ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತ ಸಿಂಚನಅಮೆರಿಕಾದಲ್ಲಿ ನಡೆದ ಸಾಹಿತ್ಯಶಿಬಿರದ ವರದಿ... ಈ ಪದ್ಯದಲ್ಲಿ... ಮಾಯಾ ಹರಪನಹಳ್ಳಿ; ಸಿಲ್ವರ್‌ ಸ್ಪ್ರಿಂಗ್‌ ಮೇರಿಲ್ಯಾಂಡ್‌maya_harapanhalli@yahoo.comಗೀತಾ ನಟರಾಜರ ಭವ್ಯ ಆಲಯನೆಲಮನೆಯ ದಿವ್ಯ ವೇದಿಕೆಲಕ್ಷ್ಮೀನಾರಾಯಣ ಭಟ್ಟರ ಮಾತಿನ ಲಯಹೊಸೆಯುತಿತ್ತು ಶತಶತಮಾನದ ಹೊದಿಕೆಹಳೆಯ ಹೊಸ ನಡುಗನ್ನಡದ ಭಾಷಾ ವಲಯಕರೆದ್ಯೊಯಿತು ಮತ್ತೊಂದು ಲೋಕಕ್ಕೆ ಕನ್ನಡ ಪದಗಳ ವರ್ಣನೆ ದೊರೆತ ಶಾಸನ ನುಡಿಯಿತು ಕನ್ನಡ ಭಾಷೆಯು ಪ್ರಾಚೀನವುಕವಿರಾಜಮಾರ್ಗದಲಿ ಬೆಳಗುವ ದೀಪದಲಿದೊರೆಯಿತು ಪ್ರಥಮ ಗ್ರಂಥವುವಡ್ಡಾರಾಧನೆಯ ದೇಶಿ ಶೈಲಿಯಅನನ್ಯ ಸಣ್ಣ ಕಥೆಯ ಸಂಗಮವು ಪಂಪನ ಆದಿಪುರಾಣ ರನ್ನನ ಗಧಾಯುದ್ಧವುಮೆರೆಯಿತು ಚಂಪೂಕಾವ್ಯದಲ್ಲಿಹರಿಹರನ ರಗಳೆ ರಾಘವಾಂಕನ ಕಾವ್ಯವುಹೊಸತನತುಂಬಿತು ಸಾಹಿತ್ಯದಲ್ಲಿಲಕ್ಷ್ಮೀಶನ ಜೈಮಿನಿ ಕುಮಾರವ್ಯಾಸನ ಭಾರತವುಕನ್ನಡ ಭಾಷೆಯನ್ನು ಸಿರಿಗೊಳಿಸಿತಿಲ್ಲಿ ಬಸವಣ್ಣನ ಅಕ್ಕಮಹಾದೇವಿಯ ವಚನವುಸೇವೆಗೈದವು ಶಿವ ಶರಣರ ದಾಸೋಹದಲ್ಲಿಪುರಂಧರದಾಸರ ಕನಕದಾಸರ ಕಿರ್ತನೆಯುಪಾವನವಾದವು ಹರಿಭಕ್ತಸಾರ ಸುಧೆಯಲ್ಲಿಸರ್ವಜ್ಞನ ವಚನ ಶರೀಫರ ತತ್ವಜ್ಞಾನಬೆಳೆಯಿತು ಜೀವನದ ಕಟುಸತ್ಯದಲ್ಲಿ ಗ್ರಾಮದ ನುಡಿಯು ದೇಸಿಯ ಪದವುಶ್ರೇಷ್ಟವಾದವು ಜನಪದ ಕಾವ್ಯದಲ್ಲಿಹೊಸಗನ್ನಡದ ಹಾದಿ ನವೋದಯ ಕಾವ್ಯಕ್ಕೆ ನಾಂದಿಬಿಎಮ್‌ಶ್ರೀಯರ ಕನ್ನಡ ಚಳವಳಿಯಲ್ಲಿಬೇಂದ್ರೆ ಪುತಿನರು ಕುವೆಂಪು ಅಡಿಗರುಹೊಳೆಯುವ ರತ್ನಗಳು ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ ವಾಚನ ಅಮೃತ ಸಿಂಚನಮಿಂಚುಹರಿದು ಮೈತುಂಬಿ ರೊಮಾಂಚನಹೊಸ ರುಚಿಯ ಪಂಕ್ತಿ ಭೊಜನಮಧ್ಯ ಮಧ್ಯ ಚಹ ಕಾಫಿಯ ಪಾನಸಾಹಿತ್ಯ ಶ್ರವಣ ಭಟ್ಟರಿಗೆ ನಮನಪುನೀತವಾಯಿತು ಸರಸ್ವತಿಯ ಸನ್ನಿಧಾನPost your viewsಪೂರಕ ಓದಿಗೆ-

By Staff
|
Google Oneindia Kannada News

ಅಮೃತ ಸಿಂಚನ

ಅಮೆರಿಕಾದಲ್ಲಿ ನಡೆದ ಸಾಹಿತ್ಯಶಿಬಿರದ ವರದಿ... ಈ ಪದ್ಯದಲ್ಲಿ... Maya Harapanahalli
  • ಮಾಯಾ ಹರಪನಹಳ್ಳಿ; ಸಿಲ್ವರ್‌ ಸ್ಪ್ರಿಂಗ್‌ ಮೇರಿಲ್ಯಾಂಡ್‌
    [email protected]
ಗೀತಾ ನಟರಾಜರ ಭವ್ಯ ಆಲಯ
ನೆಲಮನೆಯ ದಿವ್ಯ ವೇದಿಕೆ
ಲಕ್ಷ್ಮೀನಾರಾಯಣ ಭಟ್ಟರ ಮಾತಿನ ಲಯ
ಹೊಸೆಯುತಿತ್ತು ಶತಶತಮಾನದ ಹೊದಿಕೆ
ಹಳೆಯ ಹೊಸ ನಡುಗನ್ನಡದ ಭಾಷಾ ವಲಯ
ಕರೆದ್ಯೊಯಿತು ಮತ್ತೊಂದು ಲೋಕಕ್ಕೆ

ಕನ್ನಡ ಪದಗಳ ವರ್ಣನೆ ದೊರೆತ ಶಾಸನ
ನುಡಿಯಿತು ಕನ್ನಡ ಭಾಷೆಯು ಪ್ರಾಚೀನವು
ಕವಿರಾಜಮಾರ್ಗದಲಿ ಬೆಳಗುವ ದೀಪದಲಿ
ದೊರೆಯಿತು ಪ್ರಥಮ ಗ್ರಂಥವು
ವಡ್ಡಾರಾಧನೆಯ ದೇಶಿ ಶೈಲಿಯ
ಅನನ್ಯ ಸಣ್ಣ ಕಥೆಯ ಸಂಗಮವು

ಪಂಪನ ಆದಿಪುರಾಣ ರನ್ನನ ಗಧಾಯುದ್ಧವು
ಮೆರೆಯಿತು ಚಂಪೂಕಾವ್ಯದಲ್ಲಿ
ಹರಿಹರನ ರಗಳೆ ರಾಘವಾಂಕನ ಕಾವ್ಯವು
ಹೊಸತನತುಂಬಿತು ಸಾಹಿತ್ಯದಲ್ಲಿ
ಲಕ್ಷ್ಮೀಶನ ಜೈಮಿನಿ ಕುಮಾರವ್ಯಾಸನ ಭಾರತವು
ಕನ್ನಡ ಭಾಷೆಯನ್ನು ಸಿರಿಗೊಳಿಸಿತಿಲ್ಲಿ

ಬಸವಣ್ಣನ ಅಕ್ಕಮಹಾದೇವಿಯ ವಚನವು
ಸೇವೆಗೈದವು ಶಿವ ಶರಣರ ದಾಸೋಹದಲ್ಲಿ
ಪುರಂಧರದಾಸರ ಕನಕದಾಸರ ಕಿರ್ತನೆಯು
ಪಾವನವಾದವು ಹರಿಭಕ್ತಸಾರ ಸುಧೆಯಲ್ಲಿ
ಸರ್ವಜ್ಞನ ವಚನ ಶರೀಫರ ತತ್ವಜ್ಞಾನ
ಬೆಳೆಯಿತು ಜೀವನದ ಕಟುಸತ್ಯದಲ್ಲಿ

ಗ್ರಾಮದ ನುಡಿಯು ದೇಸಿಯ ಪದವು
ಶ್ರೇಷ್ಟವಾದವು ಜನಪದ ಕಾವ್ಯದಲ್ಲಿ
ಹೊಸಗನ್ನಡದ ಹಾದಿ ನವೋದಯ ಕಾವ್ಯಕ್ಕೆ ನಾಂದಿ
ಬಿಎಮ್‌ಶ್ರೀಯರ ಕನ್ನಡ ಚಳವಳಿಯಲ್ಲಿ
ಬೇಂದ್ರೆ ಪುತಿನರು ಕುವೆಂಪು ಅಡಿಗರು
ಹೊಳೆಯುವ ರತ್ನಗಳು ಸಾಹಿತ್ಯ ಕ್ಷೇತ್ರದಲ್ಲಿ

ಸಾಹಿತ್ಯ ವಾಚನ ಅಮೃತ ಸಿಂಚನ
ಮಿಂಚುಹರಿದು ಮೈತುಂಬಿ ರೊಮಾಂಚನ
ಹೊಸ ರುಚಿಯ ಪಂಕ್ತಿ ಭೊಜನ
ಮಧ್ಯ ಮಧ್ಯ ಚಹ ಕಾಫಿಯ ಪಾನ
ಸಾಹಿತ್ಯ ಶ್ರವಣ ಭಟ್ಟರಿಗೆ ನಮನ
ಪುನೀತವಾಯಿತು ಸರಸ್ವತಿಯ ಸನ್ನಿಧಾನ


ಪೂರಕ ಓದಿಗೆ-
ಕನ್ನಡ ಸಾಹಿತ್ಯ ಶಿಬಿರ : ಕಾವ್ಯರಸಧಾರೆ ಅದೆಷ್ಟು ಮಧುರ!

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X