ನಾನೋದಿದ 'ಹರಿ'ಕಥೆ; ಒಂದು ಕಂದಪದ್ಯ

ಕನ್ನಡದಿ ರಚಿಸಿದ ಕವಿತೆಗಳ ಜನವೊಪ್ಪೀ
ಮನದುಂಬಿ ಹರಸಿದೊಡದುವೆ
ಎನಿತೋ ತಾಯ್ನುಡಿಗೆ ಸೇವೆ ಸಲ್ಲಿಸಿದಂತೇ || 1 ||
ಕಲಿಯುವರಿಗೆಲ್ಲ ಸುಲಬದ
ಕಲೆಯಾಲೆಮನೆಯು ನವೀನ ಅಂತರ್ಜಾಲಾ
ಹಲವಂಕಣ ಅನಿಸಿಕೆ ಕವನ
ಕಾಲದ ರಸಿಕರಭಿಲಾಷೆಯನು ತಿಳಿಸುವುವೂ || 2 ||
ಅದನಿಂದೂ ತಡಕುತಿರಲು
ವಿಧಿವಶರಾದ ಹರಿ ಕಥೆಯು ಮನವ ಸೆಳೆಯಿತೂ |
ಓದೋದಿ ನಮಿಸಿದೆನವರ
ಸಾದನೆ ತಾಯ್ನುಡಿಯ ಸಿರಿಯ ಹರಡಿದ ಹಿರಿಮೇ || 3 ||
ಹರಿಯೆಂಬಾ ಅನಿವಾಸಿಯು
ಸಿರಿನುಡಿ ಪದವಿಧರೆಯರಸಿ ವರಿಸಿದನಂತೇ || 4 ||
ವಿರಳ ವಿರಾಮದ ವೇಳೆಯ
ಊರನುಡಿ ಮಹಿಮೆಯ ಹಾಡುತ ಕಳೆದನಂತೇ
ಹೊರನಾಡ ಕನ್ನಡಿಗರಲಿ
ಬರೆವಾಸೆಯ ಬೀಜ ಬಿತ್ತಿ ಮೊಳಸಿದನಂತೇ
ಬರೆದ ಬರಹ ಸವಿಯಾದೊಡೆ
ಹರುಷವ ಪಾಯಸವನುಂಡು ತೋರಿದನಂತೇ || 5 ||
ಮಾಸಿಕೆಯ ಬಯಸಿದ ಜನಕೆ
ಹೊಸ ರುಚಿಯ ಅಮೇರಿಗನ್ನಡ ರಚಿಸಿದನಂತೇ |
ತುಸವಾದರೂ ಕೊಡುಗೆಗಳು
ಕಿಸೆಕಾಸಿನಲಿ ಬಹುಮಾನ ಹಂಚಿದನಂತೇ || 6 ||
ನಾಡಿನ ಸೇವೆಗಳೊಡನೇ
ಸಡಗರ ಸಂಬ್ರಮದ ದೇವ ಪೂಜೆಯ ವಿಧಿಯಾ |
ಉಡುಗರೆಯ ಪುಸ್ತಕ ನೆನೆದು
ಒಡನಾಡಿಗಳಿವನ ಬೀಳ್ಕೋಡುವುದದು ಸಹಜಾ || 7||












Click it and Unblock the Notifications