ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಳಿಯನನ್ನು ಮದುವೆಯಾಗಲು ಅನು, ದೀಪಕ್‌ನನ್ನು ಬಿಟ್ಟಳೇ?

By Staff
|
Google Oneindia Kannada News


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ಅನು ಬೆಳಿಗ್ಗೆ ಎದ್ದಾಗ ಡ್ಯಾನ್‌ ಪಕ್ಕದಲ್ಲಿ ಇನ್ನೂ ಗಡದ್ದಾಗಿ ನಿದ್ದೆ ಮಾಡುತ್ತ ಮಲಗಿದ್ದ. ಅವನು ರಾತ್ರಿ ಇಲ್ಲಿಯೆ ಉಳಿದುಕೊಂಡ. ಎಷ್ಟು ಒಳ್ಳೆಯವನು. ಅವನು ಇಲ್ಲಿ ಇರುವುದು ಮನಸ್ಸಿಗೆ ಎಷ್ಟೊಂದು ಮುದ ಕೊಡುತ್ತದೆ. ನನ್ನ ಬಗ್ಗೆ ಎಷ್ಟೊಂದು ಮುತುವರ್ಜಿ ತೆಗೆದುಕೊಳ್ಳುತ್ತಾನೆ. ಅವಳು ಗಡಿಯಾರದ ಕಡೆ ನೋಡಿದಾಗ ಅದು ಬೆಳಿಗ್ಗೆ 9:17 ಎಂದು ತೋರಿಸಿತು. ಅಂದು ತನಗೆ ಕೆಲಸಕ್ಕೆ ಹೋಗಬೇಕಾದದ್ದಿಲ್ಲ ಎಂದು ಅವನು ಹೇಳಿದ್ದ. ಅವಸರವಿಲ್ಲ. ಫೋನು ರಿಂಗುಣಿಸಿತು. ಅವನಿಗೆ ನಿದ್ದೆಯಿಂದ ಎಚ್ಚರವಾಗದೆ ಇರಲಿ ಎಂದು ಅನು ತಕ್ಷಣ ಅದನ್ನು ತೆಗೆದುಕೊಂಡಳು. ಹ್ಯಾಂಡ್‌ಸೆಟ್‌ ಅನ್ನು ಹಿಡಿದುಕೊಂಡು ಕೋಣೆಯಿಂದ ಹೊರಗೆ ಬಂದು, ನಿಶ್ಯಬ್ದವಾಗಿ ಬಾಗಿಲನ್ನು ಹಾಕಿಕೊಂಡಳು.

‘ಹಲೊ?’

‘ಅನು, ನಾನು ರೂಪ ಮಾತಾಡ್ತಾಯಿರೋದು...’ ಅವಳ ಸ್ವರ ಭಾರವಾಗಿತ್ತು; ನೋವಿನಿಂದ ನರಳುತ್ತಿರುವಂತಿತ್ತು.

‘ಹೇಗಿದ್ದೀಯ?’

‘ಕೆಟ್ಟದಾಗಿ, ತುಂಬಾ ಕೆಟ್ಟದಾಗಿದ್ದೀನಿ. ನೆನ್ನೆ ರಾತ್ರಿ ದೀಪಕ್‌ ಕುಡಿದುಕೊಂಡು ಬಂದಿದ್ದ. ಬಂದವನೆ ನಿನ್ನ ಬಗ್ಗೆ ಮಾತನಾಡಲು ಪ್ರಾರಂಭಿಸಿದ. ನಿನ್ನನ್ನು ಪದೇಪದೆ ಸೂಳೆ ಎನ್ನುತ್ತಿದ್ದ. ನೀನು ಯಾವನೊ ಬಿಳಿಯನ ಜೊತೆ ಓಡಿ ಹೋಗಿ ಈಗ ಅವನ ಜೊತೆ ಇರುವುದರ ಬಗ್ಗೆ ಹೇಳುತ್ತಲೆ ಇದ್ದ. ಅದಾದ ಮೇಲೆ ನನ್ನನ್ನು ಹೊಡೆದ. ನನಗೆ ಎಲ್ಲೆಂದರಲ್ಲಿ ಗಾಯಗಳಾಗಿವೆ. ಮೈಯೆಲ್ಲ ಏಟಾಗಿದೆ.’

ಬಿಳಿಯನೊಬ್ಬನನ್ನು ಮದುವೆಯಾಗಲು ಅನು ದೀಪಕ್‌ನನ್ನು ಬಿಟ್ಟಳು ಎಂದೇನಾದರೂ ರೂಪ ಅಂದುಕೊಂಡಳೆ? ‘ಅಷ್ಟೇನಾ? ಅವನೀಗ ಎಲ್ಲಿದ್ದಾನೆ? ಇವತ್ತು ಭಾನುವಾರ! ನಾನು ಈಗಲೆ ಬಂದು ನಿನ್ನನ್ನು ಅಲ್ಲಿಂದ ಕರೆದುಕೊಂಡು ಬರಬಲ್ಲೆ.’

‘ಬೇಡ, ಅನು, ನೀನೀಗ ನನ್ನನ್ನು ನೋಡಲು ಬರುವುದು ಬೇಡ. ಅವನು ಈಗ ತಾನೆ ಓಡಲು ಹೋಗಿದ್ದಾನೆ. ಬೇಗ ಬಂದು ಬಿಡುತ್ತಾನೆ.’

‘ರೂಪ, ಹಾಗಿದ್ದರೆ, ನಿನಗೆ ಸಹಾಯ ಬೇಕಿಲ್ಲದೆ ಇದ್ದರೆ ನೀನು ಯಾಕೆ ನನಗೆ ಕರೆ ಮಾಡುತ್ತೀಯ? ನಿನಗೆ ಅವನ ಜೊತೆ ಇರುವುದು ಬೇಕು! ನಾನು ಯಾವುದೊ ಬಿಳಿಯವನಿಗಾಗಿ ಅವನನ್ನು ಬಿಟ್ಟು ಬರಲಿಲ್ಲ. ಅವನು ನನ್ನ ಮೇಲೆ ಅತ್ಯಾಚಾರ ಮಾಡಿ, ಹೊಡೆದು ಬಡಿದು ಮಾಡಿದ್ದರಿಂದ ಅವನನ್ನು ಬಿಟ್ಟು ಬಂದೆ. ಅವನು ನನ್ನನ್ನು ಸಾಯಿಸಿಬಿಡಬಹುದಿತ್ತು.’

‘ನನ್ನನ್ನೂ ಸಾಯಿಸಿಬಿಡಬಹುದು.’

‘ನಾನು ಪೋಲಿಸರಿಗೆ ಕರೆ ಮಾಡುತ್ತೇನೆ, ಇರು.’

‘ಬೇಡ, ದಯವಿಟ್ಟು ಬೇಡ! ಅವನು ನನ್ನನ್ನು ಸಾಯಿಸಿಬಿಡುತ್ತಾನೆ!’ ಪೋನ್‌ ಕರೆ ತಕ್ಷಣ ತುಂಡಾಯಿತು. ಇವಳು ಯಾಕೆ ನನಗೆ ಫೋನ್‌ ಮಾಡುತ್ತಾಳೆ? ಅವಳಿಗೆ ನಿಜವಾಗಲೂ ಸಹಾಯ ಮಾಡಿಸಿಕೊಳ್ಳುವುದು ಬೇಕಿಲ್ಲ. ನಾನೆ ತಪ್ಪಿತಸ್ಥೆ ಎನ್ನುವ ಭಾವನೆಯನ್ನು ನನ್ನ ಮೇಲೆ ಹೊರಿಸಲು ಯತ್ನಿಸುತ್ತಿದ್ದಾಳೆಯೆ? ಅವಳು ದೀಪಕ್‌ನ ಹೆಂಡತಿಯಾಗಿ ನನ್ನ ಸ್ಥಾನವನ್ನು ತೆಗೆದುಕೊಂಡಿದ್ದಕ್ಕೆ ನಾನು ಜೀವನ ಪೂರ್ತಿ ಮರುಗುತ್ತ ಇರಬೇಕೆ?

ಅನು ಫೋನನ್ನು ಕೆಳಗಿಟ್ಟು ಮನೆಯ ಹಿಂಬದಿಯ ಹಿತ್ತಲಿಗೆ ಹೋಗಲು ಫ್ರೆಂಚ್‌ ಬಾಗಿಲುಗಳನ್ನು ತೆರೆದಳು. ಮುಂಜಾನೆಯ ಸೂರ್ಯನ ಕಿರಣಗಳಿಂದ ಹೊಳೆಯುತ್ತಿರುವ ಹಸಿರು ಹುಲ್ಲುಹಾಸಿನ ಮೇಲೆ ಕಾಲಿಟ್ಟಳು. ಬೆಳಿಗ್ಗೆಯ ಇಬ್ಬನಿ ಹುಲ್ಲಿನ ಮೇಲೆ ಇನ್ನೂ ಹಾಗೆಯೆ ಇತ್ತು. ಇಲ್ಲಿಂದ ಮುಂದಕ್ಕೆ ಏನು? ನನಗೆ ರೂಪಾಳ ಬಗ್ಗೆ ಆಗಲಿ ಅವಳ ಮನೆಯವರ ಬಗ್ಗೆಯಾಗಲಿ ಏನೂ ಗೊತ್ತಿಲ್ಲ. ಪವನ್‌ ಈಗ ಭಾರತದಲ್ಲಿದ್ದಾನೆ. ಅವಳು ಅವನನ್ನು ಇನ್ನೊಂದಷ್ಟು ಹೆಚ್ಚಿಗೆ ತಿಳಿದುಕೊಳ್ಳಲು ಕೇಳಬಹುದು. ಆದರೆ ಈಗ ಅವನಿಗೆ ಇವೆಲ್ಲ ಬೇಕಿಲ್ಲದೆ ಇರಬಹುದು; ಅವನ ಸ್ವಂತ ತಾಯಿ ಈಗ ತಾನೆ ಸತ್ತಿದ್ದಾಳೆ. ಹೋಗಿ ಸ್ವಲ್ಪ ಕಾಫಿ ಮಾಡುತ್ತೇನೆ...

ಅನು ಒಳಗೆ ಬಂದು ಅಡಿಗೆ ಕೋಣೆಯತ್ತ ಹೋಗುತ್ತಿದ್ದಾಗ ಅಡಿಗೆ ಮನೆಯ ಬಾಗಿಲಲ್ಲಿ ಕೇವಲ ನೀಲಿ ಜೀನ್ಸ್‌ ಪ್ಯಾಂಟ್‌ ಧರಿಸಿದ್ದ ಡ್ಯಾನ್‌ ಕಾಣಿಸಿದ. ಅವನ ಕೂದಲೆಲ್ಲ ಕೆದರಿತ್ತು. ಬೆಳಗ್ಗಿನ ಸೂರ್ಯನ ಬೆಳಕಿನಲ್ಲಿ ಚೆನ್ನಾಗಿ ಕಾಣಿಸುತ್ತಿದ್ದ ಅವನ ವಿಸ್ತಾರವಾದ ಎದೆ ಮತ್ತು ಮೈಕಟ್ಟನ್ನು ನೋಡಿ ಬಹಳ ಮೆಚ್ಚಿಕೊಂಡಳು. ಚರ್ಮದ ಒಳಗೆ ಸ್ನಾಯುಖಂಡಗಳು ಎದ್ದು ಕಾಣಿಸುತ್ತಿದ್ದವು. ಅವನ ಚರ್ಮ ಮತ್ತು ಕೂದಲು ಬಂಗಾರದ ಬಣ್ಣದವು. ಈಗ ತಾನೆ ಎದ್ದಿದ್ದರೂ ಅದು ಹೇಗೆ ಇವನು ಇಷ್ಟು ಚೆನ್ನಾಗಿ ಕಾಣಿಸಲು ಸಾಧ್ಯ? ಇದು ನ್ಯಾಯವಲ್ಲ!

ಆದರೆ ಅವನು ಪೂರ್ತಿಯಾಗಿ ಎಚ್ಚರಗೊಂಡಿದ್ದ. ‘ಅನು, ಯಾರಿವರು ನಿನಗೆ ಕರೆ ಮಾಡುತ್ತಿರುವವರು? ನನಗೇಕೆ ನೀನು ಹೇಳುತ್ತಿಲ್ಲ?’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X