ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನಕ್ಕೆ ನೊಂದಾವಣೆ ಮಾಡಿದ್ರಾ?

By Staff
|
Google Oneindia Kannada News

6th AKKA World Kannada Conference
ಈ ವರ್ಷದ ಸೆಪ್ಟೆಂಬರ್ 3, 4, 5ರಂದು ಅಮೆರಿಕಾದ ನ್ಯೂಜೆರ್ಸಿ ರಾಜ್ಯದಲ್ಲಿ ನಡೆಯಲಿರುವ ಮೂರು ದಿವಸಗಳ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಆನ್ ಲೈನ್ ನೊಂದಾವಣೆ ಆರಂಭವಾಗಿದೆ. ಈ ಸಮ್ಮೇಳನಕ್ಕೆ ವಿಶ್ವದೆಲ್ಲೆಡೆಯಿಂದ ಆರು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಯೋಜಕರು ನಿರೀಕ್ಷಿಸುತ್ತಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಕನ್ನಡಿಗರು ಮುಂಚಿತವಾಗಿ ತಮ್ಮ ಹೆಸರನ್ನು ಪ್ರತಿನಿಧಿ ಎಂದು ನೊಂದಾಯಿಸಿಕೊಳ್ಳಬೇಕು ಎಂದು ಅಕ್ಕ ಪ್ರಕಟಣೆ ತಿಳಿಸಿದೆ.

ಜನವರಿ ಒಂದರಿಂದ ಆನ್ ಲೈನ್ ನೊಂದಾವಣೆ ಆರಂಭವಾಗಿದ್ದು ಮೊದಲ ಹಂತದಲ್ಲೇ (ಜನವರಿ 1ರಿಂದ ಫೆ.28) ನೊಂದಾವಣಿ ಮಾಡಿಕೊಳ್ಳುವವರಿಗೆ ಆಕರ್ಷಕ ರಿಯಾಯಿತಿಗಳನ್ನು ಸಮ್ಮೇಳನ ಸಮಿತಿ ಪ್ರಕಟಿಸಿದೆ. ಬೇಗಬೇಗನೆ ನೊಂದಾವಣೆ ಮಾಡಿಕೊಳ್ಳುವ ಅಮೆರಿಕಾ ವಾಸಿ ಕನ್ನಡಿಗರಿಗೆ ಕೇವಲ 125 ಡಾಲರ್. ಭಾರತದ ಪ್ರತಿನಿಧಿಗಳಿಗೆ 100 ಡಾಲರು.

ಆನ್ ಲೈನ್ ರಿಜಿಸ್ಟ್ರೇಷನ್ ಅರ್ಜಿ ನಮೂನೆಗಳನ್ನು ಇಲ್ಲಿ ಕಾಣಿರಿ :

ಮೂರು ದಿವಸಗಳ ಪೂರ್ತಿ ಸಮ್ಮೇಳನಕ್ಕೆ ಸಾಮಾನ್ಯ ಪ್ರತಿನಿಧಿ ನೊಂದಾವಣೆ ವಿವರಗಳ ಜತೆಗೆ ಸಮ್ಮೇಳನದಲ್ಲಿ ಜರಗುವ ಆರ್ಟ್ ಆಫ್ ಲಿವಿಂಗ್ ಧ್ಯಾನ ಶಿಬಿರ, ವಾಣಿಜ್ಯ ಮೇಳ ಮುಂತಾದ ಇತರ ಉಪ ವಿಭಾಗಗಳಿಗೂ ರಿಜಿಸ್ಟ್ರೇಷನ್ ಮಾಡಬಯಸುವವರಿಗೆ ಮಾಹಿತಿಗಳು ಲಭ್ಯವಿದೆ. ಇದಲ್ಲದೆ ಸಮ್ಮೇಳನಕ್ಕೆ ದೇಣಿಗೆ ನೀಡಬಯಸುವ ಬ್ರಾಂಜ್‌, ಬೆಳ್ಳಿ, ಸುವರ್ಣ, ಪ್ಲಾಟಿನಮ್, ಪ್ಲಾಟಿನಮ್ ಪ್ಲಸ್ ದಾನಿಗಳಿಗೆ ವಿವರಗಳು ಇವೆ ಎಂದು ಸಮ್ಮೇಳನ ಸಮಿತಿ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X