ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೀಪಕ್‌ ಮತ್ತು ಡ್ಯಾನ್‌ರಲ್ಲಿ ಯಾರನ್ನು ಒಪ್ಪಲಿ?'

By Staff
|
Google Oneindia Kannada News

ವಿಶ್ರಾಂತಿಯಿಲ್ಲದ ಅಂದಿನ ರಾತ್ರಿಯನ್ನು ಕಳೆದ ನಂತರ, ಸೋಮವಾರ ಬೆಳಗ್ಗೆ ಬಹಳ ಬೇಗನೆ ಬಂದು ಬಿಟ್ಟಿತು. ಬೆಳಗ್ಗೆ 9 ಗಂಟೆ. ಗಡಿಯಾರವನ್ನು ನೋಡಿದ ಅನು ತನ್ನ ಕೀಲಿ ಗೊಂಚಲನ್ನು ಎತ್ತಿಕೊಳ್ಳುತ್ತ ಓಡಿದಳು. ಇನ್ನು 30 ನಿಮಿಷಗಳಲ್ಲಿ ಅವಳಿಗೊಂದು ಮೀಟಿಂಗ್‌ ಇತ್ತು. ನಾನು ಎಂದಾದರೂ ಸಮಯಕ್ಕೆ ಸರಿಯಾಗಿ ಹೋಗಬಲ್ಲೆನೆ? ಯಾಕೆ ನಾನು ಯಾವಾಗಲೂ ಸಮಯ ಮೀರಿದ ನಂತರವೇ ಹೋಗುತ್ತೇನೆ?

ತನ್ನ ಕಾರು ಇದ್ದ ಗ್ಯಾರೇಜಿನ ಗೇಟನ್ನು ತೆರೆಯಲು ಗುಂಡಿ ಒತ್ತಿ, ಕಾರನ್ನು ಹೊರಗೆ ತೆಗೆಯುತ್ತಿದ್ದಾಗ ಅವಳ ಸೆಲ್‌ ಫೋನ್‌ ರಿಂಗುಣಿಸಿತು.

''ಅನು? ನಾನು ದೀಪಕ್‌ ರಂಜನ್‌""

''ದೀಪಕ್‌?""

''ನಾನು ನಿಮಗೇನಾದರೂ ಮಾಡಬಾರದ ಸಮಯದಲ್ಲಿ ಫೋನ್‌ ಮಾಡಿದೆನೆ?""

''ಹೌದು! ಇಲ್ಲ, ಇಲ್ಲ. ನನಗೆ ಲೇಟ್‌ ಆಗುತ್ತಿದೆ ಅಷ್ಟೆ.""

''ನಾವು ರಾತ್ರಿಯೂಟಕ್ಕೆ ಸೇರೋಣವೆ?""

''ಇವತ್ತು?""

''ಅಲ್ಲ. ನಾನು ಬುಧವಾರ ಎಂದುಕೊಳ್ಳುತ್ತಿದ್ದೆ. ಇವತ್ತು ಮತ್ತು ನಾಳೆ ನನಗೆ ಕೆಲಸಕ್ಕೆ ಸಂಬಂಧಪಟ್ಟಂತೆ ರಾತ್ರಿಯೂಟಗಳಿವೆ.""

ನನಗೆ ಬುಧವಾರ ರಾತ್ರಿ ಡ್ಯಾನ್‌ ಜೊತೆಗೆ ಊಟಕ್ಕೆ ಹೋಗುವ ಕಾರ್ಯಕ್ರಮವಿದೆ! ''ದೀಪಕ್‌, ನನಗೊಂದು ಇ-ಮೇಯ್ಲ್‌ು ಕಳುಹಿಸಿಬಿಡುತ್ತೀರಾ? ನನ್ನ ಮುಂದೆ ಈಗ ಕ್ಯಾಲೆಂಡರ್‌ ಇಲ್ಲ."" ನನ್ನ ಮುಂದೆ ಈಗ ಕ್ಯಾಲೆಂಡರ್‌ ಇಲ್ಲ - ಅಮೇರಿಕದಲ್ಲಿನ ಒಂದು ಅತ್ಯುತ್ತಮ ಸಬೂಬು; ಅದು ಯಾವಾಗಲೂ ಕೆಲಸ ಮಾಡುತ್ತದೆ.

''ಖಂಡಿತ. ಹಾಗೇ ಮಾಡುತ್ತೇನೆ.""

''ಕ್ಷಮಿಸಿ, ಡ್ರೆೃವ್‌ ಮಾಡುವುದು ಮತ್ತು ಮಾತನಾಡುವುದು, ಎರಡನ್ನೂ ಒಟ್ಟಿಗೆ ಮಾಡುವುದರಲ್ಲಿ ನಾನು ಬಹಳ ಕಳಪೆ."" ಸಂಭಾಷಣೆಯನ್ನು ಕಡಿತಗೊಳಿಸುವುದಕ್ಕೆ ಮತ್ತೊಂದು ತಂತ್ರ.

''ತೊಂದರೆ ಇಲ್ಲ.""

''ಫೋನ್‌ ಮಾಡಿದ್ದಕ್ಕೆ ಧನ್ಯವಾದಗಳು."" ಯಾಕೆ ಇವೆಲ್ಲ ಬಂದರೆ ಒಟ್ಟಿಗೇ ಬರುತ್ತವೆ? ಅಷ್ಟೂ ದಿನ ಅವಳ ಜೀವನ ಎಷ್ಟೊಂದು ನಿಸ್ಸಾರವಾಗಿತ್ತು. ಈಗ, ಒಂದೇ ರಾತ್ರಿಯಲ್ಲಿ ಇಬ್ಬರಲ್ಲಿ ಒಬ್ಬನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಬಂದಿದೆ!

ಅನು ಕಛೇರಿಗೆ ತುರಾತುರಿಯಲ್ಲಿ ಬಂದಾಗ ಸಮಯ 9:21. ಅತ್ಯಾತುರದಿಂದ ಕಂಪ್ಯೂಟರ್‌ಗೆ ಲಾಗ್‌-ಇನ್‌ ಆದಳು. 29 ಓದಿರದ ಇ-ಮೇಯ್ಲ್‌ುಗಳು! ಅವಳಿಗೆ ಅಷ್ಟೆಲ್ಲ ಇ-ಮೇಯ್ಲ್‌ುಗಳು ಯಾಕಾಗಿ ಬಂದವು? ಏಕೆಂದರೆ, ನಾನು ಮಾಡಬೇಕಾದ ಕೆಲಸ ಧಂಡಿಯಾಗಿ ಇರುವುದರಿಂದ.

ಈಗ ಅವಳು ಯೋಚಿಸಬೇಕು. ಬುಧವಾರ ಸರಿ ಹೋಗುವುದಿಲ್ಲ. ಬದಲಾಯಿಸಲೇಬೇಕಾದ ಪ್ರಮೇಯ ಬರದ ಹೊರತು ಅಮೇರಿಕನ್ನರು ತಮ್ಮ ಕಾರ್ಯಕ್ರಮದ ವೇಳೆಯನ್ನು ಬದಲಾಯಿಸುವುದಿಲ್ಲ ಎಂದು ಅವಳಿಗೆ ಗೊತ್ತು. ನನಗೆ ದೀಪಕ್‌ ಬಗ್ಗೆ ಏನೂ ಗೊತ್ತಿಲ್ಲ ಎಂದೇ ಹೇಳಬೇಕು. ಅದರಿಂದ ಲಾಭವಾದದ್ದು ಏನೇ ಇರಲಿ, ಹೇಳಬೇಕೆಂದರೆ ದೀಪಕ್‌ಗಿಂತ ಡ್ಯಾನ್‌ ಸ್ವಲ್ಪ ಚೆನ್ನಾಗಿ ಗೊತ್ತು ಅವಳಿಗೆ. ಅಥವ, ಗೊತ್ತಿತ್ತು ಎಂದು ಹೇಳಬೇಕು.

ಹಾಯ್‌ು ದೀಪಕ್‌, ಟೈಪ್‌ ಮಾಡುತ್ತ ಹೋದಳು. ಅನಾಸಕ್ತಿ ಕಾಣಿಸದ ಹಾಗೆ ಈ ಆಹ್ವಾನವನ್ನು ತಿರಸ್ಕರಿಸಲು ಹೇಗೆ ಬರೆದರೆ ಸಾಧ್ಯ? ಮಂಗಳವಾರ ಅಥವ ಬುಧವಾರ ಮಧ್ಯಾಹ್ನದ ಊಟ ಹೇಗೆ? ಈಗ 9:34. ಮೀಟಿಂಗ್‌ಗೆ ಓಡುವುದು ಒಳ್ಳೆಯದು. ಕಾನ್ಫರೆನ್ಸ್‌ ರೂಮಿನತ್ತ ಉದ್ದನೆಯ ಮೊಗಸಾಲೆಯಲ್ಲಿ ಓಡುತ್ತಾ ಹೋದಳು.

ದೀಪಕ್‌ ಯಾಕೆ ಅವಳಿಗೆ ಫೋನ್‌ ಮಾಡುತ್ತಿರುವುದು? ನೆನ್ನೆ ತಾನೆ ನಾವು ಭೇಟಿಯಾಗಿರುವುದು. ಈ ಭೇಟಿ ವ್ಯವಹಾರದ ವಿಷಯಗಳಿಗೆ ಅಲ್ಲ. ಹಾಗೇನಾದರೂ ಇದ್ದಿದ್ದರೆ ಶಿಷ್ಟಾಚಾರದಂತೆ ಮಧ್ಯಾಹ್ನದ ಊಟಕ್ಕೆ ಕರೆಯುತ್ತಿದ್ದ. ವ್ಯವಹಾರ ಮಧ್ಯಾಹ್ನದ ಊಟದ ಸಮಯದಲ್ಲಿ, ಆಮೋದ ರಾತ್ರಿಯೂಟದ ಸಮಯದಲ್ಲಿ.

ಆತ ಮುವ್ವತ್ತರ ವಯೋಮಾನದ ಹಾಗೆ ಕಾಣಿಸುತ್ತಾನೆ. ದೀಪಕ್‌ನ ಪೋಷಕರು ಅವನ ಮದುವೆಗೆ ಯಾಕೆ ಏರ್ಪಾಟು ಮಾಡಿಲ್ಲ? ಅವರು ಮಾಡಿದ್ದರೇನೊ, ಆಮೇಲೆ ಈಗ ವಿಚ್ಚೇದನವಾಗಿರಬೇಕು? ಅವನು ನನ್ನ ಹಿಂದೆ ಯಾಕೆ ಬಿದ್ದಿದ್ದಾನೆ? ಡ್ಯಾನ್‌ ಆದರೋ ಅವಳ ಆಕರ್ಷಣೀಯವಾದ ರಮ್ಯ ಕತೆಗಳನ್ನು ಕೇಳಿ ಅವಳ ಬಗ್ಗೆ ಆಸಕ್ತನಾಗಿರಬಹುದು. ಆದರೆ ಅವನೂ ಅಷ್ಟೇನೂ ರಮ್ಯ ಎಂದು ಭಾವಿಸಿದ ಹಾಗಿಲ್ಲ. ಯಾಕೆಂದರೆ, ಅವಳನ್ನು ಒಂದು ವರ್ಷ ಕಾಲ ಅವನೂ ಮರೆತಿದ್ದನಲ್ಲವೆ?

ಅವಳ ಆಲೋಚನೆಗಳು ಡ್ಯಾನ್‌ ಮತ್ತು ದೀಪಕ್‌ರ ಮಧ್ಯೆ ಜಿಗಿಯುತ್ತಿರುವಾಗ ಮೀಟಿಂಗ್‌ನಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ಗಮನ ಕೊಡಲಾಗದೆ ಸುಮ್ಮನೆ ಕಾಲಕಳೆದಳು. ದೀಪಕ್‌ ಒಂದು ವಾರ ಊರಿನಲ್ಲಿ ಇರದೇ ಇರುವುದರಿಂದ ಅವಳು ಡ್ಯಾನ್‌ನ ಜೊತೆಗಿನ ಭೇಟಿಯನ್ನು ಬದಲಾಯಿಸಬೇಕಿತ್ತೇನೊ? ಅದರೆ ಅವಳು ಈಗಾಗಲೆ ದೀಪಕ್‌ಗೆ ಇ-ಮೇಯ್ಲ್‌ು ಮಾಡಿಯಾಗಿತ್ತು. ಓಹ್‌ ಸರಿ, ಏನು ಮಾಡಿಯಾಗಿದೆಯೊ ಅದು ಮಾಡಿ ಆಗಿದೆ. ಬದಲಾಯಿಸಲು ಆಗುವುದಿಲ್ಲ.

ಅನು ತನ್ನ ಟೇಬಲ್‌ಗೆ ವಾಪಸ್ಸಾದಾಗ ಅವಳ ದೂರವಾಣಿಯ ಧ್ವನಿ ಅಂಚೆಯ ಸಂದೇಶ ದೀಪ ಮಿನುಗುತ್ತಿತ್ತು. ''ಹಾಯ್‌ು, ಅನು, ನಾನು ದೀಪಕ್‌... ಮುಂದಿನ ಶನಿವಾರದಂದು ಡಿನ್ನರ್‌ಗೆ ಆಯೋಜಿಸೋಣ. ನಾನು ಜಪಾನ್‌ನಿಂದ ಶುಕ್ರವಾರ ಹಿಂದಿರುಗಿದ ನಂತರ ಕರೆ ಮಾಡುತ್ತೇನೆ. ನಿಮಗೆ ಇಂದಿನ ದಿನ ಚೆನ್ನಾಗಿರಲಿ.""

ಆತನ ಸ್ವರ ಲವಲವಿಕೆಯಿಂದ ತುಂಬಿತುಳುಕುತ್ತಿತ್ತು. ಆತ ವಾರಕ್ಕಿಂತ ಜಾಸ್ತಿ ಕಾಲ ಹೋಗುತ್ತಿದ್ದಾನೆ. ಆತ ನನ್ನನ್ನು ಯಾಕಾಗಿ ಭೇಟಿಯಾಗ ಬಯಸುತ್ತಾನೆ ಎನ್ನುವುದು ಕುತೂಹಲದ ವಿಷಯ.

(ಸಶೇಷ)

ಅಧ್ಯಾಯ - 13 ಅಧ್ಯಾಯ - 15

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X