ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಪಿ.ಬಾಲಸುಬ್ರಹ್ಮಣ್ಯಂ.. ಓಹ್‌.. ಯಾರದು?

By Staff
|
Google Oneindia Kannada News
S.P.Balasubramanyamಶನಿವಾರ ರಾತ್ರಿ ಊಟ ಮಾಡುತ್ತಿದ್ದ ನನ್ನೆದುರಿಗಿದ್ದ ಗಂಡ ಹೆಂಡತಿಯ ಸಂಭಾಷಣೆ....

ಗಂಡ : ಇವತ್ತು ರಾತ್ರಿ ಏನು ಕಾರ್ಯಕ್ರಮ ಇದೆ ?

ಹೆಂಡತಿ : ಎಸ್‌.ಪಿ.ಬಾಲಸುಬ್ರಹ್ಮಣ್ಯಮ್‌ ದಂತೆ.

ಗಂಡ : ಓಹ್‌...ಯಾರದು ?

ಹೆಂಡತಿ : He is a big singer in Kannada. These guys must have paid him quite a bit.

**

ಮೊನ್ನೆ ಸಮ್ಮೇಳನದಲ್ಲಿ ನನ್ನ ಬರಹಗಾರ ಸ್ನೇಹಿತ ಗುರುಗಳೊಬ್ಬರು ಕಾಫಿಗಾಗಿ Starbucks ಅಂಗಡಿಯ ಎದುರು ಕ್ಯೂನಲ್ಲಿ ನಿಂತದ್ದು - ಕೇವಲ ಒಂದೂವರೆ ಘಂಟೆ!

**

ಸುಗಮ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಇಬ್ಬರು ಮಹಿಳೆಯರ ನಡುವೆ ಮಾತುಕತೆ...

ಮಹಿಳೆ 1 : ನೋಡ್ರಿ ಈ ಸಮ್ಮೇಳನಕ್ಕೆ ಅಂತ ಒಳ್ಳೆ nailpolish, pendant ಎಲ್ಲ ತೆಗೆದುಕೊಂಡು ಬಂದಿದ್ದೆ. ಇವತ್ತು ಹಾಕಿಕೊಳ್ಳಕ್ಕೇ ಮರೆತುಹೋಯ್ತು.

ಮಹಿಳೆ 2 : ಹೋಗ್ಲಿ ಬಿಡಿ ಪರ್ವಾಗಿಲ್ಲ, ನಾನು ಎಷ್ಟೊಂದು ಮರೆತುಬಿಟ್ಟೆ.

**

ಸಾಹಿತ್ಯ ಗೋಷ್ಠಿಯಿಂದ ಆಚೆ ಬರುತ್ತಿದ್ದಾಗ ಮಹಿಳೆಯೊಬ್ಬರು ವಿಜಯ ಕರ್ನಾಟಕದ ಸಂಪಾದಕರಾದ ವಿಶ್ವೇಶ್ವರ ಭಟ್ಟರನ್ನು ಮಾತನಾಡಿಸುತ್ತ....

ಮಹಿಳೆ : ನೀವು ‘ದಟ್ಸ್‌ ಕನ್ನಡ ಡಾಟ್‌ಕಾಮ್‌’ನಲ್ಲಿ ಬರೆಯುತ್ತೀರ ಅಲ್ವಾ ?

ವಿ. ಭಟ್‌ (ನಕ್ಕು) : ಹೌದು.

ಮಹಿಳೆ : ಮತ್ತೆ ಅಲ್ಲಿ ಫೋಟೋದಲ್ಲಿ ನೀವು ಬೇರೇ ತರಹನೇ ಕಾಣ್ತೀರ....

ವಿ. ಭಟ್‌ (ಮತ್ತೆ ನಕ್ಕು) : ಅದು ನಾನು ತುಂಬ ಚಿಕ್ಕವನಿದ್ದಾಗ ತೆಗೆಸಿಕೊಂಡದ್ದು

**

ರಾತ್ರಿಯ ಮುಖ್ಯ ಕಾರ್ಯಕ್ರಮಗಳಿಗೆ ಮುಂಚೆ ಊಟ. ಊಟಕ್ಕೆ ಹೊರಾಡುವ ಮುಂಚೆ ಸಭಾಂಗಣದ ಮುಂದಿನ ಹತ್ತಾರು ಸಾಲುಗಳ ಕುರ್ಚಿಗಳ ತುಂಬ ಟವೆಲ್ಲು, ಕರ್ಚೀಫು, ಪೇಪೆರ್ಗಳನ್ನಿಟ್ಟು ಕುರ್ಚಿಗಳನ್ನು ‘ರಿಸೆರ್ವ್‌’ ಮಾಡಿದ್ದ ಜನ ನೂರಾರು. ಪಾಪ ನಿಯತ್ತಿನಿಂದ ಊಟ ಮುಗಿಸಿ, ಒಳ್ಳೆಯ ಸೀಟು ಹಿಡಿಯಲು ಬಂದ ಕಲಾಪ್ರೇಮಿಗಳಿಗೆಲ್ಲ ಹಿಂದಿನ ಸಾಲುಗಳೇ ಗತಿ.

**

ಶನಿವಾರ ರಾತ್ರಿ ಮುಖ್ಯ ಕಾರ್ಯಕ್ರಮಕ್ಕೆ ಮುಂಚೆ ಸಭಾಂಗಣದಲ್ಲಿ....

ಹೆಂಡತಿ : ರೀ, ಎಸ್‌.ಪಿ ಕಾರ್ಯಕ್ರಮಕ್ಕೆ ತುಂಬ ಜನ ಇರ್ತಾರೆ. ಬೇಗ ಊಟ ಮುಗಿಸಿಕೊಂಡು ಬಂದು ಮುಂದೆ ಕೂರಬೇಕು.

ಗಂಡ : ಅಯ್ಯೋ ಬಿಡೆ, ಎಸ್‌.ಪಿ ಕಾರ್ಯಕ್ರಮ್ದಲ್ಲಿ ಮುಂದೆ ಕೂತು ಏನು ಮಾಡ್ತೀಯ ? ಸಂಗೀತಾ ಕೇಳಕ್ಕೆ ಕಿವಿ ಇದ್ರೆ ಸಾಕು, ಹಿಂದೇನೆ ಕೂತ್ರೂ ನಡೆಯತ್ತೆ. ಅಚ್ಚುಕಟ್ಟಾಗಿ ಊಟ ಮಾಡಿ ಬರೋಣ.

**

ಎಂ.ಡಿ.ಪಲ್ಲವಿಯ ಕಾರ್ಯಕ್ರಮದಲ್ಲಿ ಜಿ.ಪಿ.ರಾಜರತ್ನಂರವರ ‘ಮಡಿಕೇರೀಲಿ ಮಂಜು’ ಹಾಡಿನ ನಡುವೆ ನನ್ನ ಪಕ್ಕದಲ್ಲಿದ್ದ ಮಹಿಳೆ ಮತ್ತು ನನ್ನ ನಡುವಿನ ಸಂಭಾಷಣೆ....

ಮಹಿಳೆ : ಏನು ಹಾಡು ಇದು ?

ನಾನು : ಒಂದು ಭಾವಗೀತೆ

ಮಹಿಳೆ : ಮಡಿಕೇರಿ ಅಂತ ಹೇಳ್ತಾ ಇದ್ದಾರೆ....

ನಾನು : ಹೌದು, ಅದರ ವರ್ಣನೆ ಇದೆ.

ಮಹಿಳೆ : ಅದು ಕಾವೇರಿ ಹುಟ್ಟೋ ಜಾಗ ಅಲ್ವಾ ?

ನಾನು : ಕಾವೇರಿ ಹುಟ್ಟೋದು ಆ ಜಿಲ್ಲೆಯಲ್ಲಿ, ಮಡಿಕೇರಿಗೆ ಸ್ವಲ್ಪ ಹತ್ತಿರ

ಮಹಿಳೆ : ಅದೇ ಅದೇ.....(ನಂತರ ಅವರ ಗಂಡನ ಕಡೆ ತಿರುಗಿ) This song is about the birthplace of river Cauvery.

ನುಡಿ ಹಬ್ಬದ ಚಿತ್ರಪಟಗಳು :
ಕೂತಲ್ಲಿಯೇ ಸಮ್ಮೇಳನ ಕಾಣಿರಿ!
ಸಡಗರ ಮತ್ತು ಸಂಭ್ರಮ-3ನೇ ದಿನ
ಮೆರವಣಿಗೆಯ ನೋಟ - 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X