ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಾಯ 20 : ಎದೆಯ ಕೂಗು ಮೀರಿ...

By Staff
|
Google Oneindia Kannada News

ಡ್ಯಾನ್‌ ಮತ್ತು ಅನು ಮಧ್ಯೆ ಇದ್ದದ್ದು ಕೇವಲ ಸ್ನೇಹವೇ?ಮಾರನೆಯ ದಿನ ಅತ್ಯಂತ ಉಲ್ಲಾಸದ ಮನಸ್ಥಿತಿಯಲ್ಲಿ ಅನು ಕಚೇರಿಗೆ ಹೊರಟಳು. ಕಾರಿನಲ್ಲಿ ಹೋಗುತ್ತಿದ್ದಾಗ ಆಗಾಗ ವಜ್ರದ ಉಂಗುರದತ್ತ ನೋಡುತ್ತಿದ್ದಳು. ಆಗ ಡ್ಯಾನ್‌ಗೆ ಪೋನ್‌ ಮಾಡಬೇಕೆಂದು ಅನ್ನಿಸಿತು ಅವಳಿಗೆ. ಏನೆಂದರೂ ಆತ ಇನ್ನೂ ಸ್ನೇಹಿತನೆ. ತನ್ನ ಪರ್ಸಿನ ಒಳಗೆ ಕೈಯಾಡಿಸಿ ಎಲ್ಲೋ ಹುದುಗಿದ್ದ ಸೆಲ್‌ಪೋನನ್ನು ತೆಗೆದು ನಂಬರ್‌ ಡಯಲ್‌ ಮಾಡಿದಳು.

''ಡ್ಯಾನ್‌, ನನ್ನ ಕಡೆಯಿಂದ ನಿಮಗೊಂದು ಸುದ್ದಿ ಇದೆ.""

''ಓ, ಹೌದಾ? ನನ್ನ ಮೇಲೆ ಹೊದಿಸಿ."" ಈ ನನ್ನ ಮೇಲೆ ಹೊದಿಸಿ ಅಂದರೆ ಏನು?

''ನೆನ್ನೆ ರಾತ್ರಿ ದೀಪಕ್‌ ನನಗೆ ಪ್ರಪೋಸ್‌ ಮಾಡಿದರು. ಅವರು ಅಕ್ಷರಶಃ ಮಂಡಿಯೂರಿ, ಅಮೆರಿಕನ್‌ ಮಾದರಿಯಲ್ಲಿಯೆ ಅದನ್ನು ಮಾಡಿದ್ದು!""

''ನಿಮಗೇನಾದರೂ ತಲೆಕೆಟ್ಟಿದೆಯ? ನಾನು ಮೂಕವಿಸ್ಮಿತನಾಗಿದ್ದೇನೆ. ಅಬ್ಬಾ, ನೀವು ಬಹಳ ಬೇಗ ಮುಂದುವರಿಯುತ್ತೀರಿ! ಒಂದೆರಡು ತಿಂಗಳಿನಲ್ಲಿಯೇ ನೀವು ಎಂಗೇಜ್‌ ಸಹ ಆಗಿಬಿಟ್ಟಿದ್ದೀರಾ? ಸುಂಟರಗಾಳಿ ವೇಗದ ಪ್ರೇಮ ಎಂದರೆ ಇದೆ ಇರಬೇಕು.""

ಸುಂಟರಗಾಳಿ? ''ಇದು ಭಾರತೀಯ ಲೆಕ್ಕಾಚಾರದಲ್ಲಿ ನಡೆದಿದೆ, ಅಷ್ಟೆ.""

''ಹಾಗಾದರೆ ಇದನ್ನು ನನ್ನ ಅಭಿನಂದನೆಗಳು ಎಂದು ಪರಿಗಣಿಸಿ. ಮತ್ತೆ?"" ಡ್ಯಾನ್‌ ಅಪ್ರತಿಭನಾದಂತೆ, ಅಘಾತಕ್ಕೊಳಗಾದಂತೆ ಕಂಡರೂ ಅಧೀ ರನಾಗದಂತೆ ಇರಲು ಪ್ರಯತ್ನಿಸುತ್ತಿದ್ದ.

''ನನಗೆ ಗೊತ್ತಿಲ್ಲ, ಡ್ಯಾನ್‌. ನಾವು ಮಾಡುವುದು ಈ ತರಹವೆ. ನಾನು ಭಾರತೀಯನೊಬ್ಬನನ್ನು ಮದುವೆಯಾಗ ಬಯಸಿದ್ದೆ. ಈಗ ನನಗೊಬ್ಬ ಪರಿಪೂರ್ಣ ಭಾರತೀಯ ದೊರಕಿದ್ದಾನೆ.""

''ಯಾರೂ ಪರಿಪೂರ್ಣರಲ್ಲ, ಅನು. ನಾನು ಪೋಲಿಸ್‌ ಇಲಾಖೆಯವನು. ಯಾರೂ ಪರಿಪೂರ್ಣರಲ್ಲ ಎನ್ನುವುದು ನನಗೆ ಗೊತ್ತಿರಲೇಬೇಕು! ಅವರ ಬಗ್ಗೆ ನಿಮಗೆ ಖಾತರಿ ಇದೆಯೆ?""

''ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಗೊತ್ತಿಲ್ಲ ಎಂದೇ ಹೇಳಬೇಕು... ನಿಮಗೆ ಅವರನ್ನು ಭೇಟಿಯಾಗುವ ಇಷ್ಟವಿದೆಯೆ, ಡ್ಯಾನ್‌?""

''ಖಂಡಿತ, ಯಾಕಾಗಬಾರದು?""

ನಾನು ಏನು ಯೋಚನೆ ಮಾಡುತ್ತಿದ್ದೇನೆ? ''ಹ್ಞಂ, ನೀವು ಭೇಟಿಯಾಗುವುದು ಒಳ್ಳೆಯದು ಎನ್ನುವುದರ ಬಗ್ಗೆ ಈಗ ನನಗೆ ಖಾತರಿ ಇಲ್ಲ.""

''ಯಾಕೆ?""

''ಭಾರತೀಯ ಗಂಡಸರು ಸ್ವಲ್ಪ ವಿಚಿತ್ರ... ಆಷಾಡಭೂತಿಗಳು. ಅವರ ಸ್ನೇಹಿತೆಯರು, ಹೆಂಡತಿಯರು ಬೇರೆ ಗಂಡಸರ ಜೊತೆ ಓಡಾಡುವುದನ್ನು ಅವರು ಇಷ್ಟಪಡುವುದಿಲ್ಲ. ವಿಶೇಷವಾಗಿ ಸ್ಫುರದ್ರೂಪಿಯಾದ ಬಿಳಿ ಯುವಕರೊಂದಿಗೆ. ಅವರು ನಿಮ್ಮನ್ನು ಭೇಟಿಯಾದರೆ ಅವರಿಗೆ ಅಭದ್ರತೆ ಕಾಡುವುದಿಲ್ಲ ಎಂಬುದರ ಬಗ್ಗೆ ನನಗೆ ಖಾತರಿ ಇಲ್ಲ.""

''ನಾನು ನಿಮ್ಮ ಸ್ನೇಹಿತ ಎಂದು ಹೇಳಿ ನನ್ನನ್ನು ಅವರಿಗೆ ಪರಿಚಯ ಮಾಡಿಕೊಡಲು ಆಗದೆ?""

''ಮಾಡುತ್ತೇನೆ, ಮಾಡುತ್ತೇನೆ. ಆದರೆ ಈಗಲೇ ಅಲ್ಲ, ನಿಮಗೆ ನಾವು ಭಾರತೀಯರು ಇನ್ನೂ ಅರ್ಥವಾಗಿಲ್ಲ.""

''ಇಲ್ಲ, ನನಗೆ ನೀವು ಅರ್ಥವಾಗಿಲ್ಲ. ಯಾವುದೇ ಸಂಬಂಧವನ್ನು ಅಪ್ರಾಮಾಣಿಕತೆಯಿಂದ ಪ್ರಾರಂಭಿಸಬೇಡಿ, ಅನು. ನಾನು ಈಗ ಈ ಸಂಬಂಧಗಳ ವಿಷಯದಲ್ಲೆಲ್ಲ ಬಹಳ ನುರಿತವನು. ಏನು ಬೇಕಾದರೂ ಕೇಳಿ, ಹೇಳುತ್ತೇನೆ. ನೀವು ಅವರಿಗೆ ನನ್ನ ಬಗ್ಗೆ ಹೇಳಲೇ ಬೇಕು. ಯಾಕೆಂದರೆ, ಮುಚ್ಚಿಡಲು ನಮ್ಮ ಬಳಿ ಏನೂ ಇಲ್ಲ. ನಿಜವಾಗಲೂ ನಾವಿಬ್ಬರೂ ಕೇವಲ ಸ್ನೇಹಿತರು ಮಾತ್ರ. ನಾನೇನೂ ನಿಮ್ಮ ಮಾಜಿ-ಬಾಯ್‌ ಫ್ರೆಂಡ್‌ ಅಥವಾ ಇನ್ನೇನೋ ಅಲ್ಲವಲ್ಲ?""

''ಡ್ಯಾನ್‌, ಒಂದು ಹುಡುಗ ಮತ್ತು ಹುಡುಗಿಯ ಮದ್ಯೆ 'ಕೇವಲ ಸ್ನೇಹ ಮಾತ್ರ" ಎಂಬಂತಹ ಸ್ನೇಹ ಇರಲು ಸಾಧ್ಯವೇ ಇಲ್ಲ ಎಂದು ನೀವೇ ಹೇಳಿದ್ದು ನನಗೆ ನೆನಪಿದೆ. ದೀಪಕ್‌ ಕೂಡ ಇದನ್ನು ಕೇವಲ ಸ್ನೇಹ, ಅದೂ ನಿಮ್ಮಂತಹ ಸುಂದರನೊಂದಿಗೆ, ಎಂದು ಒಪ್ಪಿಕೊಳ್ಳುವುದಿಲ್ಲ. ಮತ್ತೂ ವಿಶೇಷವಾಗಿ, ನಾವು ಕಾಲೇಜಿನ ದಿನಗಳಿಂದಲೂ ಪರಿಚಿತರು ಎಂದರಂತೂ, ಸಾಧ್ಯವೇ ಇಲ್ಲ.""

''ನೀವು ಎಂಗೇಜ್‌ ಆಗಿದ್ದಕ್ಕೆ ಮತ್ತು ನಿಮಗೆ ಎಲ್ಲವೂ ಒಳ್ಳೆಯದಾಗುತ್ತಿರುವುದಕ್ಕೆ ನಾನು ಬಹಳ ಸಂತೋಷಪಡುತ್ತೇನೆ, ಅನು. ನಾನು ನಿಮ್ಮನ್ನು ಸುಮ್ಮನೆ ಚುಡಾಯಿಸುತ್ತಿದ್ದೆ, ಅಷ್ಟೆ."" ಆದರೆ ಆಗಲೂ ಆತ ನಿರಾಸೆಗೊಳಗಾದಂತೆ ಕಂಡ. ''ಮತ್ತೆ ಪೋನ್‌ ಮಾಡಿ, ಅನು. ನನಗೆ ಕೆಲಸದ ಪೇಜರ್‌ ಸಂದೇಶ ಬರುತ್ತಿದೆ, ಅದಕ್ಕೆ ಉತ್ತರಿಸಬೇಕು ಈಗ.""

''ಸರಿ, ಹಾಗಾದರೆ, ಡ್ಯಾನ್‌. ಜೋಪಾನ. ನಾವು ಈಗಲೂ ಸ್ನೇಹಿತರೆ.""

''ಖಂಡಿತವಾಗಿಯೂ ಹೌದು! ಬೈ, ಅನು.""

ಪೋನ್‌ ಕರೆ ತುಂಡಾಯಿತು.

ಒಂದು ರೀತಿಯಲ್ಲಿ ಅವಳಿಗೆ ದುಃಖವಾಯಿತು. ಡ್ಯಾನ್‌ ಮೇಲೆ ನನಗೆ ಮಧುರವಾದ ಭಾವನೆಗಳಿವೆ ಎಂದು ನನಗೆ ಗೊತ್ತು. ಅದು ಕೇವಲ ಸ್ನೇಹವಾಗಿರಲಿಲ್ಲ. ಅವಳು ಆತನ ಮೋಹಕ ನಡೆನುಡಿಗೆ ಮಾರು ಹೋಗಿದ್ದಳು. ಆಕೆ ಆ ಸ್ನೇಹದಿಂದ ಇನ್ನೂ ಹೆಚ್ಚಿನದನ್ನು ಬಯಸಿದ್ದಳು. ಆದರೆ ಅವಳ ಭಾವನೆಗಳನ್ನು ಒಪ್ಪಿಕೊಳ್ಳುವುದಕ್ಕೆ ಅವಳಿಗೇ ಬಹಳ ಸಂಕೋಚವಾಗುತ್ತಿತ್ತು. ಹಾಗೂ ಅವನ್ನು ವ್ಯಕ್ತಪಡಿಸಲು ಕಷ್ಟವಾಗುತ್ತಿತ್ತು ಸಹ. ಕೇವಲ ಭಾರತೀಯನನ್ನು ಮಾತ್ರ ಡೇಟ್‌ ಮಾಡಿ ಮದುವೆಯಾಗಬೇಕು ಎಂಬ ವಿಷಯದಲ್ಲಿ ಡ್ಯಾನ್‌ನನ್ನು ಭೇಟಿಯಾಗುವ ತನಕವಷ್ಟೆ ಅವಳು ಹಠವಾದಿಯಾಗಿದ್ದಳು. ಅವನ ಪರಿಚಯವಾದ ನಂತರ ಅವಳ ಹಠ ಮತ್ತು ಚಿಂತನೆಯೆ ಬದಲಾಗಿತ್ತು.

ಆದರೆ ಅದೆಲ್ಲವನ್ನೂ ಈಗ ದೀಪಕ್‌ ಬದಲಾಯಿಸಿಬಿಟ್ಟಿದ್ದ.

(ಸಶೇಷ)

ಅಧ್ಯಾಯ - 19 ಅಧ್ಯಾಯ - 21

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X