ಬೆಂಗಳೂರಿಗೆ ಬೇಡವೇ ‘ಕೆಂಪುದೀಪ’?!

ಬೆಂಗಳೂರಿಗೆ ಬೇಡವೇ ‘ಕೆಂಪುದೀಪ’?!
ದೆಹಲಿ, ಕೋಲ್ಕತ್ತ, ಪುಣೆ, ಮುಂಬೈಗಳಲ್ಲಿ ಇರುವಂತೆ ಬೆಂಗಳೂರಿನಲ್ಲೂ ಒಂದು‘ಕೆಂಪುದೀಪ’ ಪ್ರದೇಶಕ್ಕೆ ಅನುಮತಿ ನೀಡಿ, ವೇಶ್ಯಾವೃತ್ತಿಗೆ ಏಕೆ ಅವಕಾಶ ಮಾಡಿಕೊಡಬಾರದು? ವಿಶ್ವ ಏಡ್ಸ್‌ ಜಾಗೃತಿ ದಿನದ ಸಂದರ್ಭದಲ್ಲಿ ಒಂದು ಸಮಸ್ಯೆ-ಸಮಾಧಾನ!

  • ಜೆ.ಲಿಂಗಯ್ಯ ಕೊಂಡಹಳ್ಳಿ, ಬೆಂಗಳೂರು.
ಬೆಂಗಳೂರು ನಗರ ಶರವೇಗದಲ್ಲಿ ಬೆಳೆಯುತ್ತಿದೆ. ನಿತ್ಯ ಬೆಂಗಳೂರಿಗೆ ಬಂದು ಹೋಗುವವರು, ತಂಗುವವರು ಜಾಸ್ತಿ. ಇತ್ತೀಚೆಗೆ ಮುಂಬೈ ನಗರದಲ್ಲಿ ಡ್ಯಾನ್ಸ್‌ ಬಾರ್‌ಗಳು ಮುಚ್ಚಿದ್ದರಿಂದ ಅಲ್ಲಿ ನೃತ್ಯ ಮಾಡುತ್ತಿದ್ದ ಹುಡುಗಿಯರು ಬೆಂಗಳೂರಿಗೆ ಬಂದಿರುವುದು ತಿಳಿದ ವಿಷಯ. ಇಲ್ಲೂ ಕೂಡ ಡ್ಯಾನ್ಸ್‌ ಬಾರ್‌ಗಳ ಬಾಗಿಲು ಮುಚ್ಚಿವೆ.

ನಗ್ನ ನೃತ್ಯ, ಅಸಭ್ಯ ವರ್ತನೆ, ಕುಡಿತ, ಕುಚೇಷ್ಟೆ, ಸುಲಿಗೆ, ಹಲ್ಲೆ, ದೂರುಗಳು ಬಂದಿದ್ದರಿಂದ ಸರ್ಕಾರ ಡ್ಯಾನ್ಸ್‌ ಬಾರ್‌ಗಳನ್ನು ನಿಷೇಧಿಸಿದೆ. ಅದು ಶ್ಲಾಘನೀಯ. ಆದರೆ ಯಾವುದನ್ನು ನಿಷೇಧಿಸಿದ್ದಾರೋ ಅದೆಲ್ಲ ಚಲನಚಿತ್ರಗಳಲ್ಲಿ ಇವೆಯಲ್ಲವೇ? ಚಲನಚಿತ್ರಗಳಲ್ಲಿ ಕನಿಷ್ಠ ಬಟ್ಟೆ ತೊಟ್ಟು ಕುಣಿಯುವುದು, ಅಶ್ಲೀಲ ನೃತ್ಯ ಮಾಡುವುದು, ದ್ವಂದ್ವ ಅರ್ಥ ಕೊಡುವ ಸಂಭಾಷಣೆ ಎಲ್ಲವೂ ಇದೆ. ಇವನ್ನೂ ನಿಷೇಧಿಸಬೇಕಲ್ಲವೇ?

ವೇಶ್ಯಾ ವೃತ್ತಿ ಇತ್ತೀಚಿನದಲ್ಲ. ಪುರಾತನ ಕಾಲದಿಂದಲೂ ನಡೆದು ಬಂದಿದೆ. ಕದ್ದುಮುಚ್ಚಿ ಮನೆಗಳಲ್ಲಿ, ಲಾಡ್ಜುಗಳಲ್ಲಿ, ರೆಸಾರ್ಟ್‌ಗಳಲ್ಲಿ, ಪ್ರವಾಸ ತಾಣಗಳಲ್ಲಿ ನಡೆಯುವುದೇನು? ಬೆಂಗಳೂರು ಬಸ್‌ಸ್ಟ್ಯಾಂಡ್‌, ರೈಲ್ವೆ ಸ್ಟೇಷನ್‌, ಸಿಟಿ ಮಾರ್ಕೆಟ್‌ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಅಗ್ಗದ ದರದ ವೇಶ್ಯೆಯರು ಪೋಲಿಸರ ಕೈಗೆ ಸಿಕ್ಕಿದ ಉದಾಹರಣೆಗಳಿವೆ.

ಹಾಗೆಯೇ ಹೈಟೆಕ್‌ ವೇಶ್ಯೆಯರು ಕಾರು, ಮೊಬೈಲ್‌ ಮುಖೇನ ವ್ಯವಹಾರ ಮಾಡುತ್ತಿರುವುದು ತಿಳಿದೇ ಇದೆ. ಅಲ್ಲಿ ಇಲ್ಲಿ ರೈಡ್‌ ಮಾಡಿ ವೇಶ್ಯೆಯರನ್ನು ಬಂಧಿಸಿದ ಸುದ್ದಿಗಳೂ ಬಂದಿವೆ. ವೇಶ್ಯೆ ಆಗಲು ಕಾರಣಗಳು ಇವೆ; ಬಡತನ, ನಿರುದ್ಯೋಗ, ಪರಿಸರದ ಪರಿಸ್ಥಿತಿ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ತಲೆಹಿಡುಕ ಗಂಡಂದಿರು, ರಾಜಕಾರಣಿಗಳ ಸುಳ್ಳು ಭರವಸೆ, ಗೂಂಡಾಗಳ ಕಾಟ, ಮೋಜಿಗಾಗಿ -ಹೀಗೆ ನಾನಾ ಕಾರಣಗಳು.

ವೇಶ್ಯೆಯರ ಸಹವಾಸದಿಂದ ಏಡ್ಸ್‌ ಬರುವ ಸಾಧ್ಯತೆ ಇದ್ದೇ ಇದೆ. ಆದಕಾರಣ ದೆಹಲಿ, ಕಲ್ಕತ್ತ, ಪುಣೆ, ಮುಂಬೈಗಳಲ್ಲಿ ಇರುವಂತೆ ಬೆಂಗಳೂರಿನಲ್ಲೂ ಒಂದು ಕೆಂಪುದೀಪ ಪ್ರದೇಶಕ್ಕೆ ಅನುಮತಿ ನೀಡಿ ವೇಶ್ಯಾವೃತ್ತಿಗೆ ಏಕೆ ಅವಕಾಶ ಮಾಡಿಕೊಡಬಾರದು? ಅಲ್ಲಿಗೆ ಹೋಗಿ ಬರುವ ಪುರುಷ-ಸ್ತ್ರೀಯರನ್ನು ನಿತ್ಯ ವೈದ್ಯರು ಪರೀಕ್ಷೆ ಮಾಡಬೇಕು. ಅಲ್ಲಿ ವ್ಯವಹರಿಸುವ ಗಂಡಸು-ಹೆಂಗಸು ಕಡ್ಡಾಯವಾಗಿ ಕಾಂಡಮ್‌ ಉಪಯೋಗಿಸಬೇಕು ಎಂದು ಕಡಿವಾಣ ಹಾಕಬೇಕು.

ಇದರಿಂದ ಏಡ್ಸ್‌ ಮತ್ತು ಜನಸಂಖ್ಯೆ ನಿಯಂತ್ರಿಸಬಹುದಲ್ಲವೇ? ಅತ್ಯಾಚಾರ, ಗ್ಯಾಂಗ್‌ ರೇಪ್‌ ನಿಯಂತ್ರಿಸಬಹುದಲ್ಲವೆ? ಸಾಧಕ ಭಾದಕಗಳನ್ನು ಸರ್ಕಾರ ಚಿಂತಿಸಿ ಬೆಂಗಳೂರಿಗೊಂದು ಕೆಂಪು ದೀಪ ಪ್ರದೇಶಕ್ಕೆ ಅನುಮತಿ ನೀಡಬಹುದಲ್ಲ? ಬೆಂಗಳೂರಿನ ಪರಿಸ್ಥಿತಿ ನೋಡಿದರೆ ಇಂಥ ದಾರಿ ತೆರೆಯುವುದೇ ಜನರ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

ಮುಖಪುಟ / ಓದುಗರ ಓಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+