ಚಿತ್ರಗಳಲ್ಲಿ ಅಕ್ಕ ಸಮ್ಮೇಳನದ ಪೂರ್ವಸಿದ್ಧತೆ

ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ನ್ಯೂ ಜೆರ್ಸಿಯ ಎಡಿಸನ್ ನಗರದಲ್ಲಿ ಈಗ ಉತ್ಸವದ ವಾತಾವರಣ. ಅಮೆರಿಕನ್ನಡಿಗರು, ಕರ್ನಾಟಕದಿಂದ ಆಗಮಿಸುತ್ತಿರುವ ಅತಿಥಿಗಳಲ್ಲಿ ಏನೋ ಒಂದು ಬಗೆಯ ಸಡಗರ. ಅಮೆರಿಕ ಕಾಲಮಾನ ಶುಕ್ರವಾರ ಸಂಜೆ ಆರು ಗಂಟೆಗೆ ಮೈಸೂರು ದಸರಾ ಮಾದರಿಯಲ್ಲಿ ಆನೆ ಅಂಬಾರಿಯೊಂದಿಗೆ ಕಾರ್ಯಕ್ರಮ ವಿಧ್ಯುಕ್ತವಾಗಿ ಆರಂಭವಾಗಲಿದೆ.

ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಈ ಸಮ್ಮೇಳನ ಯಶಸ್ವಿಯಾಗಲೆಂದು ನೂರಾರು ಸ್ವಯಂಸೇವಕರು ಅವಿರತವಾಗಿ ದುಡಿದಿದ್ದಾರೆ, ದುಡಿಯುತಲಿದ್ದಾರೆ. ಬಿಡುವಿಲ್ಲದ ಕಚೇರಿ ಕೆಲಸದಿಂದ ಸಮಯ ಸಿಕ್ಕಾಗಲೆಲ್ಲ ಬಿಡುವು ಮಾಡಿಕೊಂಡು ಸಮ್ಮೇಳನ ಒಪ್ಪ ಓರಣವಾಗಿಸಲು ನೂರಾರು ಜನ ಕೈಜೋಡಿಸಿದ್ದಾರೆ. ಸಮ್ಮೇಳನದ ಮೂರು ದಿನಗಳ ಪುಳಕಗಳದ್ದು ಒಂದು ತೂಕವಾದರೆ, ಸಮ್ಮೇಳನಕ್ಕಾಗಿ ವರ್ಷದ ಹಿಂದಿನಿಂದಲೇ ನಡೆಸಿದ ಸಿದ್ಧತೆಯದು ಇನ್ನೊಂದು ತೂಕ. ಎಷ್ಟೇ ಅಡೆತಡೆಗಳಿದ್ದರೂ ಒಟ್ಟಿನಲ್ಲಿ ಸಮ್ಮೇಳನ ಸುಸೂತ್ರವಾಗಿ ನಡೆಯಲಿ ಎಂಬುದೊಂದೇ ಜಪಿಸುತ್ತಿದ್ದ ಏಕೈಕ ಮಂತ್ರ.

ಯಾವುದೇ ಕಾರ್ಯಕ್ರಮ ಜರುಗಿದ ನಂತರ ಆ ಅವಿಸ್ಮರಣೀಯ ಗಳಿಗೆಗಳನ್ನು ಚಿತ್ರಗಳನ್ನು ನೋಡುವುದೇ ಸಂತಸದ ಸಂಗತಿ. ಬನ್ನಿ, ಸಮ್ಮೇಳನ ಆರಂಭವಾಗುವ ಮುನ್ನವೇ ಬೃಂದಾವನದ ಆಶ್ರಯದಲ್ಲಿ ನಡೆಯುತ್ತಿರುವ 6ನೇ ಅಕ್ಕ ಸಮ್ಮೇಳನದ ಆ ಸರಿದುಹೋದ ಗಳಿಗೆಗಳನ್ನು ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ. ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಇನ್ನಷ್ಟು ಚಿತ್ರಗಳು ಗ್ಯಾಲರಿ ಮುಖಾಂತರ ಹರಿದುಬರಲಿದೆ, ನಿರೀಕ್ಷಿಸಿ.

ಅಕ್ಕ ಗ್ಯಾಲರಿ

* ಸ್ಮರಣ ಸಂಚಿಕೆಗಳು
* ಕಾರ್ಯಕ್ರಮ ನಿರೂಪಕರ ಪೂಲ್
* ಧ್ಯೇಯ, ಆಶಯ ಗೀತೆಗಳ ಅನಾವರಣ
* ಭರ್ಜರಿ ಅಕ್ಕ ರೋಡ್ ಶೋ
* ಆಹ್ವಾನಕೋರಿ ಬೆಂಗಳೂರಿಗೆ ಆಗಮಿಸಿದ ಸಂದರ್ಭ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+