ಅವಳಿಲ್ಲ.....!?
(ಅವಳಿಲ್ಲ ಎನ್ನುವುದನ್ನು ಒಪ್ಪುವುದಾದರೂ ಹೇಗೆ? ನಾವು-ನೀವು ಒಪ್ಪದಿದ್ದರೂ ಅವಳಿಲ್ಲ... ಆದರೆ ಈ ಪದ್ಯ ಓದಿದವರ ಮನದಲ್ಲಂತೂ ಇರುತ್ತಾಳೆ! ಸದಾ ನೆಲೆಸುತ್ತಾಳೆ!)
| ಗೆಳತಿಯರೊಡನೆ ಹರಟೆಯ ಹೊಡೆದು ಹಾಡಿ ಕುಣಿಯಲು ಅವಳಿಲ್ಲ ಬಣ್ಣದ ಚಿಟ್ಟೆಯ ಬೆನ್ನಟ್ಟಿ ಹೋಗಿ ಬೆರಗನು ಬೀರಲು ಅವಳಿಲ್ಲ ಅಪ್ಪನ ಲುಂಗಿಯು ಅಡಿಮೇಲೆಂದು ಆಟಕೆ ಬರಲು ಅಮ್ಮನ ಮಣಿಸೆ ಅಣ್ಣನ ಜೊತೆಗೆ ಕೀಟಲೆಯಾಡಿ ಅಜ್ಜಿಯ ಕಾಡಿ ಬೆಲ್ಲವ ಕೇಳಿ ಛೇಡಿಸಿ ಪೀಡಿಸಿ ಚಿಕ್ಕನ ಹೆಗಲಲಿ | ಅಜ್ಜಿಯ ತೋಟದ ಹೂಗಳನಾರಿಸಿ ಜಗಲಿಯಲಿರಿಸಲು ಅವಳಿಲ್ಲ ಅಜ್ಜನ ಹೊಟ್ಟೆಯು ‘ಚಪಾತಿ ಹಿಟ್ಟೆ’ಂದು ಮರ್ದನ ಮಾಡಲು ಅವಳಿಲ್ಲ ಮಾಮನ ಕತೆಗಳ ಕೇಳುತ ನಕ್ಕು ‘ತಂಗಿ’ ‘ತಮ್ಮ’ ಎಂದು ಒಲಿಸಿ ನಾಟ್ಯವನಾಡುವ ಕನಸನು ಹೊತ್ತ ಹೋದಲ್ಲೆಲ್ಲೆಡೆ ನಗೆಯನು ಬೀರುವ ವೇದಿಕೆಯಿಂದ ಭಿತ್ತಿಗೆ ಏರಿದ |












Click it and Unblock the Notifications