ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಣಿ ಮಂಜುನಾಥ್‌, ಆರ್ಕೇಡಿಯ, ಕ್ಯಾಲಿಫೋರ್ನಿಯ

By Staff
|
Google Oneindia Kannada News

ಕೆಟ್ರೀನಳೋ? ಕಾಳಿಯೋ?
Vani Manjunath, California
  • ವಾಣಿ ಮಂಜುನಾಥ್‌, ಆರ್ಕೇಡಿಯ, ಕ್ಯಾಲಿಫೋರ್ನಿಯ
    [email protected]
ದುಷ್ಟ ಶಕ್ತಿಗಳನ್ನು ಸಂಹರಿಸಲೆಂದೇ ಅವತರಿಸಿದವರು ಚಾಮುಂಡಿ, ದುರ್ಗಿ;
ಜಲರೂಪಿಯಾಗಿ ಭೋರ್ಗರೆಯುತ್ತ ನಿನ್ನ ಅಲೆಅಲೆಯಾದ ಕೇಶರಾಶಿಯ
ಮುಡಿಯನ್ನು ಬಿಚ್ಚಿ, ಹೊಳೆವ ಕಂಗಳ ಮಿಂಚನ್ನು ಝಳಪಿಸಿ,
ಸಿಡಿಲ ಆರ್ಭಟದಿಂದ ಭೋರ್ಗರೆಯುತ್ತ ಬಂದು,
ನಿನ್ನ ಮಕ್ಕಳನ್ನೇ ಬಲಿ ತೆಗೆದುಕೊಂಡ ನಿನ್ನ ಈ ಅವತಾರದ ಪರಿಯಾದರೂ ಏನು?

ನಿನ್ನ ಆವೇಶದ ಹೊಡೆತಕ್ಕೆ ಸಿಕ್ಕಿ ಮುಳುಗಿದ ಊರು ಕೇರಿಗಳು,
ನೆಲೆತಪ್ಪಿದ ಸಾವಿರಾರು ಸಂಸಾರಗಳು;
ಕಣ್ಣು ಹಾಯುವೆಡೆಯಲ್ಲೆಲ್ಲಾ ನೀರು.
ಆದರೇನು? ಕುಡಿಯಲು ಹನಿ ನೀರಿಲ್ಲದೆ
ಕಂಗೆಟ್ಟ ಬಡಬಗ್ಗರ ಕಣ್ಣುಗಳಲ್ಲಿದ್ದ ಅಸಹಾಯಕತೆ;
ಬದುಕಿನುದ್ದಕ್ಕೂ ಗಳಿಸಿದ್ದನ್ನು ನಿನ್ನ ಆಕ್ರೋಶದಲ್ಲಿ ಕಳೆದುಕೊಂಡು
ದಿಕ್ಕೆಟ್ಟು ಅಲೆಯುತ್ತಿದ್ದವರ ದುಸ್ಥಿತಿ.

ಬಾರದ ಸಹಾಯ ಹಸ್ತಕ್ಕೆ ಕೈಚಾಚಿ
ಶೂನ್ಯದತ್ತ ನೆಟ್ಟ ನೋಟ ಬೀರಿದ ಸುಕ್ಕುಗಟ್ಟಿದ ಮೊಗಗಳೆಷ್ಟೋ;
ನಿಸ್ತೇಜ ಕಂಗಳಲ್ಲಿ ಇಣುಕುತ್ತಿದ್ದ ಕಣ್ಣೀರ ಹನಿಗಳೊಂದಿಗಿನ ಅನಾಥ ಭಾವ.
ಇದು ಕಲಿಯುಗವಲ್ಲವೇ?
ಮತ್ತೆ ನಿನ್ನನ್ನು ಒಂದೇ ಗುಟುಕಿನಲ್ಲಿ
ಆಪೋಶನ ತೆಗೆದುಕೊಳ್ಳಬಲ್ಲ ಅಗಸ್ತ್ಯನೆಲ್ಲಿಂದ ಬರಬೇಕು?

ಈ ಅರಾಜಕತೆ, ಅವ್ಯವಸ್ಥೆಗಳ ಮಧ್ಯೆ
ಜೇನೊಸರುವಂಥ ಹುಸಿ ಆಶ್ವಾಸನೆಗಳು;
ಅದಾಗ್ಯೂ ನೊಂದ ಜೀವಿಗಳಿಗೆ ಸಾಂತ್ವನ ನೀಡಲು
ಧಾವಿಸಿ ಬಂದ ದೇವದೂತರೆಷ್ಟೋ ಮಂದಿ;
ನಶಿಸಿದ ನಾಡಿನಲ್ಲೇ ಮತ್ತೆ ಹೊಸ ಸಮಾಜ ಕಟ್ಟುವ ದೃಢ ನಿರ್ಧಾರ.

ತನ್ನ ಸ್ವಾರ್ಥಕ್ಕಾಗಿ, ತನ್ನನ್ನು ಪೊರೆಯುವ
ಪ್ರಕೃತಿ ಮಾತೆಯನ್ನೇ ಧಿಕ್ಕರಿಸಿ ಭಸ್ಮಾಸುರನಾಗಲು ಹೊರಟಿರುವ
ಮಾನವನಿಗೆ ನೀನು ನೀಡುತ್ತಿರುವ ಮುನ್ನೆಚ್ಚರಿಕೆಯೇ?
ಅನಾಚಾರ, ಭ್ರಷ್ಟತೆಗಳು ಮೆರೆಯುತ್ತಿರುವ ಈ ಸಮಾಜಕ್ಕೆ
ಇದು ಮುಂಬರುವ ಯುಗಾಂತದ ಸಂಕೇತವೆ?

(ಡಿ. 3, 2005ರಂದು ಲಾಸ್‌ ಏಂಜಲಿಸ್‌ನಲ್ಲಿ ನಡೆದ ಸಾಹಿತ್ಯ ರಂಗದ 2ನೇ ಕನ್ನಡ ಸಮ್ಮೇಳನದಲ್ಲಿ ಓದಿದ ಕವನ)


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X