ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾರೆಗಳು ಅಂಬರದಲ್ಲಿಲ್ಲ! ಬಾಲ್ಟಿಮೋರ್‌ನಲ್ಲಿವೆ!

By Staff
|
Google Oneindia Kannada News

Upendraಈ ಶುಕ್ರವಾರ(ಸೆ.1) ರಾತ್ರಿ‘ಗಂಡುಗಲಿ ಕುಮಾರರಾಮ’ ಸಾವಿರಾರು ವಿಶ್ವಕನ್ನಡಿಗರ ಮನಮುಟ್ಟಲಿದ್ದಾನೆ. ಬಾಲ್ಟಿಮೋರ್‌ನಲ್ಲಿ ಆರಂಭವಾಗಲಿರುವ ಸಮ್ಮೇಳನದ ಮೊದಲ ದಿನದ ಆಕರ್ಷಣೆ ಇದು. ಇಲ್ಲಿನ ರಾಜ್‌ಕುಮಾರ್‌ ಸಭಾಂಗಣದಲ್ಲಿ ಈ ಚಿತ್ರವನ್ನು 4000 ಪ್ರೇಕ್ಷಕರು ನೋಡಲು ಅವಕಾಶವಿದೆ.

ರಾಜ್‌ ಕುಮಾರ್‌ರ ಕಡೆಯ ಕನಸು, ಶಿವರಾಜ್‌ ಕುಮಾರ್‌ರ ಬಹುಶ್ರದ್ಧೆಯ ಮತ್ತು ಪ್ರಬುದ್ಧ ಅಭಿನಯದ ಈ ‘ಗಂಡುಗಲಿ ಕುಮಾರರಾಮ’ ಬಾಕ್ಸಾಫೀಸ್‌ನಲ್ಲಿ ಸೋತರು, ಒಳ್ಳೆ ಐತಿಹಾಸಿಕ ಚಿತ್ರ ಎಂಬ ವಿಮರ್ಶೆಗೆ ಪಾತ್ರವಾಗಿದೆ. ಈ ಚಿತ್ರದ ಜೊತೆಗೆ ‘ಸೈನೈಡ್‌’, ‘ಹಸೀನಾ’ ಮತ್ತು ‘ಅಮೃತಧಾರೆ’ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ.

ಸಮ್ಮೇಳನದ ಮೂರು ದಿನಗಳ ಕಾಲ ಉಪೇಂದ್ರ, ಗುರುಕಿರಣ್‌, ನಾಗತಿಹಳ್ಳಿ ಚಂದ್ರಶೇಖರ್‌, ಸುಮನ್‌ ನಗರ್‌ಕರ್‌, ತಾರಾ, ರಮ್ಯಾ, ಮುರಳಿ, ವಿಜಯರಾಘವೇಂದ್ರ ಮತ್ತಿತರರು ಕನ್ನಾಡಾಭಿಮಾನಿಗಳನ್ನು ರಂಜಿಸಲಿದ್ದಾರೆ. ನಿರ್ದೇಶಕ ಟಿ.ಎಸ್‌.ನಾಗಾಭರಣ ತಮ್ಮ ತಂಡದಿಂದ ‘ಜೋಕುಮಾರ ಸ್ವಾಮಿ’ ನಾಟಕ ಪ್ರದರ್ಶಿಸಲಿದ್ದಾರೆ.

ಇಷ್ಟು ಮಾತ್ರವಲ್ಲ ಸಂಗೀತ ಬ್ರಹ್ಮ ಎಸ್‌.ಪಿ.ಬಾಲಸುಬ್ರಮಣ್ಯಂ ಅವರಿಗೆ ಸನ್ಮಾನ ಕಾರ್ಯಕ್ರಮವೂ ಇದೆ. ಅವರ ಗಾನಸುಧೆ ಸವಿವ ಅವಕಾಶವೂ ಇದೆ. ಪ್ರವೀಣ್‌ ಗೋಡ್ಖಿಂಡಿ, ಸಂಗೀತ ಕಟ್ಟಿ, ನಾಗರಾಜ ಹೊಂಗಾಳ್‌ರ ಸಂಗೀತ ಸುಧೆಯನ್ನು ಅನುಭವಿಸುವ ಭಾಗ್ಯವೂ ಇದೆ. ಇನ್ನೇನ್‌ ಬೇಕು?

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X