ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರಿಗೆ ಕನ್ನಡ ಕಂಪ್ಯೂಟರ್‌ ಬೇಗ ಬರಲಿ!

By Staff
|
Google Oneindia Kannada News


ಕೇವಲ ವಿಂಡೋಸ್‌ ಮತ್ತು ಲಿನಕ್ಸ್‌ ಮಾತ್ರವಲ್ಲ. ಮ್ಯಾಕ್‌, ಸೊಲಾರಿಸ್‌, ಬಿಎಸ್‌ಡಿ, ಅಂಗೈ ಗಣಕ, ಮೊಬೈಲ್‌ ಫೋನುಗಳು - ಹೀಗೆ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವು ರಾರಾಜಿಸುವಂತಾಗಲಿ.

ರವಿ ಕೃಷ್ಣ ರೆಡ್ಡಿಯವರ ಲೇಖನ ಓದಿದೆ. ಸೊಗಸಾಗಿ ಬಂದಿದೆ. ನಾನು ಮಾರ್ಚ್‌ 17, 2006ರಂದೇ ಈ ಬಗ್ಗೆ ಚುಟುಕಾಗಿ ಮಾಹಿತಿ ನೀಡಿದ್ದೆ . ಈ ಕನ್ನಡದ ಹೊದಿಕೆ ಇನ್ನೂ ಪರಿಪೂರ್ಣವಾಗಿಲ್ಲ. ಆದಷ್ಟು ಬೇಗನೆ ಅದು ಪರಿಪೂರ್ಣವಾಗಿ ಕನ್ನಡಿಗರಿಗೆ ಲಭ್ಯವಾಗಲಿ ಎಂದು ಆಶಿಸುತ್ತೇನೆ.

ಒಂದು ತಿದ್ದುಪಡಿ: ಪರಿಪೂರ್ಣವಾದ ಎಕ್ಸ್‌ಪಿಯ ಬೆಲೆ 7-8 ಸಾವಿರ ಅಲ್ಲ. ಅದು 6400 ರೂ.

ಕನ್ನಡ ವಿಂಡೋಸ್‌ ಸ್ಟಾರ್ಟರ್‌ ಎಡಿಶನ್‌ ಸದ್ಯದಲ್ಲೇ ಹೊರಬರಲಿದೆ. ಅದರಲ್ಲಿ ಏಕಕಾಲದಲ್ಲಿ ಮೂರು ಪ್ರೋಗ್ರಾಂಗಳನ್ನು (ಆನ್ವಯಿಕ ತಂತ್ರಾಂಶಗಳನ್ನು) ಮಾತ್ರ ಬಳಸಬಹುದು.

ಲೇಖಕರು ಲಿನಕ್ಸ್‌ ಬಗ್ಗೆ ಬರೆದ ಮಾತುಗಳಿಗೆ ನನ್ನ ಸಹಮತವಿದೆ. ಡೈನಮಿಕ್‌ ಫಾಂಟ್‌ ತಂತ್ರಜ್ಞಾನವನ್ನು ಲಿನಕ್ಸ್‌ನವರು ಇನ್ನೂ ಅಳವಡಿಸದಿರುವುದರಿಂದ ಮತ್ತು ಲಿನಕ್ಸ್‌ನಲ್ಲಿ ಉತ್ತಮ ಹಾಗೂ ಪರಿಪೂರ್ಣವಾದ ಕನ್ನಡ ಓಪನ್‌ಟೈಪ್‌ ಫಾಂಟ್‌ ಇಲ್ಲದಿರುವುದರಿಂದ ಅದನ್ನು ಸದ್ಯಕ್ಕೆ ಕನ್ನಡಿಗರು ದೂರವೇ ಇಡುವಂತಾಗಿದೆ.

‘ಉಚಿತ ತಂತ್ರಾಂಶ ಬರಲಿ, ಆದರೆ ಅದಕ್ಕಾಗಿಯೇ ಕಾದು ಕುಳಿತು ವರ್ತಮಾನದಲ್ಲಿ ಹಿಂದುಳಿಯುವುದು ಬೇಡ. ಬಹುಜನರಿಗೆ ಸದ್ಯದ ಜರೂರು ಆಗಿರುವುದನ್ನು ಇನ್ನೊಬ್ಬರು ದುಡ್ಡಿಗೆ ಕೊಡುತ್ತಿದ್ದಾರೆ ಎಂದು ದ್ವೇಷ ಬೆಳೆಸಿಕೊಳ್ಳುವುದು ಬೇಡ. ಅವರು ಕೇಳುವುದು ಅವರ ದುಡಿಮೆ ಮತ್ತು ಲಾಭಾಂಶ. ವ್ಯವಹಾರವೇ ಹಾಗೆ’ - ಈ ಮಾತುಗಳು ನನಗೆ ತುಂಬ ಇಷ್ಟವಾದವು.

ಕನ್ನಡ ಲಿನಕ್ಸ್‌ಗಾಗಿ ಕೆಲಸ ಮಾಡುವ ಕೆಲವು ಮಂದಿಯಲ್ಲಿ ಇರುವ ಆಲೋಚನಾಶಕ್ತಿಯ ಲೋಪವೆಂದರೆ ಮುಕ್ತ ತಂತ್ರಾಂಶ (ಓಪನ್‌ ಸೋರ್ಸ್‌) ಕ್ಷೇತ್ರದಲ್ಲಿ (ಲಿನಕ್ಸ್‌, ಫೈರ್‌ಪಾಕ್ಸ್‌, ಮೊರಿkುಲ್ಲ, ಫಾಂಟ್‌ -ಇತ್ಯಾದಿ) ದೊರಕುವ ಯಾವುದೇ ತಂತ್ರಾಂಶ ಅಥವಾ ಅದರ ಅಂಗದ ನ್ಯೂನತೆ ಬಗ್ಗೆ ಬರೆದರೆ ಅದು ತಮ್ಮನ್ನೇ ದೂರಿದ್ದು ಎಂದು ಭಾವಿಸಿಕೊಂಡು ಹಾಗೆ ದೂರಿದವರ ಮೇಲೆ ಸಾರ್ವಜನಿಕವಾಗಿ ಯದ್ವಾತದ್ವಾ ಎಗರಾಡುವುದು. ಇದರಿಂದ ಏನಾಗುತ್ತಿದೆಯೆಂದರೆ ಕೆಲವು ನಿಜವಾಗಿಯೂ ಆಸಕ್ತ ವ್ಯಕ್ತಿಗಳು ಈ ಮುಕ್ತ ತಂತ್ರಾಂಶ ಕ್ಷೇತ್ರದಿಂದ ದೂರ ಸರಿಯುತ್ತಿದ್ದಾರೆ.

ಕೇವಲ ವಿಂಡೋಸ್‌ ಮತ್ತು ಲಿನಕ್ಸ್‌ ಮಾತ್ರವಲ್ಲ. ಮ್ಯಾಕ್‌, ಸೊಲಾರಿಸ್‌, ಬಿಎಸ್‌ಡಿ, ಅಂಗೈ ಗಣಕ, ಮೊಬೈಲ್‌ ಫೋನುಗಳು - ಹೀಗೆ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವು ರಾರಾಜಿಸುವಂತಾಗಲಿ.


ಪೂರಕ ಓದಿಗೆ-
ಕನ್ನಡಿಗರಿಗೆ ಕನ್ನಡ ಕಂಪ್ಯೂಟರ್‌ : ಮೊದಲ ದೃಢ ಹೆಜ್ಜೆ


ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X