾ ಏನೇನು ಮಾಡಬಹುದು? ಎಂಬ ಪ್ರಶ್ನೆ. ಈ ಪ್ರಶ್ನೆಯನ್ನು ವಿದೇಶಿ ಕನ್ನಡಿಗರನ್ನು ಕೇಳುವುದು, ನ್ಯೂಕಾಸಲ್ಲಿಗೆ ಕಲ್ಲಿದ್ದಲನ್ನು ಹೊತ್ತಹಾಗೆ(to carry coal to Newcastle) ಆದರೆ ಈಗ ನ್ಯೂಕಾಸಲ್ಲಿನಲ್ಲೂ ಕಲ್ಲಿದ್ದಲು ಮುಗಿದಿದೆ!

ನಾನು ನೋಡಿರುವಹಾಗೆ, ವಿದೇಶೀಕನ್ನಡಿಗರ ಸಮಾರಂಭಗಳು ಮತ್ತು ಸಮ್ಮೇಳನಗಳು, ‘ಕನ್ನಡಿಗರ ಗೃಹವೇದನ ನಿವಾರಕ ಸಮಾರಂಭ’ಗಳಾಗಿ ತೋರುವುದು. ಕರ್ನಾಟಕದಿಂದ ಕಲಾವಿದರುಗಳನ್ನು, ರಾಜಕಾರಣಿಗಳನ್ನು ಮತ್ತು ಭಾಷಣಕಾರರುಗಳನ್ನು ಕರೆತಂದು, ಅವರುಗಳಿಂದ ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನಂದಿಸಿ, ರಾಜವೈಭೋಗವನ್ನು ಮೀರುವ ಭೋಜನಗಳನ್ನು ಮಾಡುವುದು ಗೃಹವೇದನ ನಿವಾರಕ ಸಮಾರಂಭವಲ್ಲವೇ?

ಇನ್ನು ಮುಂದಿನ ವಿಶ್ವಕನ್ನಡಿಗರ ಸಮ್ಮೇಳವನ್ನು ಕರ್ನಾಟಕದಲ್ಲೇ ಮಾಡುವುದು ಉಚಿತವಲ್ಲವೇ? ಪ್ರಪಂಚದ ಎಲ್ಲಾ ವಿದೇಶಿ ಕನ್ನಡಿಗರು ಸೇರಿ ಕನ್ನಡನಾಡಿನಲ್ಲಿ ಕನ್ನಡದ ಅಭಿವೃದ್ದಿಮಾಡುವ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಸಮಂಜಸವಲ್ಲವೇ?

-ರಾಜಾರಾಮ್‌ ಕಾವಳೆ. ಹ್ಯಾಂಪ್‌ ಶಯರ್‌, ಯು.ಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X