ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗರು ದಾರಿ ತಪ್ಪಿಲ್ಲ... ಕಾಲ ತಪ್ಪಿಸಿದೆ!

By Staff
|
Google Oneindia Kannada News


ಯಾರದು ತಪ್ಪು, ಯಾರದು ಒಪ್ಪು ಎಂಬುವ ಜಿಜ್ಞಾಸೆ ನಮಗೆ ಬೇಡ. ಕಾಲಕ್ಕೆ ತಕ್ಕ ಹಾಗೆ ಹಿಂದಿನವರು ಜೀವಿಸುತ್ತಾ ಇದ್ದರು. ಈಗಿನ ಕಾಲಕ್ಕೆ ತಕ್ಕ ಹಾಗೆ ಇಂದಿನ ಮಕ್ಕಳು ಜೀವಿಸುತ್ತಿದ್ದಾರೆ. ಅಷ್ಟೇ!

  • ಎಸ್‌. ಮಧುಸೂದನ ಪೆಜತ್ತಾಯ, ಬಾಳೆಹೊಳೆ
    [email protected]
ಮಾನ್ಯರೇ,

ಮಾರ್ಚ್‌ ಇಪ್ಪತ್ತೈದರಂದು ಪ್ರಕಟವಾದ ಬೆಂಗಳೂರಿನ ಸೋಮು ಅವರ ‘ಹಳ್ಳಿ ಹುಡುಗ್ರಾ...’ ಎಂಬ ಕವನ ಮನ ಮುಟ್ಟಿತು.

ಮೂರು ನಾಲ್ಕು ದಶಕಗಳ ಹಿಂದೆ ಈಗಿನ ಐಟಿ/ ಬಿಟಿ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌, ಕಾಲ್‌ ಸೆಂಟರ್‌ ಮತ್ತು ಔಟ್‌ ಸೋರ್ಸಿಂಗ್‌ ಬಗ್ಗೆ ಹಳ್ಳಿಯ ಹುಡುಗರಿಗೆ ಬಿಡಿ, ಪ್ಯಾಟೆಯ ಹುಡುಗರಿಗೆ ಕೂಡಾ ಏನೂ ಗೊತ್ತಿರಲಿಲ್ಲ.

ಹಳ್ಳಿಯಾಗಲೀ, ಪ್ಯಾಟೆಯಾಗಲೀ, ಇಂದಿನ ಪ್ರತೀ ಮಗುವಿಗೂ ಐಟಿ/ ಬಿಟಿ ಉದ್ಯೋಗಗಳದೇ ಕನಸು! ಕಾಲ ಚಕ್ರ ಅದೆಷ್ಟು ಬೇಗನೆ ತಿರುಗುತ್ತೆ!

ಅಂದು ಗ್ರಾಮೀಣ ಪ್ರದೇಶಗಳಲ್ಲಿ ಆಟವಾಡುತ್ತಾ, ಬೆಳೆದ ಅಂದಿನ ಹುಡುಗರಿಗೆ ‘ಬಂಗಾರದ ಮನುಷ್ಯ’ ಡಾ. ರಾಜ್‌ ಕುಮಾರ್‌ ಮತ್ತು ಜಸ್ಟಿಸ್‌ ವೆಂಕಟಾಚಲಯ್ಯ ಅವರು ಇಂದಿಗೂ, ಎಂದೆಂದಿಗೂ, ‘ರೋಲ್‌ ಮಾಡೆಲ್ಸ್‌ ’. ಆ ಯುವಕರಿಗೆ ಆ ದಿನಗಳ ಆಟ, ಪಾಠ ಮತ್ತು ಊಟಗಳು ಇಂದಿಗೂ ಪ್ರಿಯ.

ಇಂದು ಸೆಲ್‌ ಫೋನ್‌ಗಳನ್ನು ಕಿವಿಗೆ ಅವಚಿ ಕೊಂಡು ತಿರುಗುವ, ಗೋ ಕಾರ್ಟಿಂಗ್‌, ಬೌಲಿಂಗ್‌ ಗೇಮ್‌, ಕಂಪ್ಯೂಟರ್‌ ಗೇಮ್‌ ಇತ್ಯಾದಿ ಆಟಗಳನ್ನು ಆಡುತ್ತಾ, ಅಮೆರಿಕಾದ ಆಧುನಿಕ ಆಹಾರಗಳನ್ನು ಮೆಲ್ಲುವ ಯುವಜನರಿಗೆ, ಆ ಕಾಲದಲ್ಲಿ ಬೆಳೆದು ದೊಡ್ಡವರಾದ ತಮ್ಮ ಹಿರಿಯರ ಬಾಲ್ಯ ಜೀವನದ ಪರಿಕಲ್ಪನೆಗಳೇ ಇಲ್ಲ.

ಸಂದು ಹೋದ, ಆ ಕಾಲದ ಬಗ್ಗೆ ಆಸಕ್ತಿಯೂ ಇಲ್ಲ.

ಇಂದಿನ ಕಾಲ ಸಂಪೂರ್ಣ ಬದಲಾಗಿದೆ! ಆಧುನಿಕ ಬದಲಾವಣೆಗಳು ಈ ತರಹದ ವಿಭಿನ್ನತೆಯನ್ನು ಸೃಷ್ಟಿಸಿವೆ. ಇದರಲ್ಲಿ ಯಾರದು ತಪ್ಪು, ಯಾರದು ಒಪ್ಪು ಎಂಬುವ ಜಿಜ್ಞಾಸೆ ನಮಗೆ ಬೇಡ. ಕಾಲಕ್ಕೆ ತಕ್ಕ ಹಾಗೆ ಹಿಂದಿನವರು ಜೀವಿಸುತ್ತಾ ಇದ್ದರು. ಈಗಿನ ಕಾಲಕ್ಕೆ ತಕ್ಕ ಹಾಗೆ ಇಂದಿನ ಮಕ್ಕಳು ಜೀವಿಸುತ್ತಿದ್ದಾರೆ. ಅಷ್ಟೇ!

ಸೋಮು ಅವರು ರಚಿಸಿದ ಪುಟ್ಟ ಕವನವು ಮೇಲ್ಕಾಣಿಸಿದ ಬೃಹತ್‌ ಬದಲಾವಣೆಗೆ ಸಮರ್ಥವಾಗಿ ಕನ್ನಡಿ ಹಿಡಿದಿದೆ. ಅವರ ಕವಿತಾ ಶಕ್ತಿಗೆ ಅಭಿನಂದನೆಗಳು.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X