ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ತದೀಪ್ತಿ

By Staff
|
Google Oneindia Kannada News

ತೆರೆ

ಮನಸಿನ ಗೊಂದಲ, ತಳಮಳ, ನಿರಾಳತನಕ್ಕೆ ನಾವುಗಳೇ ಕಾರಣ. ಅವುಗಳ ಸುತ್ತಲೇ ನಾವು ಗಿರಕಿಹೊಡೆಯುತ್ತೇವೆ. ಅದರಲ್ಲಿ ಒಂದು ರೀತಿಯ ಸುಖವಿದೆ... ಅಲ್ಲೇ ನಮ್ಮ ಬದುಕಿದೆ. ಬದುಕಿನ ಪಯಣದುದ್ದಕ್ಕೂ ಎಷ್ಟೊಂದು ತೆರೆಗಳು. ಆ ತೆರೆಗಳ ಅರಿಯಲು ಈ ಕೆಳಗಿನ ಪದ್ಯ ಓದಿ. Tere A Kannada poem by Suptadeepti
ಕಣ್ಣು ಕಲಕಿದೆ, ಹೃದಯ ನರಳಿದೆ,
ಮನಸು ಗೊಂದಲ, ಗೋಜಲು;
ಬಣ್ಣ ಕರಗಿದೆ, ಚಿತ್ರ ಕಲಸಿದೆ,
ಕನಸು ಹಳಸಲು, ಮಾಸಲು.

ವಾಹಿ ಕಣದೊಳು, ಅಣುವ ತುಣುಕೊಳು,
ಅಡಗಿ ತಾಮಸ ದಾನವ;
ಗೇಹ ಗೆಲ್ಲುತ, ಮೋಹ ಮೆಲ್ಲುತ,
ನಡೆಯ ಸಾಧಿಸಿ ನಿಲ್ಲುವ.

ಬಯಸಿ ಪಡೆದಿಹ ಪುಟ್ಟ ಕುಡಿಯದು,
ನೆಟ್ಟ ನಡೆಯದೆ, ಬಾಗಿದೆ;
ಪಯಣ ಎಲ್ಲಿಗೊ, ಗುರಿಯು ಎತ್ತಲೊ,
ಕಟ್ಟಿ ಬುತ್ತಿಯ, ಹೊರಟಿದೆ.

ಕುರುಡು ಮೋಹಕೆ, ಸೆಳೆವ ಪಾಶಕೆ,
ಯಾವ ಬಂಧನ ನಿಲ್ಲದು;
ಕರಡು ಪ್ರತಿಯಲಿ ಸಂದ ಜೀವವು-
ದೇವ ಬಂಧವ ಬಲ್ಲುದು.

ಮರಳಿ ಅರಳುವ, ಹೊರಳಿ ಮರಳುವ,
ನಿತ್ಯ ನೂತನ ಚೇತನ;
ಕರುಳಿಗಿಲ್ಲದ ಕಣ್ಣ ಮಬ್ಬಿಗೆ-
ಮರ್ತ್ಯದರಿವಿನ ಸಾಂತ್ವನ.



ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X