ಕ್ಯಾಪ್ಟನ್ ಅಮರೀಂದರ್ ಸಿಂಗ್ ಸ್ನೇಹಿತೆಗೆ ಐಎಸ್ಐ ನಂಟು!

ಚಂಡೀಘರ್, ಅಕ್ಟೋಬರ್ 22: ಪಂಜಾಬ್‌ನಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ. ಕ್ಯಾಪ್ಟನ್ ಸಿಂಗ್ ಅವರ ಪಾಕಿಸ್ತಾನಿ ಸ್ನೇಹಿತೆಗೆ ಪಾಕಿಸ್ತಾನದ ಐಎಸ್ಐ ಸಂಪರ್ಕವಿದೆ ಎಂದು ಪಂಜಾಬ್ ಸಚಿವ ಸಚಿವ ಸುಖಜಿಂದರ್ ರಾಂಧವ ಹೊಸ ಬಾಂಬ್ ಸಿಡಿಸಿದ್ದಾರೆ.

ಪಂಜಾಬ್ ಗೃಹ ಸಚಿವ ಸುಖಜಿಂದರ್ ರಾಂಧವಾ ಅವರು ಕ್ಯಾಪ್ಟನ್ ಅಮರೀಂದರ್ ಸಿಂಗ್ ಸ್ನೇಹಿತೆ ಆರೋಸಾ ಆಲಂ ಪಾಕಿಸ್ತಾನದ ಐಎಸ್‌ಐ ಅಥವಾ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಜೊತೆ ಸಂಪರ್ಕ ಹೊಂದಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಕರೆ ನೀಡಿದ್ದಾರೆ.

"ಪಂಜಾಬ್ ಐಎಸ್‌ಐನಿಂದ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಕ್ಯಾಪ್ಟನ್ ಹೇಳುತ್ತಿದ್ದಾರೆ. ಹಾಗಾಗಿ ಐಎಸ್‌ಐ ಜೊತೆ ಆರೋಸಾ ಆಲಂ ಅವರ ಸಂಬಂಧದ ಬಗ್ಗೆಯೂ ನಾವು ತನಿಖೆ ನಡೆಸುತ್ತೇವೆ" ಎಂದು ರಾಂಧವ ಹೇಳಿದ್ದಾರೆ. ಇದರ ಜೊತೆಗೆ ಪಾಕಿಸ್ತಾನದ ಸೇನಾ ಅಧಿಕಾರಿಗಳೊಂದಿಗೆ ಪತ್ರಕರ್ತರಾದ ಆರೋಸಾ ಆಲಂ ಇರುವ ಫೋಟೋ ಮತ್ತು ವಿಡಿಯೋಗಳ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೇ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಪಂಜಾಬ್ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

Punjab Ex-CM Amarinder Singhs Pakistani Friend Linked With ISI: Punjab Minister Allegation

ಯಾರು ಈ ಅರೂಸಾ ಅಲಂ:

ಅರೂಸಾ ಅಲಂ ಪಾಕಿಸ್ತಾನದ ರಕ್ಷಣಾ ಪತ್ರಕರ್ತೆ. ಕಳೆದ 2018ರಲ್ಲಿ ಇಮ್ರಾನ್ ಖಾನ್ ಪ್ರಮಾಣವಚನಕ್ಕೆ ಹಾಜರಾಗಿದ್ದಕ್ಕೆ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥನನ್ನು ಅಪ್ಪಿಕೊಂಡಿದ್ದಕ್ಕಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ನವಜೋತ್ ಸಿಂಗ್ ಸಿಂಗ್ ನವಜೋತ್ ಸಿಧು ವಾಗ್ದಾಳಿ ನಡೆಸಿದ್ದರು. ಅಂದೂ ಸಹ ಅರೂಸಾ ಆಲಂ ಹೆಸರು ಮುಂಚೂಣಿಗೆ ಬಂದಿತ್ತು. ಅದಕ್ಕೂ ಮೊದಲು 2004ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಕ್ಯಾಪ್ಟನ್ ಅಮರೀಂದರ್ ಸಿಂಗ್ ರನ್ನು ಭೇಟಿ ಮಾಡಿದ ಪತ್ರಕರ್ತೆ ಅರೂಸ್ ಅಲಂ, ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು. ಇತ್ತೀಚಿಗೆ ಅವರ ಪ್ರಮಾಣವಚನ ಸಮಾರಂಭದಲ್ಲೂ ಭಾಗವಹಿಸಿದ್ದರು.

ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಗ್ಗೆ ಉಲ್ಲೇಖ:

"ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಳೆದ ನಾಲ್ಕೂವರೆ ವರ್ಷಗಳಿಂದ ಪಾಕಿಸ್ತಾನದಿಂದ ಡ್ರೋನ್‌ಗಳು ಬರುತ್ತಿರುವ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದರು. ಆದ್ದರಿಂದ ಕ್ಯಾಪ್ಟನ್ ಮೊದಲು ಈ ವಿಷಯ ಪ್ರಸ್ತಾಪಿಸಿದ ನಂತರ ಪಂಜಾಬ್‌ನಲ್ಲಿ ಬಿಎಸ್‌ಎಫ್ ಅನ್ನು ನಿಯೋಜಿಸಿದರು. ಆದ್ದರಿಂದ ಇದರ ಹಿಂದೆ ದೊಡ್ಡ ಕಥೆ ಇದ್ದಂತೆ ತೋರುತ್ತಿದೆ, ಇದರ ಸುತ್ತಲೂ ತನಿಖೆ ಮಾಡಬೇಕಾಗಿದೆ," ಎಂದು ಸಚಿವ ಸುಖಜಿಂದರ್ ರಾಂಧವ ಹೇಳಿದ್ದಾರೆ.

ಕ್ಯಾಪ್ಟನ್ ವಿರುದ್ಧ ಕೆರಳಿದ ಕಾಂಗ್ರೆಸ್:

ಕಳೆದ ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂಬರುವ ಚುನಾವಣೆಯಲ್ಲಿ ತಮ್ಮದೇ ಪಕ್ಷವನ್ನು ಸ್ಥಾಪಿಸುವುದಾಗಿ ಹೇಳಿದ್ದರು. ಅದಕ್ಕಾಗಿ ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸುವ ಯೋಜನೆ ಬಗ್ಗೆಯೂ ಘೋಷಿಸಿದ್ದರು. ಈ ಬೆಳವಣಿಗೆ ನಂತರದಲ್ಲಿ ಕ್ಯಾಪ್ಟನ್ ವಿರುದ್ಧ ಕಾಂಗ್ರೆಸ್ ನಾಯಕರು ಹಾಗೂ ರಾಜ್ಯ ಸಚಿವರು ಮೇಲಿಂದ ಮೇಲೆ ಆರೋಪಗಳ ಸುರಿಮಳೆ ಸುರಿಸುತ್ತಿರುವುದು ಕಂಡು ಬಂದಿದೆ.

ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ ತಿಕ್ಕಾಟ:

ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು 50 ಕಿಲೋ ಮೀಟರ್ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬೆಂಬಲವಿದೆ ಎಂದು ಸಂಪುಟ ಸಚಿವ ಪರ್ಗತ್ ಸಿಂಗ್ ದೂಷಿಸಿದ್ದರು.

"ಕ್ಯಾಪ್ಟನ್ ಸಾಹಿಬ್ ದಯವಿಟ್ಟು ಈ ರೀತಿ ನಡೆದುಕೊಳ್ಳಬೇಡಿ. ನಾವು ನಿಮ್ಮನ್ನು ತುಂಬಾ ಗೌರವಿಸುತ್ತೇವೆ. ಆದರೆ ನೀವು ಈ ದಾರಿಯಲ್ಲಿ ಹೋಗಬೇಡಿ. ಬಿಜೆಪಿಯೊಂದಿಗೆ ಸೇರಿಕೊಂಡು ಇದನ್ನೆಲ್ಲ ಮಾಡುವುದು ಸರಿಯಲ್ಲ. ಪಂಜಾಬ್ ಅನ್ನು ತೊಂದರೆಗೊಳಗಾದ ರಾಜ್ಯವಾಗಲು ಬಿಡುವುದಿಲ್ಲ ಎಂಬುದನ್ನು ಕೇಸರಿ ಪಕ್ಷವು ಅರ್ಥಮಾಡಿಕೊಳ್ಳಬೇಕು. ಅವರು ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಲು ಬಯಸುತ್ತಾರೆ. ಬಿಜೆಪಿಗೆ ಅದರಲ್ಲಿ ಯಶಸ್ವಿಯಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ," ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+