ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊರೊಂಟೊ ಕನ್ನಡಿಗರ ತನುಮನಧನ

By Staff
|
Google Oneindia Kannada News

ವಿಶ್ವಕನ್ನಡ ಸಮ್ಮೇಳನ-2006ಕ್ಕೆ ಟೊರೊಂಟೊ ಕನ್ನಡಿಗರು ಉದಾರವಾಗಿ ತನು ಮನ ಧನವನ್ನು ಅರ್ಪಿಸಿದ್ದಾರೆ. ಟೊರೊಂಟೊ ಕನ್ನಡಿಗರು 30,000 ಡಾಲರ್‌ ನಿಧಿಯನ್ನು ಸಮ್ಮೇಳನಕ್ಕಾಗಿ ಸಂಗ್ರಹಿಸಿದ್ದಾರೆ. ಸಮ್ಮೇಳನಕ್ಕೆ ಇದುವರೆಗೆ ಸಂಗ್ರಹಿಸಲಾದ ಹಣದಲ್ಲಿ ಇದು ಹೆಚ್ಚಿನ ಮೊತ್ತ. ಕಡಿಮೆ ಸಮಯದಲ್ಲಿ ಉಳಿದೆಲ್ಲ ಕನ್ನಡ ಕೂಟಗಳಿಗಿಂತ ಹೆಚ್ಚು ಹಣ ಸಂಗ್ರಹಿಸಿದ ಹೆಮ್ಮೆ ಟೊರೊಂಟೊ ಕನ್ನಡಿಗರದು.

ನಿಧಿ ಸಂಗ್ರಹಣೆಗೆ ಚುರುಕು ಮುಟ್ಟಿಸಿ ಗುರಿ ತಲುಪಿಸಿದವರು ಮಂಜುನಾಥ್‌ ಹಾಗು ಮಹೇಶ್‌. ಟೊರೊಂಟೊದಲ್ಲಿ ನಡೆಯಬಹುದಾದ ವಿಶ್ವಕನ್ನಡ ಸಮ್ಮೇಳನ-2008ರ ಸಂಚಾಲಕರಾಗಿ ನಿಯುಕ್ತಿಗೊಂಡಿರುವ ಮಂಜುನಾಥ್‌ ಹಾಗೂ ಮಹೇಶ್‌ ಹಗಲು ರಾತ್ರಿ ನಿಧಿ ಸಂಗ್ರಹಣೆಗಾಗಿ ಶ್ರಮಿಸಿದ್ದಾರೆ. ಆ ಮೂಲಕ ವಿಶ್ವಕನ್ನಡ ಸಮ್ಮೇಳನ-2006ರ ರಥ ಮುನ್ನುಗ್ಗುವಲ್ಲಿ ಸಹಕರಿಸಿದ್ದಾರೆ. ಇವರಿಬ್ಬರ ಕಾರ್ಯ ಚತುರತೆಯನ್ನು ವಿಶ್ವಕನ್ನಡ ಸಮ್ಮೇಳನ-2006ರ ಕೋಶಾಧ್ಯಕ್ಷ ಹರೀಶ ಹಿರೇಮಠ ಶ್ಲಾಘಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಪ್ರತಿನಿಧಿಯಾಗಿ ಟೊರೊಂಟಾ ಕನ್ನಡ ಸಂಘ , ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ. ಅಲ್ಲದೇ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದೆ.

ವಿಶ್ವಕನ್ನಡ ಸಮ್ಮೇಳನ-2008ಕ್ಕೆ ತಯಾರಿ :

  • www.akkatoronto.com-ಒಂದು ವಾರದಲ್ಲಿ ಸಿದ್ಧ.
  • ಸಮ್ಮೇಳನದ ಹಿನ್ನೆಲೆ ಮೂರು ಪೂರ್ವಸಿದ್ಧತಾ ಸಭೆಗಳು ನಡೆದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X