• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾರಂಪರಿಕ ರಸಪ್ರಶ್ನೆ

By Prasad
|

ಕನ್ನಡ-ಕರ್ನಾಟಕದ ಬಗೆಗಿನ ಜ್ಞಾನವನ್ನು ಪ್ರದರ್ಶಿಸಲು ಇದೇ ಅಮೆರಿಕಾದ ಸ್ಯಾನ್ ಹೋಸೆಯಲ್ಲಿ ನಡೆಯಲಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ Pureprayer.comರವರು ಪ್ರಸ್ತುತ ಪಡಿಸುತ್ತಿರುವ Heritage Quiz ಸರಿಯಾದ ವೇದಿಕೆ!

ಆಗಸ್ಟ್ 29, 30 ಮತ್ತು 31, 2014ರಂದು ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ನಡೆಯಲಿರುವ ಎಂಟನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2014' ಕಾರ್ಯಕ್ರಮದಲ್ಲಿ ಸಾಹಿತ್ಯಿಕ ಸಮಿತಿಯ ವತಿಯಿಂದ ಜರುಗಲಿರುವ ಈ ಕಾರ್ಯಕ್ರಮವನ್ನು Pureprayer.com ಪ್ರಸ್ತುತ ಪಡಿಸಿರುತ್ತಾರೆ. [ಉದಯೋನ್ಮುಖ ಲೇಖಕರಿಗೆ ಆಹ್ವಾನ]

ಈ ಕಾರ್ಯಕ್ರಮದಲ್ಲಿ ಎರಡು ಹಂತಗಳಿರುತ್ತವೆ. ಮೊದಲನೆಯ ಹಂತದಲ್ಲಿ ಆಗಸ್ಟ್ 1-10ರವರೆಗೆ ಹಾಗು ಆಗಸ್ಟ್ 14-20ರವರೆಗೆ ಎರಡು ಬಾರಿ ಅಂತರ್ಜಾಲದಲ್ಲಿ ಪ್ರಶ್ನೆಗಳಿಗೆ ಉತ್ತರಿಸಬಹುದು. ಮೊದಲ ಎರಡು ಸುತ್ತುಗಳು ಆಂಗ್ಲ ಭಾಷೆಯಲ್ಲಿರುತ್ತವೆ. ಫೈನಲ್ ಮಾತ್ರ ಕನ್ನಡದಲ್ಲಿರುತ್ತದೆ. ಈ ಪೂರ್ವಸಿದ್ಧತಾ ಹಂತದಲ್ಲಿ ವಿಜಯಿಗಳಾದ ಮೊದಲ ಆರು ಭಾಗಿಗಳು ಸಮ್ಮೇಳನದಂದು ವೇದಿಕೆಯ ಮೇಲೆ ಅಂತಿಮ ಹಂತದಲ್ಲಿ ಭಾಗವಹಿಸಬಹುದು.

ರಸಪ್ರಶ್ನೆಯಲ್ಲಿ ಇತಿಹಾಸ, ಸಿನಿಮಾ, ಹಾಡು, ಸಾಹಿತ್ಯ ಮುಂತಾದ ಪ್ರಕಾರಗಳಿರುತ್ತವೆ. ಅತ್ಯಾಕರ್ಷಕ ಬಹುಮಾನಗಳು, ಸಾವಿರಾರು ಜನಗಳ ಮುಂದೆ ಭಾಗವಹಿಸಬಹುದಾದ ಸದವಕಾಶವನ್ನು ಕಳೆದುಕೊಳ್ಳಬೇಡಿ. ಹೆಚ್ಚಿನ ಮಾಹಿತಿಗೆ ನೋಡಿರಿ. [ಸಾಹಿತ್ಯ ವಾಚನಕ್ಕೆ ಸಿದ್ಧರಾಗಿ]

ಕೆಲ ನಿಯಮಗಳು ಕೆಳಗಿನಂತಿವೆ

* ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಕ್ಕ ಸಮ್ಮೇಳನದಲ್ಲಿ ನೋಂದಣಿಯಾಗಿರಬೇಕು.

* ಫೈನಲ್ ಪ್ರವೇಶಿಸುವವರು ಮತ್ತೊಬ್ಬ ಸಂಗಾತಿಯನ್ನು ಕರೆತರಬೇಕು. ಅವರೂ ಸಮ್ಮೇಳನಕ್ಕೆ ನೋಂದಾಯಿಸಿಕೊಂಡಿರಬೇಕು. ಅವರೂ ಅಕ್ಕ ಸಮ್ಮೇಳನದಲ್ಲಿ ಉಪಸ್ಥಿತರಿರಬೇಕು.

* ಒಂದು ನೋಂದಾವಣಿ ಐಡಿಯಿಂದ ಒಬ್ಬರು ಮಾತ್ರ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು.

* ಪ್ರಾಥಮಿಕ ಹಂತದಲ್ಲಿ ಒಂದು ಪ್ರಯತ್ನಕ್ಕೆ ಮಾತ್ರ ಅವಕಾಶವಿರುತ್ತದೆ.

* ಈ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವ ಅಧಿಕಾರ ಸಾಹಿತ್ಯಿಕ ವೇದಿಕೆಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AKKA WKC 2014 : Announcing exciting Heritage online quiz competition presented by PurePrayer.com at AKKA World Kannada conference! This quiz will be about the heritage of Karnataka and Kannada. Final will conducted in America at WKC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more