ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನು ಬದುಕಿನಿಂದ ದೀಪಕ್‌ ದೂರ.. ಬಹುದೂರ..

By Staff
|
Google Oneindia Kannada News

''ಅನು, ನೀನು ಒಬ್ಬಳೇ ಈ ಮನೆಯಲ್ಲಿ ನಡೆಸುತ್ತಿರುವ ಜೀವನ ಇದೆಂತಹದು?""

''ಇದು ಅದ್ಭುತವಾದ ಜೀವನ! ಯಾಕೆ, ಈ ಮನೆಗೆ ಏನಾಗಿದೆ?""

''ಏನೂ ಇಲ್ಲ. ಅದೇನೂ ಮುಖ್ಯ ಅಲ್ಲ, ಬಿಡು.""

''ಭಾರತದಲ್ಲಿ ಎಲ್ಲಾ ಹೇಗಿದೆ ಹೇಳು.""

''ನೀನು ಭಾರತ ಬಿಟ್ಟು ಬಂದ ಮೇಲೆ ಅಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಬೆಂಗಳೂರಿನಲ್ಲಿ ಹೈಟೆಕ್‌ ಬಹಳ ವೇಗವಾಗಿ ಬೆಳವಣಿಗೆಯಾಗುತ್ತಿದೆ. ನೀನು ವಾಪಸ್‌ ಬಂದುಬಿಡಬೇಕು. ನಿನ್ನ ಪದವಿ ಹಾಗು ನಿನಗಿರುವ ಅನುಭವಕ್ಕೆ ನಿನಗೆ ಸುಲಭವಾಗಿ ಒಳ್ಳೆಯ ಮ್ಯಾನೇಜ್‌ಮೆಂಟ್‌ ಕೆಲಸವೆ ಸಿಗುತ್ತದೆ.""

''ಸ್ವಲ್ಪ ಕಾಫಿ ಕೊಡಲೆ, ಪವನ್‌? ನಾನು ಅಡಿಗೆ ಮಾಡಲು ಪ್ರಾರಂಭಿಸುತ್ತೇನೆ. ಕೋಳಿಸಾರು ಹಾಗು ಅನ್ನ ಮಾಡಲೆ?""

''ನಾನು ಸಸ್ಯಾಹಾರಿ.""

ಓ, ಅದು ನಿಜ. ಪವನ್‌ ಬ್ರಾಹ್ಮಣ. ಸಸ್ಯಾಹಾರ ಮಾತ್ರ ತೆಗೆದುಕೊಳ್ಳುವ ಜಾತಿಗೆ ಸೇರಿದವನು.

''ಸರಿ. ಬೇಳೆಸಾರು, ಅನ್ನ ಹಾಗು ಹುರುಳಿಕಾಯಿ ಪಲ್ಯ ಮಾಡುತ್ತೇನೆ. ಮಜ್ಜಿಗೆ ಕೂಡ ಇದೆ.""

''ನೀನು ಈಗಲೂ ಭಾರತೀಯ ಅಡಿಗೆ ಮಾಡುತ್ತೀಯ?""

''ಆಗಾಗ. ನನ್ನ ಹತ್ತಿರ ಎಲ್ಲ ರೆಡಿಮೇಡ್‌ ಪದಾರ್ಥಗಳು ಇವೆ.""

ಅವನು ಅಡಿಗೆ ಮನೆಯ ಬಾಗಿಲಿನ ಹತ್ತಿರ ನಿಂತು ನೋಡುತ್ತಿರಲು ಅವಳು ಅಡಿಗೆ ಮಾಡಲು ಆರಂಭಿಸಿದಳು. ಟಿಪಿಕಲ್‌ ಭಾರತೀಯ ಗಂಡಸು; ಕೇಳುವ ತನಕ ಸಹಾಯ ಮಾಡಲು ಬರುವುದಿಲ್ಲ.

''ಮತ್ತೆ,"" ಅವನು ಕೇಳಿದ. ''ನೀನು ಭಾರತಕ್ಕೆ ವಾಪಸ್‌ ಬರುತ್ತೀಯಾ?""

''ನನಗೆ ಬರಬೇಕೆಂದಿದೆ. ಆದರೆ ಯಾವಾಗ ಎಂದು ಗೊತ್ತಿಲ್ಲ.""

''ಅಂಕಲ್‌, ಆಂಟಿ, ನೀತು ಅವರೆಲ್ಲ ನಿನ್ನ ಬಗ್ಗೆ ಬಹಳ ಚಿಂತೆ ಮಾಡುತ್ತಾರೆ. ನಿಮ್ಮ ಅಮ್ಮನನ್ನು ಕಳೆದ ಸಾರಿ ನೋಡಿದಾಗ ಅವರು ಅಳುತ್ತಿದ್ದರು. ನಿನಗೆ ಇಷ್ಟೆಲ್ಲ ಆಗಿದ್ದಕ್ಕೆ ಅವರಿಗೆ ಬಹಳ ನೋವಾಗಿದೆ.""

''ನನಗೆ ಗೊತ್ತು. ನಾನೂ ಅವರ ಜೊತೆ ಬಹಳ ಮಾತನಾಡುತ್ತೇನೆ.""

ಪೋನ್‌ ರಿಂಗುಣಿಸಿತು. ಅದು ಡ್ಯಾನ್‌ನದೆ ಆಗಿದ್ದರೆ ಅದಕ್ಕೆ ನಾನು ಉತ್ತರಿಸುವುದಿಲ್ಲ. ಪವನ್‌ಗೆ ಇವೆಲ್ಲ ಅರ್ಥವಾಗುವುದಿಲ್ಲ. ಪೋನ್‌ ನಿನಾದ ನಿಂತಿತು. ಆದರೆ ತಕ್ಷಣ ಅವಳ ಸೆಲ್‌ಪೋನ್‌ ರಿಂಗುಣಿಸಲಾರಂಭಿಸಿತು. ಅದರ ಪರದೆ ಡ್ಯಾನ್‌ ಎಂದು ತೋರಿಸಿತು.

ಪವನ್‌ ಅಸಮ್ಮತಿ ಸೂಚಿಸಿದ. ''ನೀನು ನಿನ್ನ ಪೋನ್‌ ಕರೆಗಳಿಗೇ ಉತ್ತರಿಸುವುದಿಲ್ಲ. ಹಾಗಿದ್ದರೆ ನಾನು ಇದಕ್ಕೆ ಮುಂಚೆ ನಿನಗೆ ಪೋನ್‌ ಮಾಡಿದ್ದರೆ ಅದರಿಂದ ಏನು ವ್ಯತ್ಯಾಸ ಆಗುತ್ತಿತ್ತು?""

''ಅವರು ಯಾರಾದರೂ ಸರಿ, ಸಂದೇಶ ಬಿಡುತ್ತಾರೆ. ನೀನು ಇಷ್ಟು ದಿನಗಳ ನಂತರ ಭೇಟಿಯಾಗಿದ್ದೀಯ, ಅದಕ್ಕೆ ನನಗೆ ಈಗ ಬೇರೆಯವರ ಜೊತೆ ಮಾತನಾಡಲು ಇಷ್ಟವಿಲ್ಲ.""

ಅಡಿಗೆ ಒಲೆಯ ಮೇಲೆ ಕುದಿಯುತ್ತಿರುವಾಗ ಅನು ಊಟದ ಮೇಜನ್ನು ಅಣಿಗೊಳಿಸಲಾರಂಭಿಸಿದಳು. ತನಗೆ ಬಡಿಸಿಕೊಳ್ಳುವುದಕ್ಕೆ ಮೊದಲು ಅವಳು ಅವನಿಗೆ ಅನ್ನ ಮತ್ತು ಅದರ ಮೇಲೆ ಸಾರು ಬಡಿಸಿ, ಪಕ್ಕದಲ್ಲಿ ಪಲ್ಯ ಬಡಿಸಿದಳು. ಅವಳು ಕುಳಿತುಕೊಳ್ಳುವುದಕ್ಕೆ ಮೊದಲೆ ಪವನ್‌ ತನ್ನ ಬೆರಳಿನಿಂದ ಅನ್ನವನ್ನು ಕಲೆಸಲು ಆರಂಭಿಸಿದ. ಕೈಯಲ್ಲಿ ತಿನ್ನುವುದು ಭಾರತದಲ್ಲಿ ರೂಢಿಯಲ್ಲಿರುವ ಪದ್ಧತಿ. ಅವಳು ಪಾಶ್ಚಾತ್ಯ ನಡವಳಿಕೆಗಳಿಗೆ ಅವಳು ಎಷ್ಟು ಒಗ್ಗಿಕೊಂಡುಬಿಟ್ಟಿದ್ದಳೆಂದರೆ ಅದನ್ನು ನೋಡಿ ಅವಳಿಗೆ ವಾಕರಿಕೆಯಾಯಿತು. ಪವನ್‌ಗೆ ಕೂಡ ಅವಳನ್ನು ನೋಡಿ ತಮಾಷೆ ಎನಿಸಿತು. ''ನೀನು ಯಾಕೆ ಅನ್ನ ಮತ್ತು ಬೇಳೆಸಾರನ್ನು ಫೋರ್ಕಿನಲ್ಲಿ ತಿನ್ನುತ್ತಿದ್ದೀಯ?""

ಅನು ಮುಗುಳ್ನಕ್ಕಳು. ''ಈಗ ಅದು ಅಭ್ಯಾಸ ಆಗಿಬಿಟ್ಟಿದೆ.""

''ಅಭ್ಯಾಸ? ಭಾರತದಲ್ಲಿ ಕೆಲವರು ಚಮಚದಲ್ಲಿ ತಿನ್ನುತ್ತಾರೆ. ಆದರೆ ಯಾರೂ ಫೋರ್ಕಿನಲ್ಲಿ ತಿನ್ನುವುದಿಲ್ಲ.""

ಈ ವಿಷಯದ ಬಗ್ಗೆ ಮಾತುಕತೆ ಇಲ್ಲಿಗೇ ನಿಲ್ಲಿಸಬೇಕು. ಕಡೆಗೂ ಅವಳು ಅವನ ತಾಯಿಯ ಬಗ್ಗೆ ವಿಚಾರಿಸಲು ಧೈರ್ಯ ಕೂಡಿಸಿಕೊಂಡಳು. ''ಆಂಟಿ ಹೇಗಿದ್ದಾರೆ?""

''ಅವರು ಈಗಲೂ ವಾರಣಾಸಿಯಲ್ಲಿಯೇ ಇದ್ದಾರೆ. ನಾನು ಭಾರತ ಬಿಡುವ ಎರಡು ದಿನ ಮುಂಚೆ ನನ್ನನ್ನು ನೋಡಲು ಅವರು ಬೆಂಗಳೂರಿಗೆ ಬಂದಿದ್ದರು. ಅವರು ನನ್ನ ಜೊತೆಯೆ ಇರಲಿ ಎಂದು ನಾನು ಎರಡು ಕೋಣೆಯ ಅಪಾರ್ಟ್‌ಮೆಂಟ್‌ ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದೇನೆ. ಆದರೆ ಅವರು ಇರುವುದಿಲ್ಲ. ಯಾವಾಗಲೂ ನಮ್ಮ ತಂದೆಯವರ ಬಳಿಗೆ ವಾಪಸಾಗುತ್ತಿರುತ್ತಾರೆ. ಈ ಸಲ ಅವರು ಬೆಂಗಳೂರಿನಿಂದ ತಿರುಪತಿಗೆ ತೀರ್ಥಯಾತ್ರೆ ಹೋಗಬೇಕೆಂದು ಹೇಳುತ್ತಿದ್ದರು.""

''ನೀನು ಹಿಂದಿರುಗುವ ತನಕ ಅವರು ಬೆಂಗಳೂರಿನಲ್ಲಿಯೆ ಇರುತ್ತಾರಾ?""

''ಹಾಗೆಂದುಕೊಂಡಿದ್ದೇನೆ. ನಾನು ಇಲ್ಲಿ ಹೆಚ್ಚುಕಮ್ಮಿ ಒಂದು ತಿಂಗಳು ಇರುತ್ತೇನೆ.""

''ನೀನು ಇವತ್ತು ಬೆಳಿಗ್ಗೆ ತಾನೆ ಇಲ್ಲಿಗೆ ಬಂದಿದ್ದೀಯ. ನಿನಗೆ ಜೆಟ್‌ಲ್ಯಾಗ್‌ ಆಗಿಲ್ಲವೆ?""

''ಇನ್ನೂ ಇಲ್ಲ. ನನಗೇನೂ ಅನ್ನಿಸುತ್ತಿಲ್ಲ. ನಾನು ವಿಮಾನದಲ್ಲಿ ಚೆನ್ನಾಗಿ ನಿದ್ದೆ ಹೋದೆ.""

ಜೀವನ ಎಷ್ಟೊಂದು ವಿಚಿತ್ರ ಅನ್ನಿಸುತ್ತೆ! ಅವಳು ಹಿಂದೆಲ್ಲ ಪವನ್‌ನ ಬಗ್ಗೆ ಯೋಚಿಸುತ್ತಿದ್ದಳು ಹಾಗು ಅವನಿಗೆ ವರ್ಷಗಟ್ಟಲೆ ಪತ್ರ ಬರೆಯುತ್ತಿದ್ದಳು. ಈಗ ಅವನು ಇಲ್ಲಿಯೇ ಇದ್ದಾನೆ, ಅವಳ ಮುಂದೆಯೇ ಕುಳಿತಿದ್ದಾನೆ. ಜೀವನಕ್ಕೆ ತನ್ನದೇ ಆದ ವಿಚಿತ್ರವಾದ ರೀತಿಯಲ್ಲಿ ಜನರನ್ನು ಒಂದುಗೂಡಿಸುವ ಮತ್ತು ಬೇರೆ ಬೇರೆ ಮಾಡುವ ಮಾರ್ಗಗಳು ಇವೆ.

''ಅಶ್ವಿನ್‌ ಹೇಗಿದ್ದಾನೆ? ಅವನಿಗೆ ಮದುವೆ ಆಯಿತೆ?""

''ಅವನೀಗ ದಿಲ್ಲಿಯಲ್ಲಿದ್ದಾನೆ. ಈ ವರ್ಷ ಅವನ ಎಮ್‌.ಡಿ ಮುಗಿಯುತ್ತದೆ. ಅವನಿಗೆ ದಿಲ್ಲಿಯಲ್ಲಿ ಪರಿಚಯವಾದ ಡಾಕ್ಟರ್‌ ಒಬ್ಬಳನ್ನು ಮದುವೆಯಾಗಲಿದ್ದಾನೆ. ಆಕೆ ಪಂಜಾಬಿನವಳು.""

ಪೋನ್‌ ಮತೊಮ್ಮೆ ರಿಂಗುಣಿಸಿತು. ಡ್ಯಾನ್‌ ಎಷ್ಟೊಂದು ಸಲ ಕರೆ ಮಾಡುತ್ತಾನೆ. ಅವನು ನಿಜವಾಗಿಯೂ ಅವಳನ್ನು ಇಷ್ಟಪಡುತ್ತಾನಾ ಅಥವ ಅವಳ ಬಗ್ಗೆ ಕೇವಲ ಕಾಳಜಿ ಮಾತ್ರ ಇದೆಯಾ? ಅವಳಿಗೆ ಎಂದೂ ಹೇಳಲಾಗಿರಲಿಲ್ಲ.

ಪವನ್‌ ಅವಸರದಲ್ಲಿ ಮೇಲೆದ್ದು ತಟ್ಟೆಯನ್ನು ಮೇಜಿನ ಮೇಲೆಯೆ ಬಿಟ್ಟು ಸಿಂಕಿನಲ್ಲಿ ಕೈ ತೊಳೆಯಲು ಹೋದ. ಅನು ಇಂತಹ ಎಷ್ಟೊ ಸಣ್ಣಪುಟ್ಟ ಕುಂದುಗಳನ್ನು ಮರೆತಿದ್ದಳು. ಭಾರತೀಯ ಗಂಡಸರು ಎಂದೂ ತಮ್ಮ ಊಟದ ತಟ್ಟೆಗಳನ್ನು ತೆಗೆಯುವುದಿಲ್ಲ!

ಮುಂದೆ ಓದಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X