ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಕ್‌ ಇಲ್ಲದ ಹೊತ್ತಿನಲ್ಲಿ ಅನು-ರೂಪ ಭೇಟಿ!

By Staff
|
Google Oneindia Kannada News


‘‘ಅನು, ಈಗ ನಾನು ಹೇಳಲಿರುವ ವಿಷಯ ನಿನಗೆ ಆತುರದ ಮಾತು ಅನ್ನಿಸಬಹುದು ಎಂದು ನನಗೆ ಗೊತ್ತು. ಅದರೆ ಈಗ ನಾವು ಅದರ ಬಗ್ಗೆ ಮಾತನಾಡಲೆ ಬೇಕು.’’

ಈ ಮಾತು ಇಂದಲ್ಲ ನಾಳೆ ಬರುತ್ತದೆ ಎಂದು ಅವಳಿಗೆ ಗೊತ್ತಿತ್ತು. ಆದರೆ ಡ್ಯಾನ್‌ ಉಂಗುರ ಅಥವ ಇನ್ನೇನಾದರು ಕೊಟ್ಟು ಮದುವೆಯ ಪ್ರಪೊಸ್‌ ಮಾಡಿ ಅಚ್ಚರಿ ಉಂಟು ಮಾಡುವುದಿಲ್ಲ ಎಂದೂ ಅವಳಿಗೆ ಗೊತ್ತಿತ್ತು. ಅವಳು ಈಗ ತಾನೆ ಸ್ವಲ್ಪಸ್ವಲ್ಪವೆ ಬಿಡುಗಡೆಗೊಳ್ಳುತ್ತಿದ್ದಾಳೆ ಎಂದು ಅವನಿಗೆ ಗೊತ್ತಿತ್ತು. ಈ ದಿನಕ್ಕಾಗಿಯೆ ನಾನು ಎಷ್ಟೊಂದು ದಿನದಿಂದ ಕಾಯುತ್ತಿದ್ದೇನೆ.

‘‘ಡ್ಯಾನ್‌, ನಾನು ಎಂದಿಗೂ ಮಗುವನ್ನು ಹೆರಲು ಸಾಧ್ಯವಿಲ್ಲ ಎನ್ನುವುದು ನಿನ್ನನ್ನು ಬಾಧಿಸುತ್ತದೆಯೆ?’’

‘‘ನೀನು ಹೇಗೆ ಇದ್ದೀಯೋ ಹಾಗೆಯೆ ಇಷ್ಟ ನನಗೆ, ಅನು. ನೀನು ಯಾರಾಗಿದ್ದೀಯಾ ಅದೆ ನನಗೆ ಬೇಕಿರುವುದೆ ಹೊರತು, ನೀನು ನನಗೆ ಏನು ಮಾಡಬಹುದು ಎನ್ನುವುದಲ್ಲ. ಮಗು ಬೇಕು ಅಂದರೆ ನಾವು ಯಾವಾಗ ಬೇಕಾದರೂ ದತ್ತು ತೆಗೆದುಕೊಳ್ಳಬಹುದು.’’

‘‘ಅದು ಅಮೇರಿಕನ್ನರ ರೀತಿ, ಡ್ಯಾನ್‌. ದತ್ತು ತೆಗೆದುಕೊಂಡಿರುವ ಯಾರೊಬ್ಬರೂ ನನಗೆ ಭಾರತದಲ್ಲಿ ಗೊತ್ತಿಲ್ಲ. ಅಲ್ಲಿಯೂ ಮಕ್ಕಳನ್ನು ದತ್ತಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವುದು ನನಗೆ ಗೊತ್ತು, ಆದರೆ ಇಲ್ಲಿನಷ್ಟು ಸಾಮಾನ್ಯ ಅಲ್ಲ. ಹಾಗೆಯೆ, ತನಗೆ ಗಂಡು ಮಗುವೊಂದನ್ನು ಹೆತ್ತು ಕೊಡಲಾಗದ ಹೆಣ್ಣನ್ನು ಮದುವೆಯಾಗಲು ಇಷ್ಟಪಡುವ ಗಂಡಸನ್ನೂ ನಾನು ನೋಡಿಲ್ಲ.’’

‘‘ನೀನು ಎಂದಿಗೂ ಮಗುವನ್ನು ಹೆರಲಾಗುವುದಿಲ್ಲ ಎಂದು ವೈದ್ಯರು ಹೇಳಿಲ್ಲ. ನಿನ್ನ ಕೈಯಲ್ಲಿ ಹೆರಲು ಆಗದೆ ಇರಬಹುದಾದ ಸಾಧ್ಯತೆ ಇದೆ ಎಂದಷ್ಟೆ ಅವರು ಹೇಳಿದ್ದು.’’

‘‘ಅದು ನಿಜ.’’

‘‘ನಾವಿಬ್ಬರು ಜೊತೆಯಾಗಿ ಎಷ್ಟು ಚೆನ್ನಾಗಿ ಇದ್ದೇವೆ.’’ ಅವನ ಸ್ವರ ಮೃದುವಾಯಿತು. ‘‘ನಾನು ನನ್ನ ಉಳಿದ ಜೀವನವನ್ನು ನಿನ್ನ ಜೊತೆ ಕಳೆಯಬೇಕೆಂದು ಬಯಸುತ್ತೇನೆ.’’

ಆ ಮಾತು ಅನೂಳನ್ನು ಬಹಳ ತಟ್ಟಿತು. ಆದರೆ ಅದೇ ಸಮಯದಲ್ಲಿ ಅವಳ ಎದೆಯಲ್ಲಿ ಭಯವೂ ಉಂಟಾಯಿತು. ನನಗೆ ಗೊತ್ತಿರುವ ಡ್ಯಾನ್‌ಗೂಅಥವ ನನಗೆ ಗೊತ್ತಿದೆ ಎಂದು ನಾನು ಭಾವಿಸಿದ್ದ ಡ್ಯಾನ್‌ಗೂಇಂದು ಇಲ್ಲಿ ನನ್ನ ಎದುರಿಗೆ ಕುಳಿತಿರುವ ವ್ಯಕ್ತಿಗೂ ಎಷ್ಟೊಂದು ವ್ಯತ್ಯಾಸವಿದೆ. ಈ ಡ್ಯಾನ್‌ ಬಹಳ ಪ್ರಬುದ್ಧನಾದ ವಯಸ್ಕನಂತೆ ಮಾತನಾಡುತ್ತಿದ್ದಾನೆ.

‘‘ಎಷ್ಟೆಲ್ಲ ಎಷ್ಟೊಂದು ಬೇಗ ನಡೆದು ಹೋಯಿತು. ನಾನು ಇನ್ನೂ ಯಾವುದಕ್ಕೂ ಸಿದ್ಧವಾಗಿಲ್ಲ, ಡ್ಯಾನ್‌.‘‘ಹಾಗೆ ಹೇಳಿದಳಾದರೂ, ಈ ದಿನಕ್ಕಾಗಿ ಅವಳು ಅವನನ್ನು ಭೇಟಿಯಾದ ದಿನದಿಂದ ಕಾಯುತ್ತಿದ್ದಳು. ಅವಳಿಗೆ ಬೇಕಾದ ಹಾಗೆ ಎಲ್ಲವೂ ನಡೆಯುತ್ತಿದ್ದರೂ, ಅದನ್ನು ಒಪ್ಪಿಕೊಳ್ಳಲು ಅವಳ ಕೈಯಲ್ಲಿ ಆಗುತ್ತಿಲ್ಲ. ಯಾಕೆ ಹಾಗೆ?

‘‘ನನಗೆ ಗೊತ್ತು,’’ ಅವನು ಹೇಳಿದ, ‘‘ನನಗೆ ನಿನ್ನ ಬಗ್ಗೆ ಏನು ಅನ್ನಿಸುತ್ತದೆ ಎನ್ನುವುದು ನಿನಗೆ ಗೊತ್ತಾಗಬೇಕು ಎನ್ನುವುದನ್ನಷ್ಟೆ ನಾನು ಬಯಸುವುದು. ಅದೇನೆಂದರೆ, ನಾನು ನಿನ್ನನ್ನು ಮದುವೆಯಾಗ ಬಯಸುತ್ತೇನೆ.’’

‘‘ಡ್ಯಾನ್‌, ನೀನು ಇಲ್ಲದೆ ಇದ್ದರೆ ಇದೆಲ್ಲದರಿಂದ ನಾನು ಹೇಗೆ ಹೊರಗೆ ಬರುತ್ತೇನೆ ಎಂದೇ ನನಗೆ ಗೊತ್ತಿಲ್ಲ. ನಿಜವಾಗಲೂ ನನಗೆ ಗೊತ್ತಿಲ್ಲ.’’

‘‘ನೀನು ನನ್ನ ಮನೆಯವರನ್ನು ಭೇಟಿಯಾಗಬೇಕು. ನಿನ್ನನ್ನು ಯಾವಾಗ ಪರಿಚಯ ಮಾಡಿಸುತ್ತೀಯ ಎಂದು ನನ್ನ ತಾಯಿ ಕೇಳುತ್ತಿದ್ದಾಳೆ.’’

ಇವರ ಸಂಸ್ಕೃತಿಯಲ್ಲಿ ಮನೆಯವರನ್ನು ಭೇಟಿಯಾಗುವುದು ಒಂದು ಮುಖ್ಯವಾದ ವಿಷಯವೆ? ‘‘ನಾನು ಒಂದು ಸಲ ಅವರೊಡನೆ ಮಾತನಾಡಿದ್ದೆ. ನಾನು ಮೊಟ್ಟಮೊದಲ ಸಲ ನಿನಗೆ ಕರೆ ಮಾಡಿದ್ದಾಗ ಅವರೇ ಉತ್ತರಿಸಿದ್ದು.’’ ಅನು ನಕ್ಕಳು. ‘‘ನಾನು ನಿಜವಾಗಿ ಅವರನ್ನು ‘ಮಾಮ್‌’ ಎಂದೆ ಕರೆದೆ! ಆಗ ತಾನೆ ನಾನು ಹೊಸದಾಗಿ ಭಾರತದಿಂದ ಬಂದಿದ್ದೆ. ಅವರನ್ನು ಹೇಗೆ ಕರೆಯ ಬೇಕು ಎಂದು ಗೊತ್ತಿರಲಿಲ್ಲ.’’

ಅಂದು ರಾತ್ರಿ, ಬಿಸಿನೀರಿನ ಟಬ್ಬಿನಲ್ಲಿ ಕುಳಿತಾದ ಮೇಲೆ ಡ್ಯಾನ್‌ ಅವಳನ್ನು ಮಲಗುವ ಕೋಣೆಗೆ ಹೊತ್ತುಕೊಂಡು ಹೋದ. ನಂತರ ಅವರು ಪ್ರೇಮಿಸಿದರು. ಮೊಟ್ಟ ಮೊದಲ ಸಲ ಅವಳಿಗೆ ಆ ವಿಚಾರವಾಗಿ ಯಾವುದೆ ಅಪರಾಧಿ ಭಾವನೆ ಕಾಡಲಿಲ್ಲ. ದೀಪಕ್‌ನ ಕುರಿತಾದ ಯಾವ ಯೋಚನೆಗಳೂ ಅಡ್ಡ ಬರಲಿಲ್ಲ. ಒಂದಲ್ಲ ಒಂದು ದಿನ ನಾನು ಡ್ಯಾನ್‌ನನ್ನು ಮದುವೆಯಾಗುತ್ತೇನೆ ಎಂದು ನನಗೆ ಗೊತ್ತು.

ಮುಂಜಾನೆಯ 6 ಗಂಟೆಯಲ್ಲಿ ಫೋನ್‌ ಅವಳನ್ನು ಬೆಚ್ಚಿಸಿ ಎಬ್ಬಿಸಿತು. ಯಾರೊ ಸತ್ತಿದ್ದಾರೆ ಎಂದು ಭಾರತದಿಂದ ಬಂದಿರುವ ಕರೆ ಇರಬಹುದೆ? ಪ್ರತಿರಾತ್ರಿ ಆ ಭಯವನ್ನು ತನ್ನೊಂದಿಗೆ ಇಟ್ಟುಕೊಂಡೆ ಮಲಗುತ್ತಿದ್ದಳು. ಫೋನಿನ ರಿಸಿವರ್‌ ಅನ್ನು ತೆಗೆದುಕೊಳ್ಳುವ ಹೊತ್ತಿಗೆ ಅದು ಶಬ್ದ ಮಾಡುವುದು ನಿಂತಿತು. ಬ್ಲಾಕ್‌ ಮಾಡಲಾಗಿರುವ ಖಾಸಗಿ ಸಂಖ್ಯೆ ಎಂದು ಕಾಲರ್‌ ಐಡಿ ತೋರಿಸಿತು. ಹತ್ತು ನಿಮಿಷದ ನಂತರ ಮತ್ತೆ ಇನ್ನೊಮ್ಮೆ ಫೋನ್‌ ಬಂತು. ಡ್ಯಾನ್‌ ಇನ್ನು ಮಲಗಿಯೆ ಇದ್ದ. ಅವಳು ಬೇಗನೆ ಫೋನನ್ನು ಕೈಗೆತ್ತಿಕೊಂಡಳು.

‘‘ಅನು, ನಾನು ರೂಪ ಮಾತಾಡ್ತಾಯಿರೋದು’’

‘‘ಇನ್ನೂ ಈಗ ತಾನೆ ಬೆಳಗಾಗುತ್ತಿದೆ,’’ ಅನು ಪಿಸುಗುಟ್ಟಿದಳು. ‘‘ಎಲ್ಲ ಸರಿಯಾಗಿದೆ ತಾನೆ?’’

‘‘ದೀಪಕ್‌ ಇಂದು ದಿನಪೂರ್ತಿಯ ಸಭೆಗಾಗಿ ಹೋಟೆಲ್‌ಗೆ ಹೋಗಿದ್ದಾನೆ. ಹೋಟೆಲ್‌ ಹೆಸರು... ಡಬಲ್‌... ಟ್ರೀ ಅಂತ, ಇಲ್ಲಿಯೆ ಸ್ಯಾನ್‌ ಹೋಸೆಯಲ್ಲಿ...’’ ಅವಳು ಹೋಟೆಲ್‌ನ ಹೆಸರನ್ನು ಬಹಳ ಹುಷಾರಾಗಿ, ಒತ್ತಿಒತ್ತಿ ಓದುತ್ತಿದ್ದಳು. ‘‘ಅವನು ಇನ್ನು ರಾತ್ರಿಗೆ ವಾಪಸು ಬರುವುದು.’’

ಅನು ಕಾದಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X