ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕೆಯ ಕವಿಗೋಷ್ಠಿಯ ತುಂಬ ಭಾರತದ ಕವಿಗಳೇ!

By Staff
|
Google Oneindia Kannada News

ಇಲ್ಲಿ ನವೋದಯ, ನವ್ಯ ಹಾಗೂ ಹನಿಗವನಗಳೆಲ್ಲವೂ ಮೂಡಿ ಬಂದದ್ದೊಂದು ವಿಶೇಷತೆ. ಭಟ್ಟರು, ಚಂಪ ಹಾಗೂ ಕಣವಿಯವರೆಲ್ಲರೂ ಚಿಕ್ಕ ಕವಿತೆಗಳು ಮತ್ತು ಚುಟುಕಗಳನ್ನೋದಿದರು. ಸಮನ್ವಯ ಕವಿ ಚೆನ್ನವೀರ ಕಣವಿಯವರು ಕುವೆಂಪು ಬೇಂದ್ರೆಯವರ ಕವಿತೆಗಳನ್ನೂ, ಮಾತುಗಳನ್ನೂ ನೆನೆಸಿಕೊಂಡರು. ವಿದೇಶದಲ್ಲಿರುವವರಿಗೆ ಇಂತಹ ಸಮ್ಮೇಳನಗಳು ಬಹಳ ಮುಖ್ಯ ಎಂದ ಕಣವಿಯವರು, ಇದು ವಿಶ್ವ ಕನ್ನಡಿಗರಿಗೊಂದು ಕೈದೀವಿಗೆ ಎಂದು ಕರೆದರು.

ಭಾಷಾ ಬಾಂಧವ್ಯವು ರಕ್ತ ಸಂಬಂಧದಷ್ಟು ಪವಿತ್ರವಾದದ್ದು ಎಂದು ಅಭಿಪ್ರಾಯ ಪಟ್ಟರು. ಬಾನಂಗಳದಲ್ಲಿ ಎಷ್ಟೇ ತಾರೆಗಳಿದ್ದರೂ ಅಲ್ಲಿ ಜಾಗಕ್ಕೆ ಕೊರತೆಯಿಲ್ಲ ಆದ್ದರಿಂದ ಈ ಕವಿ ಗೋಷ್ಠಿಯಲ್ಲಿ ಇನ್ನೂ ಹೆಚ್ಚು ಕವಿಗಳು ಭಾಗವಹಿಸಬೇಕಿತ್ತು ಎಂದು ಸ್ವಲ್ಪ ನೋವನ್ನು ವ್ಯಕ್ತಪಡಿಸಿ ತಮ್ಮ ಅಧ್ಯಕ್ಷ ಭಾಷಣವನ್ನು ಮುಗಿಸಿದರು.

ಯಾವುದೇ ಕಾರ್ಯಕ್ರಮವೂ ಸಮಯದ ಅಭಾವದಿಂದ ಮೊಟಕುಗೊಂಡರೆ, ನೆರೆದವರಿಗೆಲ್ಲರಿಗೂ ಸ್ವಲ್ಪ ನಿರಾಸೆಯೇ. ಕೆಲವೊಮ್ಮೆ ಅಂತಹ ಕಾರ್ಯಕ್ರಮಗಳು ಕಾಟಾಚಾರಕ್ಕೆ ಮಾಡಿದ್ದೇನೊ ಎಂದು ಪ್ರಶ್ನಿಸಬೇಕಾಗುತ್ತದೆ. ವಿಶ್ವ ಕನ್ನಡ ಸಮ್ಮೇಳನದ ಸ್ವಯಂಸೇವಕರೆಲ್ಲರೂ ಹಗಲೂ ರಾತ್ರಿ ದುಡಿದಿದ್ದಾರೆ. ಮುಂದಿನ ಸಮ್ಮೇಳನದ ಕಾರ್ಯಕರ್ತರೂ ದುಡಿಯುತ್ತಾರೆ. ಕಾರ್ಯಕ್ರಮಗಳ ಸಮಯವನ್ನು ನಿಗದಿ ಮಾಡುವಾಗ ಸ್ವಲ್ಪ ಹೆಚ್ಚು ನಿಗಾವಹಿಸಿದರೆ ಸೂಕ್ತವೇನೊ.

ಕವಿಗೋಷ್ಠಿಯಲ್ಲಿ ಎಲ್ಲರ ಸೆಳೆದದ್ದು ಚಂಪಾರ ಪದ್ಯ. ಅದ್ರಲ್ಲೂ ಚಂಪಾರ ಚಪ್ಲೀ ಹೆಂಗ ಮರ್ಯಾಕ ಆಕ್ಕತಿ?

ನುಡಿ ಹಬ್ಬದ ಚಿತ್ರಪಟಗಳು :
ಕೂತಲ್ಲಿಯೇ ಸಮ್ಮೇಳನ ಕಾಣಿರಿ!
ಸಡಗರ ಮತ್ತು ಸಂಭ್ರಮ-3ನೇ ದಿನ
ಮೆರವಣಿಗೆಯ ನೋಟ - 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X