ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರೀಯ ಸಂಗೀತದ ರಸದೌತಣ

By Staff
|
Google Oneindia Kannada News
ವಿಶ್ವ ಕನ್ನಡ ಸಮ್ಮೇಳನವೆಂಬೊ ಕನ್ನಡ ನುಡಿಹಬ್ಬದಲ್ಲಿ ಈಬಾರಿ ಕರ್ನಾಟಕ ಶೈಲಿ (ದಕ್ಷಿಣಾದಿ) ಮತ್ತು ಹಿಂದುಸ್ತಾನಿ ಶೈಲಿಯ (ಉತ್ತರಾದಿ) ಶಾಸ್ತ್ರೀಯಸಂಗೀತ ರಸಿಕರಿಗೆ ಮಹದಾನಂದವಾಗುವಷ್ಟು ಕಾರ್ಯಕ್ರಮಗಳ ಸರಮಾಲೆಯೇ ಇದೆ. ವಾಷಿಂಗ್‌ಟನ್‌ ಪರಿಸರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಗುರುವಾಗಿರುವ ಉಷಾ ಚಾರ್‌ ನೇತೃತ್ವದಲ್ಲಿ ಸಂಗೀತಸಮಿತಿಯು ಈ ರಸದೌತಣದ ಏರ್ಪಾಡುಗಳನ್ನು ನಡೆಸಿದೆ.

ಕೆಲವು ಮುಖ್ಯಾಂಶಗಳು :

Highlights of Classical Music in WKC-06ಶುಕ್ರವಾರ, ಸಪ್ಟೆಂಬರ್‌ 1ರಂದು ಸಂಜೆ ಸಮ್ಮೇಳನ ಉದ್ಘಾಟನೆಯ ವೇಳೆ ಸುಮಾರು ನೂರಕ್ಕೂ ಹೆಚ್ಚು ಕಲಾವಿದರ (ವಾಷಿಂಗ್ಟನ್‌ ಪ್ರದೇಶದವರಷ್ಟೇ ಅಲ್ಲದೆ ಸಮ್ಮೇಳನಾರ್ಥಿ ಅತಿಥಿಗಳೂ ಸೇರಿ) ಸಮೂಹಗಾಯನದಲ್ಲಿ ಮಹಾಪ್ರಾರ್ಥನೆ - Mega Invocation! (ಇದರ ರಿಹರ್ಸಲ್‌ಗಳು ಉಷಾ ಚಾರ್‌ ನಿರ್ದೇಶನದಲ್ಲಿ ಈಗ ನಡೆಯುತ್ತಿವೆ. ಭಾಗವಹಿಸಲಿಚ್ಛಿಸುವವರು ಅವರನ್ನು ಈಮೈಲ್‌ [email protected] ಅಥವಾ ಫೋನ್‌ 301-570-3609 ಮೂಲಕ ಸಂಪರ್ಕಿಸಬಹುದು)

ಶನಿವಾರ ಸೆಪ್ಟೆಂಬರ್‌ 2 ಮತ್ತು ಭಾನುವಾರ ಸೆಪ್ಟೆಂಬರ್‌ 3ರಂದು ಮುಖ್ಯವೇದಿಕೆಯ ಮೇಲೆ ಕೆಲವು ಮತ್ತು ಸಮಾಂತರ ವೇದಿಕೆಗಳಲ್ಲಿ ಕೆಲವು ಹೀಗೆ ವಿವಿಧ ಸಂಗೀತಕಾರ್ಯಕ್ರಮಗಳ ಆಯೋಜನೆಯಾಗಿದೆ.
Vidyabhushan

  • ವಿದ್ಯಾಭೂಷಣ ಅವರಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ
  • ನಾಗವಲ್ಲಿ ನಾಗರಾಜ್‌ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
  • ಕರ್ನಾಟಕ ಶಾಸ್ತ್ರೀಯ ವೀಣಾ ವಾದನ : ಡಿ. ಬಾಲಕೃಷ್ಣ ಅವರಿಂದ (ಇವರು ಖ್ಯಾತ ವೈಣಿಕ ದೊರೆಸ್ವಾಮಿ ಐಯಂಗಾರ್‌ ಅವರ ಪುತ್ರ)
  • ಪ್ರವೀಣ್‌ ಗೋಡ್‌ಖಿಂಡಿ ಅವರಿಂದ ಹಿಂದುಸ್ಥಾನಿ ಶೈಲಿಯಲ್ಲಿ ವೇಣುಗಾನ ಕಛೇರಿ
  • ನಾಗರಾಜ್‌ ಹವಾಲ್ದಾರ್‌ ಮತ್ತು ಓಂಕಾರ್‌ ಹವಾಲ್ದಾರ್‌ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ
  • ಎಂಡಿ.ಪಲ್ಲವಿ ಅವರಿಂದ ಲಘುಶಾಸ್ತ್ರೀಯ ಗಾಯನ
  • ಬದರಿಪ್ರಸಾದ್‌ ಅವರ ಲಘುಶಾಸ್ತ್ರೀಯ ಸಂಗೀತ ಕಾರ್ಯಕ್ರಮ
  • ಚಂದ್ರಿಕಾ ಗುರುರಾಜ್‌ ಅವರಿಂದ ಲಘುಶಾಸ್ತ್ರೀಯ ಸಂಗೀತ
  • ಶೇಷಗಿರಿ ದಾಸ್‌ ಅವರಿಂದ ಲಘುಶಾಸ್ತ್ರೀಯ ಸಂಗೀತ
ಅಷ್ಟೇ ಅಲ್ಲದೆ ‘ಪುರಂದರ ಮಂಟಪ’ ಎಂಬ ಪ್ರತ್ಯೇಕ ಸಭಾಗೃಹದಲ್ಲಿ ಆ ಎರಡು ದಿನಗಳಲ್ಲೂ ಶಾಸ್ತ್ರೀಯ ಮತ್ತು ಲಘುಶಾಸ್ತ್ರೀಯ ಸಂಗೀತಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳೇ (ಸಂಗೀತ ಕಛೇರಿಗಳು, ಕಾರ್ಯಾಗಾರಗಳು, ತರಬೇತಿ ತರಗತಿಗಳು, ಸ್ಪರ್ಧೆಗಳು ಇತ್ಯಾದಿ) ಇರುತ್ತವೆ. ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡಿರಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳಿವೆ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X