• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧ್ಯಾಯ 25 : ಎದೆಯ ಕೂಗು ಮೀರಿ...

By Staff
|

ಪವನ್‌ ನನಗೆ ಇಷ್ಟವಾದ, ಆದರೆ ಭಾವನೆಗಳು ಕೆರಳಲಿಲ್ಲ!ಮದುವೆಗೆ ಇನ್ನು ನಾಲ್ಕೈದು ದಿನಗಳು ಮಾತ್ರ ಇವೆ! ಇನ್ನೇನು ಆರಂಭವಾಗಲಿರುವ ಮದುವೆಯ ವಿಧಿವಿಧಾನಗಳಲ್ಲಿ ಮನಸ್ಸು ತೊಡಗಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಅನು ಅಂಗಳದಲ್ಲಿ ಮುಂಜಾನೆಯ ಮೊದಲ ಕಾಫಿಯನ್ನು ಹೀರುತ್ತ ಕುಳಿತಳು. ಪವನ್‌ ಈಗ ಬೆಂಗಳೂರಿನಲ್ಲಿಯೆ ವಾಸ ಮಾಡುತ್ತಿದ್ದಾನೆ. ಯಾಕೆ ಅವನು ಇನ್ನೂ ಕರೆ ಮಾಡಿಲ್ಲ? ಒಂದು ರೀತಿಯಲ್ಲಿ ಅವನನ್ನು ನೋಡುವುದನ್ನು ನಾನೆ ಅವಾಯ್ಡ್‌ು ಮಾಡಿದೆ. ದೀಪಕ್‌ ಜೊತೆ ಮದುವೆಯಾಗುವದನ್ನು ಅವಳು ಆತುರದಲ್ಲೇನಾದರೂ ತೀರ್ಮಾನಿಸಿಬಿಟ್ಟಳೆ?

ಮನೆಯ ಮುಂದಿನ ಕಬ್ಬಿಣದ ಗೇಟು ತನ್ನ ಮಾಮೂಲಿ ಪ್ರತಿಭಟನೆಯ ಸದ್ದು ಮಾಡಿತು. ಅವರೆಂದಾದರೂ ಅದರ ಕೀಲುಗಳಿಗೆ ಎಣ್ಣೆ ತೋರಿಸುತ್ತಾರಾ? ಯಾರು ಬಂದರೆಂದು ನೋಡಲು ತನ್ನ ದೃಷ್ಟಿಯನ್ನು ನ್ಯೂಸ್‌ ಪೇಪರ್‌ನಿಂದ ಮೇಲೆತ್ತಿದಳು.

ಅವಳತ್ತ ಬರುತ್ತಿದ ಆ ವ್ಯಕ್ತಿ ಸುಮಾರು 5 ಅಡಿ 10 ಅಂಗುಲ ಎತ್ತರವಿದ್ದ. ನೀಟಾಗಿ ಮುಖ ಕ್ಷೌರ ಮಾಡಲಾಗಿತ್ತು. ಒಳ್ಳೆಯ ಮೈಬಣ್ಣ ಹೊಂದಿದ್ದ. ಕಪ್ಪು ಕೂದಲನ್ನು ಉದ್ದಕ್ಕೆ ಬಾಚಿದ್ದ. ಸ್ವಲ್ಪ ಗಲಿಬಿಲಿಗೊಂಡವನಂತೆ ಕಂಡ.

''ಅನು? ನಾನು ಪವನ್‌.""

''ಓಹ್‌, ದೇವರೆ! ನೋಡು ನಿನ್ನ! ನಾನೇನಾದರೂ ನಿನ್ನನ್ನು ರಸ್ತೆಯಲ್ಲಿ ನೋಡಿದ್ದರೆ ನನ್ನ ಕೈಲಿ ಖಂಡಿತ ಗುರುತು ಹಿಡಿಯಲು ಆಗುತ್ತಿರಲಿಲ್ಲ. ನೀನು ನೂರು ವರುಷ ಬದುಕಿರುತ್ತೀಯ... ಈಗ ತಾನೆ ನಿನ್ನನ್ನು ನೆನಪಿಸಿಕೊಳ್ಳುತ್ತಿದ್ದೆ.""

ಪವನ್‌ನನ್ನು ಅವಳು ಈ ರೀತಿ ಎಂದೂ ಊಹಿಸಿಕೊಂಡಿರಲಿಲ್ಲ. ಅವಳ ನೆನಪು ಅವಳಿಗೆ ಕೈ ಕೊಟ್ಟಿತ್ತು. ಅವಳು ಎದ್ದು ನಿಂತು ಆತನನ್ನು ಆಲಂಗಿಸಿಕೊಳ್ಳಲು ತನ್ನ ತೋಳುಗಳನ್ನು ತೆರೆದಳು. ಆಲಿಂಗನ ಸಹಜ ಎಂಬುವಷ್ಟು ಕಾಲ ಅವಳು ಅಮೇರಿಕದಲ್ಲಿ ಜೀವಿಸಿಬಿಟ್ಟಿದ್ದಳು. ಆದರೆ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ಪವನ್‌ ನೆಲಕ್ಕೂರಿದ ಕಲ್ಲಿನಂತೆ ನಿಂತೇ ಇದ್ದ. ಇಲ್ಲಿ ಕೈಜೋಡಿಸಿ 'ನಮಸ್ತೆ" ಎನ್ನುವುದು ಸಹಜವಾದದ್ದು. ಪುರುಷರೊಂದಿಗೆ ಹಸ್ತಲಾಘವ ಮಾಡುವುದು ಅತಿಯಾದ ತೋರಿಕೆ ಹಾಗೂ ಆಸಹಜವೆಂಬಂತೆ ಕಾಣಿಸುತ್ತದೆ.

ಆದರೆ ಅವನನ್ನು ನೋಡಿ ಅನು ಬಹಳ ಖುಷಿಯಾಗಿಬಿಟ್ಟಳು! ''ಇಲ್ಲೇನು ಮಾಡುತ್ತಿದ್ದೀಯ? ವಾರದ ಹಿಂದೆಯೆ ನಿನಗೆ ಕರೆ ಮಾಡಬೇಕು ಎಂದುಕೊಂಡೆ, ಆದರೆ ಬೇರೆಯದರಲ್ಲೆಲ್ಲ ಸಿಕ್ಕಿಹಾಕಿಕೊಂಡು ಬಿಟ್ಟೆ.""

ಬೆಳಿಗ್ಗೆ ಬೆಳಿಗ್ಗೆಯೆ ಕೇಳಿಬಂದ ಮಾತುಗಳನ್ನು ಕೇಳಿ ನೀತು ಹೊರಗೆ ಬಂದಳು. ''ಪವನ್‌, ಒಳಗೆ ಹೋಗೋಣ ಬಾ."" ಅವಳಿಗೆ ಅವನು ಗೊತ್ತಿತ್ತು. ಅವನು ಬೆಂಗಳೂರಿಗೆ ಬಂದ ಮೇಲೆ ಅಗಾಗ ಅವರನ್ನು ಸಂದರ್ಶಿಸುತ್ತಿದ್ದ. ''ನಿನಗೆ ಕಾಫಿ ತರುತ್ತೇನೆ.""

ಪವನ್‌, ಪ್ರಸನ್ನತೆಯ, ಶಾಂತ ಸ್ಮಭಾವದ, ಸೌಮ್ಯ ವ್ಯಕ್ತಿಯಾಗಿ ಕಂಡ. ಅವನು ಚಿಕ್ಕವನಿದ್ದಾಗ ಹೇಗಿದ್ದನೊ ಈಗಲೂ ಹಾಗೆಯೆ ಮೌನಿ, ಮೃದುಭಾಷಿಯಾಗಿದ್ದ. ಆದರೆ ಒಂದೇ ಸಮಯದಲ್ಲಿ ತುಂಬ ಆಪ್ತ ಮತ್ತು ಅಪರಿಚಿತ ಎನ್ನಿಸುವಂತಹ ಸುಂದರವಾದ ನಗು ಅವನದಾಗಿತ್ತು. ಅವನು ನನ್ನಂತೆ ವಾಚಾಳಿ ಅಲ್ಲ. ಅವನೆಂದೂ ಆಗಿರಲಿಲ್ಲ.

''ಪವನ್‌, ನಾನಿಲ್ಲಿದ್ದೀನೆಂದು ನಿನಗೆ ಹೇಗೆ ಗೊತ್ತಾಯಿತು?""

''ನನಗೆ ಮದುವೆಯ ಆಹ್ವಾನ ಪತ್ರಿಕೆ ತಲುಪಿತು. ನೀನು ಮದುವೆಗೆ ಕನಿಷ್ಟ ಒಂದು ವಾರದ ಮುಂಚೆಯಾದರೂ ಇಲ್ಲಿಗೆ ಬಂದಿರುತ್ತೀಯ ಎಂದು ಅನ್ನಿಸಿತು. ಹಾಗಾಗಿ ನಾನೇ ಇಲ್ಲಿಗೆ ಬಂದು ನಿನಗೆ ಅಚ್ಚರಿ ಉಂಟು ಮಾಡೋಣ ಎಂದುಕೊಂಡೆ.""

''ನಾನು ಇಲ್ಲಿಗೆ ಬಂದು ಈಗಾಗಲೆ ಎರಡು ವಾರವಾಯಿತು. ಮದುವೆಯಾದ ಮೇಲೆ ಒಂದು ವಾರವಿದ್ದು ನಂತರ ಅಮೇರಿಕಕ್ಕೆ ಹೋಗುತ್ತೇವೆ.""

ಅವನು ಅದನ್ನು ಹೇಗೆ ತೆಗೆದುಕೊಂಡ ಎಂದು ಅವಳಿಗೆ ಹೇಳಲಾಗಲಿಲ್ಲ. ಅವಳು ಮದುವೆಯಾಗುತ್ತಿದ್ದಾಳೆ ಎಂದು ಅವನಿಗೇನಾದರೂ ನಿರಾಶೆಯಾಗಿದೆಯೆ? ಅಥವ ಅವಳಿಗಾಗಿ ಅವನು ಸಂತೋಷ ಪಡುತ್ತಿದ್ದಾನೆಯೆ? ಏನಾದರೂ ಮಾತನಾಡು, ಪವನ್‌!

''ನೀನು ಸಲ್ವಾರ್‌ ಹಾಕಿಕೊಂಡಿದ್ದೀಯ. ಮಾಸಲಾದ ಜೀನ್ಸ್‌ ಧರಿಸಿ, ಕೂದಲು ಕತ್ತರಿಸಿಕೊಂಡಿರುತ್ತಿಯ ಎಂದುಕೊಂಡಿದ್ದೆ ನಾನು.""

''ಓಹ್‌, ಅದೆಲ್ಲ ಎಂಟಿವಿಯಲ್ಲಿ,"" ಅನು ತಮಾಷೆ ಮಾಡಿದಳು. ''ಅಮೇರಿಕದಲ್ಲಿ ಸಹ ನಾನು ಮಾಸಲಾದ ಜೀನ್ಸ್‌ ಧರಿಸುವುದಿಲ್ಲ.""

''ನನಗೆ ದೀಪಕ್‌ ಬಗ್ಗೆ ಹೇಳು."" ಅವಳ ಭಾವಿ ಪತಿಯ ಬಗ್ಗೆ ತಿಳಿದುಕೊಳ್ಳಲು ಯಾವುದೇ ಬೇಜಾರಿಲ್ಲದೆ ಅರಾಮವಾಗಿ ಇದ್ದಂತೆ ಕಂಡ.

''ಆತ ಬನಾರಸ್‌ ಐಐಟಿಯವನು.""

''ನಿಜವಾಗಿ? ಯಾವ ವರ್ಷದಲ್ಲಿ?""

''ನನಗೆ ಸರಿಯಾಗಿ ಗೊತ್ತಿಲ್ಲ; ನೀನೇ ಆತನನ್ನು ಕೇಳಬಹುದು. ನಿನಗಿಂತ ಬಹಶಃ 7 ಅಥವ 8 ವರ್ಷ ಮುಂದೆ ಇರಬಹುದು.""

''ಮತ್ತೆ ಅಮೇರಿಕ ಹೇಗಿದೆ? ಮಿಕ್ಕ ಬಹಳಷ್ಟು ಜನರಂತೆ ಅಲ್ಲೆ ಇದ್ದುಬಿಡುತ್ತೀಯಾ ಅಥವ ವಾಪಸ್ಸು ಬರುತ್ತಿದ್ದೀಯಾ?""

''ನನಗೆ ಗೊತ್ತಿಲ್ಲ. ನನಗೇನೋ ನಾನು ಭಾರತಕ್ಕೆ ಹಿಂದಿರುಗಿ ಬರುವುದು ಬೇಕು... ಅದು ಹೇಗೆ ಆಗುತ್ತೆ ಅನ್ನುವುದು ನಿನಗೇ ಗೊತ್ತು! ನಿನ್ನ ಬಗ್ಗೆ ಹೇಳು. ಅಮೇರಿಕಕ್ಕೆ ನೀನು ಯಾವಾಗ ಬರುತ್ತಿದ್ದೀಯ?""

''ಬೇಗ.""

ಪವನ್‌ ಅಸಂತೋಷಗೊಂಡವನಂತೆ ಕಂಡ. ಅಥವ ಅವನು ಲವಲವಿಕೆಯಿಲ್ಲದವನೆ? ಅವನು ಹುಡುಗನಾಗಿದ್ದಾಗಿನಂತೆ, ಮೌನಿ ಹಾಗೂ ತನ್ನ ಅಲೋಚನೆಗಳಲ್ಲಿ ಕಳೆದುಹೋಗುವವನು. ನಾನು ಇವನನ್ನು ಎಂದೂ ಮದುವೆಯಾಗುತ್ತಿರಲಿಲ್ಲ.

''ದೀಪಕ್‌ - ಅಂದರೆ 'ಸಂತೋಷ" ಎಂದು. ಈಗ ನಿನ್ನನ್ನು ಪಡೆದಿರುವುದಕ್ಕಾಗಿ ಅವರು ಸಂತೋಷವಾಗಿದ್ದಾರೆಯೆ?""

ಅವಳೇನೋ ವಿದೇಶಿಯಳ ತರಹ ಪವನ್‌ ಏಕೆ ಅವಳಿಗೆ ಸಂಸ್ಕೃತ ಪದದ ಅನುವಾದ ಮಾಡುತ್ತಿದ್ದಾನೆ? ಅಥವ ಅವನೇನಾದರೂ ಪರಿಹಾಸ ಮಾಡುತ್ತಿದ್ದಾನೆಯೆ? ಅವಳಿಗೆ ಹೇಳಲಾಗಲಿಲ್ಲ. ''ಆತ ಹುಟ್ಟಿದ್ದಕ್ಕೆ ಅವರ ಅಪ್ಪ ಅಮ್ಮನಿಗೆ ಸಂತೋಷವಾಗಿರಬೇಕು. ಅಥವ ಆತ ಯಾವಾಗಲೂ ಸಂತೋಷವಾಗಿರಲಿ ಎಂದು ಬಯಸಿದರೇನೊ...""

''ಅನು, ನೀನು ಸ್ವಲ್ಪವೂ ಬದಲಾಗಿಲ್ಲ. ಅದೇ ರೀತಿ ಕಾಣಿಸುತ್ತಿಯ, ಮಾತನಾಡುವುದೂ ಮೊದಲಿನಂತೆ. ಈಗಲೂ ಜೀವಂತಿಕೆಯಿಂದ, ಜೋಷ್‌ನಿಂದ ತುಂಬಿದ್ದೀಯ... ಮಾತೂ ಸಹ ಮೊದಲಿನಂತೆ ಜಾಸ್ತಿ.""

ಅದು ಹೊಗಳಿಕೆಯೇ? ''ನಾನು ಉತ್ಸಾಹದಿಂದಿರಲು ಪ್ರಯತ್ನಿಸುತ್ತೆನೆ. ನನ್ನ ಜೀವನದಲ್ಲಿ ಮಂಕಾದ ದಿನಗಳು ಬೇಡ ನನಗೆ. ಆಂಟಿ ಹೇಗಿದ್ದಾರೆ? ಅವರನ್ನು ಯಾವಾಗಲೂ ನೆನೆಯುತ್ತೇನೆ.""

ಪವನ್‌ ಕೆಳಗಡೆ ನೋಡಿದ. ಏನನ್ನೂ ಹೇಳಲಿಲ್ಲ.

''ನಿನ್ನ ಅಣ್ಣ ಎಲ್ಲಿದ್ದಾರೆ ಈಗ?"" ಅವಳು ಕೂಡಲೆ ಕೇಳಿದಳು.

''ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ನಿಜವಾಗಲೂ ಬಹಳ ಚೆನ್ನಾಗಿ ಅಭಿವೃದ್ದಿಯಾಗುತ್ತಿದ್ದಾನೆ.""

''ಅದ್ಭುತ! ನನಗೆ ಬನಾರಸ್‌ ಅನ್ನು ತುಂಬ ಕಳೆದುಕೊಂಡ ಹಾಗೆ ಆಗುತ್ತದೆ. ಬಹುಶಃ ನಮ್ಮ ಮುಂದಿನ ಭೇಟಿಯಲ್ಲಿ ದೀಪಕ್‌ ಮತ್ತು ನಾನು ಅಲ್ಲಿಗೆ ಒಂದು ಪ್ರವಾಸ ಏರ್ಪಾಟು ಮಾಡಬಹುದೇನೊ. ನಾನು ಚಿಕ್ಕವಳಿದ್ದಾಗ ಎಲ್ಲಿ ವಾಸಿಸುತ್ತಿದೆ ಎಂದು ಅವನು ನೋಡಬೇಕು ಎಂದು ನನ್ನ ಆಸೆ. ಅವನೂ ಅಲ್ಲೇ ಓದಿದ್ದು. ಅವನಿಗೂ ಆತನ ಹಳೆಯ ಸ್ನೇಹಿತರು ಇರಬಹುದು ಅಲ್ಲಿ...""

ಅವರ ಸಂಭಾಷಣೆ ಮುಗಿಯುತ್ತ ಬಂದ ಹಾಗೆ ಕಾಣಿಸಿತು. ಯಾಕೆ? ಅವರು ಚಿಕ್ಕಂದಿನಲ್ಲಿ ಗಂಗಾನದಿಯತ್ತ ಹೋಗುತ್ತಿದ್ದಾಗ ಗಂಟೆಗಟ್ಟಲೆ ಒಂದೂ ಮಾತನಾಡದೆ ಜೊತೆಯಲ್ಲಿ ಇರಬಹುದಿತ್ತು. ಆದರೆ ಈಗ, ಹರಯದವರಾಗಿ, ಅವರ ನಡುವೆ ಯಾವುದೇ ಸಮಾನಾಸಕ್ತಿ ಇದ್ದಂತೆ ಕಾಣಲಿಲ್ಲ. ನಾವು ಒಬ್ಬರಿಗೊಬ್ಬರು ಹಲವು ತಿಂಗಳಿಗೊಮ್ಮೆ ಪತ್ರ ಬರೆಯುತ್ತಿದ್ದದ್ದೆ ಚೆನ್ನಾಗಿತ್ತು.

ತಮ್ಮ ರೂಢಿಯ ಬೆಳಗಿನ ನಡಿಗೆಯಿಂದ ಹಿಂದಿರುಗಿ ಬಂದ ಅನೂಳ ಅಪ್ಪ ಪವನ್‌ನನ್ನು ನೋಡಿ ಸಂತೋಷಪಟ್ಟರು. ಆದರೆ ಅವರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ ಕೂಡಲೆ ಪವನ್‌ ಹೇಳಿದ, ''ನಾನು ಈಗಲೆ ಹೊರಡಬೇಕು, 11 ಗಂಟೆಯ ರೈಲಿಗೆ.""

''ಹಾಗಾದರೆ ನಾವು ನಿನ್ನನ್ನು ಮುಂದಿನ ವಾರ ಮದುವೆಯಲ್ಲಿ ನೋಡುತ್ತೀವಿ?"" ಅವಳು ಕೇಳಿದಳು.

''ಹೌದು, ನಾನು ಅಲ್ಲಿಗೆ ಬರುತ್ತೇನೆ. ಅಭಿನಂದನೆಗಳು, ಅನು.""

ಅವನು ಹೋಗುವುದನ್ನು ನೋಡಲು ಅವಳು ಬಾಗಿಲಿನಲ್ಲಿ ನಿಂತಳು. ಅವನು ಹೋದ ನಂತರ ಮತ್ತೆ ಬಾಗಿಲ ಮುಂದಿನ ಮೆಟ್ಟಿಲ ಮೇಲೆ ಕುಳಿತಳು. ಯಾಕೆ ನಾವೆಲ್ಲರೂ ಮದುವೆ ಆಗಲೇಬೇಕೆಂದು ಅಷ್ಟು ಒದ್ದಾಡುತ್ತೀವೆ? ಒಬ್ಬರೆ ಮುದುಕರಾಗಲು ಅಷ್ಟು ಭಯವೆ? ಮದುವೆ ಆಗದೆ ಉಳಿದವರನ್ನು -ಅದರಲ್ಲೂ ಹೆಂಗಸರನ್ನು- ವಿಫಲರು ಎಂದು ಸಮಾಜ ಭಾವಿಸುತ್ತದೆ. ಅವಳ ಜೀವನದಲ್ಲಿ ಯಾರೂ ಸಿಗದೆ ಇದ್ದಲ್ಲಿ ಅವಳು ಪವನ್‌ನ ಜೊತೆ ಮದುವೆಯಾಗಲು ಸಿದ್ದಳಾಗುತ್ತಿದ್ದಳೆ? ನನ್ನ ಅಮ್ಮ ಸಹ ಅವನ ಬಗ್ಗೆ ಆಲೋಚಿಸು ಎಂದು ಹೇಳಿದ್ದರು. ಅವನು ಒಳ್ಳೆಯವನು ಹಾಗೂ ಕಾಗದದ ಮೇಲೆ ಚೆನ್ನಾಗಿಯೆ ಇದ್ದ. ಆದರೆ ಅವಳಿಗೆ ದೀಪಕ್‌ ಮತ್ತು ಡ್ಯಾನ್‌ ಬಗ್ಗೆ ಕೆರಳಿದಂತೆ ಯಾವುದೇ ಭಾವನೆಗಳು ಅವನ ಬಗ್ಗೆ ಕೆರಳಲಿಲ್ಲ.

(ಸಶೇಷ)

ಅಧ್ಯಾಯ - 24 ಅಧ್ಯಾಯ - 26

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more