ರವಿಕೃಷ್ಣಾರೆಡ್ಡಿಯರ 'ಎದೆಯ ಕೂಗು ಮೀರಿ'ದ ಮಾತುಗಳು..

ಪ್ರಿಯ ಓದುಗರೆ,
ಸರಿಯಾಗಿ ವರ್ಷದ ಹಿಂದೆ ಆರಂಭವಾದ 'ಎದೆಯ ಕೂಗು ಮೀರಿ..." ಕಾದಂಬರಿಯ ಕೊನೆಯ ಕಂತು ಕಳೆದ ಸೋಮವಾರ ಪ್ರಕಟವಾಗಿದೆ. ಈ ಒಂದು ವರ್ಷದಲ್ಲಿ ಅನೇಕ ಓದುಗರು ಕಾದಂಬರಿ ಬಗ್ಗೆ ಹಲವಾರು ರೀತಿಯ ಪತ್ರಗಳನ್ನು ಬರೆದು ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಪ್ರಕಟವಾಗಬೇಕಾದ ಕಂತು ಅಂದು ಪ್ರಕಟವಾಗದೆ ಹೋದರೆ ಯಾಕೆ ಇನ್ನೂ ಪ್ರಕಟವಾಗಿಲ್ಲ ಎನ್ನುವ ಪತ್ರಗಳಿಂದ ಹಿಡಿದು, ಅನುವಾದ ಶೈಲಿ ಮತ್ತು ಕಥಾ ಹಂದರವನ್ನು ಟೀಕಿಸಿ ಕೆಲವು, ಮೆಚ್ಚಿಕೊಂಡು ಹಲವು, ಸ್ವಲ್ಪ ಅಸಭ್ಯವಾಗಿ, ಅಶ್ಲೀಲವಾಗಿ ವೈಯಕ್ತಿಕ ಟೀಕೆ ಮಾಡಿದಂತಹ ಪತ್ರಗಳನ್ನೂ ಕೆಲವು ಓದುಗರು ಕಳಿಸಿದ್ದಾರೆ. ಧನ್ಯವಾದ.
ಯಾವುದೊ ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯನ್ನು ತ್ಯಾಗ, ಪಾತಿವ್ರತ್ಯ, ಪ್ರೇಮ, ಸಹನಶೀಲತೆ, ಪರಂಪರೆ, ಸಂಸ್ಕೃತಿಯ ಹೆಸರಿನಲ್ಲಿ ವೈಭವೀಕರಿಸಿ, ಕಲ್ಪನಾಶಕ್ತಿಯಿರುವ ಯಾರು ಬೇಕಾದರೂ ದಿನಕ್ಕೊಂದು ಕತೆ, ವಾರಕ್ಕೊಂದು ಕಾದಂಬರಿ ಬರೆಯಬಹುದು; ಬರೆದಿದ್ದಾರೆ; ಬರೆಯುತ್ತಿದ್ದಾರೆ. ಅವುಗಳಲ್ಲಿ ಬಹುಪಾಲು ಸಮಯ ಕಳೆಯಲು ಓದಲು ಲಾಯಕ್ಕಾದ ಕೃತಿಗಳಾಗುತ್ತವೆಯೆ ಹೊರತು ಅವಕ್ಕೆ ಸಾರ್ವಕಾಲೀನ ಸಮಾನತೆಯ ತತ್ವಗಳಾಗಲಿ, ಸಂದೇಶಗಳಾಗಲಿ, ಸತ್ಯವಾಗಲಿ ಇರುವುದಿಲ್ಲ. ಓದಿದ ಬಳಿಕ ಹಿತಾನುಭವವಾಗಬಹುದು. ಆದರೆ ಯಾರನ್ನೂ ಅದು ಕಾಡದೆ ಹೋಗಬಹುದು; ಇಲ್ಲವೆ ತಮ್ಮ ಅಥವ ಬೇರೆಯವರ ಕೆಟ್ಟ ನಡವಳಿಕೆಯನ್ನು ತಿದ್ದುವ, ಅಥವ ತಮಗೆ ಬೇಕಾದವರ ಒಳ್ಳೆಯ ನಡವಳಿಕೆಯನ್ನು ಗಮನಿಸುವ, ಪ್ರಶಂಸಿಸುವ ಯಾವುದೆ ಒಳನೋಟ ತೋರಿಸದೆ ಹೋಗಬಹುದು. ಅಂತಹವನ್ನು ಓದಿದ ಮೇಲೆ ಯಾರೂ ಅದರ ಬಗ್ಗೆ ಚರ್ಚಿಸುವುದಿಲ್ಲ; ಟೀಕೆ ಮಾಡುವುದಾಗಲಿ ಮೆಚ್ಚಿಕೊಂಡು ಲೇಖಕರಿಗೆ ಪತ್ರ ಬರೆಯುವುದಾಗಲಿ ಅಪರೂಪವೆ.
ಯಾವುದೊ ಒಂದನ್ನು ಸಾಮಾಜಿಕ ಸಮಸ್ಯೆ ಎಂದ ಮಾತ್ರಕ್ಕೆ ಅದು ಎಲ್ಲರ ಮನೆಯ ಸಮಸ್ಯೆಯೇನೂ ಅಲ್ಲ. ಆದರೆ ಅದಕ್ಕೊಂದು ಪ್ಯಾಟರ್ನ್ ಇರುತ್ತದೆ. ಅದನ್ನು ಗುರುತಿಸುವುದು ಸುಲಭವಾದ್ದರಿಂದ ಅದನ್ನು ತಡೆಗಟ್ಟಲು ಸಮಾಜದ ಸಹಾಯ, ಸರ್ಕಾರದ ಕಾನೂನುಗಳ ಅವಶ್ಯಕತೆಯಿರುತ್ತದೆ. ಎಲ್ಲಕ್ಕಿಂತ ಮೊದಲು ಆ ಸಮಸ್ಯೆಯನ್ನು ಗಂಭೀರವಾಗಿ, ಹಿಂಜರಿಯದೆ ಮಾತನಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು 'ಎದೆಯ ಕೂಗು ಮೀರಿ..."ಯನ್ನು ಗಮನಿಸಬೇಕಾಗುತ್ತದೆ. ಹಾಗೂ ಇಂತಹ ಒಂದು ಸಾಮಾಜಿಕ ಸಮಸ್ಯೆಯ ಹಿನ್ನೆಲೆ ಇಟ್ಟುಕೊಂಡು ಕತೆ-ಕಾದಂಬರಿಯನ್ನು ಬರೆಯುವ ಲೇಖಕ ಎಲ್ಲಾ ಬಗೆಯ ಪ್ರಶಂಸೆ-ಟೀಕೆಗೆ ಸಿದ್ದವಾಗಿಯೆ ಬರೆಯಬೇಕಾಗುತ್ತದೆ.
ಈ ಸಮಯದಲ್ಲಿ ನಿಮ್ಮ ಎಲ್ಲಾ ಟೀಕೆ, ವಿಮರ್ಶೆ, ಅಭಿಪ್ರಾಯಗಳಿಗೆ ಮೂಲ ಲೇಖಕರಾದ ಅಸಿತ ಪ್ರಭುಶಂಕರ್‌ರವರಿಂದಲೂ ಮತ್ತು ಅನುವಾದಕನಾದ ನನ್ನಿಂದಲೂ ಸ್ವಾಗತವಿದೆ. ದಯವಿಟ್ಟು ಬರೆಯಿರಿ. ತಮ್ಮಲ್ಲಿ ನನ್ನ ಒಂದೇ ಒಂದು ಮನವಿ ಏನೆಂದರೆ ಅನಾಮಿಕರಾಗಿ ಬರೆಯಬೇಡಿ; ಅಶ್ಲೀಲವಾದ ವೈಯಕ್ತಿಕ ಟೀಕೆ ಬೇಡ ಎಂದಷ್ಟೆ. ಎಂತಹುದ್ದನ್ನೆ ಆಗಲಿ ಸಭ್ಯವಾಗಿಯೆ ಕಠಿಣವಾಗಿ ಟೀಕಿಸಬಹುದು. ಅಸಭ್ಯವಾಗಿ ಟೀಕಿಸುವವರು ಹಾಗೆ ಮಾಡಲಾಗದೆ ಮೈ ಪರಚಿಕೊಳ್ಳುವವರು ಮಾತ್ರವಾಗಿರುತ್ತಾರೆ.
ಇಲ್ಲಿಯ ತನಕ ಪತ್ರ ಬರೆದವರಿಗೂ, ಮುಂದೆ ಬರೆಯುವವರಿಗೂ, ಓದುಗರಿಗೂ, ಇಂತಹ ವಿಭಿನ್ನ ಕಾದಂಬರಿಯನ್ನು ಚಾಚೂ ತಪ್ಪದೆ ಪ್ರಕಟಿಸಿದ ದಟ್ಸ್‌ಕನ್ನಡ ಅಂತರ್‌ಜಾಲ ತಾಣಕ್ಕೂ ನನ್ನ ಪ್ರೀತಿಪೂರ್ವಕ ಧನ್ಯವಾದ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications