ಅನುಗೆ ಕಿರಿಕಿರಿ ಮಾಡಿದ ಪವನ್‌ನ ಪ್ರೇಮ ಯಾಚನೆ


ಅವನು ತನ್ನ ಪಕ್ಕದಲ್ಲಿನ ಹಾಸಿಗೆಯ ಮೇಲೆ ತಟ್ಟಿ, ‘‘ಅನು, ಇಲ್ಲಿ ಬಾ,’’ ಎಂದು ಕರೆದ.

ಯಾಕೆ? ಅನು ಕುರ್ಚಿಯಿಂದ ಎದ್ದು ಅವನ ಪಕ್ಕದಲ್ಲಿ ಕುಳಿತಳು. ‘‘ನನಗೆ ನಿಜವಾಗಿಯೂ ಆಂಟಿಯ ಬಗ್ಗೆ ದುಃಖವಾಗುತ್ತಿದೆ. ಬಹುಶಃ ಅವರಿಗೆ ಈಗಲಾದರೂ ನೆಮ್ಮದಿ ಸಿಕ್ಕಿರುತ್ತದೆ.’’ ಅವನು ಯಾಕೆ ಅವಳ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸುತ್ತಿದ್ದಾನೆ? ಏನಾದರೂ ಅವರ ಅಮ್ಮನ ಬಗ್ಗೆ ಹೇಳಬಾರದ ಗುಟ್ಟೊಂದನ್ನು ಹೇಳಲು ಬಯಸುತ್ತಿದ್ದಾನಾ?

‘‘ಅನು, ನಾನು ಭಾರತದಿಂದ ಯಾವಾಗ ಹಿಂದಿರುಗುತ್ತೇನೊ ಗೊತ್ತಿಲ್ಲ. ಆದರೆ ಬಂದ ಕೂಡಲೆ ನಾನು ನಮ್ಮ ಗ್ರಾಹಕರಿಗೆ ಮಾಡಿಕೊಡಬೇಕಾದ ಕೆಲಸವನ್ನು ಮುಗಿಸಬೇಕು.’’ ಅವನು ಅವಳ ಕೈಯನ್ನು ಹಿಡಿದುಕೊಂಡ. ಅವಳನ್ನು ಹತ್ತಿರಕ್ಕೆ ಎಳೆದುಕೊಂಡು ಅವಳ ಕೆನ್ನೆಯ ಮೇಲೆ ಮುತ್ತಿಟ್ಟ.

ಇದು ಯಾಕೊ ಸರಿಯಾಗಿ ಕಾಣಿಸುತ್ತಿಲ್ಲ ಎಂದುಕೊಂಡಳು ಅವಳು. ಇದರಲ್ಲಿ ಏನೊ ಇದೆ.

‘‘ಇದನ್ನು ಹೇಳಲು ಸರಿಯಾದ ಸಮಯ ಎಂದೂ ಇಲ್ಲ. ಅನು, ನಾನು ನಿನ್ನನ್ನು ಪ್ರೀತಿಸುತ್ತೇನೆ.’’

ಅವಳಿಗೆ ಹಿಂದಕ್ಕೆ ಸರಿದು ತನಗೆ ಅದೇ ತರಹ ಅನ್ನಿಸುತ್ತಿಲ್ಲ ಎಂದು ಹೇಳಬೇಕೆನಿಸಿತು. ಈಗ ನಾನು ಅವನಿಗೆ ಹೇಳಲೇಬೇಕು.

‘‘ಪವನ್‌, ಅದರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ. ನಿನಗೆ ಆಘಾತವಾಗಿದೆ ಹಾಗು ಗೊಂದಲದಲ್ಲಿದ್ದೀಯ. ಇದರ ಬಗ್ಗೆ ಇನ್ನೊಂದು ದಿನ ಮಾತನಾಡೋಣ.’’

‘‘ನಾನು ಈಗಾಗಲೆ ಬಹಳ ದಿನ ಕಾದುಬಿಟ್ಟಿದ್ದೇನೆ. ನಾನು ಇದನ್ನು ಬಹಳ ಹಿಂದೆಯೆ ಹೇಳಿಬಿಡಬೇಕಿತ್ತು. ಆಗ ನೀನು ದೀಪಕ್‌ನನ್ನು ಎಂದೂ ಮದುವೆಯಾಗುತ್ತಿರಲಿಲ್ಲ, ಹಾಗು ಈ ಎಲ್ಲ ನೋವನ್ನು ಅನುಭವಿಸುತ್ತಿರಲಿಲ್ಲ.’’

ಯಾಕೆ ಎಲ್ಲಾ ಭಾರತೀಯ ಗಂಡಸರೂ ತಾವು ಹೆಂಗಸರಿಗೆ ಉಡುಗೊರೆ ಎಂದು ಭಾವಿಸುತ್ತಾರೆ? ಯಾವಾಗಲೂ ಅವರಿಗೆ ಏನು ಬೇಕು ಎನ್ನುವುದೆ ಮುಖ್ಯ; ಹೆಣ್ಣಿಗೆ ಎಂದಿಗೂ ಆರಿಸಿಕೊಳ್ಳುವ ಹಕ್ಕಾಗಲಿ, ಇಲ್ಲ ಎನ್ನುವುದಾಗಲಿ ಸಾಧ್ಯವಿಲ್ಲ.

‘‘ಪವನ್‌, ನನ್ನ ಜೀವನ ಬಹಳ ಜಟಿಲವಾಗಿದೆ. ನಾನು ಈಗಾಗಲೆ ಬಹಳ ಅನುಭವಿಸಿದ್ದೇನೆ. ಹಾಗಾಗಿ ನಾನು ಈಗ ಯಾವುದೆ ಸಂಬಂಧಕ್ಕೆ ಸಿದ್ಧವಾಗಿಲ್ಲ.’’

ಅವನು ಅವಳನ್ನು ಇನ್ನೂ ಹತ್ತಿರಕ್ಕೆ ಎಳೆದುಕೊಂಡು ಅವಳ ಕುತ್ತಿಗೆಯನ್ನು ಚುಂಬಿಸಲು ಪ್ರಾರಂಭಿಸಿದ. ಇದು ಆಗಲೆಬಾರದಿತ್ತು! ಅವಳು ಈ ಅವಸ್ಥೆಯಿಂದ ಹೊರಬರಬೇಕಿತ್ತು. ಸಭ್ಯವಾಗಿ ಆದರೆ ದೃಢವಾಗಿ ಅನು ಅವನನ್ನು ಹಿಂದಕ್ಕೆ ತಳ್ಳಿ, ಎದ್ದು ನಿಂತು, ಕುರ್ಚಿಯ ಹತ್ತಿರ ಹೋದಳು.

‘‘ಪವನ್‌, ನಾವಿಬ್ಬರೂ ಸ್ನೇಹಿತರು. ನನಗೆ ಈಗ ಇದರ ಬಗ್ಗೆ ಸರಿ ಅನ್ನಿಸುತ್ತಿಲ್ಲ. ನಾನು ಇದಕ್ಕೆಲ್ಲ ಸಿದ್ಧವಾಗಿಲ್ಲ, ಹಾಗು ನೀನೂ ಸಹ ಆಂಟಿಯ ಸಾವಿನ ಆಘಾತದಲ್ಲಿದ್ದೀಯ. ಇದರ ಬಗ್ಗೆ ಸರಿಯಾದ ಸಮಯದಲ್ಲಿ ವಿಚಾರ ಮಾಡೋಣ.’’ ಅವಳು ಅದು ಹೇಗೆ ತನ್ನನ್ನು ತಾನು ಇಂತಹ ಪರಿಸ್ಥಿಯಲ್ಲಿ ಸಿಕ್ಕಿಹಾಕಿಕೊಳ್ಳಲು ಬಿಟ್ಟಳು. ಇದರಿಂದೆಲ್ಲ ಸ್ಪಷ್ಟವಾಗಿ ತಿಳಿದಿದ್ದೇನೆಂದರೆ ಅವನು ಇಲ್ಲಿಯ ತನಕ ಬೇರೆ ಯಾರ ಬಗ್ಗೆಯೂ ಯೋಚಿಸಿರಲಿಲ್ಲ. ಯಾಕೆಂದರೆ ತನಗೆ ಅವಳ ಮೇಲೆ ಪ್ರೀತಿ ಇದೆ ಎಂದು ತಿಳಿದಿದ್ದ. ಹುಚ್ಚುತನ!

‘‘ನನ್ನದು ತಪ್ಪಾಯಿತು, ಅನು. ಇದು ಈ ರೀತಿಯಲ್ಲಿ ಆಗಬೇಕೆಂದು ನಾನು ಬಯಸಿರಲಿಲ್ಲ. ನನ್ನಿಂದ ನಿಜವಾಗಿಯೂ ತಪ್ಪಾಯಿತು.’’

‘‘ಅದನ್ನು ಮರೆತುಬಿಡು.’’ ಈಗ ಸ್ವಲ್ಪ ನಿರಾಳವಾಗಿ ಅವಳು ಅವನ ಟಿಕೆಟ್‌ ಅನ್ನು ತೆಗೆದುಕೊಂಡು ಅವನ ಪರವಾಗಿ ಏರ್‌ಲೈನ್‌ನವರಿಗೆ ಕರೆ ಮಾಡಿದಳು. ನಂತರ ತಾನೆ ಅವನನ್ನು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿಬಿಟ್ಟಳು.

ಅಲ್ಲಿಂದ ಹಿಂದಿರುಗುತ್ತಿದ್ದಾಗ ಅವಳು ಡ್ಯಾನ್‌ಗೆ ಕರೆ ಮಾಡಿದಳು. ‘‘ಡ್ಯಾನ್‌, ನಾನು ಈಗ ತಾನೆ ನನ್ನ ಹಳೆಯ ಸ್ನೇಹಿತೆಯೊಬ್ಬಳ ಬಗ್ಗೆ ಯೋಚಿಸುತ್ತಿದೆ, ಭಾರತದಲ್ಲಿ ನನ್ನ ಸ್ನೇಹಿತೆಯಾಗಿದ್ದವಳು...’’

‘‘ಅನು, ನೀನು ಎಲ್ಲಿ ಇದ್ದೀಯ?’’

‘‘ಸ್ಯಾನ್‌ ಫ‚ಾ್ರನ್ಸಿಸ್ಕೊ ವಿಮಾನ ನಿಲ್ದಾಣದಿಂದ ವಾಪಸು ಬರುತ್ತಿದ್ದೇನೆ. ಪವನ್‌ನನ್ನು ಬಿಟ್ಟು ಬಂದೆ. ಅವನ ತಾಯಿ ತೀರಿಹೋದರು.’’

‘‘ಏನು?’’

‘‘ಹೌದು. ಅವರು ಆತ್ಮಹತ್ಯೆ ಮಾಡಿಕೊಂಡರು. 30 ವರ್ಷಗಳ ಕಾಲ ಕೌಟುಂಬಿಕ ದೌರ್ಜನ್ಯವನ್ನು ಸಹಿಸಿಕೊಂಡ ನಂತರ.’’

‘‘ಓ ದೇವರೇ! ಇದು ಎಂದಾದರು ಕೊನೆಯಾಗುತ್ತದೆಯೆ?’’

ಅವಳು ನಿಟ್ಟುಸಿರುಬಿಟ್ಟಳು. ‘‘ನೀನು ಇದನ್ನು ಕೇಳಬೇಕು. ಪ್ರೌಢಶಾಲೆಯಲ್ಲಿ ನನಗೆ ಒಬ್ಬಳು ಸಹಪಾಠಿ ಇದ್ದಳು. ಅವಳ ಹೆಸರು ಶಾಂತ. ಅವಳು ಒಬ್ಬ ಅರ್ಚಕನ ಮಗಳಾಗಿದ್ದಳು. ಅಂದರೆ ಅದರ ಅರ್ಥ ಅವರು ಬಡವರಾಗಿದ್ದರು ಹಾಗು ಬಹುಶಃ ಜಾತಿಯಲ್ಲಿ ಬ್ರಾಹ್ಮಣರಾಗಿದ್ದಿರಬಹುದು.’’

‘‘ಹೌದಾ?’’ ಡ್ಯಾನ್‌ ಆಸಕ್ತಿಯಿಂದ ಕೇಳಿದ. ಅವಳು ಹೇಳುತ್ತಿದ್ದ ಭಾರತದ ಬಗೆಗಿನ ಕಥೆಗಳು ಅವನಿಗೆ ಬಹಳ ಇಷ್ಟವಾಗುತ್ತಿದ್ದವು. ಆದರೆ ಈಗ ಅವಳ ಮನಸ್ಸಿನಲ್ಲಿ ಮುಖ್ಯವಾದ ವಿಷಯವೊಂದಿದೆ ಎಂದು ಅವನಿಗೆ ಗೊತ್ತಿತ್ತು.

‘‘ಒಬ್ಬ ವರ - ಕಿನ್ಯಾದಿಂದ ಬಂದಿದ್ದ ವಿಧುರ - ತನಗೆ ಹೊಸ ಹೆಂಡತಿಯನ್ನು ಹಾಗು ತನ್ನ ಎರಡು ತಿಂಗಳ ಮಗುವಿಗೆ ಮಲತಾಯಿಯನ್ನು ಹುಡುಕಿಕೊಂಡು ಬಂದಿದ್ದ. ವಿದೇಶದಲ್ಲಿರುವ ಯಾರನ್ನೆ ಆಗಲಿ ಶ್ರೀಮಂತರೆಂದು ಭಾವಿಸುತ್ತಾರೆ. ಅವಳ ತಂದೆ ಬಡವರಾಗಿದ್ದರು. ಹಾಗಾಗಿ ಇದು ತಾವು ತಮ್ಮ ಮಗಳಿಗೆ ಮಾಡಬಹುದಾದ ಒಳ್ಳೆಯ ಸಂಬಂಧದ ಮದುವೆ ಎಂದು ಯೋಚಿಸಿ ಅವರು ಮದುವೆಯನ್ನು ಏರ್ಪಾಟು ಮಾಡಿದರು. ಅವಳು ವರನನ್ನು ಒಂದೇ ಒಂದು ಸಲ ನೋಡಿದಳು - ಬದಲಿಗೆ ಹೀಗೆ ಹೇಳಬೇಕು - ಅವನು ಅವಳನ್ನು ನೋಡಿದ. ಅವಳು ಸುಮ್ಮನೆ ತಲೆಯನ್ನು ತಗ್ಗಿಸಿಕೊಂಡಿದ್ದಳು. ಅವನು ಅವಳನ್ನು ಒಪ್ಪಿಕೊಂಡ, ಹಾಗು ಮದುವೆ ನಿರ್ಧಾರವಾಯಿತು. ಯಾರೊಬ್ಬರೂ ಅವಳನ್ನು ನೀನು ಅವನನ್ನು ಮದುವೆಯಾಗಬಯಸುತ್ತೀಯ ಅಥವ ಇಲ್ಲವ ಎಂದು ಕೇಳಲಿಲ್ಲ.’’

‘‘ಇದು ಏರ್ಪಡಿಸಿದ ಮದುವೆ, ಅಲ್ಲವೆ?’’

‘‘ಹೌದು. ನನಗೆ ದಿಗ್ಭ್ರಮೆ ಆುತು. ಯಾಕೆಂದರೆ ನಾನು ಮತ್ತು ಶಾಂತ ಇಬ್ಬರೂ ಇನ್ನೂ ಪ್ರೌಢಶಾಲೆಯಲ್ಲಿ ಇದ್ದೆವು; ನಮಗೆ ಕೇವಲ 16 ವರ್ಷವಾಗಿತ್ತು. ಮಾರನೆಯ ದಿನ ಅವಳು ತನ್ನ ಮದುವೆ ಮುಂದಿನ ವಾರ ನಿರ್ಧಾರವಾಗಿದೆ ಎಂದು ಹೇಳಿದಳು. ಹಾಗು ತಾನು ಆಫ್ರಿಕಾಗೆ ಹೋಗುತ್ತಿದ್ದೇನೆಂದು ಹೇಳಿದಳು.’’

‘‘ಆಗ ನಾನು ಅವಳನ್ನು ಸರಿಪಡಿಸಿದೆ: ‘ನಿನ್ನ ಅರ್ಥ ಅಮೇರಿಕ ತಾನೆ, ಶಾಂತ? ಆಫ್ರಿಕಾಗೆ ಯಾರೂ ಹೋಗುವುದಿಲ್ಲ.’ ಆದರೆ ಅವಳು ಅದು ಕೀನ್ಯಾ ಎಂದು ಒತ್ತಿ ಹೇಳಿದಳು. ಯಾರಿಗೂ ಅವಳ ಭಾವಿ ಗಂಡನ ಬಗ್ಗೆ ಏನೂ ಗೊತ್ತಿರಲಿಲ್ಲ. ಅವನ ಮೊದಲನೆಯ ಹೆಂಡತಿಯನ್ನು ಅವನು ಬಹುಶಃ ಕೊಂದಿರಬಹುದು ಎಂದು ನಾವು ಅಂದುಕೊಂಡೆವು. ನಾನು ಅವಳನ್ನು ಮತ್ತೆ ನೋಡಲಿಲ್ಲ.’’

‘‘ಭಾರತದಲ್ಲಿ ನಡೆಯುತ್ತಿರುವ ಈ ವಿಷಯಗಳು ತುಂಬ ವಿಷಾದಕರ.’’

‘‘ನನ್ನ ಬಗ್ಗೆ ನನಗೇ ಹೆಮ್ಮೆಯಾಗುತ್ತಿದೆ, ಡ್ಯಾನ್‌! ನಾನು ಬಹಳ ವಿಷಯಗಳಿಗೆ ಇಲ್ಲ ಎಂದು ಹೇಳಿದ್ದೇನೆ. ಮತ್ತೆ ಇನ್ಯಾವುದಕ್ಕೂ ಆಯಿತು ಎಂದು ಹೇಳುತ್ತೇನೋ ಇಲ್ಲವೊ. ಧೈರ್ಯವಾಗಿ ಮಾತನಾಡುವುದನ್ನು ಪ್ರತಿದಿನ ಕಲಿಯುತ್ತಿದ್ದೇನೆ. ಇದನ್ನು ನನಗೆ ಅಮೇರಿಕ ಕಲಿಸಿತು - ನೀನು ಕಲಿಸಿದೆ. ನಾನು ನನ್ನ ಹಕ್ಕುಗಳಿಗಾಗಿ ಎದ್ದು ನಿಲ್ಲುವಂತೆ ನೀನು ನನ್ನ ಮನಸ್ಸಿನಲ್ಲಿ ಎಷ್ಟೊಂದು ಧೈರ್ಯವನ್ನು ತುಂಬಿದ್ದೀಯ ಎಂದು ನಿನಗೆ ಗೊತ್ತಿಲ್ಲ.’’

‘‘ನೀನು ಏನು ಹೇಳುತ್ತಿದ್ದೀಯ, ಅನು? ಹೆಂಗಸರು ನನಗೆ ಯಾವಾಗಲೂ, ಎಲ್ಲದಕ್ಕೂ, ಇಲ್ಲ ಎಂದು ಹೇಳುತ್ತಾರೆ!’’

ಅವನು ಸ್ವಾಭಾವಿಕವಾಗಿಯೆ ತಮಾಷೆಗಾಗಿ ಹೇಳಿದ. ಆದರೆ ಅವಳು ಪವನ್‌ಗೆ ಇಲ್ಲ ಎಂದು ಹೇಳಿದ್ದಳು: ನಾನು ಭಾರತದಲ್ಲಿ ಇದ್ದಿದ್ದರೆ ಬಹುಶಃ ಅವನನ್ನು ಮದುವೆಯಾಗುತ್ತಿದ್ದೆ. ಅಲ್ಲೇ ಇದ್ದಿದ್ದರೆ ಆಗುವುದಿಲ್ಲ ಎಂದು ಹೇಳುವುದನ್ನು ನಾನು ಎಂದೂ ಕಲಿಯಲಾಗುತ್ತಿರಲಿಲ್ಲವೇನೊ.

ಅಧ್ಯಾಯ - 35 ಅಧ್ಯಾಯ - 37

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+