• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಕೆ ಹೋರಾಡು ನನ್ನ ಆನಂದಾ!

By Staff
|

ಆಮೇಲೆ ಅವರು ತಮ್ಮ ಮಾತಿನ ಇಂಗಿತ ವಿವರಿಸಿದರು. ನನಗೆ ಕಾರ್ನಾಡರು ಯಾಕೆ ಗೊತ್ತಿದ್ದರು ಅಂದರೆ ಅವರ ನಾಟಕಗಳು ಇಂಗ್ಲಿಷಿಗೆ ಅನುವಾದಗೊಂಡಿದ್ದವು. ಕುವೆಂಪು ಅವರ ಕೃತಿಗಳು ಅನುವಾದಗೊಂಡಿದ್ದವೋ ಏನೋ ಗೊತ್ತಿಲ್ಲ. ಆದರೆ ಅವು ಸುಲಭವಾಗಿ ಸಿಗುತ್ತಿರಲಿಲ್ಲ. ನಾನು ಪ್ರತಿಯಾಂದು ಭಾಷೆಯ ಲೇಖಕರ ಕುರಿತೂ ಕುತೂಹಲ ಇಟ್ಟುಕೊಂಡಿದ್ದೇನೆ. ಹಾಗೆ ನೋಡಿದರೆ ನಮ್ಮ ದೇಶೀಯ ಭಾಷೆಗಳಲ್ಲೇ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಮೊನ್ನೆ ಮೊನ್ನೆ ಪ್ರತಿಭಾ ನಂದಕುಮಾರ್‌ ಪದ್ಯದ ಅನುವಾದ ಓದಿದೆ. ಇಂಡಿಯಾದಲ್ಲೇ ಕವಿತೆ ಬರೆಯುತ್ತಿರುವವರ ಪೈಕಿ ಅವರು ಬೆಸ್ಟು. ಶಶಿ ದೇಶಪಾಂಡೆ ಇಂಗ್ಲಿಷಿನಲ್ಲಿ ಬರೆಯುತ್ತಾರೆ, ಆದರೆ ಅವರ ಬರಹಗಳಿಗೆ ಅಂಥ ಸತ್ವವಿಲ್ಲ. ಅವರಿಗಿಂತ ಎಂಕೆ ಇಂದಿರಾ ಬರೆದ ಫಣಿಯಮ್ಮ ಬೆಟರ್‌.

ತೇಜಸ್ವಿಯ ಕತೆಯಾಂದನ್ನು ನಾನು ಅನುವಾದದಲ್ಲಿ ಓದಿದೆ. ದೆವ್ವಗಳಿದ್ದಾವೋ ಇಲ್ಲವೋ ಅಂತ ಸ್ಮಶಾನದಲ್ಲಿ ಕಾಯುತ್ತೂ ಕೂರುವ, ಅವರನ್ನು ಕೊನೆಗೆ ನಾಯಿ ಹಿಂಬಾಲಿಸಿಕೊಂಡು ಬರುವ ವಿಚಿತ್ರ ಕತೆ ಅದು. ಆದರೆ ನನಗೆ ಅನುವಾದದಲ್ಲಿ ಅದು ಇಷ್ಟವಾಗಿರಲಿಲ್ಲ. ಇಲ್ಲಿಗೆ ಬಂದಾಗ ಗೆಳೆಯರೊಬ್ಬರು ಅದನ್ನು ಸರಳವಾಗಿ ವಿವರಿಸಿದರು. ಎಂಥ ಗ್ರೇಟ್‌ ಕತೆ ಅನ್ನಿಸಿತು. ಕಾರಂತರ ಚೋಮನನ್ನೂ ಅನುವಾದದಲ್ಲಿ ಓದಿದ್ದೇನೆ. ಚೋಮಾ’ಸ್‌ ಡ್ರಮ್‌ ಅಂತೇನೋ ಅದು ಅನುವಾದಗೊಂಡಿದೆ. ಅದರ ಮೊದಲ ವಾಕ್ಯ, ಕತ್ತಲೋ ಕತ್ತಲು ಅನ್ನುವುದು ಇಂಗ್ಲಿಷಿಗೆ ಬರುವ ಹೊತ್ತಿಗೆ Its pitch dark ಅಂತಾಗಿತ್ತು. ಈಗೀಗ ಕೊಂಚ ಕನ್ನಡ ಕಲಿತ ನಂತರ ಅವರೆಡರ ವ್ಯತ್ಯಾಸ ಸ್ಪಷ್ಟವಾಗುತ್ತಿದೆ.

ಹೀಗೆ ಅವರು ಸ್ಪಷ್ಟವಾಗಿ ಮಾತಾಡುತ್ತಾ ಹೋದರು. ಇಂಥ ಪುಟ್ಟ ಸಭೆಗಳಲ್ಲೇ ಸತ್ಯ ಹೊರಬೀಳುತ್ತದೆ. ಗುಂಪುಗುಂಪಾಗಿ ಸೇರಿದಾಗ ಬರೀ ಪೊಲಿಟಿಕಲ್‌ ಕರೆಕ್ಟ್‌ನೆಸ್‌ ಎಂಬ ಸವಕಲು ಪದಕ್ಕೆ ಅರ್ಥ ತುಂಬುವುದಕ್ಕೆ ನಾವು ಪಾಡುಪಡುತ್ತಿರುತ್ತೇವೆ.

ಕೇರಳದಿಂದ ಬಂದ ಮತ್ತೊಬ್ಬ ಲೇಖಕರ ಪೈಕಿ ಕನ್ನಡ ಸಾಹಿತ್ಯ ಪರಿಷತ್ತು ಮೂರ್ಖ ಕೆಲಸ ಮಾಡುತ್ತಿದೆ. ಇಂಗ್ಲಿಷ್‌ ಬೋರ್ಡುಗಳಿಗೆ ಮಸಿ ಬಳಿಯುವುದು, ಎಲ್ಲಾ ಬೋರ್ಡುಗಳೂ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳುವುದು ಒಂದು ಭಾಷೆಯನ್ನು ಉಳಿಸುವ, ಬೆಳೆಸುವ ಕ್ರಮ ಅಲ್ಲ. ಅವರ ವಾದ ಎಷ್ಟು ಸಮರ್ಥವಾಗಿತ್ತು ಅಂದರೆ ಪರಭಾಷಿಗರಿಗೆ ಕನ್ನಡ ಕಲಿಸುವ ಮೊದಲು ನೀವು ಕನ್ನಡಿಗರಿಗೇ ಕನ್ನಡ ಓದುವುದಕ್ಕೆ ಬರೆಯುವುದಕ್ಕೆ ಕಲಿಸಬೇಕು. ಕರ್ನಾಟಕದಲ್ಲಿ ಅಕ್ಪರತೆಯ ಪ್ರಮಾಣ ಎಷ್ಟಿದೆ ಅಂತ ಅವರು ಕೇಳಿದ್ದಕ್ಕೆ ನಮ್ಮಲ್ಲಿ ಸರಿಯಾದ ಉತ್ತರ ಇರಲಿಲ್ಲ. ಮೊದಲು ಅನಕ್ಷರಸ್ತ ಕನ್ನಡಿಗರಿಗೆ ಅಕ್ಷರ ಕಲಿಸಿ, ಅವರು ಕನ್ನಡ ಓದುವಂತೆ ಮಾಡಿ. ಆಮೇಲೆ ಪರಭಾಷಿಗರು ಕನ್ನಡ ಕಲಿಯುವಂತೆ ಮಾಡೋಣ. ಅರ್ಧಕ್ಕರ್ಧದಷ್ಟು ಮಂದಿಯಾದರೂ ಭಾಷೆ ಗೊತ್ತಿಲ್ಲದವರು ಇದ್ದಾರೆ ತಾನೇ? ಅವರು ಕನ್ನಡ ಕಲಿತು ಓದೋಕೆ ಶುರುಮಾಡಿದರೆ ಸಾಕು, ಕನ್ನಡ ಉದ್ಧಾರವಾಗುತ್ತದೆ.

ಅವರ ಮತ್ತೊಂದು ವಾದ ಮತ್ತೂ ಚೆನ್ನಾಗಿತ್ತು. ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಬೇಕು. ಒಬ್ಬ ಕನ್ನಡ ಲೇಖಕ ರಾಷ್ಟ್ರಕ್ಕೆ, ದೇಶವಿದೇಶಗಳಿಗೆ ಪರಿಚಯ ಆದನೆಂದರೆ ಆ ಭಾಷೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಿತು ಅಂತಲೇ ಅರ್ಥ. ಯುರೋಪಿನ ಸಣ್ಣಪುಟ್ಟ ಭಾಷೆಗಳೆಲ್ಲ ಬದುಕಿರೋದು ಅಲ್ಲಿನ ಸಾಹಿತ್ಯದಿಂದಲೇ. ಸ್ಪ್ಯಾನಿಶ್‌ ಭಾಷೆ ಮಾತಾಡುವ ಮಂದಿ ಜಗತ್ತಿನಲ್ಲಿ ಕನ್ನಡಿಗರಿಗಿಂತ ಕಡಿಮೆ. ಆದರೆ ಮಾರ್ಕೆಸ್‌ನಿಂದಾಗಿ ಇವತ್ತು ಎಲ್ಲರಿಗೂ ಸ್ಪ್ಯಾನಿಶ್‌ ಬಗ್ಗೆ ಗೊತ್ತು. ನೊಬೆಲ್‌ ಪ್ರಶಸ್ತಿ ಗೆದ್ದವರ ಪಟ್ಟಿ ನೋಡಿದರೆ ಅರ್ಧಕ್ಕಿಂತ ಹೆಚ್ಚು ಮಂದಿ ಇಂಗ್ಲಿಷ್‌ ಗೊತ್ತಿಲ್ಲದವರೇ ಇದ್ದಾರೆ. ಅವರೆಲ್ಲ ಅನುವಾದಗೊಂಡು ನೊಬೆಲ್‌ ಪ್ರಶಸ್ತಿ ಪಡೆದಿದ್ದಾರೆ.

ಕುವೆಂಪು ಸಾಧನೆಯೇನೂ ಕಡಿಮೆ ಅಲ್ಲ. ಅವರು ಬರೆಯುತ್ತಿದ್ದಾಗಿನ ಪರಿಸ್ಥಿತಿಯನ್ನು ನಾನು ಅಧ್ಯಯನ ಮಾಡಿದ್ದೇನೆ. ಹೇಗೆ ಅವರು ಏಕಕಾಲಕ್ಕೆ ಅನಕ್ಪರಸ್ತರ ಘನತೆಯನ್ನು ಎತ್ತಿಹಿಡಿಯುತ್ತಲೇ, ಅಕ್ಪರಸ್ತರ ಪ್ರೀತಿಯನ್ನು ಸಂಪಾದಿಸಿದರು ಅನ್ನೋದು ಕುತೂಹಲಕಾರಿ. ಅವರು ಆಡುಭಾಷೆಯಲ್ಲಿ ಬರೆದಿದ್ದರೆ ಅದನ್ನು ಸಾಹಿತ್ಯಕ್ಪೇತ್ರ ಖಂಡಿತಾ ತಿರಸ್ಕರಿಸುತ್ತಿತ್ತು. ಆದರೆ ಯಾವಾಗ ಅವರು ಶಿಷ್ಠ ಭಾಷೆಯಲ್ಲಿ ಘನವಾಗಿ ಬರೆದರೋ ಆಗ ಅವರ ಒಟ್ಟು ವ್ಯಕ್ತಿತ್ವಕ್ಕೂ ಒಂದು ಮೆರುಗು ಬಂತು. ಮಾತಾಡುವ ಮುಂಚೆ ಮಾತಾಡುವುದಕ್ಕೆ ಬೇಕಾದ ಘನತೆಯನ್ನು ಅ-ಕಾರಯುತ ನಿಲುವನ್ನು ಗಳಿಸಿಕೊಳ್ಳುವುದು ಮುಖ್ಯ. ಹೇಳುವವನ ವ್ಯಕ್ತಿತ್ವ ಕೂಡ ಆಡುವ ಮಾತಿಗೆ ತೂಕ ತರುತ್ತದೆ.

******

ಈ ದೃಷ್ಟಿಯಿಂದ ನೋಡಿದಾಗ ಅಕ್ಕ ಸಮ್ಮೇಳನ ಸಾಂಸ್ಕೃತಿಕವಾಗಿ ತುಂಬ ಮುಖ್ಯವಾಗುತ್ತದೆ. ಕನ್ನಡವೆಂಬ ಭಾಷೆಯಾಂದಿದೆ. ಅದನ್ನು ಐದೋ ಆರೋ ಕೋಟಿ ಮಂದಿ ಮಾತಾಡುತ್ತಿದ್ದಾರೆ. ಅಲ್ಲಿ ಶ್ರೇಷ್ಠ ಮನಸ್ಸುಗಳಿವೆ, ಪ್ರತಿಭಾವಂತರಿದ್ದಾರೆ, ಅದ್ಭುತವಾದ ಕಲಾವಿದರಿದ್ದಾರೆ ಅನ್ನುವುದನ್ನು ಸಮರ್ಥವಾಗಿ ಹೇಳಲಿಕ್ಕಾಗದೇ ಹೋದರೂ, ಕನ್ನಡವೆಂಬ ಭಾಷೆಯಿದೆ ಅನ್ನುವುದಾದರೂ ಎಲ್ಲರಿಗೂ ತಿಳಿಯುವಂತೆ ಮಾಡುತ್ತದೆ ಈ ಸಮ್ಮೇಳನ.

ಅಮೆರಿಕಕ್ಕೆ ಹೋಗಿ ನೆಲೆಸಿರುವ ಕನ್ನಡಿಗರ ಕಷ್ಟವನ್ನೊಮ್ಮೆ ನೋಡಿ. ಅವರು ಅಲ್ಲಿ ಇಂಗ್ಲಿಷ್‌ ಮಾತಾಡುತ್ತಾ, ಇಂಗ್ಲಿಷ್‌ ಬಲ್ಲವರ ಜೊತೆಗೆ ಅವರದೇ ಸಂಗತಿಗಳ ಮೂಲಕ ಸಂವಹನ ಸಾ-ಸುತ್ತಿರಬೇಕು. ಕನ್ನಡಿಗನಿಗೆ ಇಂಗ್ಲಿಷ್‌ ಗೊತ್ತಿದೆ ಅನ್ನುವ ಏಕೈಕ ಕಾರಣಕ್ಕೆ ಇಂಗ್ಲಿಷ್‌ ಪ್ರಜೆ ಸಾಲ್‌ಬೆಲ್ಲೋ ಬಗ್ಗೆ ಮಾತಾಡುತ್ತಾನೆ. ಮಾರ್ಕ್‌ಟ್ವೈನ್‌ ಬಗ್ಗೆ ಮಾತಾಡುತ್ತಾನೆ. ಕುವೆಂಪು, ಕಾರಂತ, ಮಾಸ್ತಿ ಆ ಲೇಖಕರಿಗಿಂತ ಶ್ರೇಷ್ಠವಾಗಿದ್ದನ್ನು ಬರೆದಿದ್ದಾನೆ ಅನ್ನುವುದು ಕನ್ನಡಿಗನಿಗೆ ಗೊತ್ತಿದ್ದರೂ ಆತ ಅವರ ಕುರಿತು ಆ ಅಮೆರಿಕನ್ನನ ಹತ್ತಿರ ಚರ್ಚಿಸುವಂತಿಲ್ಲ. ಯಾಕೆಂದರೆ ಆತ ಕನ್ನಡದ ಲೇಖಕರನ್ನು ಓದಿಲ್ಲ. ಒಂದು ವೇಳೆ ಕನ್ನಡದ ಕೃತಿಗಳು ಇಂಗ್ಲಿಷಿಗೆ ಅನುವಾದಗೊಂಡಿದ್ದರೆ, ಆತನ ಮುಂದೆ ಕನ್ನಡಿಗ ಕಾರಂತರ ಕಾದಂಬರಿಯನ್ನೋ ಕುವೆಂಪು ಕೃತಿಯನ್ನೋ ಇಟ್ಟು, ಮೊದಲು ಇದನ್ನು ಓದು ಅನ್ನಬಹುದಾಗಿತ್ತು. ಅದಕ್ಕೆ ಅವಕಾಶವೇ ಆಗದಂಥ ಪರಿಸ್ಥಿತಿ ಇದೆ.

ಇಂಥ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡಬೇಕು. ಪ್ರತಿ ಸಾಹಿತ್ಯ ಸಮ್ಮೇಳನದಲ್ಲೂ ಕನ್ನಡ ಕೃತಿಗಳ ಇಂಗ್ಲಿಷ್‌ ಅನುವಾದ ಸಿಗಬೇಕು. ಒಂದಷ್ಟು ಪುಸ್ತಕಗಳು ಪ್ಯಾಕೇಜ್‌ ಆಗಿ ಸಿಕ್ಕರಂತೂ ಅದ್ಬುತ.

ಒರಿಸ್ಸಾದ ಮಿತ್ರರು ಹೇಳುವ ಪ್ರಕಾರ ಕನ್ನಡ ಲೇಖಕರ ಇಂಗ್ಲಿಷ್‌ ಅನುವಾದಗಳನ್ನು ಆಯಾ ಭಾಷೆಯ ಶ್ರೇಷ್ಠ ಲೇಖಕರೇ ಮುನ್ನುಡಿ ಬರೆದು ಹರಸಬೇಕು. ಉದಾಹರಣೆಗೆ ಎಂಟಿ ವಾಸುದೇವನಾಯರ್‌ ಕನ್ನಡದ ಅತ್ಯುತ್ತಮ ಹತ್ತು ಪುಸ್ತಕಗಳು ಅಂತ ಪಟ್ಟಿ ಮಾಡಿ ಬಿಡುಗಡೆ ಮಾಡಿದರೆ ಅದನ್ನು ಕೇರಳಿಗರು ಓದುತ್ತಾರೆ. ಅದೇ ರೀತಿ ಕೇರಳದ ಅತ್ಯುತ್ತಮ ಕಾದಂಬರಿಗಳನ್ನು ಶಿವರುದ್ರಪ್ಪ ಕನ್ನಡಿಗರಿಗೆ ಪರಿಚಯಿಸಬಹುದು.

ಅಕ್ಕ ಸಮ್ಮೇಳನ ಕೂಡ ತನ್ನ ಮುಂದಿನ ತಲೆಮಾರಿಗೋಸ್ಕರ ಎಂದು ಪ್ರತಿ ಸಮ್ಮೇಳನದಲ್ಲೂ ಹತ್ತೋ ಇಪ್ಪತ್ತೋ ಕನ್ನಡ ಪುಸ್ತಕಗಳನ್ನು ಇಂಗ್ಲಿಷಿಗೆ ಅತ್ಯುತ್ತಮವಾಗಿ ಅನುವಾದಿಸಿ ಕೊಡುವ ಕೆಲಸ ಮಾಡಬಹುದು. ಆಗ ಸಮ್ಮೇಳನದ ಹೆಸರು, ಉದ್ದೇಶ ಎರಡೂ ಸಾರ್ಥಕವಾಗುತ್ತದೆ.

*****

ಮೊನ್ನೆ ಮೊನ್ನೆ ರಮೇಶ್‌ ‘ಸೈನೈಡ್‌’ ಎಂಬ ಸಿನಿಮಾ ಮಾಡಿದರು. ಅದನ್ನ ಸಾಹಿತಿಗಳಿಗೆ, ಲೇಖಕರಿಗೆ, ಪತ್ರಕರ್ತರಿಗೆ ತೋರಿಸಿದರು. ಆ ಬಗ್ಗೆ ಚರ್ಚೆ ನಡೆಯಿತು. ಮಾತಾಯಿತು, ಕತೆಯಾಯಿತು.

ಹೊಸದು ಬಂದಾಗ, ಹೊಸದನ್ನು ಮಾಡಿದಾಗ ಹೀಗೆ ನಾಲ್ಕು ಮಂದಿಗೆ ತೋರಿಸಿ ಚರ್ಚಿಸುವ ಪ್ರೀತಿ ಮತ್ತು ಆಸಕ್ತಿ ಎಲ್ಲರನ್ನೂ ಇರುತ್ತದೆ.

ಆದರೆ ಒಂದು ಮೈಲಿಗಲ್ಲು ಅನ್ನುವಂಥ ಸಿನಿಮಾ ಮಾಡಿದಾಗ ಅದರ ಬಗ್ಗೆ ಮಾತಾಡುವ ಆಸಕ್ತಿ ಒಬ್ಬ ನಟನಿಗೆ ಯಾಕಿರುವುದಿಲ್ಲ? ತಾನು ಹೇಗೆ ನಟಿಸಿದೆ, ಏನೇನು ಸಿದ್ಧತೆ ಮಾಡಿಕೊಂಡೆ, ಇನ್ನೇನೇನು ಮಾಡಬಹುದಾಗಿತ್ತು? ನಿಜಕ್ಕೂ ಸೊಗಸಾಗಿ ನಟಿಸಿದ್ದೇನಾ ಎನ್ನುವುದನ್ನು ನಟ ಯಾಕೆ ತಿಳಿದುಕೊಳ್ಳುವುದಕ್ಕೆ ಬಯಸುವುದಿಲ್ಲ.

ಒಂದು ವ್ಯತ್ಯಾಸ ಕೇಳಿಕೊಳ್ಳಿ; ಮೊನ್ನೆ ಮೊನ್ನೆ ಕಭಿ ಅಲ್ವಿದ ನಾ ಕೆಹನಾ ಸಿನಿಮಾದ ಪ್ರಿವ್ಯೂ ನಂತರ ಶಾರುಕ್‌ ಖಾನ್‌ ಮತ್ತು ನಿರ್ದೇಶಕ ಮಾಧ್ಯಮದ ಮಿತ್ರರ ಜೊತೆ ಕುಳಿತು ಮೂರು ಗಂಟೆ ಹರಟೆ ಹೊಡೆದರು. ಆ ಪಾತ್ರದ ಬಗ್ಗೆ, ತಾನು ಅದನ್ನು ಸ್ವೀಕರಿಸಿದ ಬಗ್ಗೆ, ಬ್ರಹ್ಮಚಾರಿ ಕರಣ್‌ ಅತ್ಯುತ್ತಮ ಕೌಟುಂಬಿಕ ಸಿನಿಮಾ ನೀಡಲು ಸಾಧ್ಯವಾದ ಬಗ್ಗೆ ಮಾತಾಡಿದರು. ಹೆಣ್ಣು ಮದುವೆ ಸಂಕಷ್ಟಕ್ಕೆ ಸಿಲುಕಿದಾಗ ಏನು ಮಾಡಬೇಕು ಅನ್ನುವ ಬಗ್ಗೆ ವೈವಿಧ್ಯಮಯ ಪ್ರತಿಕ್ರಿಯೆಗಳು ಬಂದವು.

ಚಿತ್ರರಂಗಕ್ಕೆ ಕಾಲಿಟ್ಟು ಇಪ್ಪತ್ತು ವರುಷಗಳ ನಂತರ ‘ಗಂಡುಗಲಿ ಕುಮಾರರಾಮ’ ದಂಥ ಸಿನಿಮಾದಲ್ಲಿ ನಟಿಸಿದ ಶಿವರಾಜ್‌ಕುಮಾರ್‌ ಚಿತ್ರ ಬಿಡುಗಡೆಯ ದಿನವಾಗಲೀ, ಆಮೇಲಾಗಲೀ ಮಾಧ್ಯಮದ ಎದುರು ಕಾಣಿಸಿಕೊಳ್ಳಲೇ ಇಲ್ಲ!

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ

ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?

ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

ಪೂರ್ವ ಸಿದ್ಧತೆ Be a patronate! Use .in e-mail Post Your Views

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more