ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯಗೋಷ್ಠಿಗಳಲ್ಲಿ ಭಾಗವಹಿಸುವವರಿಗೆ ಸೂಚನೆಗಳು

By Staff
|
Google Oneindia Kannada News

ನಿಮಗೆಲ್ಲ ಈಗಾಗಲೇ ತಿಳಿದಿರುವಂತೆ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಒಟ್ಟು ಏಳು ಗೋಷ್ಠಿಗಳು ಏರ್ಪಾಟಾಗಿವೆ, ಈ ಬಗ್ಗೆ ವಿವರಗಳನ್ನು ಅಕ್ಕ ಜಾಲತಾಣದಲ್ಲಿ ನೀವು ಓದಿ ತಿಳಿದುಕೊಳ್ಳಬಹುದು.

(1) ಮೊದಲನೆಯ ಗೋಷ್ಠಿ (ಸೆಪ್ಟೆಂಬರ್‌ 2, ಶನಿವಾರ ಬೆಳಿಗ್ಗೆ 10ರಿಂದ 11ರ ವರೆಗೆ) ಸಾಹಿತಿಗಳ ಸ್ಮರಣೆ. ಇದರಲ್ಲಿ ಭಾಗವಹಿಸುವ ಉಪನ್ಯಾಸಕರು ದಯವಿಟ್ಟು 9:45ಕ್ಕೆ ಮೀಟಿಂಗ್‌ ರೂಮ್‌ ನಂಬರ್‌-1 (309) ನಲ್ಲಿ ಬಂದು ಸೇರಬೇಕಾಗಿ ಕೋರಿಕೆ.

(2) ಎರಡನೆಯ ಗೋಷ್ಠಿ, ಕವಿಗೋಷ್ಠಿ (ಶನಿವಾರ 11 ರಿಂದ 12). ಈ ಗೋಷ್ಠಿಯಲ್ಲಿ ಭಾರತದಿಂದ ಆಗಮಿಸಿರುವ ಕವಿಗಳಿಗೆ ಮೊದಲು ಅವಕಾಶಕೊಟ್ಟು ನಂತರ ಕಾವೇರಿಯ ಅತಿಥಿಗಳಾಗಿ ಬರುವ ಇತರ ಕನ್ನಡ ಕೂಟಗಳ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ನಂತರ ಕಾವೇರಿಯ ಕವಿಗಳಿಗೆ ಸಮಯ ಒದಗಿಸಲು ಯತ್ನಿಸಲಾಗುವುದು.

ಈ ಗೋಷ್ಠಿಗೆ ಒಟ್ಟು ಒಂದು ಘಂಟೆ ಸಮಯವಿರುವುದರಿಂದ, ಕವನ ವಾಚನ ಮಾಡಲಿಚ್ಛಿಸುವವರು ಸಣ್ಣ ಸಣ್ಣ ಕವನಗಳನ್ನು ಮತ್ತು ಚುಟುಕಗಳನ್ನು ಆಯ್ದುಕೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ. ಮೊದಲು ಬಂದು ನೋಂದಾಯಿಸಿಕೊಳ್ಳಿ, ಅವಕಾಶ ಗಿಟ್ಟಿಸಿಕೊಳ್ಳಿ. ಸಮಯದ ಅಭಾವದಿಂದ ಹಲವರಿಗೆ ನಿರಾಸೆಯಾದರೆ ನಮ್ಮನ್ನು ಕ್ಷಮಿಸಬೇಕಾಗಿ ಮುಂಗಡವಾಗಿ ಕೇಳಿಕೊಳ್ಳುತ್ತೇವೆ. ಕವಿಗೋಷ್ಠಿಯಲ್ಲಿ ಭಾಗವಹಿಸುವವರು 10:45 ರೊಳಗೆ ಮೀಟಿಂಗ್‌ ರೂಮ್‌ ನಂಬರ್‌-1 (309) ನಲ್ಲಿ ಬಂದಿರಬೇಕಾಗಿ ಪ್ರಾರ್ಥನೆ.

(3) ಮೂರನೆಯ ಘಟಕ ಮುಖ್ಯವೇದಿಕೆಯಮೇಲೆ ನಡೆಯುವುದು (ಶನಿವಾರ ಮಧ್ಯಾಹ್ನ 2 ರಿಂದ 3). ಇಲ್ಲಿ ಸಮ್ಮೇಳನ ಪ್ರಕಟಿಸಿರುವ ಮತ್ತು ಇತರ ಬರಹಗಾರರು ಪ್ರಕಟಿಸಿರುವ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗುವುದು. ಅತಿಥಿಗಳಾಗಿ ಬಂದಿರುವ ಸಾಹಿತಿಗಳಾದ, ವಿವೇಕ ರೈ, ಚಂದ್ರಶೇಖರ ಪಾಟೀಲ, ಚೆನ್ನವೀರ ಕಣವಿ, ಎಸ್‌.ಎಲ್‌. ಭೈರಪ್ಪ, ಲಕ್ಷ್ಮೀನಾರಾಯಣ ಭಟ್ಟ, ಜಿ.ಎಸ್‌. ಆಮೂರ ಮತ್ತು ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಾದ ವಿಠಲ ಮೂರ್ತಿ ಅವರುಗಳು ಭಾಗವಹಿಸುವರು.

ಇತ್ತೀಚೆಗೆ ಪುಸ್ತಕಗಳನ್ನು ಬರೆದು ಪ್ರಕಟಿಸಿರುವ ಹಲವು ಬರಹಗಾರರನ್ನು ಮತ್ತು ಸಮ್ಮೇಳನ ಏರ್ಪಡಿಸಿದ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನಿತರಾದ ಸಂಪನ್ನ ಮುತಾಲಿಕ್‌ ಅವರನ್ನು ಸಭೆಗೆ ಪರಿಚಯಮಾಡಿಕೊಡುವುದೂ ಈ ಘಟಕದ ಒಂದು ಉದ್ದೇಶ. ಪುಸ್ತಕಗಳನ್ನು ಪ್ರಾಯೋಜಿಸಿದವರ ಪ್ರತಿನಿಧಿಗಳು ಹಾಗೂ ಪುಸ್ತಕಗಳನ್ನು ಬರೆದವರೂ ದಯವಿಟ್ಟು ಮುಖ್ಯವೇದಿಕೆಯ ಹಿಂದೆ 1:45 ರೊಳಗೆ ಬಂದು ಸೇರಬೇಕೆಂದು ಪ್ರಾರ್ಥನೆ.

(4) ಸೆಪ್ಟೆಂಬರ್‌ 3, ಭಾನುವಾರ ಬೆಳಿಗ್ಗೆ 10 ರಿಂದ 11 ರ ವರೆಗೆ ''ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆ"" ಎಂಬ ವಿಚಾರ ಸಂಕಿರಣ ಏರ್ಪಾಡಾಗಿದೆ. ಈ ಸಂಕಿರಣದಲ್ಲಿ ಭಾಗವಹಿಸುವವರು ದಯವಿಟ್ಟು 9:45ಕ್ಕೆ ಮೀಟಿಂಗ್‌ ರೂಮ್‌ ನಂಬರ್‌-2 (310) ನಲ್ಲಿ ಬಂದು ಸೇರಬೇಕಾಗಿ ಕೋರಿಕೆ.

(5) ಭಾನುವಾರ 11 ರಿಂದ 12 ರವರೆಗೆ ನಡೆಯುವ ''ಪುಸ್ತಕ ಪರಿಚಯ"" ಎಂಬ ಘಟಕದಲ್ಲಿ ಸಾಕಷ್ಟು ಜನರು ಭಾಗವಹಿಸುತ್ತಾರಾಗಿ, ಪರಿಚಯಗಳನ್ನು ಸಾರಾಂಶರೂಪದಲ್ಲಿ ಮಾತ್ರ ಮಾಡಲು ಸಾಧ್ಯವಾಗುವುದು. ಇಲ್ಲಿ ಪರಿಚಯವಾಗುವ ಪುಸ್ತಕಗಳು ಮಳಿಗೆಗಳಲ್ಲಿ ಮಾರಾಟಕ್ಕೆ ಇಡಲಾಗುವುದು. ಸಾಹಿತ್ಯಾಸಕ್ತರೂ ಸಹೃದಯಿಗಳೂ ಪುಸ್ತಕಗಳನ್ನು ಕೊಂಡು ಬರಹಗಾರರಿಗೆ ಉತ್ತೇಜನ ನೀಡುವರೆಂದು ನಮಗೆ ಭರವಸೆ ಇದೆ. ಈ ಗೋಷ್ಠಿಯಲ್ಲಿ ಭಾಗವಹಿಸುವವರು 10:45 ರೊಳಗೆ ಮೀಟಿಂಗ್‌ ರೂಮ್‌ ನಂಬರ್‌-2 (310) ನಲ್ಲಿ ಬಂದು ಸೇರಬೇಕೆಂದು ಪ್ರಾರ್ಥನೆ.

(6) ಭಾನುವಾರ ಮಧ್ಯಾಹ್ನ (1:30 ರಿಂದ 2:30) ನಡೆಯುವ ''ಮಾಧ್ಯಮ ಪ್ರಪಂಚ, ಹಿಂದು-ಇಂದು-ನಾಳೆ"" ಎಂಬ ವಿಚಾರದ ಬಗ್ಗೆ ಭಾರತದಿಂದ ಬರುವ ಪತ್ರಿಕೋದ್ಯಮಿಗಳು, ದೂರದರ್ಶನ ಮತ್ತು ಜಾಲಮಾಧ್ಯಮಿಗಳು ಭಾಗವಹಿಸುವರು. ಈ ಗೋಷ್ಠಿಯಲ್ಲಿ ಒಂದಿಷ್ಟು ಸಮಯವನ್ನು ಪ್ರಶ್ನೋತ್ತರಗಳಿಗೆ ಮೀಸಲಾಗಿಡುತ್ತೇವಾದ್ದರಿಂದ, ನಿಮ್ಮ ಪ್ರಶ್ನೆಗಳನ್ನು ತಯಾರು ಮಾಡಿಕೊಂಡು ಬರುವಿರೆಂದು ನಂಬಿದ್ದೇವೆ. ಈ ಗೋಷ್ಠಿಯಲ್ಲಿ ಭಾಗವಹಿಸುವವರು ದಯವಿಟ್ಟು 1:15 ರೊಳಗೆ ಮೀಟಿಂಗ್‌ ರೂಮ್‌ ನಂಬರ್‌-1 (309)ನಲ್ಲಿ ಬಂದು ಸೇರಬೇಕೆಂದು ಪ್ರಾಥನೆ.

(7) ನೀವೆಲ್ಲ ಅತ್ಯಂತ ಕುತೂಹಲ ಮತ್ತು ಆಸಕ್ತಿಯಿಂದ ಎದುರು ನೋಡುತ್ತಿರುವ ''ಎಸ್‌.ಎಲ್‌. ಭೈರಪ್ಪನವರೊಂದಿಗೆ ಸಂವಾದ"" ಭಾನುವಾರ 2:30 ರಿಂದ 4 ರ ವರೆಗೆ. ಇಲ್ಲಿ ಪ್ರಶ್ನೋತ್ತರಗಳಿಗೇ ಪ್ರಾಧಾನ್ಯತೆ ಇರುವುದರಿಂದ, ಆಸಕ್ತರು ತಮ್ಮ ಪ್ರಶ್ನೆಗಳನ್ನು ಮುಂಗಡವಾಗಿ ತಯಾರು ಮಾಡಿಕೊಂಡು ಬನ್ನಿ. ನೇರವಾಗಿ ಕೇಳಲು ಸಾಧ್ಯವಿಲ್ಲದಿದ್ದರೆ, ತಮ್ಮ ಪ್ರಶ್ನೆಗಳನ್ನು ಬರೆದುಕೊಂಡು ಬಂದು ಸ್ವಯಂಸೇವಕರಿಗೆ ತಲುಪಿಸಿದರೆ, ಆ ಪ್ರಶ್ನೆಗಳಿಗೆ ಜವಾಬು ಕೊಡಲು ಭೈರಪ್ಪನವರು ದಯಮಾಡಿ ಒಪ್ಪಿದ್ದಾರೆ.

ಭೈರಪ್ಪನವರ ಸಾಹಿತ್ಯ, ಅವರ ಕಥಾವಸ್ತು, ಅವರ ಶೈಲಿ, ಅವರ ಜೀವನ ದರ್ಶನ ಮತ್ತು ಸಾಹಿತ್ಯ ದರ್ಶನ, ಸಮಕಾಲೀನ ಭಾರತೀಯ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಆಗು-ಹೋಗುಗಳು, ಇವೆಲ್ಲ ಚರ್ಚಿಸಲು ಯೋಗ್ಯವಾದ ವಿಷಯಗಳು. ವೈಯಕ್ತಿಕ ವಿಷಯಗಳಬಗ್ಗೆ ಅಥವಾ ಅಪ್ರಸ್ತುತ ರಾಜಕೀಯದ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಜವಾಬುಗಳು ದೊರಕದೇ ಇರಬಹುದು. ಈ ಸಂವಾದದಲ್ಲಿ ಭಾಗವಹಿಸುವವರು ದಯವಿಟ್ಟು ಮೀಟಿಂಗ್‌ ರೂಮ್‌-1 (309)ನಲ್ಲಿ 2:15 ರೊಳಗೆ ಬಂದು ಸೇರಬೇಕೆಂದು ಸವಿನಯ ಪ್ರಾರ್ಥನೆ.

ಒಟ್ಟಿನಲ್ಲಿ, ಸಾಹಿತ್ಯಾಸಕ್ತರಿಗೆ ಸಾಕಷ್ಟು ಮೆದುಳಿಗೆ ಆಹಾರ ದೊರಕುವ ನಿರೀಕ್ಷೆ ಇದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುವಿರೆಂದು ನಂಬಿದ್ದೇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X