ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಗೆ ಕಿರಿಕಿರಿ ಮಾಡಿದ ಪವನ್‌ನ ಪ್ರೇಮ ಯಾಚನೆ

By Staff
|
Google Oneindia Kannada News

ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ನೀರವ ರಾತ್ರಿಯಲ್ಲಿ ಪೋನು ಮೊಳಗಿತು. ಅರೆಬರೆ ಎಚ್ಚರದಲ್ಲಿ ಅನು ಗಡಿಯಾರದ ಕಡೆ ನೋಡಿದಳು. ಮಧ್ಯರಾತ್ರಿ ಮೀರಿ ಮುಂಜಾವಿನ ಎರಡು ಗಂಟೆಯಾಗಿತ್ತು. ಭಾರತದಿಂದ ಬಂದಿರುವ ಕರೆಯೇ? ನಮ್ಮ ಮನೆಯವರಿಗೆ ಏನೋ ಅಪಾಯವಾಗಿರಬೇಕು! ದೀಪ ಹಾಕಿದಳು. ನಾಲ್ಕನೆ ನಾದಕ್ಕೆ ಅವಳ ದೂರವಾಣಿಯ ಆನ್ಸರಿಂಗ್‌ ಯಂತ್ರ ಚಾಲೂ ಆಯಿತು. ಅವಳು ಧ್ವನಿಮುದ್ರಿಸಿದ್ದ ಗ್ರೀಟಿಂಗ್‌ ಸಂದೇಶ ಶುರುವಾಗುವ ಮೊದಲೆ ಅನು ಪೋನನ್ನು ಸರ್ರನೆ ಎತ್ತಿಕೊಂಡಳು. ''ಅನು ಇಲ್ಲಿ.""

''ಅನು, ಅನು!...""

''ಪವನ್‌?""

ಪೋನ್‌ ಕರೆ ತುಂಡಾದ ಶಬ್ದ ಕೇಳಿಸಿತು. ಅದು ಅವನೇನಾ? ಅಳುತ್ತಿದ್ದನಾ? ಅವನೇನಾದರೂ ಕುಡಿದಿದ್ದನಾ? ಅವಳು ಅವನ ದೂರವಾಣಿ ಸಂಖ್ಯೆಯನ್ನು ಎಂದೂ ಕೇಳಿರಲಿಲ್ಲ. ದಡ್ಡಿ.

ತುಂಬಾ ನಿಶ್ಯಬ್ದವಾಗಿದೆ ಎನ್ನಿಸಿದ್ದರಿಂದ ಅವಳು ಮಲಗುವ ಕೋಣೆಯಲ್ಲಿನ ಟಿವಿ ಹಾಕಿದಳು. ನಾನು ಈ ದೇಶವನ್ನು ದ್ವೇಷಿಸುತ್ತೇನೆ. ನಾನು ಒಂಟಿಯಾಗಿರುವುದನ್ನು ದ್ವೇಷಿಸುತ್ತೇನೆ. ಮತ್ತೆ ಪೋನು ಶಬ್ದ ಮಾಡಿತು. ಅವಳು ಟಿವಿಯನ್ನು ಮೌನಕ್ಕೆ ಹಾಕಿ ಇನ್ನೂಅವಳ ತೊಡೆಯ ಮೇಲೆ ಇದ್ದ ಪೋನನ್ನು ತೆಗೆದುಕೊಂಡಳು.

''ಪವನ್‌? ಏನಾಯಿತು?""

''ನನ್ನ ತಾಯಿ ತೀರಿ ಹೋದರು."" ಮೌನ. ಗಂಡಸರು ಅಳುವುದಿಲ್ಲ ಎಂದು ಅವಳಂದುಕೊಂಡಿದ್ದಳು. ಪವನ್‌ ಅಳುತ್ತಿದ್ದ, ಆದರೆ ಅದು ಅವನು ವಾರಣಾಸಿಯಲ್ಲಿದ್ದಾಗ, ಇನ್ನೂ ಚಿಕ್ಕ ಹುಡುಗನಾಗಿದ್ದಾಗ. ಈಗ ಅವಳು ಏನು ಹೇಳಬೇಕು?

''ನೀನು ಎಲ್ಲಿ ಇದ್ದೀಯ, ಪವನ್‌? ನಾನು ಅಲ್ಲಿಗೆ ಬರುತ್ತೇನೆ.""

''ಈಗ ರಾತ್ರಿ ಬಹಳ ಹೊತ್ತಾಗಿದೆ. ನನಗೆ ನೀನು ಕತ್ತಲಲ್ಲಿ ಹೊರಗೆ ಬರುವುದು ಬೇಡ.""

ಅವಳು ಮರೆತಿದ್ದಳು. ಭಾರತದಲ್ಲಿ ಹುಡುಗಿಯರು ರಾತ್ರಿಯ ಹೊತ್ತಿನಲ್ಲಿ ಒಬ್ಬರೆ ಹೊರಗಡೆ ಹೋಗುವುದಿಲ್ಲ. ಅವಳು ಯಾವಾಗಲೂ ಕತ್ತಲಾಗುವ ಮೊದಲೆ ಮನೆ ಸೇರಿಕೊಳ್ಳಬೇಕಿತ್ತು. ''ಚಿಂತೆ ಮಾಡಬೇಡ, ಪವನ್‌, ನಾನು ಸುರಕ್ಷಿತವಾಗಿರುತ್ತೇನೆ. ಫಿ‚್ರೕವೇಯಲ್ಲಿ ಬಹಳಷ್ಟು ಜನ ಗಾಡಿಗಳಲ್ಲಿ ಓಡಾಡುತ್ತಿರುತ್ತಾರೆ."" ಅವನು ಕೊಟ್ಟ ವಿಳಾಸವನ್ನು ಅವಳು ಗೀಚಿಕೊಂಡಳು. ''ನಾನು ಇನ್ನು ಸ್ವಲ್ಪ ಹೊತ್ತಿಗೆ ಅಲ್ಲಿರುತ್ತೇನೆ.""

ತಾನು ಮಲಗುವ ಮುಂಚೆ ಎತ್ತಿಡದೆ ಹಾಸಿಗೆಯ ಮೂಲೆಯಲ್ಲಿಯೇ ಬಿಸಾಕಿದ್ದ ಜೀನ್ಸ್‌ ಹಾಗು ಅಂಗಿಯನ್ನು ಧರಿಸಿಕೊಂಡಳು. ಬೀಗದ ಕೈಯನ್ನು ಎತ್ತಿಕೊಂಡು ತನ್ನ ಕಪ್ಪನೆಯ ಕೂದಲನ್ನು ಸಡಿಲವಾದ ಪೋನಿಟೇಯ್ಲ್‌ು ಹಾಕಿಕೊಂಡಳು. ಐದು ನಿಮಿಷಕ್ಕಿಂತ ಮೊದಲೆ ರಸ್ತೆಯಲ್ಲಿ ಇದ್ದಳು.

ಅಂಟಿಗೆ ಏನಾಯಿತು? ಅವರು ಎಷ್ಟು ಕರುಣಾಳುವಾಗಿದ್ದರು. ನೆನ್ನೆ ತಾನೆ ಅವರನ್ನು ನೋಡಿದ ಹಾಗೆ ಇದೆ... ಪವನ್‌ನ ತಾಯಿ ತಿರುಪತಿಗೆ ತೀರ್ಥಯಾತ್ರೆ ಹೋಗಿದ್ದರು. ತಿರುಪತಿಗೆ ಹೋಗುವ ರಸ್ತೆಯಲ್ಲಿ ಲೆಕ್ಕವಿಲ್ಲದಷ್ಟು ಮಾರಣಾಂತಿಕ ಅಪಘಾತಗಳು ಆಗುತ್ತಿರುತ್ತವೆ.

ಪವನ್‌ ಅವನ ಸಂಸ್ಥೆ ಗುತ್ತಿಗೆ ತೆಗೆದುಕೊಂಡಿದ್ದ 208ನೇ ಸಂಖ್ಯೆಯ ಅಪಾರ್ಟ್‌ಮೆಂಟ್‌ನಲ್ಲಿದ್ದ. ಲಿಫಿ‚್ಟನ ಬಗ್ಗೆ ಯೋಚನೆ ಮಾಡದೆ ಅನು ಮೆಟ್ಟಿಲುಗಳನ್ನು ಸರಸರನೆ ಹತ್ತಿಕೊಂಡು ಹೋದಳು.

ಮುಂದೆ ಓದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X