ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆ : ವಿಠ್ಠಲಮೂರ್ತಿ ಪ್ರಶಂಸೆ

By Staff
|
Google Oneindia Kannada News

ಬಾಲ್ಟಿಮೋರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ಕ್ಕಾಗಿ ಆಯ್ದುಕೊಂಡಿರುವ ವಿಶಾಲ ಸಭಾಂಗಣಕ್ಕೆ ಮಂಗಳವಾರ (ಜು.4) ವಿಠ್ಠಲಮೂರ್ತಿ ಭೇಟಿನೀಡಿದರು. ಸಮ್ಮೇಳನಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನೇರ್ಪಡಿಸಿರುವ ವಿಂಡ್‌ಹಾಮ್‌ ಹೋಟೆಲ್‌ ಮತ್ತು ಅಲ್ಲಿನ ಭೋಜನಾಲಯಗಳನ್ನೂ ಅವರು ವೀಕ್ಷಿಸಿ, ಬೃಹತ್‌ ಪ್ರಮಾಣದ ಸಮ್ಮೇಳನಕ್ಕೆ ಸಿದ್ಧವಾಗಿರುವ ಈ ವ್ಯವಸ್ಥೆಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಖಾಸಗಿ ಪ್ರವಾಸದಲ್ಲಿ ಅಮೆರಿಕಾ ದೇಶದ ಡೆಟ್ರಾಯಿಟ್‌ಗೆ ಬಂದಿರುವ ವಿಠ್ಠಲಮೂರ್ತಿಯವರು ಒಂದು ದಿನದ ಬಿಡುವು ಮಾಡಿಕೊಂಡು ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ದ ಸಿದ್ಧತೆಗಳನ್ನು ಪರಾಮರ್ಶಿಸಲೆಂದೇ ರಾಜಧಾನಿನಗರಕ ೂ್ಕ ಭೇಟಿ ನೀಡಿದ್ದರು. ‘ಅಕ್ಕ’ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಅಮರನಾಥಗೌಡ ಮತ್ತು ನಿರ್ದೇಶಕ ಎಚ್‌.ಎನ್‌.ವಿಶ್ವಾಮಿತ್ರ ಅವರೂ ಜತೆಗಿದ್ದರು.

Kannada and Culture department Chief Secretary IM Vithalamurthy with WKC working committee membersಸಮ್ಮೇಳನ ಸಂಚಾಲಕರಾದ ಸುರೇಶ್‌ ರಾಮಚಂದ್ರ ಅವರ ನಿವಾಸದಲ್ಲಿ ಜುಲೈ 4ರಂದು ನಡೆದ ವಿವಿಧ ಕಾರ್ಯಕಾರಿ ಸಮಿತಿಗಳ ಮುಖ್ಯಸ್ಥರ ಅನೌಪಚಾರಿಕ ಸಭೆಯಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ವಿಠ್ಠಲಮೂರ್ತಿ ಪಾಲ್ಗೊಂಡಿದ್ದರು. ಸಮ್ಮೇಳನದ ಯಶಸ್ಸಿಗೆ ಕರ್ನಾಟಕ ಸರ್ಕಾರವು ಸರ್ವವಿಧದಲ್ಲೂ ನೆರವಾಗುವುದು ಎಂಬ ಭರವಸೆಯನ್ನೂ ಅವರು ನೀಡಿದರು.

ಇನ್ನೋರ್ವ ಸಂಚಾಲಕ ರವಿ ಡೆಂಕಣಿಕೋಟೆ ಅವರು ಸಮ್ಮೇಳನದ ಪೂರ್ವಭಾವಿ ತಯಾರಿಗಳ ಸ್ಥೂಲ ಪರಿಚಯವನ್ನು ಮಾಡಿಕೊಟ್ಟರು. ಬಳಿಕ ವಿಠ್ಠಲಮೂರ್ತಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಮ್ಮೇಳನವೆಂದರೆ ಕೇವಲ ಸಂಗೀತ ಸಾಹಿತ್ಯ ಸಂಸ್ಕೃತಿಯ ಪ್ರದರ್ಶನ, ಊಟೋಪಚಾರಗಳ ಉತ್ಸವವಲ್ಲ; ಕರ್ನಾಟಕದ ಸ್ವರ್ಣಮಹೋತ್ಸವದ ಈ ವರ್ಷದಲ್ಲಿ ಏಕೀಕರಣದ ಸುವರ್ಣಸಂಭ್ರಮವಿರಬೇಕು. ನಿಜ, ಆದರೆ ಅಷ್ಟೇ ಉತ್ಸಾಹದಿಂದ ಭವಿಷ್ಯದ ಕರ್ನಾಟಕ-ಕನ್ನಡ-ಕನ್ನಡಿಗರ ಬಗ್ಗೆಯೂ ಯೋಚನೆ, ಯೋಜನೆಗಳಿರಬೇಕು. ಈ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳಲ್ಲಿ ಆಡಂಬರ ಅದ್ಧೂರಿಗಳ ಜತೆಜತೆಯಲ್ಲೇ, ಮುಂಬರುವ ದಿನಗಳಲ್ಲಿ ನಾಡಿನ ಅಭಿವೃದ್ಧಿಗೆ ತಾವೇನು ಮಾಡಬಹುದು ಎಂಬುದರ ವಿಚಾರಮಂಥನವೂ ಆಗಬೇಕು ಎಂದು ವಿಠ್ಠಲ ಮೂರ್ತಿ ಹೇಳಿದರು.

ಅನಿವಾಸಿ ಕನ್ನಡಿಗರ ಯುವಪೀಳಿಗೆಗೆ ಕನ್ನಡನಾಡಿನ ಬಗ್ಗೆ ಅಭಿಮಾನವನ್ನು ಹೆಚ್ಚಿಸುವ ಕೆಲಸಗಳಾಗಬೇಕು, ಕರ್ನಾಟಕ ಸರ್ಕಾರ ಮತ್ತು ಅನಿವಾಸಿ ಕನ್ನಡಿಗರು ಕೈಜೋಡಿಸಿ ರಚನಾತ್ಮಕ ಯೋಜನೆಗಳ ಅನುಷ್ಠಾನದಿಂದ ಸುವರ್ಣಸಂಭ್ರಮವನ್ನು ಅರ್ಥಪೂರ್ಣವಾಗಿಸಬೇಕೆಂದು ಅವರು ಅಭಿಪ್ರಾಯಪಟ್ಟರು.

ಸೆ. 1,2,3 ರಂದು ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕ ಸರ್ಕಾರದ ಒಂದು ನಿಯೋಗವು ಬರಲಿದೆ ಎಂದ ವಿಠ್ಠಲಮೂರ್ತಿ, ಸಮ್ಮೇಳನದ ಯಶಸ್ಸಿಗಾಗಿ ಅಹರ್ನಿಶಿ ದುಡಿಯುತ್ತಿರುವ ಇಲ್ಲಿನ ಸ್ವಯಂಸೇವಕರ ಕನ್ನಡಪ್ರೀತಿ ಮತ್ತು ಅಭಿಮಾನಗಳನ್ನು ಮನಸಾರೆ ಹೊಗಳಿದರು.

ಸಮ್ಮೇಳನ ವಿಷಯವಾಗಿ ಮಾತ್ರವಲ್ಲದೆ ಅನಿವಾಸಿ ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ, ಐಟಿ-ಬಿಟಿ ಕ್ಷೇತ್ರಗಳ ಹೊರತಾಗಿಯೂ ಅಭಿವೃದ್ಧಿ ಯೋಜನೆಗಳು, ಬಂಡವಾಳ ಹೂಡಿಕೆಗೆ ಅವಕಾಶಗಳು ಮತ್ತು ಪ್ರವಾಸೋದ್ಯಮ ಚಟುವಟಿಕೆಗಳ ಕುರಿತಾದ ಪ್ರಶ್ನೆಗಳಿಗೂ ಉತ್ತೇಜನಕಾರಿ ಪ್ರತಿಕ್ರಿಯೆಗಳನ್ನಿತ್ತರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಭೇಟಿ ಮತ್ತು ಕರ್ನಾಟಕ ಸರ್ಕಾರದ ಸಹಾಯ-ಸಹಯೋಗದ ಬಗ್ಗೆ ಅವರು ನೀಡಿರುವ ಭರವಸೆಗಳು ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆಗಳಿಗೆ ಇನ್ನಷ್ಟು ಹುರುಪನ್ನು ತಂದುಕೊಟ್ಟಿವೆ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X