ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮದ ಕನ್ನಡಿಯಲ್ಲಿ ಸಮ್ಮೇಳನದ ಪ್ರತಿಬಿಂಬ

By Staff
|
Google Oneindia Kannada News

ವಿಶ್ವ ಕನ್ನಡ ಸಮ್ಮೇಳನದ ಕಲರವಗಳನ್ನು ಪ್ರಪಂಚಕ್ಕೆ ಹಂಚುವ ಪ್ರಯತ್ನಗಳು ಆರಂಭವಾದದ್ದು 2000 ಇಸವಿಯಲ್ಲಿ. ಹ್ಯೂಸ್ಟನ್‌ ಸಮ್ಮೇಳನದ ಕೆಲವು ವರದಿಗಳು ಅಂತರ್ಜಾಲದಲ್ಲಿ ಕಂಡುಬಂದವು. ಆನಂತರದ ಡೆಟ್ರಾಯಿಟ್‌ ಮತ್ತು ಒರ್ಲಾಂಡೊ ಸಮ್ಮೇಳನಗಳ ಸುದ್ದಿಸಾರಾಂಶಗಳು ಅಂತರ್ಜಾಲದಲ್ಲಿ ವಿಜೃಂಭಿಸಿದವೇ ವಿನಾ ಪತ್ರಿಕೆಗಳು ಮತ್ತು ದೃಶ್ಯ-ಶ್ರವ್ಯ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಲಿಲ್ಲ. ಈನಡುವೆ ‘ಕನ್ನಡವೇ ಸತ್ಯ’ ಖ್ಯಾತಿಯ ಸಿ.ಅಶ್ವತ್ಥ್‌ ಅವರಿಗೆ ನಾವು ಧನ್ಯವಾದಗಳನ್ನು ಹೇಳಬೇಕು! ಅವರಿಗೆ ‘ಅಕ್ಕ’ ನೀಡಿದ ಒಂದು ಚೆಕ್‌ ಬೌನ್ಸ್‌ ಆದ ಸುದ್ದಿ ಕರ್ನಾಟಕದಲ್ಲಿ ಮಿಂಚಿನಂತೆ ಸಂಚಾರವಾಗಿ ‘ಅಕ್ಕ’ಳ ಹೆಸರು ಕರ್ನಾಟಕದಲ್ಲಿ ವರ್ಲ್ಡ್‌ ಫೇಮಸ್‌ ಆಯ್ತು!

ಅಮೆರಿಕ ಯಾವ ದಿಕ್ಕಿನಲ್ಲಿದೆ ಎನ್ನುವುದನ್ನು ಅರಿಯದವನು ಕೂಡ ಅಕ್ಕಳ ಬಗ್ಗೆ, ಅಮೆರಿಕದ ಬಗ್ಗೆ, ವಿಶ್ವ ಕನ್ನಡ ಸಮ್ಮೇಳನಗಳ ಬಗ್ಗೆ ಮಾತನಾಡುವಂತಾಯಿತು. ಜನಸಾಮಾನ್ಯರಂತೆಯೇ ಪತ್ರಿಕೆಗಳು ಕೂಡ. ವಿದೇಶಿ ಕನ್ನಡಿಗರ ಚಟುವಟಿಕೆಗಳನ್ನು ಪ್ರಕಟಿಸಬೇಕು ಎನ್ನುವ ಆಸಕ್ತಿ ಕೆಲವು ಪತ್ರಿಕೆಗಳಿಗೆ ಕ್ರಮೇಣ ಮೂಡಿತು. ಅಂತೆಯೇ ಬಾಲ್ಟಿಮೋರ್‌ ಸಮ್ಮೇಳನದ ವರದಿಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು.

ಪ್ರಸಕ್ತ ಸಮ್ಮೇಳನದ ವರದಿಗಳನ್ನು ಪ್ರಕಟಿಸಿದ ಮಾಧ್ಯಮವೇದಿಕೆಗಳ ವಿಹಂಗಮ ನೋಟ ಇದು :

Baltimore Sun
India Tribune
India Abroad News Service
Deccan Herald
Star of Mysore
Vijay Times

ಈ ಇಂಗ್ಲಿಷ್‌ ಪತ್ರಿಕೆಗಳಲ್ಲದೆ ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ಈಸಂಜೆ ಮುಂತಾದ ಕನ್ನಡ ಪತ್ರಿಕೆಗಳಲ್ಲಿ ಸಮ್ಮೇಳನ ವಾರ್ತೆಗಳು, ವರದಿಗಳು ಪ್ರಕಟವಾದುವು.

ಸಮ್ಮೇಳನವನ್ನು ವರದಿಮಾಡಲೆಂದೇ ಕೆನಡಾದಿಂದ ‘ಕನ್ನಡಮೆರಿಕ’ ಸಂಪಾದಕ ಬಿ.ವಿ.ನಾಗರಾಜು, ವಿಜಯಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್‌, ಪ್ರಜಾವಾಣಿಯಿಂದ ಎಂ.ಎ.ಪೊನ್ನಪ್ಪ, ಲಂಕೇಶ್‌ ಪತ್ರಿಕೆಯಿಂದ ಸದಾಶಿವ ಶೆಣೈ, ದೂರದರ್ಶನದಿಂದ ಮಹೇಶ್‌ ಜೋಶಿ ಆಗಮಿಸಿದ್ದರು. ಈ-ಟಿವಿಯ ಪ್ರತಿನಿಧಿ ಕೂಡ ಸಮ್ಮೇಳನದ ಚಟುವಟಿಕೆಗಳನ್ನು ಕೆಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಪತ್ರಿಕೆಗಳಲ್ಲದೆ ಸಮ್ಮೇಳನವನ್ನು ಪ್ರತಿಬಿಂಬಿಸಿದ ಅಂತರ್ಜಾಲ ತಾಣಗಳಲ್ಲಿ ಮುಖ್ಯವಾದದ್ದು ನಿಮ್ಮ ಅಕ್ಕರೆಯ ಕೂಸು; ದಟ್ಸ್‌ಕನ್ನಡ. ಜೊತೆಗೆ ‘ವಿಕ್ರಾಂತ ಕರ್ನಾಟಕ ಡಾಟ್‌ ಕಾಮ್‌’. ಈ ಪತ್ರಿಕೆಯ ಸಂಪಾದಕರು ಅಮೆರಿಕೆಗೆ ಬಂದಿರಲಿಲ್ಲ; ಬದಲಾಗಿ ಕ್ಯಾಲಿಫೋರ್ನಿಯಾದಲ್ಲಿರುವ ಮಾಲಿಕರೇ ಸ್ವತಃ ಸಮ್ಮೇಳನಕ್ಕೆ ಬಂದಿದ್ದರು. ಅಮೆರಿಕನಿವಾಸಿ ಹನುಮಂತ ರೆಡ್ಡಿ ಮತ್ತು ಹವ್ಯಾಸಿ ಪತ್ರಕರ್ತ ಸಿ.ಎಸ್‌.ದ್ವಾರಕಾನಾಥ್‌ ಸಹ ಸಮ್ಮೇಳನದಲ್ಲಿ ಕಣ್ಣಿಗೆ ಬಿದ್ದರು.

ಆಕಾಶವಾಣಿ ಕೇಂದ್ರಗಳು ಕರ್ನಾಟಕದಲ್ಲೀಗ ಕಾಸಿಗೊಂದು ಕೊಸರಿಗೊಂದು ಇದ್ದರೂ ಅವು ವಿಶ್ವಕನ್ನಡ ಸಮ್ಮೇಳನ ಕಲರವವನ್ನು ಪ್ರಸಾರಗೊಳಿಸಿದವೋ ಇಲ್ಲವೋ ಗೊತ್ತಿಲ್ಲ. ಆದರೆ ಸಿಡ್ನಿಯಲ್ಲಿರುವ ಕನ್ನಡ ಬಾನುಲಿ ಕೇಂದ್ರವು, ಸಮ್ಮೇಳನ ಸ್ಥಳದಲ್ಲಿದ್ದ ದಟ್ಸ್‌ಕನ್ನಡ ಸಂಪಾದಕರೊಂದಿಗೆ ನಡೆಸಿದ ದೂರವಾಣಿ ಸಂದರ್ಶನವನ್ನು ನೇರಪ್ರಸಾರ ಮಾಡಿತು! ಅಮೆರಿಕದಲ್ಲಿ ನೆಲೆಗೊಂಡಿರುವ www.ourkarnataka.com, ಗಿರಿನಗರದಿಂದ ಹೊರಡುವ www.kannadaratna.com, ಕನ್ನಡ ಸಾಹಿತ್ಯಕ್ಕಾಗೇ ಮುಡಿಪಾಗಿರುವ www.kannadasaahithya.com ಗಳಲ್ಲಿನ ವರದಿಗಳನ್ನು ಓದಲು ನನಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ.

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X