• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪಕ್‌ ಆ ರಾತ್ರಿ ಮತ್ತೆ ಮೃಗವಾಗಲಿಲ್ಲ.. ಪ್ರೇಮಿಯಾದ!

By Super
|

ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ

ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

ravikreddy@yahoo.com

9 ಗಂಟೆಗಳನ್ನು ಬೆಂಗಳೂರಿನಿಂದ ಫ್ರ್ಯಾಂಕ್‌ಫರ್ಟ್‌ಗೆ ಹಾಗು ಅಲ್ಲಿಂದ ಕ್ಯಾಲಿಫೋರ್ನಿಯಾಗೆ 11 ಗಂಟೆಗಳನ್ನು ಅನು ಮತ್ತು ದೀಪಕ್‌ ವಿಮಾನದಲ್ಲಿ ಕಳೆದರು. ಮೊದಲು ಕೆಲವು ಗಂಟೆಗಳ ಕಾಲ ಅವರು ಮಾತನಾಡಿದರು. ಅವನೊಬ್ಬ ಆಸಕ್ತಿಕರ ಮಾತುಗಾರನಾಗಿದ್ದ. ಅದೇ ಅಲ್ಲವೆ ಬಾಸ್ಟನ್‌ ವಿಮಾನದಲ್ಲಿ ಅವನತ್ತ ಅವಳ ಮನಸೆಳೆದಿದ್ದು? ಒಬ್ಬ ಗಂಡಸಿನ ಜೊತೆ ಹೇಗೆ ಜೀವನ ಮಾಡುವುದು ಎಂಬ ಸುಳಿವೇ ನನಗಿಲ್ಲ. ಆ ಗಂಡಸು ಈಗ ಗಂಡ ಬೇರೆ! ಇದರಿಂದಲೆ ಅಮೆರಿಕಾದವರು ಮದುವೆ ಆಗುವ ಮುಂಚೆ ಜೊತೆಯಾಗಿ ಕೆಲಕಾಲ ಜೀವನ ಮಾಡುತ್ತಾರೆ.

ದೀಪಕ್‌ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲವು ಪವರ್‌ಪಾಯಿಂಟ್‌ ಪ್ರೆಸೆಂಟೇಷನ್ಸ್‌ ಒಟ್ಟುಗೂಡಿಸಲು ಆರಂಭಿಸಿದ. ಅನು ತನ್ನ ಕಿಟಕಿಯ ಆಚೆ ಬೆಳದಿಂಗಳಿನಿಂದ ಬೆಳಗುತ್ತಿರುವ ಮೋಡಗಳನ್ನು ದಿಟ್ಟಿಸಿ ಕೆಳಗೆ ನೋಡುತ್ತಿದ್ದಳು. ಕತ್ತಲನ್ನು ಕಂಡರೆ ಈಗ ಆಗುವಷ್ಟು ಭಯ ಅವಳಿಗೆ ಈ ಹಿಂದೆ ಎಂದೂ ಆಗುತ್ತಿರಲಿಲ್ಲ. ನನಗೆ ಆ ಬೃಹದಾಕಾರದ ಮನೆಯಲ್ಲಿ ಇರಲು ಭಯ. ಅವನೇನಾದರೂ ನನ್ನ ಮೇಲೆ ದೌರ್ಜನ್ಯ ಮಾಡಿದರೆ, ನಾನು ಸಹಾಯಕ್ಕಾಗಿ ಕಿರುಚಿಕೊಂಡರೂ ಅದು ಯಾರೊಬ್ಬರಿಗೂ ಕೇಳಿಸುವುದಿಲ್ಲ.

ಸ್ಯಾನ್‌ಫ್ರಾನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಅವರನ್ನು ದೀಪಕ್‌ನ ಸ್ನೇಹಿತ ಬರಮಾಡಿಕೊಂಡು ಅವರ ಮನೆಗೆ ತಲುಪಿಸಿದ. ಅವಳಿಗೆ ಇಲ್ಲಿಗೆ ವಾಪಸ್ಸಾಗಿದ್ದು ಒಂದು ರೀತಿ ವಿಚಿತ್ರವಾಗಿ ಭಾಸವಾಯಿತು. ಭಾರತ ಎಷ್ಟೊಂದು ಆತ್ಮೀಯವಾಗಿತ್ತು ಹಾಗೂ ಜನರಿಂದ ತುಂಬಿತ್ತು; ಈ ದೇಶದಲ್ಲಿ ಎಷ್ಟೊಂದು ಮೌನವಿದೆ. ಅವಳಿಗೆ ಏಕೆ ಅಷ್ಟೊಂದು ಒಬ್ಬಂಟಿ ಭಾವನೆ ಹುಟ್ಟಿತು? ಈಗ, ಅದೂ ಮದುವೆ ಎಲ್ಲಾ ಆದ ಮೇಲೆ ಅವಳಿಗೆ ಬೇರೆ ಭಾವನೆಯೆ ಬರಬೇಕಿತ್ತಲ್ಲವೆ? ಆದರೆ ಅವಳಿಗೆ ಈ ಮನೆಗೆ ಬರಲು ಭಯವಾಗುತ್ತಿತ್ತು.

ಅನು ಅಲ್ಲಿಯೆ ಪಕ್ಕದ ಸ್ಯಾನ್‌ಹೋಸೆಯಲ್ಲಿರುವ ತನ್ನ ಚಿಕ್ಕ ಗಜಿಬಿಜಿಯಾದ ಮನೆಯನ್ನು ಬಹಳ ಬಯಸಿದಳು. ಯಾವುದೇ ಪ್ರವಾಸದಿಂದ ಹಿಂದಿರುಗುತ್ತಿದ್ದಾಗ ಖಾಲಿಯಾಗಿ ತನ್ನನ್ನು ಎದುರುಗೊಳ್ಳುತ್ತಿದ್ದ ಆ ಮನೆಯೆ ಈಗ ಆಗುತ್ತಿರುವ ಭಯಕ್ಕಿಂತ ವಾಸಿಯಾಗಿತ್ತು. ಆದರೆ ಅವಳು ಭಾರತಕ್ಕೆ ಹೋಗುವ ಮುಂಚೆ ಅದನ್ನು ಬಾಡಿಗೆಗೆ ಕೊಟ್ಟುಬಿಟ್ಟಿದ್ದಳು. ಈಗ ನನಗೆ ಅಲ್ಲಿಗೆ ಓಡಿ ಹೋಗುವುದೂ ಸಾಧ್ಯವಿಲ್ಲ.

ಆದರೆ ದೀಪಕನಿಗೆ ಮಾತ್ರ ತನ್ನ ಮದುಮಗಳೊಂದಿಗೆ ಮನೆಗೆ ಹಿಂದಿರುಗಿದ್ದು ಬಹಳ ಹರ್ಷ ಉಂಟುಮಾಡಿದಂತೆ ಕಂಡಿತು.

''ಅನು, ಈಗ ಇದು ನಮ್ಮ ಮನೆ. ಈ ಮನೆ ನಿನ್ನದಲ್ಲ ಎಂದು ನಿನಗೆ ಎಂದೂ ಅನ್ನಿಸಬಾರದು ಎನ್ನುವುದು ನನ್ನ ಆಸೆ."" ಅವನು ಅವಳನ್ನು ಬರಸೆಳೆದು, ಚಿಕ್ಕ ಹುಡುಗಿಯನ್ನು ಅಪ್ಪಿಕೊಳ್ಳುವಂತೆ ಬಿಗಿಯಾಗಿ ಅಪ್ಪಿಕೊಂಡ. ಇದರಿಂದ ಅವಳಿಗೆ ಸಂತೋಷವಾಗಬೇಕಿತ್ತು, ಆದರೆ ಅವಳಿಗೆ ಬಲೆಯಲ್ಲಿ ಸಿಕ್ಕಿಕೊಂಡ ಹಾಗೆ ಆಯಿತು. ಬಹುಶಃ ಮೊದಲ ರಾತ್ರಿ ಆಗಿದ್ದು ಒಂದು ಕೆಟ್ಟ ಕನಸೆ ಆಗಿರಬೇಕು? ದೀಪಕ್‌ ನನ್ನನ್ನು ಪ್ರೀತಿಸುತ್ತಾನೆ, ಅವನು ಮತ್ತೆ ನನ್ನನ್ನು ನೋಯಿಸುವುದಿಲ್ಲ.

ದೀಪಕ್‌ ಅಣಬೆ, ಖಾರದ ಯಾಲಾಪಿನೊ, ಮತ್ತಿತರ ತರಕಾರಿಗಳನ್ನು ಹಾಕಿದ ಒಂದು ದೊಡ್ಡ ಪಿಜ್ಜಾವನ್ನು ಮನೆಗೆ ಡೆಲಿವರಿ ಮಾಡಲು ಪೋನಿನಲ್ಲಿ ಆರ್ಡರ್‌ ಮಾಡಿದ. ಮದುವೆ ಎಂದರೆ ಇಷ್ಟೇನಾ? ಟಿ.ವಿ ನೋಡುತ್ತ ಪಿಜ್ಜಾ ತಿನ್ನುವುದು? ಅವನು ನನ್ನ ವಾಚಾಳಿತನವನ್ನೆಲ್ಲ ಕಿತ್ತುಕೊಂಡುಬಿಟ್ಟ. ನಾವು ಡೇಟ್‌ ಮಾಡುತ್ತಿದ್ದಾಗ ಅವನ ಕರೆಗಳಿಗೆ ಹಾಗು ಅವನ ಜೊತೆ ಹೆಚ್ಚಿನ ಸಮಯ ಕಳೆಯುವುದಕ್ಕೆ ಎಷ್ಟೊಂದು ಎದುರು ನೋಡುತ್ತಿದ್ದೆ.

''ದೀಪಕ್‌, ನಾನು ಸ್ವಲ್ಪ ಕಂಪ್ಯೂಟರ್‌ಗೆ ಲಾಗಿನ್‌ ಆಗಿ ಇ-ಮೇಯ್ಲ್‌ು ನೋಡಬೇಕಿತ್ತು.""

''ತೊಂದರೆ ಇಲ್ಲ. ಹೋಗಿ ಆಫೀಸ್‌ ರೂಮಿನಲ್ಲಿರುವ ಕಂಪ್ಯೂಟರ್‌ ಅನ್ನು ಉಪಯೋಗಿಸು. ನಾನು ನಾಳೆ ತನಕ ಕಾಯುತ್ತೇನೆ. ನನಗೂ ಸಾವಿರಕ್ಕಿಂತ ಹೆಚ್ಚು ಇ-ಮೇಯ್ಲ್‌ುಗಳಿರುವುದು ಖಂಡಿತ.""

ಇ-ಮೇಯ್ಲ್‌ುಗಳಿಂದ ಏನಿಲ್ಲವೆಂದರೂ ಸಮಯವನ್ನಾದರೂ ಕೊಲ್ಲಬಹುದು. ಇಲ್ಲಿ ನಾನೊಬ್ಬ ಅಪರಿಚಿತಳೆಂದು ನನಗೆ ಭಾಸವಾಗುತ್ತದೆ. ಈ ಮನೆ ಅನೇಕ ರೂಮು, ಅನೇಕ ಟಿ.ವಿ, ಅನೇಕ ಪೋನ್‌ಗಳಿಂದ ಕೂಡಿದ ಬಹಳ ದೊಡ್ದ ಮನೆ.

ಅಂದು ರಾತ್ರಿ ಅವರು ಪ್ರೀತಿಸಿದರು. ದೀಪಕ್‌ ಸಭ್ಯ ರೀತಿಯಲ್ಲೂ ಪ್ರೇಮಿಸಬಲ್ಲ ಎಂದು ಅವಳಿಗೆ ಗೊತ್ತಾಗಿ ಬಹಳ ನೆಮ್ಮದಿಯಾಯಿತು. ಈ ಮುಂಚೆ ನಡೆದದ್ದು ಎಲ್ಲೊ ಒಂದು ತಪ್ಪಾಗಿಬಿಟ್ಟಿತ್ತು.

(ಸಶೇಷ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
'Beyond the Call of Voice' An English novel by Asita Prabhushankara. The Kannada Version by Ravi Krishna Reddy, California.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more