ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನು ಬದುಕಿನಿಂದ ದೀಪಕ್‌ ದೂರ.. ಬಹುದೂರ..

By Staff
|
Google Oneindia Kannada News

''ನಾನು ಇನ್ನು ಹೊರಡುತ್ತೇನೆ, ಅನು. ಇನ್ನೊಂದು ದಿನ ಬರುತ್ತೇನೆ.""

''ಸರಿ. ಆದರೆ ಮುಂದಿನ ಸಲ ಬರುವುದಕ್ಕೆ ಮೊದಲು ಕರೆ ಮಾಡು. ನೀನು ಬಾಗಿಲ ಹತ್ತಿರ ಕಾಯುತ್ತ ಕುಳಿತಿರುವುದನ್ನು ನನ್ನ ಕೈಯಲ್ಲಿ ನೋಡಲಾಗುವುದಿಲ್ಲ.""

''ಹೌದೂ, ನೀನು ಎಲ್ಲಿಗೆ ಹೋಗಿರುತ್ತೀಯ?"" ಅವನ ಸ್ವರ ಅಧಿಕಾರಿಕವಾಗಿ ಕೇಳುತ್ತಿರುವ ಹಾಗೆ ಬದಲಾಯಿತು. ''ಇಲ್ಲಿ ಒಬ್ಬಳೆ ಇರಲು ನಿನಗೆ ಬೇಸರವಾಗುವುದಿಲ್ಲವೆ?""

''ಅದು ಅಭ್ಯಾಸವಾಗಿಬಿಡುತ್ತದೆ. ನಾನು ಈಗ ಹಲವಾರು ವರ್ಷಗಳಿಂದ ಒಂಟಿಯಾಗಿಯೆ ಇದ್ದೇನೆ.""

''ಒಂದು ದಿನಕ್ಕೇ ಇದು ನನಗೆ ಹಿಡಿಸುತ್ತಿಲ್ಲ. ಈ ದೇಶ ಬಹಳ ನಿರ್ಜನವಾದದ್ದು!""

''ಅದು ನಿನಗೂ ರೂಢಿಯಾಗುತ್ತದೆ. ಜನ ತನ್ನನ್ನು ಟೀಕಿಸುತ್ತಿದ್ದರೂ ತನ್ನನ್ನು ಬಿಟ್ಟು ಹೋಗದ ಹಾಗೆ ಮಾಡುವುದು ಅಮೇರಿಕಾಗೆ ಗೊತ್ತು.""

''ನೀನು ಒಬ್ಬಳೆ ಏನು ಮಾಡುತ್ತಿರುತ್ತೀಯ?""

''ಪುಸ್ತಕದ ಅಂಗಡಿಗೆ, ಯೋಗಾಭ್ಯಾಸದ ತರಗತಿಗಳಿಗೆ, ಹಾಗು ಕಿಕ್‌ಬಾಕ್ಸಿಂಗ್‌ ಕಲಿಯಲು ಅಂತೆಲ್ಲ ಹೋಗುತ್ತಿರುತ್ತೇನೆ. ಹಾಗೆಯೆ ನನಗೆ ಕೆಲವು ಸ್ನೇಹಿತರೂ ಇದ್ದಾರೆ. ಯಾವಾಗಲೂ ನಾನೊಬ್ಬಳೆ ಇಲ್ಲಿ ಕುಳಿತುಕೊಂಡಿರುತ್ತೇನೆ ಅಂತೇನೂ ಇಲ್ಲ.""

''ಶುಭರಾತ್ರಿ, ಅನು. ನಾನು ನಾಳೆ ಇ-ಮೇಯ್ಲ್‌ು ಮಾಡುತ್ತೇನೆ."" ತನ್ನನ್ನು ಬಿಟ್ಟರೆ ಬೇರೆ ಯಾರೂ ಅಮೇರಿಕಾದಲ್ಲಿ ಪವನ್‌ಗೆ ಗೊತ್ತಿಲ್ಲ ಎಂದು ಅವಳಿಗೆ ಅರಿವಾಯಿತು. ಆದರೆ ಅವನ ಜೊತೆ ಇರುವುದು ಉಲ್ಲಾಸದ, ವಿನೋದದ ವಿಷಯ ಅಲ್ಲವೇ ಅಲ್ಲ. ಅವನು ಇಲ್ಲಿರುವ ಒಂದು ತಿಂಗಳಿನಲ್ಲಿ ಪ್ರತಿದಿನವೂ ತನ್ನ ಮನೆಗೆ ಬರದೆ ಇದ್ದರೆ ಸಾಕು ಎಂದು ಆಶಿಸಿದಳು.

ಅನು ಬಾಗಿಲು ಹಾಕಿಕೊಂಡು ಒಳಗೆ ಬಂದು ಸೀದಾ ಪೋನಿನ ಹತ್ತಿರ ಹೋಗಿ ನಂಬರ್‌ ಡಯಲ್‌ ಮಾಡಲು ಆರಂಭಿಸಿದಳು.

''ಡ್ಯಾನ್‌? ನಾನು ಅನು ಮಾತಾಡ್ತಾಯಿರೋದು.. ""

''ನಾನು ಆಗಲಿಂದ ನಿನಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದೆ!""

''ನನ್ನ ಜೊತೆ ಇಲ್ಲಿ ಸ್ನೇಹಿತರೊಬ್ಬರು ಇದ್ದರು. ಜೊತೆಗೆ ನಾನು ಭಾರತೀಯ ಅಡಿಗೆ ಮಾಡುತ್ತಿದ್ದೆ.""

''ಭಾರತೀಯ ಅಡಿಗೆ! ಮತ್ತೆ ನನ್ನನ್ನು ಆಮಂತ್ರಿಸಿಲ್ಲ?"" ಡ್ಯಾನ್‌ ಸಿಡುಕಿದ ಹಾಗೆ ನಟಿಸಿದ. ಅಥವ ಅವನಿಗೆ ನಿಜವಾಗಿಯೂ ಅಸೂಯೆಯಾಗಿತ್ತ?

''ವಾರಣಾಸಿಯ ನನ್ನ ಬಾಲ್ಯ ಸ್ನೇಹಿತ, ಪವನ್‌, ನೆನಪಿದೆಯಲ್ಲ? ಅವನು ಇಲ್ಲಿಗೆ ತನ್ನ ಸಂಸ್ಥೆಯ ವ್ಯಾವಹಾರಿಕ ಪ್ರವಾಸದ ಮೇಲೆ ಬಂದಿದ್ದಾನೆ.""

''ಓ, ನನಗೆ ನೆನಪಿದೆ."" ಡ್ಯಾನ್‌ನ ಸ್ವರ ಉಲ್ಲಾಸಕ್ಕೆ ತಿರುಗಿತು. ""ನೀನು ಅವನಿಗೆ ಸುದೀರ್ಘ ಕಾಗದಗಳನ್ನು ಬರೆಯುತ್ತಿದ್ದೆ.""

''ಹೌದು! ಅವನು ಹೇಳದೆ ನೇರವಾಗಿ ಮನೆಗೆ ಬಂದಿದ್ದ. ಕರೆಯೇ ಮಾಡಿರಲಿಲ್ಲ. ಅದು ಹಾಗೇನೆ; ಭಾರತದಲ್ಲಿ ನಾವು ಹಾಗೆಯೇ ಮಾಡುತ್ತೇವೆ. ಹಾಗಾಗಿ ಪಾಪ ಅವನು ಒಂದು ಗಂಟೆಗಿಂತ ಹೆಚ್ಚಿಗೆ ಮನೆಯ ಹೊರಗೆ ಕಾಯುತ್ತ ಕುಳಿತಿದ್ದ!""

''ಪ್ರಾಚೀನ ದೇಶ,"" ಡ್ಯಾನ್‌ ಉಸಿರೆಳೆದ. ""ಪ್ರಾಚೀನ ರೀತಿಗಳು.""

''ನೀನು ಹೇಳುವುದನ್ನು ನಿರಾಕರಿಸಲು ಆಗುವುದಿಲ್ಲ. ನಾನು ಫೋರ್ಕಿನಲ್ಲಿ ಊಟ ಮಾಡುತ್ತಿದ್ದದ್ದನ್ನು ನೋಡಿ ಅವನು ನಾನು ಪೂರಾ ಪಾಶ್ಚಾತ್ಯಳಾಗಿಬಿಟ್ಟಿದ್ದೇನೆಂದು ಭಾವಿಸಿದ.""

''ಅಂದರೆ ನೀವು ಇನ್ನೂ ಕೈನಲ್ಲಿಯೆ ಊಟ ಮಾಡುತ್ತೀರಿ ಎಂದೆ ನಿನ್ನ ಮಾತಿನ ಅರ್ಥ?""

''ಹೌದು. ಹಾಗೂ..."" ಭಾರತೀಯ ಊಟತಿಂಡಿಯ ಬಗ್ಗೆ ಮತ್ತು ಅದು ಎಷ್ಟು ಹಿಂದುಳಿದ ದೇಶ ಎನ್ನುವುದರ ಬಗ್ಗೆ ಕೇಳಿಸಿಕೊಳ್ಳುವುದು ಅವನಿಗೆ ಬಹಳ ಇಷ್ಟವಾದ ವಿಷಯ ಎಂದು ಅವಳಿಗೆ ಗೊತ್ತಿತ್ತು. ''ನಾವು ಟಾಯ್ಲೆಟ್‌ ಪೇಪರ್‌ ಸಹ ಉಪಯೋಗಿಸುವುದಿಲ್ಲ.""

''ನಮ್ಮನ್ನು ದೇವರೇ ಕಾಪಾಡಬೇಕು! ನಾನು ಭಾರತಕ್ಕೆ ಹೋದಾಗ ನನ್ನ ಸ್ವಂತ ಟಾಯ್ಲೆಟ್‌ ಸುರುಳಿ ತರುತ್ತೇನೆ. ಆದರೆ ಅದಕ್ಕಿಂತ ಮೊದಲು ಈಗ ನಿನ್ನ ಮನೆಯಲ್ಲಿ ಮಿಕ್ಕಿರುವುದನ್ನು ತಿನ್ನಲು ಬರಲೆ?""

ಡ್ಯಾನ್‌ ಹಾಗೆ ಹೇಳಿದ್ದು ಅವಳನ್ನು ನಗಿಸಿತು. ''ನಿನಗೆ ಇಷ್ಟವಾಗುವುದಿಲ್ಲ. ಅದು ಬೇಳೆಯ ಸಾರು ಹಾಗು ಅನ್ನ. ಪವನ್‌ ಸಸ್ಯಾಹಾರಿ.""

''ಹಾಗಿದ್ದರೆ ಅವನು ತೆಳ್ಳಗಿನ ಸೊಣಕಲ ಮನುಷ್ಯ ಇರಬೇಕು. ಅವರು ಅಂತಹುದನ್ನು ತಿಂದು ಅದು ಹೇಗೆ ಮಾಂಸಖಂಡಗಳನ್ನು ಬೆಳೆಸುತ್ತಾರೆ?"" ಅವನು ಅಸೂಯೆ ಪಟ್ಟುಕೊಂಡ ಹಾಗೆ ಕಾಣಿಸಿತು.

''ಹೇಳಬೇಕೆಂದರೆ, ಪವನ್‌ ಒಳ್ಳೆಯ ಎತ್ತರ ಇರುವ, ದೇಹಧಾರ್ಢ್ಯ ಇರುವಂತಹ ಮನುಷ್ಯ. ನೋಡುವುದಕ್ಕೆ ಚೆನ್ನಾಗಿಯೂ ಇದ್ದಾನೆ. ನಾವು ಭಾರತದಲ್ಲಿ ಇಲ್ಲಿಗಿಂತ ವಿಭಿನ್ನರೀತಿಯ ಆಹಾರ ಪದ್ದತಿ ಹೊಂದಿದ್ದೇವೆ, ಅಷ್ಟೆ.""

''ಹ್ಞಾಂ, ಇರಲೇಬೇಕು. ದನಗಳನ್ನು ಪೂಜಿಸುವುದು ಹಾಗು ಅವನ್ನು ಎಂದೂ ತಿನ್ನದೆ ಇರುವುದು... ಅಥವ ಅಲ್ಲಿಯ ಮುಸ್ಲಿಮರು ತಿನ್ನುತ್ತಾರಾ?""

''ಡ್ಯಾನ್‌, ನೀನೀಗ ಜಿಮ್‌ಗೆ ಹೋಗಿ ಆ ಭಾರಗಳನ್ನು ಎತ್ತು. ಕೆಟ್ಟ ಜನರನ್ನು ಬೆನ್ನಟ್ಟಲು ನಿನಗೆ ಮಾಂಸಖಂಡಗಳು ಬೇಕು. ಈಗ ನನ್ನ ಭಾರತೀಯ ಸ್ನೇಹಿತರ ಬಗ್ಗೆ ತಮಾಷೆ ಮಾಡುವುದನ್ನು ನಿಲ್ಲಿಸು.""

'"ಹೇ, ನಾನು ಒಬ್ಬ ಪತ್ತೆದಾರ, ನೆನಪಿದೆಯಾ? ಹಾದಿಬದಿಯ ಪೋಲಿಸರು ಮಾಡುವಂತಹ ಕೆಲಸ ಇನ್ನು ಮೇಲೆ ನನಗಿಲ್ಲ.""

''ಸರಿ, ಹಾಗಿದ್ದರೆ. ನಿನ್ನ ಜೊತೆ ಮಾತಾಡಿದ್ದು ಚೆನ್ನಾಗಿತ್ತು. ಆಮೇಲೆ ಕರೆ ಮಾಡುತ್ತೇನೆ.""

ಡ್ಯಾನ್‌ ತಮಾಷೆಯ, ಆಹ್ಲಾದಕರ, ಹಾಗು ಯಾವಾಗಲೂ ಸರಸವಾಗಿ ಮಾತಾಡುವವನಾಗಿದ್ದ. ಈಗಿನ ಸಂದರ್ಭದಲ್ಲಿ ಅವಳ ಮನಸ್ಸನ್ನು ಹಗುರ ಮಾಡಲು ಡ್ಯಾನ್‌ ಇಲ್ಲದೆ ಹೋಗಿದ್ದರೆ ಅವಳಿಗೆ ತನ್ನ ಬಗ್ಗೆಯೆ ಪಾಪ ಅನ್ನಿಸುತ್ತಿತ್ತು. ನನಗೆ ಅವನ ಮೇಲೆ ಮನಸ್ಸಿದೆ. ಅವಳು ಒಪ್ಪಿಕೊಳ್ಳಲೇಬೇಕಾಯಿತು. ಅದು ಯಾವಾಗಲೂ ಇತ್ತು.

ಅಧ್ಯಾಯ - 34 ಅಧ್ಯಾಯ - 36
(c) ಹಕ್ಕುಗಳು : ಲೇಖಕರದು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X