ಕಾವೇರಿಗರೇ, ನೀವು ಊಟ ಮಾಡಿದಿರಾ?


ಹಾಗೆಂದು ಸಮ್ಮೇಳನದಲ್ಲಿ ಯಾವ ನ್ಯೂನತೆಯೂ ಇರಲಿಲ್ಲವೆಂದಲ್ಲ. ಅಲ್ಲಿ ಇಲ್ಲಿ ಯೋಜನೆಗಳನ್ನು ರೂಪಿಸುವಲ್ಲಿ, ಕಾರ್ಯಗತಗೊಳಿಸುವಲ್ಲಿ ಕೆಲವು ಲೋಪ ದೋಷಗಳಿದ್ದವು. ಮೊದಲ ಬಾರಿಗೆ ಇಂಥ ದೊಡ್ಡ ಪ್ರಮಾಣದ ಕೆಲಸವನ್ನು ಹಮ್ಮಿಕೊಂಡಾಗ ಸಹಜವಾಗಿ ಉಂಟಾಗುವ ಸಣ್ಣ ಪುಟ್ಟ ಕೊರತೆಗಳು ಇದ್ದವು. ಆದರೆ ಅವನ್ನೆಲ್ಲ ಮುಚ್ಚಿ ಹಾಕುವಷ್ಟು ಕಾಳಜಿ, ಕಳಕಳಿ, ಸೌಹಾರ್ದವನ್ನು ತೋರಿಸಿದ್ದಿರಿ ನೀವು. ಅಕ್ಕ, ತಂಗಿಯರ ಮನೆಯಲ್ಲಿ ಯಾರಾದರೂ ಸಾರಿಗೆ ಉಪ್ಪು ಹೆಚ್ಚು ಅಂತ ದೂರುತ್ತಾರಾ? ನಾಲಿಗೆಗೆ ಯಾಕೋ ಉಪ್ಪು ಜಾಸ್ತಿ ಅಂತ ಗೊತ್ತಾದರೂ ಅದು ಮನಸ್ಸಿನವರೆಗೂ ತಲುಪುವುದೇ ಇಲ್ಲ!

ಹಾಗೇ ಇಲ್ಲೂ. ನಾವು ಆರಾಮವಾಗಿ ಹರಟೆ ಹೊಡೆಯುತ್ತಾ ಸಭಾಂಗಣದ ತುಂಬ ಸಡಗರದಲ್ಲಿ ಓಡಾಡುತ್ತಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿಯುತ್ತಾ, ಮೆಲುಕು ಹಾಕುತ್ತಾ, ಸಂತೋಷಿಸುತ್ತಿರುವಾಗ ನೀವು ಹೊರಗೆ ಹೋಟಲಿಗೆ ಹೋಗಿ ಬರುವ ಬಸ್ಸಿಗೆ ಜನರನ್ನು ಹತ್ತಿಸುತ್ತಾ, ಬಸ್ಸು ತುಂಬಿ ಬಾಕಿ ಉಳಿದ ಜನರಿಗೆ ‘‘ಸದ್ಯದಲ್ಲೇ ಇನ್ನೊಂದು ಬಸ್ಸು ಬರುತ್ತೆ’ ಅಂತ ನಗುನಗುತ್ತಾ ಸಮಾಧಾನ ಹೇಳುತ್ತಾ, ಊಟದ ಮನೆಯಲ್ಲಿ ವಿವಿಧ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಾ ವಾಕಿ-ಟಾಕಿ ಹಿಡಿದು ಪರಸ್ಪರ ಮಾತಾಡಿಕೊಳ್ಳುತ್ತಾ ಎಲ್ಲವನ್ನೂ ಸಂಭಾಳಿಸುತ್ತಿದ್ದಿರಿ! ನೀವೆಲ್ಲ ಊಟ ಯಾವಾಗ ಮಾಡಿದಿರೋ! ವೇದಿಕೆಯ ಮೇಲೆ ಏನು ನೋಟ ತಾನೆ ನೋಡಲಾದೀತು! ಇಷ್ಟಾದರೂ ನಿಮ್ಮ ದನಿಯಲ್ಲಿ ಸ್ನೇಹದ ಜೇನು, ಕಣ್ಣಲ್ಲಿ ಆತ್ಮೀಯತೆಯ ಹೊಳಪು, ‘ನೀವೂ ನಮ್ಮ ಕನ್ನಡಿಗರೇ’ ಎಂಬ ಅಭಿಮಾನ! ಸಮ್ಮೇಳನದ ಉಳಿದ ಎಲ್ಲ ರಸಮಯ ಸಂದರ್ಭಗಳನ್ನೂ ಮರೆಯಬಹುದು. ಆದರೆ ಈ ಪ್ರೀತಿಯನ್ನು, ಹೊಕ್ಕುಳಿನ ಹುರಿಯ ಭಾವ ಬಂಧವನ್ನು ಮರೆಯಬಹುದೆ?

ಕೊನೆಯ ದಿನ ರಾತ್ರಿ ನಾವು ಊಟ ಮಾಡುವಾಗ ನಿಮ್ಮ ಒಬ್ಬ ಸ್ವಯಂಸೇವಕರು ‘‘ಇದು ಮದುವೆ ಮನೆ ಇದ್ದ ಹಾಗೆ. ಶುಕ್ರವಾರ ವರಪೂಜೆ, ಶನಿವಾರ ಧಾರೆ, ಈವತ್ತು ಬೀಗರೌತಣ. ನಾವು ಮಾಡಿದ ಹತ್ತು ಐಟಂಗಳಲ್ಲಿ ಮೂರು ಚೆನ್ನಾಗಿಲ್ಲದೆ ಇದ್ದಿರಬಹುದು. ಆದರೆ ನೀವು ಅದಕ್ಕೆ ಗಮನ ಕೊಡದೆ ಚೆನ್ನಾಗಿರುವ ಏಳು ಐಟಂಗಳನ್ನು ಮಾತ್ರ ನೆನಪಿನಲ್ಲಿಡಿ’’ ಅಂತ ಮೈಕಿನಲ್ಲಿ ಹೇಳಿದರು. ನಾನು ಅವರನ್ನು ಹತ್ತಿರ ಕರೆದು ಹೇಳಿದೆ ‘‘ಎಷ್ಟು ಐಟಂ ಚೆನ್ನಾಗಿತ್ತು ಅಥವಾ ಚೆನ್ನಾಗಿರಲಿಲ್ಲ ಅನ್ನೋದು ಮುಖ್ಯವಲ್ಲ. ನೀವು ಪ್ರೀತಿಯಿಂದ ಬಡಿಸಿದಿರಿ ನೋಡಿ, ಅದು ಮಾತ್ರ ಮುಖ್ಯ’’.

ಆ ಮೂರು ದಿನಗಳ ಪ್ರೀತಿಯ ಆತಿಥ್ಯಕ್ಕೆ ನಾವೆಲ್ಲರೂ ಆಭಾರಿಗಳು.

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ಪೂರ್ವ ಸಿದ್ಧತೆ Be a patronate! Use .in e-mail Post Your Views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+