ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧನ್ಯವಾದಗಳ ಲೋಕಾರ್ಪಣೆ

By Super
|
Google Oneindia Kannada News

ಬಾಲ್ಟಿಮೋರ್‌ನಲ್ಲಿ ಏರ್ಪಡಿಸಲಾಗಿದ್ದ ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಯಿತು. ಸುಮಾರು 4000 ಜನ ಆಗಮಿಸಿ, 500ಕ್ಕೂ ಹೆಚ್ಚು ಕಲಾವಿದರು ನಡೆಸಿಕೊಟ್ಟ ವಿಶಿಷ್ಟ ಬಗೆಯ ಕಾರ್ಯಕ್ರಮಗಳನ್ನು ಆನಂದಿಸಿ, ಈ ಬೃಹತ್‌ ಸಮ್ಮೇಳನ ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದೀರಿ. ಹೊರನಾಡ ಕನ್ನಡಿಗರ ಸುವರ್ಣ ಕರ್ನಾಟಕದ ಹಬ್ಬದ ಕನಸು ನನಸಾಗಲು ಅನೇಕ ಮಂದಿ ಕಾರಣಕರ್ತರಾಗಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಸ್ವಯಂಸೇವಕರು ಕಳೆದ 2 ವರ್ಷಗಳಿಂದ ಅವಿಶ್ರಾಂತವಾಗಿ ಶ್ರಮಿಸಿದ್ದರ ಫಲವೇ ಸಮ್ಮೆಳನದ ಯಶಸ್ಸು.

ನಿಮಗೆಲ್ಲ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿಸ್ವಾರ್ಥ ಸೇವೆ, ಕನ್ನಡ ಪ್ರೇಮ ಎಲ್ಲರ ಮೆಚ್ಚುಗೆ ಗಳಿಸಿದೆ. ನಿಮ್ಮೊಡನೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ. ನಿಮ್ಮಂತಹ ಸ್ವಯಂಸೇವಕರಿರುವ ಕಾವೇರಿ ಸಂಸ್ಥೆ ಧನ್ಯ. ಇಷ್ಟೊಂದು ಭಾರಿ ಪ್ರಮಾಣದ ಕಾರ್ಯಕ್ರಮ ಮಾಡುವಾಗ ಹಲವು ತಪ್ಪುಗಳಾಗುವುದು ಸಹಜ. ನಾವು ಮಾಡಿದ ತಪ್ಪು-ಒಪ್ಪುಗಳನ್ನು ಸಹಿಸಿ ನಮ್ಮನ್ನು ಸದಾ ಕಾಲ ಉತ್ತೇಜಿಸಿದ ನಿಮ್ಮೆಲ್ಲರಿಗು ನಾವು ಸದಾ ಆಭಾರಿಯಾಗಿರುತ್ತೇವೆ.

Suresh Ramachandraಇಲ್ಲಿ ಹೆಸರಿನಿಂದ ಯಾರನ್ನು ಉಲ್ಲೇಖಿಸದಿದ್ದರೂ, ನಿಮ್ಮೊಡನೆ ಕೆಲವರನ್ನು ಸ್ಮರಿಸಲೇಬೇಕು. ಡಯಾಲಿಸಿಸ್‌ನ ಶುಶ್ರೂಶೆಯಲ್ಲಿದ್ದರೂ ಕಳೆದ 1 ವರ್ಷದಿಂದ ಹಗಲಿರುಳು ಶ್ರಮಿಸಿದ ಧೀಮಂತ ಮಹಿಳೆ, ಕೇವಲ 15 ದಿನಗಳ ಪುಟ್ಟಮಗುವಿನ ತಂದೆಯಾಗಿದ್ದು ಹಗಲಿರುಳು ಊಟದ ವ್ಯವಸ್ಥೆ ಮಾಡಿದ ಧೀಮಂತ ವ್ಯಕ್ತಿ, ಮನೆಯಲ್ಲಿ ಅತಿ ಪುಟ್ಟ ಮಕ್ಕಳಿದ್ದರೂ ಸತತವಾಗಿ ದುಡಿದ ಮಹನೀಯರು, ಕಿರಿಯರನ್ನು ನಾಚಿಸುವಂತೆ ದುಡಿದ 80ರ ಯುವಕ, ಮಳೆ-ಗಾಳಿಯ ನಡುವೆಯೂ ಬಸ್ಸುಗಳು ಓಡಲು ಕಾರಣರಾದ ಮಹಾಪುರುಷರು, ದೂರದೇಶದ ಕಲಾವಿದರನ್ನು ಮನೆಯಲ್ಲಿಟ್ಟುಕೊಂಡು ಆತಿಥ್ಯಮಾಡಿದವರು.... ಹೀಗೆಯೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತದೆ. ಈ ಮಹನೀಯರುಗಳೆಲ್ಲ ನಮ್ಮ ಮನಸ್ಸಿನಲ್ಲಿ ಚಿರ ಕಾಲ ಉಳಿಯುತ್ತಾರೆ. ಇಂತಹ ಪುತ್ರ-ಪುತ್ರಿಯರಿರುವ ಕನ್ನಡ ಮಾತೆ ಧನ್ಯಳು. ಕಾರ್ಯಕರ್ತರ ಜೊತೆಗೆ ಸುಮಾರು 500 ಮಕ್ಕಳು ಸಹ ಭಾಗವಹಿಸಿ ಈ ಸಮ್ಮೇಳನಕ್ಕೆ ವಿಶೇಷ ಸಂಭ್ರಮ ತಂದಿದ್ದಾರೆ.

Ravi Dankanikoteಸಂಚಾಲಕರಾಗಿ ಈ ಕನ್ನಡ ಸೇವೆ ಮಾಡಲು ಅವಕಾಶ ನೀಡಿದ ಕಾವೇರಿ ಮತ್ತು ಅಕ್ಕ ಸಂಸ್ಥೆಗಳಿಗೆ ನಾವು ಆಭಾರಿ. ಕರ್ನಾಟಕ ಸರ್ಕಾರ, ಮೇರಿಲ್ಯಾಂಡ್‌ ಸರ್ಕಾರ, ಉದಾರವಾಗಿ ಹಣ ಸಹಾಯ ಮಾಡಿದ ಪೋಷಕರು, ರಂಗ ಮಂಟಪದಲ್ಲಿ ಮನರಂಜಿಸಿದ ಎಲ್ಲ ಕಲಾವಿದರಿಗೂ ನಮ್ಮ ನಮನ. ನೀವೆಲ್ಲರು ನಮ್ಮ ನೆನಪಿನಲ್ಲಿ ಚಿರಕಾಲ ಉಳಿವಿಯುರಿ.

ಸಮ್ಮೇಳನದ ಬಗ್ಗೆ ಇನ್ನು ಹೆಚ್ಚಿನ ಅನಿಸಿಕೆಗಳನ್ನು ಮುಂದಿನ ಲೇಖನ ' ಸವಿನೆನಪುಗಳು ’ ಮೂಲಕ ನಿಮ್ಮೊಡನೆ ಹಂಚಿಕೊಳ್ಳುತ್ತೇವೆ.

ನಿಮ್ಮ ವಿಶ್ವಾಸಿಗಳು

ಸುರೇಶ್‌ ರಾಮಚಂದ್ರ ಮತ್ತು ರವಿ ಡಂಕಣಿಕೋಟೆ
ವಾಷಿಂಗ್ಟನ್‌, ಅಮೇರಿಕ

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

ವಿಶ್ವಕನ್ನಡ ನುಡಿಹಬ್ಬದ ಸಮಗ್ರ ಚಿತ್ರಣ

ಪೂರ್ವ ಸಿದ್ಧತೆ Be a patronate! Use .in e-mail Post Your Views
English summary
Convenors of 4th World AKKA Kannda Convention thanks everyone who contributed for the success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X