ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಚಿತ್ತಾರ - ಚುಟುಕು ವಿಚಾರ

By Staff
|
Google Oneindia Kannada News

ಚಿತ್ರ ಚಿತ್ತಾರ - ಚುಟುಕು ವಿಚಾರ
ಭಾರಿ ಜನ ಸೇರೋ ಜಾತ್ರೇಲಿ ಭೂರಿ ಭೋಜನ
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಮದ್ವೆ ಫಂಕ್ಷನ್‌ ಎಷ್ಟು ವಿಜೃಂಭಣೆಯಿತ್ತು ಎಂದು ಜನ ಯಾವುದನ್ನು ನೆನಪಿಟ್ಟುಕೊಳ್ಳೋದು ಹೇಳಿ? ವಧು ಯಾವ ಬಣ್ಣದ್‌ ಸೀರೆ ಉಟ್ಕೊಂಡಿದ್ಲು ಅಂತಾಗಲೀ, ಆರತಿ ಎತ್ತುವಾಗ ಯಾವ ಸೋಬಾನೆ ಪದ ಹಾಡಿದ್ರು ಅಂತಾಗಲೀ, ಹೆಣ್ಣಿನ್‌ ಕಡೆಯವ್ರು ವರೋಪಚಾರ ಏನು ಮಾಡಿಸಿದ್ರು ಅಂತಾಗಲೀ ಇಂಪಾರ್ಟೆನ್ಸ್‌ ಪಡೆಯುತ್ವಾ? ಊಹುಂ. ಆದರೆ ಮದ್ವೆ ಊಟ ಎಷ್ಟು ಚೆನ್ನಾಗಿತ್ತು (ಅಥವಾ ಚೆನ್ನಾಗಿರ್ಲಿಲ್ಲ) ಅಂತ ಮಾತ್ರ ಜನ ನೆನಪಿಟ್ಟುಕೊಳ್ಳೋದು. ಮದುವೆ ಗ್ರಾಂಡ್‌ನೆಸ್‌ಗೆ ಅದೊಂದು ಮಾನದಂಡ.

ವಿಶ್ವ ಕನ್ನಡ ಸಮ್ಮೇಳನದಂಥ ‘ಜನ ಜಾತ್ರೆ’ಗಳ ವಿಚಾರವೂ ಮದ್ವೆಗಿಂತ ತೀರಾ ಭಿನ್ನವೇನೂ ಅಲ್ಲ. ಒಂದು ನಾಟಕ ಹೇಗಾಯಿತು, ಒಬ್ರ ಭಾಷಣದ ಕೊರೆತ ಹೇಗಿತ್ತು, ಸ್ಟೇಜ್‌ ಡೆಕೊರೇಷನ್‌ ಹ್ಯಾಂಗಿತ್ತು, ಸಭಾಂಗಣದ ಎಕೌಸ್ಟಿಕ್ಸ್‌ ಹೇಗಿತ್ತು ಆನ್ನೋದನ್ನೆಲ್ಲ ಜನ ಅಷ್ಟು ತಲೆ ಕೆಡ್ಸಿಕೊಳ್ಳೋದಿಲ್ಲ. ಆದರೆ ಸಮ್ಮೇಳನದಲ್ಲಿ ಊಟದ ವ್ಯವಸ್ಥೆ ಹೇಗಿತ್ತು, ಊಟ ಎಷ್ಟು ರುಚಿರುಚಿಯಾಗಿತ್ತು ಎಂಬುವುದರ ಮೇಲೆಯೇ ಸಮ್ಮೇಳನ ಸಫಲತೆ/ಸಾರ್ಥಕತೆ ನಿರ್ಧಾರವಾಗೋದು.

Moonge Jamoone Saati

ಈ ಫಂಡಮೆಂಟಲ್‌ ಕಾನ್ಸೆಪ್ಟನ್ನು ಚೆನ್ನಾಗಿ ಅರ್ಥಮಾಡಿಕೊಂಡೇ ಈ ಸಮ್ಮೇಳನದ ‘ಆಹಾರ ಸಮಿತಿ’ಯು ಬಹಳ ಚಾಕಚಕ್ಯತೆಯಿಂದ ಊಟ-ತಿಂಡಿ ಏರ್ಪಾಡನ್ನು ಮಾಡಲಿದೆ. ಸಾಧ್ಯವಾದಷ್ಟು ಮಟ್ಟಿಗೆ ‘ಅಧಿಕೃತ ಕನ್ನಡಛಾಪಿನ ಅಡುಗೆ’ ಇರಬೇಕೆಂದು ಮೂವರು ಕನ್ನಡಿಗ ಕುಕ್ಕುಗಳಿರುವ ಇಲ್ಲಿನ ‘ಮಿನರ್ವಾ’ ಹೊಟೆಲ್‌ ಜತೆ ಆಹಾರ ಸರಬರಾಜಿನ ಒಪ್ಪಂದವಾಗಿದೆ. ಚಿತ್ರದಲ್ಲಿ ಮಿನರ್ವಾ ಮ್ಯಾನೇಜರ್‌ ಪ್ರಶಾಂತ್‌ ಅವರೊಂದಿಗೆ ಸಮ್ಮೇಳನ ಆಹಾರ ಸಮಿತಿಯವರು ಮಾತುಕತೆ ನಡೆಸುತ್ತಿದ್ದಾರೆ. ಮೀಟಿಂಗಲ್ಲಿ ಭಾಗವಹಿಸಿದವರಿಗೆಲ್ಲ ಮಿನರ್ವಾದಿಂದಲೇ ಸ್ಯಾಂಪಲ್‌ ಊಟವೂ ಬಂದಿದೆ. ಪ್ರಶಾಂತ್‌ ಅವರ ಪಕ್ಕಕ್ಕೆ ನಿಂತುಕೊಂಡಿರುವವರು ‘ಫುಡ್‌ ಕಮಿಟಿ ವಿಜಯೇಂದ್ರ’ - ಸಮ್ಮೇಳನದ ಯಶಸ್ಸಿನ ಬಹುದೊಡ್ಡ ಸ್ಟೇಕ್‌ನವರು!

ಶುಕ್ರವಾರ (ಸೆ. 1) ರಾತ್ರೆಯೂಟದಿಂದ ಹಿಡಿದು ಭಾನುವಾರ ರಾತ್ರೆಯೂಟದವರೆಗೆ ಒಟ್ಟು ಏಳು ಊಟ/ತಿಂಡಿ ಗಳಿಗೆ ತರಾವರಿ ಮೆನು ಸಿದ್ಧವಾಗುತ್ತಿದೆ. ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದೆ ಎಲ್ಲವೇಳೆಗಳಲ್ಲೂ ಒಳ್ಳೆಯ ಊಟ ಬಡಿಸಬೇಕೆಂಬ ಮಹತ್ವಾಕಾಂಕ್ಷೆ ಸಮ್ಮೇಳನದ ಆಯೋಜಕರಿಗಿದೆ. ಅಷ್ಟಾದ ಮೇಲೂ ‘ಲಾಡುವಿನಲ್ಲಿ ಲವಂಗ ಇರಲಿಲ್ಲ...’ ಎಂದು ಯಾರಾದರೂ ಗೊಣಗಿದರೆ ಅವರು ಸಮ್ಮೇಳನ ಮುಗಿದ ನಂತರ ಸೋಮವಾರ ಬೆಳಿಗ್ಗೆ ಹೊರಡುವವರಿಗೆಲ್ಲ ಬ್ರೇಕ್‌ಫಾಸ್ಟ್‌ ಪ್ರಾಯೋಜಿಸಬೇಕಾಗುತ್ತದೆ!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 13 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X