ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಾವೇರಿಯಿಂದಮೀ ನಯಾಗರಾ ವರೆಗಿರ್ದ ಕನ್ನಡಿಗರ ಈ ಸಮ್ಮೇಳನಂ’

By Staff
|
Google Oneindia Kannada News

Dr. Veerendra Heggade addressing the gathering after inaugurationಬಾಲ್ಟಿಮೋರ್‌(ಅಮೆರಿಕ) : ಶುಕ್ರವಾರ(ಸೆ.1) ಗೋಧೂಳಿಯ ಹೊತ್ತಿನಲ್ಲಿ ಅಂದರೆ ಸುಮಾರು 5.30ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ನಾಲ್ಕನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಚಾಲನೆ ನೀಡಿದರು. ಆ ಸಂದರ್ಭದಲ್ಲಿ ಅಮೆರಿಕಾ ನೆಲದಲ್ಲಿ ಕನ್ನಡ ಧ್ವಜ ಹಾರಾಡಿತು. ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತ್ತು.

ಡಾ.ರಾಜ್‌ ಕುಮಾರ್‌ ವೇದಿಕೆಯ ಮೇಲೆ ತಮ್ಮ ಉದ್ಘಾಟನಾ ಭಾಷಣದಲ್ಲಿ ವೀರೇಂದ್ರ ಹೆಗಡೆ, ಅನಿವಾಸಿ ಕನ್ನಡಿಗರ ಜವಾಬ್ದಾರಿಗಳನ್ನು ನೆನಪಿಸಿದರು. ರಾಜ್ಯದ ಆರ್ಥಿಕ ಬೆಳವಣಿಗೆಗೆ ಅಮೆರಿಕನ್ನಡಿಗರ ಇನ್ನಷ್ಟು ಸಹಕಾರ ಅಗತ್ಯ ಎಂದು ಒತ್ತಿ ಹೇಳಿದರು.

ಭಾಷಣದ ಮುಖ್ಯಾಂಶಗಳು :

  • ನಾಡಿನ ಆರ್ಥಿಕ ಪ್ರಗತಿಗೆ ನೀವು ಅತ್ಯುತ್ತಮ ಕೊಡುಗೆ ನೀಡುತ್ತಾ ಬಂದಿದ್ದೀರೆಂಬುದು ಶ್ಲಾಘನೀಯ ವಿಚಾರ. ಆದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಇದು ಸಾಲದೆಂದೇ ನಮ್ಮ ಪ್ರಾಮಾಣಿಕ ಅಭಿಮತ. ಉದಾಹರಣೆಗೆ- ಶೈಕ್ಷಣಿಕ ಪ್ರಗತಿಯ ದಿಸೆಯಲ್ಲಿ ನಮ್ಮ ನಾಡಿನ ಮತ್ತು ಅಮೆರಿಕ ವಿಶ್ವ ವಿದ್ಯಾಲಯಗಳು ಪರಸ್ಪರ ಸಹಕರಿಸುವಂತೆ ಮಾಡಿದರೆ, ಅತ್ಯಾಧುನಿಕ ಶಿಕ್ಷಣ ಕ್ರಮವನ್ನು, ಪಠ್ಯವ್ಯವಸ್ಥೆಯನ್ನು ನಮ್ಮಲ್ಲಿ ಅಳವಡಿಸಲು ಸಾಧ್ಯವಾಗಬಹುದಾಗಿದೆ. ಈ ದೃಷ್ಟಿಯಿಂದ ನಿಮ್ಮೆಲ್ಲರ ನಿರಂತರ ಗಮನ ಹಾಗೂ ಸಹಕಾರ ಅತ್ಯಾವಶ್ಯಕವಾಗಿದೆ.
  • ಇಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಗಿಂತ ಹೆಚ್ಚಾಗಿ ಕುಶಲ ಕಾರ್ಮಿ ಕರ ಕೊರತೆ ಕಂಡು ಬರುತ್ತದೆ. ಇದರಿಂದ ಉತ್ತರ ಭಾರತದ ಹಾಗೂ ನೆರೆ ರಾಷ್ಟ್ರಗಳ ಬಹುತೇಕರು ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರೆ. ಆದ್ದರಿಂದ ವಿಶೇಷವಾಗಿ ಆಧುನಿಕ ಕೃಷಿ ತಂತ್ರಜ್ಞಾನದ ಅಳವಡಿಕೆಯ ಅಗತ್ಯ ತೀವ್ರವಾಗಿ ಹೆಚ್ಚುತ್ತಿದೆ. ಈ ದಿಸೆಯಲ್ಲಿ ಅಮೆರಿಕದ ಕೃಷಿ ತಂತ್ರಜ್ಞಾನ ಕರ್ನಾಟಕದ ಬೇಸಾಯಗಾರರಿಗೆ ವರದಾನವಾಗಬಲ್ಲದು.
  • ಇಂದು ಪಾಶ್ಚಾತ್ಯ ಸಂಸ್ಕೃತಿಯ ದಾಳಿಯಿಂದಾಗಿ, ಕನ್ನಡಿಗರಲ್ಲಿ ಕನ್ನಡದ ಅಭಿಮಾನ ನಿಧಾನವಾಗಿ ಕುಸಿಯುತ್ತಲಿದ್ದು, ಆಂಗ್ಲಭಾಷೆಯ ಭ್ರಮೆ ವ್ಯಾಪಿಸುತ್ತಿದೆ.
  • ಕನ್ನಡದ ನಿರ್ಲಕ್ಷ್ಯ ಮುಂದುವರೆದಿರುವ ಇಂತಹ ಸನ್ನಿವೇಶದಲ್ಲೂ ನನಗೆ ರೋಮಾಂಚನವುಂಟು ಮಾಡಿದ ಕುತೂಹಲದ ವಿಷಯವೆಂದರೆ ಇಲ್ಲಿನ ಅನಿವಾಸಿ ಕನ್ನಡಿಗರು ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ. ಆಂಗ್ಲ ಶಬ್ದ ತಮ್ಮ ಸಂಭಾಷಣೆಯಲ್ಲಿ ನುಸುಳದಂತೆ ಎಚ್ಚರಿಕೆಯಿಂದ ವ್ಯವಹರಿಸುತ್ತಾರೆ. ಆದರೆ, ನಮ್ಮ ಕರ್ನಾಟಕದ ನಗರಗಳ ಜನರು ಕಂಗ್ಲಿಷ್‌ ಭಾಷೆಯಲ್ಲಿ ವ್ಯವಹರಿಸುತ್ತಾರೆ.
  • ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಲ್ಲಿ ಬರುವ ಕನ್ನಡಾಂಬೆಯ ಸಕಲ ವೈಭವದ ದಿವ್ಯ- ಮಂಗಳಕರ ನೆನಪು ನಮ್ಮ ನರ-ನಾಡಿಗಳಲ್ಲಿ ನವಚೈತನ್ಯದ ಸಂಚಾರವಾಗಿಸುತ್ತ್ತಿದೆ. ಈ ನಿಟ್ಟಿನಲ್ಲಿ ‘ಕವಿರಾಜ ಮಾರ್ಗ’ ಕಾರನು ‘ಕಾವೇರಿಯಿಂದ ಗೋದಾವರಿವರೆಗಿರ್ದ ನಾಡು’ ಎಂದು ಸಾರಿದ್ದ ಮಾತನ್ನು ತುಸು ಬದಲಾಯಿಸಿ ‘ಕಾವೇರಿಯಿಂದಮೀ ನಯಾಗರಾ ವರೆಗಿರ್ದ ಕನ್ನಡಿಗರ ಈ ಸಮ್ಮೇಳನಂ’ ಎಂದು ಅಭಿಮಾನದಿಂದ ಹಾಡಬಹುದು.
ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಎಂ.ಪಿ.ಪ್ರಕಾಶ್‌, ಶ್ರೀ ರವಿಶಂಕರ್‌, ಕವಿ ಚೆನ್ನವೀರ ಕಣವಿ, ಹಂಪಿ ವಿವಿ ಕುಲಪತಿ ಡಾ.ವಿವೇಕ ರೈ, ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮತ್ತಿತರರು ಹಾಜರಿದ್ದರು.

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X