ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಚಿತ್ತಾರ - ಚುಟುಕು ವಿಚಾರ

By Staff
|
Google Oneindia Kannada News

ಚಿತ್ರ ಚಿತ್ತಾರ - ಚುಟುಕು ವಿಚಾರ
‘ಲೆಕ್ಕಿಗ’ಮಿತಾಕ್ಷರರು ಬೆಳೆದು ಮೆರೆದಿಹ ನಾಡು...
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಎಷ್ಟು ಮುಖ್ಯವೋ ವಾಣಿಜ್ಯ ವ್ಯವಹಾರ, ಹಣಕಾಸು ನಿರ್ವಹಣೆಯೂ ಅಷ್ಟೇ ಮುಖ್ಯ. ಸಭಾಂಗಣದ ಪಕ್ಕದಲ್ಲಿನ ವಸ್ತುಪ್ರದರ್ಶನ/ಮಾರಾಟ ಮಳಿಗೆ (ಬೂತ್‌)ಗಳು ಸಮ್ಮೇಳನಕ್ಕೆ ಒಂದು ಆದಾಯಮೂಲ.

ಈ ಬಾರಿ ಬೂತ್‌ ಸ್ಥಾಪನೆಗೆ ಒಟ್ಟು ನೂರಹನ್ನೊಂದು ಪ್ರವೇಶಪತ್ರಗಳು ಬಂದಿವೆ! ಅಂದರೆ ಈ ಸಮ್ಮೇಳನದಲ್ಲಿ ವಾಣಿಜ್ಯಮಳಿಗೆಗಳ ಭರಾಟೆಯೂ ಹಿಂದಿನ ಸಮ್ಮೇಳನಗಳಿಗಿಂತ ಅಧಿಕವಾಗಿದೆ. ಆಭರಣ, ಸೀರೆ, ಕರಕುಶಲಸಾಮಗ್ರಿ ಇತ್ಯಾದಿ ಹತ್ತುಹಲವು ಮಳಿಗೆಗಳು ಸಮ್ಮೇಳನಾರ್ಥಿ(ನಿ)ಗಳನ್ನು ಆಕರ್ಷಿಸಲಿವೆ.

Lekka Patra

ಮಳಿಗೆಗಳ ಸಂಖ್ಯೆ ಅಧಿಕವಾದಷ್ಟೂ ಅವುಗಳ ಬಗೆಗಿನ ಲೆಕ್ಕಪತ್ರಗಳ ನಿರ್ವಹಣೆ ಸಹ ಗುರುತರವಾದುದು. ಚಿತ್ರದಲ್ಲಿ ‘ಬೂತ್‌ ಕಮಿಟಿ’ಯ ಮಧುಮೂರ್ತಿಯವರು ತನ್ನ ಸಮಿತಿಯ ಸದಸ್ಯರೊಂದಿಗೆ ಗಹನವಾದ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಇಷ್ಟು ಕಾಗದಪತ್ರಗಳನ್ನು ಹರಡಿಕೊಂಡು ಅವರು ಕುಳಿತ ಭಂಗಿ ನೋಡಿದರೆ ಮದುವೆಗೆ ಮುಂಚೆ ವಧು-ವರರ ಕುಂಡಲಿ(ಜಾತಕ)ಗಳನ್ನು ತಾಳೆ ನೋಡಲು ಕುಳಿತಿರುವ ಜೋಯಿಸರಂತಿದೆ. ಆದರೆ ಇವು ಕುಂಡಲಿಗಳಲ್ಲ, ಸಮ್ಮೇಳನ ಬೊಕ್ಕಸದ ತಾಳೆಗೆ ಲೆಕ್ಕ ಬರೆದ ಹಾಳೆಗಳು!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 8 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X