ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನದ ಮೌಲ್ಯಗಳು

By Staff
|
Google Oneindia Kannada News

ಕಾವೇರಿ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲ ಕಾರ್ಯಕರ್ತರು, ಸ್ವಯಂಸೇವಕರು, ಅತಿಥಿಗಳು, ಲೇಖಕರು, ಕಲಾವಿದರು, ವ್ಯಾಪಾರಿಗಳು ಮತ್ತು ಸಮ್ಮೇಳನದ ಭಾಗವಾದ ವೈದ್ಯಕೀಯ, ಆಧ್ಯಾತ್ಮಿಕ, ಸಾಹಿತ್ಯಿಕ ಮತ್ತು ವಾಣಿಜ್ಯ ಸಂಕಿರಣಗಳಲ್ಲಿ ಪಾಲ್ಗೊಳ್ಳುವವರೆಲ್ಲರೂ ಅನುಸರಿಸಬೇಕಾದ ಮೌಲ್ಯಗಳ ಒಂದು ಪಟ್ಟಿ ಸಿದ್ದಗೊಂಡಿದೆ.

(1) ಸಮ್ಮೇಳನದಲ್ಲಿ ಭಾಗಿಗಳಾಗುವ ಎಲ್ಲರೂ ಪರಸ್ಪರ ಗೌರವಕ್ಕೆ ಸದಾ ಪಾತ್ರರು ಎಂಬುದನ್ನು ಮರೆಯದಿರೋಣ

Lets lend helping hand to the needy(2) ಹಿರಿಯರೊಂದಿಗೆ ಆದರ ಮತ್ತು ನಮ್ರತೆಯಿಂದ ವರ್ತಿಸೋಣ ಮತ್ತು ಅವರಿಗೆ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡೋಣ

(3) ಮಕ್ಕಳೊಂದಿಗೆ ಪ್ರೀತಿಯಿಂದ ವರ್ತಿಸೋಣ ಮತ್ತು ಅವರ ಕ್ಷೇಮದ ಬಗ್ಗೆ ಸದಾ ಜಾಗರೂಕತೆ ತೋರೋಣ

(4) ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣೋಣ

(5) ಅತಿಥಿಗಳಿಗೆ ಆದ್ಯತೆ ಕೊಡೋಣ

(6) ಭಾರತದಿಂದ ಬಂದವರಿಗೆ ಸಹಾಯಹಸ್ತ ನೀಡೋಣ

(7) ದೈಹಿಕ ಅಥವಾ ಮಾನಸಿಕವಾಗಿ ವಿಶೇಷ ಸವಾಲುಗಳನ್ನೆದುರಿಸುವ ಸದಸ್ಯರಿಗೆ, ಪುಟ್ಟ ಕೂಸುಗಳನ್ನು ಎತ್ತಿಕೊಂಡಿರುವ ತಾಯಂದಿರಿಗೆ, ಮತ್ಯಾವುದೇ ಆರೋಗ್ಯದ ಕಾರಣದಿಂದ ವಿಶೇಷ ಅಗತ್ಯವಿದ್ದವರಿಗೆ ಊಟದ-ತಿಂಡಿಯ ಸಾಲುಗಳಲ್ಲಿ ಅಗ್ರಸ್ಥಾನ ಕೊಟ್ಟು ಸಹಕರಿಸೋಣ

(8) ಕವಿಗಳನ್ನು, ಕಲಾವಿದರನ್ನು ಮತ್ತು ಆಹ್ವಾನಿತರನ್ನು ಅತ್ಯಂತ ಗೌರವದೊಂದಿಗೆ ಬರಮಾಡಿಕೊಳ್ಳೋಣ

(9) ಸಭಾಂಗಣಗಳಲ್ಲಾಗಲೀ, ಭೋಜನಗೃಹಗಳಲ್ಲಾಗಲೀ, ಮಳಿಗೆಗಳಲ್ಲಾಗಲೀ, ಸಭ್ಯತೆಯಿಂದ ನಡೆದುಕೊಳ್ಳೋಣ

(10) ಸಮಯಪಾಲನೆಗೆ ಹೆಚ್ಚಿನ ಗಮನ ಕೊಡೋಣ

(11) ಸಂಚಾಲಕರ ಸೂಚನೆಗಳಿಗೆ ಮತ್ತು ಸಮಯದ ನಿಬಂಧನೆಗೆ ವೇದಿಕೆಯಮೇಲೆ ಇರುವವರು ಮತ್ತು ಸಭಾಂಗಣದಲ್ಲಿರುವ ಎಲ್ಲರೂ ಬದ್ಧರಾಗೋಣ

(12) ಇತರರ ಸಂಭ್ರಮದಲ್ಲಿ ಪಾಲ್ಗೊಳ್ಳೋಣ. ಉತ್ತಮ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸೋಣ, ನಿರೀಕ್ಷೆಯನ್ನು ಮುಟ್ಟದೇ ನಿರಾಶೆ ಮಾಡುವ ಕಾರ್ಯಕ್ರಮಗಳಬಗ್ಗೆ ಔದಾರ್ಯ ತೋರೋಣ

(13) ನಮ್ಮ ಪ್ರತಿಕ್ರಿಯೆಯಲ್ಲಿ ಶಿಸ್ತು ಮತ್ತು ಸಂಯಮಗಳನ್ನು ಪ್ರದರ್ಶಿಸೋಣ

(14) ಇತರರೊಂದಿಗೆ ಮಾತಿನಲ್ಲಿ ಮತ್ತು ಚರ್ಯೆಯಲ್ಲಿ ಪ್ರೀತಿ ಸೌಹಾರ್ದಗಳನ್ನು ವ್ಯಕ್ತಪಡಿಸೋಣ

(15) ನಮ್ಮ ವಸತಿವ್ಯವಸ್ಥೆ, ಭೋಜನಾಲಯ, ಸಭಾಮಂದಿರಗಳನ್ನು ಶುಚಿಯಾಗಿಟ್ಟುಕೊಳ್ಳೋಣ ಮತ್ತು ಅಲ್ಲಿನ ನಿಯಮಗಳನ್ನು ಉಲ್ಲಂಘಿಸದಿರೋಣ

(16) ಸಮ್ಮೇಳನದ ಭದ್ರತೆ ನಮ್ಮೆಲ್ಲರ ಭದ್ರತೆ, ಆದ್ದರಿಂದ ಮೈಯೆಲ್ಲ ಕಣ್ಣಾಗಿ ಜಾಗರೂಕರಾಗಿರೋಣ

(17) ಬಿಡಾರ ಮತ್ತು ಸಮ್ಮೇಳನ-ಭವನಗಳ ನಡುವೆ ನಡೆದಾಡುವಾಗ ಒಬ್ಬರಿಗೊಬ್ಬರು ಜೊತೆಯಾಗೋಣ

(18) ಸಂಚಾಲಕರು ಅಥವಾ ಸ್ವಯಂಸೇವಕರಿಂದ ಸಣ್ಣಪುಟ್ಟ ತಪ್ಪುಗಳಾದರೆೆ ದೊಡ್ಡಮನಸ್ಸಿನಿಂದ ಕ್ಷಮಿಸಿಬಿಡೋಣ

(19) ಎಲ್ಲರಿಗೂ ಸಮ್ಮೇಳನದ ಅನುಭವ ಶ್ರೀಮಂತವಾಗಿಸಲು ಅನುವಾಗೋಣ

(20) ಇದು ಕನ್ನಡ ಸಮ್ಮೇಳನ. ನಾವೆಲ್ಲ ಕನ್ನಡದಲ್ಲೇ ಮಾತನಾಡೋಣ. ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಕನ್ನಡ ನಾಡು-ನುಡಿ-ಸಂಸ್ಕೃತಿಗಳನ್ನು ವೈಭವೀಕರಿಸೋಣ!


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X