ಕುದುರೆಯನ್ನು ಕಾಲುವೆಗೆಳೆಯಬಹುದು ...


ಕುದುರೆಯನ್ನು ಕಾಲುವೆಗೆಳೆಯಬಹುದು ...
H.K. Ramapriyan
  • ಹಂ. ಕ. ರಾಮಪ್ರಿಯನ್‌, ಕ್ಲಾರ್ಕ್ಸ್‌ವಿಲ್‌, ಮೇರಿಲೆಂಡ್‌
    [email protected]
ಕುದುರೆಯ ಕಾಲುವೆಗೆಳೆದಿಹ ಮಾತ್ರಕೆ ನೀರನು ಹೀರುತ ಕುಡಿಯುವುದೇ?
ಕುವರನ ಶಾಲೆಗೆ ತಳ್ಳಿದ ಮಾತ್ರಕೆ ಪಾಠವ ಕಲಿಯಲು ತೊಡಗುವನೇ?

ಮಗಗುಪನಯನವ ಮಾಡಿದ ಮಾತ್ರಕೆ ದಿನದಿನ ಜಪಗಳ ಮಾಡುವನೇ?
ಗುರುಗಳು ವೀಣೆಯ ಕೊಟ್ಟಿಹ ಮಾತ್ರಕೆ ಶಿಷ್ಯನು ಹಾಡನು ನುಡಿಸುವನೇ? ಕುದುರೆಯ ...

ಜಡನಿಗೆ ಕೆಲಸವ ಕೊಟ್ಟಿಹ ಮಾತ್ರಕೆ ದುಡಿಮೆಯಾಳಾತನು ತೊಡಗುವನೇ?
ಗರಡಿಯ ಮನೆಯಾಳಗೆಳೆದಿಹ ಮಾತ್ರಕೆ ವ್ಯಾಯಾಮವ ನರ ಮಾಡುವನೇ? ಕುದುರೆಯ ...

ನೀತಿಬೋಧೆಯನು ಹೇಳಿದ ಮಾತ್ರಕೆ ಮಾನವ ಸದ್ಗುಣಿಯಾಗುವನೇ?
ವೈದ್ಯನ ಬಳಿ ಕರೆದೊಯ್ದಿಹ ಮಾತ್ರಕೆ ರೋಗಿಯು ಪಥ್ಯವ ಮಾಡುವನೇ? ಕುದುರೆಯ ...

ಅರಿಗಳು ಕೈಗಳ ಕುಲುಕಿದ ಮಾತ್ರಕೆ ಅಳಿಯದ ಗೆಳೆತನ ಬೆಳೆಸುವರೇ?
ಬರಡುಭೂಮಿಯಲಿ ಚೆಲ್ಲಿದ ಮಾತ್ರಕೆ ಹುಲ್ಲ ಬೀಜಗಳು ಮೊಳೆಯುವುವೇ? ಕುದುರೆಯ ...

ಗಾಂಧಿಯ ಪರಿಚಯ ಕೊಟ್ಟಿಹ ಮಾತ್ರಕೆ ಶಾಂತಿಪ್ರಿಯನರನಾಗುವನೇ?
ಕಾವಿಯ ಬಟ್ಟೆಯನುಡಿಸಿದ ಮಾತ್ರಕೆ ವೈರಾಗ್ಯವ ನರ ಪೊಂದುವನೇ? ಕುದುರೆಯ ...

ಮಡದಿಗೆ ತಾಳಿಯ ಕಟ್ಟಿದ ಮಾತ್ರಕೆ ಪ್ರೇಮದ ಮಳೆಯನು ಸುರಿಸುವಳೇ?
ಮನುಜನ ದೇಗುಲಕೆಳೆದಿಹ ಮಾತ್ರಕೆ ಭಕ್ತಿಯಾಳಾತನು ಮುಳುಗುವನೇ? ಕುದುರೆಯ ...


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+