• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾ(ಸಿ)ಗದ ಭೋಗದ ‘ಅಕ್ಕ’ರದ ಸಮ್ಮೇಳನ!

By Staff
|

ಸಮ್ಮೇಳನವನ್ನು ಭರ್ತಿ ಮಾಡಿದವರಲ್ಲಿ ಭೂವಿಸ್ತೀರ್ಣದಲ್ಲಿ ಭಾರತದ ಮೂರರಷ್ಟು ಹೆಚ್ಚು ವಿಶಾಲವಾಗಿರುವ ಉತ್ತರ ಅಮೆರಿಕ ಕನ್ನಡಿಗರ ಪಾಲೇ ಹೆಚ್ಚು. ಈ ದೇಶದ ಮೂಲೆಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಸಮ್ಮೇಳನಕ್ಕೆ ಹುರುಪಿನಿಂದ ಬಂದಿದ್ದರು. ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ಬಾಸ್ಟನ್‌, ಕನೆಕ್ಟಿಕಟ್‌, ನ್ಯೂಯಾರ್ಕ್‌, ಡೆಲವೇರ್‌, ಫಿಲಡೆಲ್ಫಿಯಾ, ರಿಚ್‌ಮಂಡ್‌, ನಾರ್ತ್‌ಕೆರೊಲಿನಾ ಮುಂತಾದ ಪ್ರದೇಶಗಳ ಕನ್ನಡಿಗರು ಕಾರುಗಳಲ್ಲಿ ಆಗಮಿಸಿದರೆ, ಇತರರು ಇನ್ನಿತರ ದಿಕ್ಕುಗಳಿಂದ ವಿಮಾನದಲ್ಲಿ ಹಾರಿ ಬಂದಿದ್ದರು.

ಸುಮಾರು ಎಂಟು ಕೋಟಿ ಇಂಡಿಯನ್‌ ಡಾಲರ್‌ ಖರ್ಚು ಮಾಡಿ ಏರ್ಪಡಿಸಲಾಗಿದ್ದ ಸಮ್ಮೇಳನ ಬಗೆಬಗೆಯ ಅಭಿರುಚಿಗಳಿಗೆ ವೇದಿಕೆ ಕಲ್ಪಿಸಿತ್ತು. ಕರ್ನಾಟಕಕ್ಕೆ ಜೈನಧರ್ಮದ ಕೊಡುಗೆ ವಿಷಯದ ಬಗ್ಗೆ ಉಪನ್ಯಾಸ ಮೊದಲ್ಗೊಂಡು love me or hate me ಚಿತ್ರಗೀತೆಗೆ ಕುಣಿಯುವವರೆಗೆ ಅವಕಾಶಗಳ ಆಕಾಶ ನಿರ್ಮಾಣವಾಗಿತ್ತು.

ಆಧ್ಯಾತ್ಮ, ಬಿಸಿನೆಸ್ಸು, ಸಂಗೀತ, ನೃತ್ಯ, ಸಾಹಿತ್ಯ, ನಾಟಕ, ಭಾಷಣ, ಸನ್ಮಾನ, ರೂಪಸಿಯರ ಸ್ಪರ್ಧೆ, ಮಹಿಳಾವೇದಿಕೆ, ವಧೂವರರ ಸಮಾವೇಶ, ನೌಕಾವಿಹಾರ, ಸಿನೆಮಾಪ್ರದರ್ಶನ ಕನ್ನಡ ನಾಲಿಗೆಗಳನ್ನು ತಣಿಸುವ ತಿಂಡಿತೀರ್ಥ ಸಮಾರಾಧನೆಯನ್ನು ಚಾಚೂ ತಪ್ಪದೆ ವ್ಯವಸ್ಥೆಮಾಡಲು ಕಾವೇರಿ ಸ್ವಯಂಸೇವಕರು ಎರಡು ವರ್ಷಗಳಿಂದ ಸತತವಾಗಿ ಪ್ಲಾನ್‌ ಮಾಡಿದ್ದರು.

ನೀವು ಏನೇ ಅನ್ನಿ, ಬಗೆಬಗೆಯ ಭಕ್ಷ್ಯಗಳ ಬಫೆ ಊಟ ಇರುತ್ತದೆ. ಆಯ್ದುಕೊಂಡು ತಿನ್ನುವ ಸ್ವಾತಂತ್ರ್ಯ ನಿಮ್ಮದು. ನಾನು ಕಂಡಂತೆ ಈ ಸಮ್ಮೇಳನದಲ್ಲಿ ಜನಸ್ತೋಮದ ಪ್ರೋತ್ಸಾಹವು ಸಂಖ್ಯೆಗಳಲ್ಲಿ ವ್ಯಕ್ತವಾದದ್ದು ಮೂರು ಶಾಖೆಗಳಲ್ಲಿ ಮಾತ್ರ: 1) ಊಟ-ತಿಂಡಿ, ಸಿಕ್ಕಿದರೆ ಟೀ-ಕಾಫಿ. 2) ಚಲನಚಿತ್ರ ಸಂಗೀತ 3) ಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌.

ಸಮ್ಮೇಳನದ ಮೊದಲ ದಿನ ಧೋ ಎಂದು ಮಳೆ ಸುರಿದು ಪಿರಿಪಿರಿಯಾಯಿತು. ಎರಡನೆ ದಿನ ಮಳೆ ಕಡಿಮೆಯಾಗಿ ಮೂರನೆ ದಿನ ಸಮ್ಮೇಳನ ನೋಡಲೋ ಎಂಬಂತೆ ಬಾಲ್ಟಿಮೋರ್‌ ಆಕಾಶದಲ್ಲಿ ಸೂರ್ಯನೂ ಇಣುಕಿದನು.

ಕಡೆಯ ದಿನದ ಕಾರ್ಯಕ್ರಮಗಳ ಮಹಾಪೂರದಲ್ಲಿ ಎಸ್‌.ಎಲ್‌.ಭೈರಪ್ಪ ಅವರೊಂದಿಗೆ ನಡೆದ ಸಂವಾದ ಸತ್ವಪೂರ್ಣವಾಗಿತ್ತು. ಇಂಥ ಸಂವಾದ ಬೆಂಗಳೂರಿನಲ್ಲಿ ಏರ್ಪಾಟಾದರೆ ಹೇಗಿರುತ್ತದೆ ಎಂದು ಯೋಚಿಸುತ್ತಿದ್ದೆ. ವಿವಿಧ ಕನ್ನಡಕೂಟಗಳು ಸಾದರಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ರಸನಿಮಿಷಗಳನ್ನು ಒದಗಿಸಿದವು.

ಗುರುಕಿರಣ್‌ ತಂಡದ ಫ್ಯೂಷನ್‌ ಮ್ಯುಸಿಕ್‌ನಲ್ಲಿ ತರತರಹದ ಹಾಡುಗಳು ಮೂಡಿಬಂದವು. ನಡುವೆ ಕನ್ನಡ ಶಾಸಕರೊಬ್ಬರು ತಮ್ಮ ಅಣಕುಧ್ವನಿಯಲ್ಲಿ ನಾಯಿಮರಿಗೂ ತಿಂಡಿ ಹಾಕಿದರೆ ನಿಮ್ಮ ತಾರಾ -ಮೂಡಲ ಮನೆಯ ಮುತ್ತಿನ ನೀರಿನ ಹಾಡಿನ ಎರಕ ಹೊಯ್ದರು.

ಪೂಜಿಸಲೆಂದೇ ಹೂಗಳ ತಂದೆ ಎನ್ನುವಂಥ ಹಾಡುಗಳು ಬಂದಾಗ ಯುವಜನಾಂಗ ಸಪ್ಪಗಾಗುತ್ತಿತ್ತು. ಹುಡುಗ ಹುಡುಗ ಮುದ್ದಿನ ಹುಡುಗ ಪ್ರೀತಿ ಮಾಡೋಕು ಕಂಜೂಸ್‌ ಬುದ್ಧಿ ಬೇಕಾ... ಬಗೆಯ ಸ್ಟೆಪ್ಸ್‌ ಹಾಕುವ ಸಂಗೀತ ಬಂದಾಗ ವಯಸ್ಸಾದವರು ಆಕಳಿಸುತ್ತಿದ್ದರು. ಹೊರಗೆ ಬಂದು ಒಂದು ಗುಟುಕು ಕಾಫಿ ಹೀರೋಣವೆಂದರೆ ಎಲ್ಲಿದೆ ಕಾಫಿ?

ನುಡಿ ಹಬ್ಬದ ಚಿತ್ರಪಟಗಳು :

ಮತ್ತೆ ಸಿಗೋಣ - 3ನೇ ದಿನ

ಮೆರವಣಿಗೆಯ ನೋಟ- 2ನೇ ದಿನ

ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ

ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?

ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಪೂರ್ವ ಸಿದ್ಧತೆBe a patronate! Use .in e-mailPost Your Views

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more