ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರೀಯ ಸಂಗೀತದ ರಸದೌತಣ

By Staff
|
Google Oneindia Kannada News

ಶುಕ್ರವಾರ, ಸಪ್ಟೆಂಬರ್‌ 1ರಂದು ಸಂಜೆ ಸಮ್ಮೇಳನ ಉದ್ಘಾಟನೆಯ ವೇಳೆ ಸುಮಾರು ನೂರಕ್ಕೂ ಹೆಚ್ಚು ಕಲಾವಿದರ (ವಾಷಿಂಗ್ಟನ್‌ ಪ್ರದೇಶದವರಷ್ಟೇ ಅಲ್ಲದೆ ಸಮ್ಮೇಳನಾರ್ಥಿ ಅತಿಥಿಗಳೂ ಸೇರಿ) ಸಮೂಹಗಾಯನದಲ್ಲಿ ಮಹಾಪ್ರಾರ್ಥನೆ - Mega Invocation! (ಇದರ ರಿಹರ್ಸಲ್‌ಗಳು ಉಷಾ ಚಾರ್‌ ನಿರ್ದೇಶನದಲ್ಲಿ ಈಗ ನಡೆಯುತ್ತಿವೆ. ಭಾಗವಹಿಸಲಿಚ್ಛಿಸುವವರು ಅವರನ್ನು ಈಮೈಲ್‌ [email protected] ಅಥವಾ ಫೋನ್‌ 301-570-3609 ಮೂಲಕ ಸಂಪರ್ಕಿಸಬಹುದು)

ಶನಿವಾರ ಸೆಪ್ಟೆಂಬರ್‌ 2 ಮತ್ತು ಭಾನುವಾರ ಸೆಪ್ಟೆಂಬರ್‌ 3ರಂದು ಮುಖ್ಯವೇದಿಕೆಯ ಮೇಲೆ ಕೆಲವು ಮತ್ತು ಸಮಾಂತರ ವೇದಿಕೆಗಳಲ್ಲಿ ಕೆಲವು ಹೀಗೆ ವಿವಿಧ ಸಂಗೀತಕಾರ್ಯಕ್ರಮಗಳ ಆಯೋಜನೆಯಾಗಿದೆ.

  • ವಿದ್ಯಾಭೂಷಣ ಅವರಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ
  • ನಾಗವಲ್ಲಿ ನಾಗರಾಜ್‌ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
  • ಕರ್ನಾಟಕ ಶಾಸ್ತ್ರೀಯ ವೀಣಾ ವಾದನ : ಡಿ. ಬಾಲಕೃಷ್ಣ ಅವರಿಂದ (ಇವರು ಖ್ಯಾತ ವೈಣಿಕ ದೊರೆಸ್ವಾಮಿ ಐಯಂಗಾರ್‌ ಅವರ ಪುತ್ರ)
  • ಪ್ರವೀಣ್‌ ಗೋಡ್‌ಖಿಂಡಿ ಅವರಿಂದ ಹಿಂದುಸ್ಥಾನಿ ಶೈಲಿಯಲ್ಲಿ ವೇಣುಗಾನ ಕಛೇರಿ
  • ನಾಗರಾಜ್‌ ಹವಾಲ್ದಾರ್‌ ಮತ್ತು ಓಂಕಾರ್‌ ಹವಾಲ್ದಾರ್‌ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ
  • ಎಂಡಿ.ಪಲ್ಲವಿ ಅವರಿಂದ ಲಘುಶಾಸ್ತ್ರೀಯ ಗಾಯನ
  • ಬದರಿಪ್ರಸಾದ್‌ ಅವರ ಲಘುಶಾಸ್ತ್ರೀಯ ಸಂಗೀತ ಕಾರ್ಯಕ್ರಮ
  • ಚಂದ್ರಿಕಾ ಗುರುರಾಜ್‌ ಅವರಿಂದ ಲಘುಶಾಸ್ತ್ರೀಯ ಸಂಗೀತ
  • ಶೇಷಗಿರಿ ದಾಸ್‌ ಅವರಿಂದ ಲಘುಶಾಸ್ತ್ರೀಯ ಸಂಗೀತ
ಅಷ್ಟೇ ಅಲ್ಲದೆ ‘ಪುರಂದರ ಮಂಟಪ’ ಎಂಬ ಪ್ರತ್ಯೇಕ ಸಭಾಗೃಹದಲ್ಲಿ ಆ ಎರಡು ದಿನಗಳಲ್ಲೂ ಶಾಸ್ತ್ರೀಯ ಮತ್ತು ಲಘುಶಾಸ್ತ್ರೀಯ ಸಂಗೀತಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳೇ (ಸಂಗೀತ ಕಛೇರಿಗಳು, ಕಾರ್ಯಾಗಾರಗಳು, ತರಬೇತಿ ತರಗತಿಗಳು, ಸ್ಪರ್ಧೆಗಳು ಇತ್ಯಾದಿ) ಇರುತ್ತವೆ. ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡಿರಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳಿವೆ.
ಪೂರ್ವ ಸಿದ್ಧತೆ Be a patronate! Use .in e-mail


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X